Connect with us

Mysore

ಜಿ.ಪಂ. ಮತ್ತು ತಾ.ಪಂ ಸ್ಥಾನಗಳು ಯಾವ ಮೀಸಲಾತಿಗೆ ಎಂಬ ಗೊಂದಲ ಆಕಾಂಕ್ಷಿಗಳಲ್ಲಿ ಎದೆ ಬಡಿತ ಹೆಚ್ಚುಸುವಂತೆ ಮಾಡಿದೆ.

Published

on

ಮೈಸೂರು ಜಿ.ಪಂ ಮತ್ತು ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರ ಎರಡು ತಾಲೂಕುಗಳ ತಾ.ಪಂ ಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸುತ್ತಿದ್ದಂತೆಯೇ  ಕ್ಷೇತ್ರದಲ್ಲಿ  ಜಿ.ಪಂ. ಮತ್ತು ತಾ.ಪಂನ ಸ್ಥಾನಗಳು ಯಾವ ಮೀಸಲಾತಿಗೆ ನಿಗದಿಯಾಗಲಿದೆ  ಎಂಬುದು ಆಕಾಂಕ್ಷಿಗಳಲ್ಲಿ ಎದೆ ಬಡಿತ ಹೆಚ್ಚಿಸುವಂತೆ ಮಾಡಿದೆ.

ಕೆ.ಆರ್.ನಗರ ಕ್ಷೇತ್ರದಲ್ಲಿ ಎರಡು ತಾಲೂಕುಗಳಿದ್ದು ಸಾಲಿಗ್ರಾಮ ತಾಲೂಕಿನಲ್ಲಿ 4 ಜಿ.ಪಂ ಮತ್ತು 13 ತಾ.ಪಂ.ಕ್ಷೇತ್ರಗಳು, ಕೆ.ಆರ್.ನಗರ ತಾಲೂಕಿನಲ್ಲಿ 3 ಜಿ.ಪಂ.ಕ್ಷೇತ್ರಗಳು ಮತ್ತು 9 ತಾ.ಪಂ.ಕ್ಷೇತ್ರಗಳು ನಿಗದಿಯಾಗಿದ್ದು, ಈ ಕ್ಷೇತ್ರಗಳಲ್ಲಿ ಯಾವ ಮೀಸಲಾತಿ ನಿಗದಿಯಾಗುವುದೊ ಎಂಬ ಕೂತುಹಲ ಕೆರಳಿಸಿದ್ದು ಈ ಬಾರಿ ಸ್ಪರ್ದಿಸಿಯೇ ತೀರುವೇ ಎನ್ನುತ್ತಿರುವ ಆಕಾಂಕ್ಷಿಗಳ ಸ್ಪರ್ದೆಗೆ ಮೀಸಲಾತಿ ಅವಕಾಶ ಕೊಡುತ್ತದೆಯೇ ಇಲ್ಲವೋ ಎಂಬ ಗುಮ್ಮ ಕಾಡುವಂತೆ ಆಗಿದೆ.

2021ರ ಮೇ ತಿಂಗಳಲ್ಲೇ ಜಿಪಂ ಮತ್ತು ತಾ.ಪಂ ಅಧಿಕಾರಾವಧಿ ಮುಕ್ತಾಯವಾಗಿದೆ. ಅಂದಿನಿಂದ ಈ ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳೇ ಇಲ್ಲದಂತಾಗಿದೆ. ಈ ಅವಧಿಯಲ್ಲಿ ಅಳೆದೂ ತೂಗಿ ಈಗ ಜಿಪಂ ಮತ್ತು ತಾ.ಪಂ ಸದಸ್ಯರ ಸಂಖ್ಯೆ ನಿಗದಿ ಮಾಡಿ, ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಗಡಿ ನಿರ್ಣಯ ಮಾಡಿ ಕ್ಷೇತ್ರ ಪುನರ್ವಿಂಗಡಣೆ ಮಾಡಲಾಗಿತ್ತು ಅದರೆ ಚುನಾವಣೆಯ ಸoಬಂಧ ಕೋರ್ಟ್ ಮೇಟ್ಟಿಲು ಏರಿದ ಪರಿಣಾಮ ಈ ಚುನಾವಣೆಗೆ ಎರಡು ವರ್ಷದಿಂದ ಬ್ರೇಕ್ ಬಿದ್ದಿತ್ತು.

ಇದೀಗ ಈ ಚುನಾವಣೆಯನ್ನು ನಡೆಸಲು ಕೋರ್ಟ್ ಆಸ್ತು ಅಂದಿರುವ ಪರಿಣಾಮವಾಗಿ ಮೈಸೂರು ಜಿಲ್ಲಾ ಪಂಚಾಯಿಗೆ 46 ಕ್ಷೇತ್ರಗಳನ್ನು ನಿಗದಿ ಮಾಡಿದ್ದು ಇದರಲ್ಲಿ ಅನುಸೂಚಿತ ಜಾತಿಗೆ 10 ಸ್ಥಾನಗಳು, ಅನುಸೂಚಿತ ಪಂಗಡಕ್ಕೆ 7 ಸ್ಥಾನಗಳು, ಹಿಂದೂಳಿದ ವರ್ಗ (ಅ)ಗೆ 5 ಸ್ಥಾನಗಳು, ಹಿಂದೂಳಿದ ವರ್ಗ(ಬ)ಕ್ಕೆ 1 ಸ್ಥಾನ ಇನ್ನು ಸಾಮಾನ್ಯ ವರ್ಗಕ್ಕೆ 23 ಸ್ಥಾನಗಳು ನಿಗದಿಯಾಗಿವೆ.

ಇನ್ನು ಸಾಲಿಗ್ರಾಮ ತಾ.ಪಂ.ಗೆ ಇರುವ 13 ಸ್ಥಾನಗಳಲ್ಲಿ ಅನುಸೂಚಿತ ಜಾತಿಗೆ 2, ಅನುಸೂಚಿತ ಪಂಗಡ 1, ಹಿಂದೂಳಿದ ವರ್ಗ( ಅ)2 ಹಿಂದೂಳಿದ ವರ್ಗ(ಬ ) 1ಇನ್ನು ಸಾಮಾನ್ಯ ವರ್ಗಕ್ಕೆ 7 ಸ್ಥಾನಗಳು ಮೀಸಲಾಗಿದ್ದು, ಕೆ.ಆರ್.ನಗರ ತಾಲೂಕಿನ‌ 9 ಸ್ಥಾನಗಳಲ್ಲಿ ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದೂಳಿದ ವರ್ಗ( ಅ)2 ,ಇನ್ನು ಸಾಮಾನ್ಯ ವರ್ಗಕ್ಕೆ  5 ಸ್ಥಾನಗಳು ಮೀಸಲಾಗಿದೆ.

ಜಿ.ಪಂ ಮತ್ತು ತಾ.ಪಂ. ಮೀಸಲಾತಿಯನ್ನು ಕ್ಷೇತ್ರವಾರು ಹಂಚಿಕೆ ಮಾಡಿದ ಬಳಿಕ ಇವೆರಡು ತಾಲೂಕುಗಳಿಂದ ಯಾರಿಗೆ ಸ್ಪರ್ದೆಗೆ ಅವಕಾಶ ಸಿಗುತ್ತದೆಯೇ ಇಲ್ಲವೋ ಎಂಬುದಕ್ಕೆ ತೆರೆ ಬೀಳಲಿದ್ದು ನಂತರ ಈ ಚುನಾವಣೆಯ ಅಖಾಡ ರಂಗೇರಲಿದ್ದು ಈಗಿನಿಂದ ಸಂಘಟನೆಗೆ ಇಳಿದ ಆಕಾಂಕ್ಷಿಗಳಿಗೆ ಮೀಸಲಾತಿಯಿಂದ ಕ್ಷೇತ್ರ ಕೈ ತಪ್ಪಿದರೇ ಮುಂದೇನು ಮಾಡಬೇಕೆಂಬ ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ.

ಈಗಾಲೇ ತಾ.ಪಂ.ಮತ್ತು ಜಿ.ಪಂ.ಚುನಾವಣೆಗೆ ಸ್ಪರ್ದೆ ಮಾಡಲು ಕಳೆದ ಎರಡು ವರ್ಷದಿಂದ ಕ್ಷೇತ್ರದಲ್ಲಿ ಕಾಂಗ್ರೇಸ್  ಪಕ್ಷದ ಸಂಘಟನೆಗೆ ದೊಡ್ಡಮಟ್ಟದಲ್ಲಿ ಇಳಿದಿರುವ ಆಕಾಂಕ್ಷಿಗಳು ತಮ್ಮ ಕ್ಷೇತ್ರವು ಇದಕ್ಕೆ ಮೀಸಲಾಗ ಬೇಕೆಂದು ಶಾಸಕ ಡಿ.ರವಿಶಂಕರ್ ಮತ್ತು ಹಿರಿಯ ಕಾಂಗ್ರೇಸ್ ಮುಖಂಡ ದೊಡ್ಡಸ್ವಾಮೇಗೌಡ ಅವರ ಮೇಲೆ ಇಲ್ಲದ ಒತ್ತಡ ಆರಂಭಿಸಿರುವುದು ಇದೀಗ ಇವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ಹಿಂದೆ ಅಧಿಕಾರದಲ್ಲಿ ಇರಲಿಲ್ಲ ಈಗ ಅಧಿಕಾರದಲ್ಲಿ ಇರುವುದು ಒಂದೆಡೆಯಾದರೆ  ಇದೀಗ ರಾಜ್ಯದಲ್ಲಿಯು ತಮ್ಮದೇ ಆದ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಮೀಸಲಾತಿ ಮಾಡಿಸಿ ಕೊಡುವುದು ಇವರಿಗೆ ಕಷ್ಟದ ಕೆಲಸ ಆಗದು ಎಂದು ಈ ಇಬ್ಬರ ಮೇಲೆ ಕೈ ಪಕ್ಷದ ಆಕಾಂಕ್ಷಿಗಳು ಇನ್ನಿಲ್ಲದ ಲಾಭಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಇನ್ನು ಜೆಡಿಎಸ್ ಆಕಾಂಕ್ಷಿಗಳು ಕೂಡ ಈ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಬಾರಿ ಪೈಪೋಟಿಗೆ ಇಳಿದಿದ್ದು ಇಲ್ಲಿಯು ಕೂಡ ಆಕಾಂಕ್ಷಿಗಳು  ಕಂಡು ಬರುತ್ತಿದ್ದು,ಶಾಸಕ ಸಾ.ರಾ.ಮಹೇಶ್ ಅವರು ಸೋತ ನಂತರ ಕೆಲ ಆಕಾಂಕ್ಷಿಗಳು ಈ ಚುನಾವಾಣೆಯ ಗೆದ್ದು ಸಾ.ರಾ.ಮಹೇಶ್ ಅವರಿಗೆ ಶಕ್ತಿ ತುಂಬ ಬೇಕು ಎನ್ನುತ್ತಿದ್ದಾರೆ.ಅದರೆ ಇದಕ್ಕೆ ಸಾ.ರಾ.ಮಹೇಶ್ ಯಾವ ತರ ಸಹಕಾರ  ನೀಡುತ್ತಾರೆ ಎಂಬುದೇ ಕೂತುಹಲ ಮೂಡಿಸಿದ್ದು ಇವರು ಸೋತ ನಂತರ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿ ಕೊಂಡಿಲ್ಲ ಯಾವ ಸ್ಥಳಿಯ ಸಂಸ್ಥೆಗಳ ಚುನಾವಣೆಗೂ ತಲೆಕೆಡಿಸಿಕೊಂಡಿಲ್ಲ ಇದರಿಂದ ಜೆಡಿಎಸ್ ಕೆಲ ಆಕಾಂಕ್ಷಿಗಳಿಗೆ ಸಾ.ರಾ.ಮಹೇಶ್ ಚುನಾವಣೆಯ ಆಖಾಡಕ್ಕೆ ಬರದೇ ಹೋದರೆ ಏನು ಮಾಡೋದು ಎಂದು ಕಣ್ಣು ಬಾಯಿ  ಬಿಡುವಂತೆ ಆಗಿದೆ.

ಇನ್ನು ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳು ಇದ್ದರು ಕೂಡ ಸದ್ಯ ಜೆಡಿಎಸ್ ಜೊತೆ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಂತೆ ಈ ಎರಡು ಚುನಾವಣೆಯಲ್ಲಿ ಮಾಡಿಕೊಂಡರೆ  ಏನು ಮಾಡುವುದು ಎಂದು ಈ ಪಕ್ಷದ ಆಕಾಂಕ್ಷಿಗಳು  ಮೈತ್ರಿಯ ಕುರಿತು ಬಿಜೆಪಿ ಪಕ್ಷದ ವರಿಷ್ಟರು ತೆಗೆದು ಕೊಳ್ಳುವ ಅಂತಿಮ ತಿರ್ಮಾನವನ್ನು ಸದ್ಯ ಎದುರು ನೋಡುವಂತೆ ಆಗಿದೆ.

ಒಟ್ಟಿನಲ್ಲಿ ಕಳೆದ ವಿಧಾನ ಸಭೆಯಲ್ಲಿ ನಡೆದ ಜಿದ್ದಾ-ಜಿದ್ದಿನ  ಚುನಾವಣೆಯಂತೆ ಈ ಬಾರಿಯ ಜಿ.ಪಂ.ಮತ್ತು ತಾ.ಪಂ.ಚುನಾವಣೆಯು ನಡೆಯುವುದು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಅವಳಿ ತಾಲೂಕಿನಲ್ಲಿ  ಕಂಡು ಬರುತ್ತಿದ್ದು ಇದಕ್ಕೆ ರಾಜ್ಯ ಚುನಾವಣೆಯ ಆಯೋಗ ಹೊರಡಿಸುವ  ಮೀಸಲಾತಿಯ ಅಂತಿಮ ಅದಿಸೂಚನೆ ಎದುರು ನೋಡುವಂತೆ ಆಗಿದೆ.

Continue Reading
Click to comment

Leave a Reply

Your email address will not be published. Required fields are marked *

Mysore

ಬಿಜೆಪಿ ಅಭ್ಯರ್ಥಿ ಬಾಲರಾಜ್ ಅನ್ನು ಗೆಲ್ಲಿಸಿ — ಚಿಕ್ಕರಂಗನಾಯಕ ನಂಜನಗೂಡಿನಲ್ಲಿ ಬಿಜೆಪಿ ಎಸ್.ಟಿ ಬೃಹತ್ ಸಮಾವೇಶ

Published

on

ನಂಜನಗೂಡು ಏ.24

ಬಿಜೆಪಿ ಪಕ್ಷ ನಾಯಕ ಸಮುದಾಯಕ್ಕೆ ವಾಲ್ಮೀಕಿ ಜಯಂತಿಯನ್ನು ಜಾರಿಗೆ ತಂದಿದ್ದಲ್ಲದೆ, ಜಿಪಂ, ತಾಪಂ ಮೀಸಲಾತಿ ಹೆಚ್ಚಿಸಿ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಶಕ್ತಿ ನೀಡುವ ಮೂಲಕ ಸಮುದಾಯದ ಅಭಿವೃದ್ದಿಗೆ ಕಾರಣವಾಗಿರುವ ಕಾರಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಮತಗಳನ್ನು ನೀಡಿ ಬಿಜೆಪಿ ಅಭ್ಯರ್ಥಿ ಬಾಲರಾಜುರನ್ನು ಗೆಲ್ಲಿಸಿ ಎಂದು ಮಾಜಿ ಜಿಪಂ ಸದಸ್ಯ ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡ ಸಿ. ಚಿಕ್ಕರಂಗನಾಯಕ ಹೇಳಿದರು.

ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಎಸ್.ಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು , ಹತ್ತು ವರ್ಷದ ಮೋದಿ ಸರ್ಕಾರದಲ್ಲಿ ಒಬ್ಬ ಮಂತ್ರಿಯ ಮೇಲಿಯೂ ಸಣ್ಣ ಭ್ರಷ್ಟಾಚಾರದ ಆರೋಪಗಳಿಲ್ಲದೆ ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ದಿದ್ದಾರೆ. ಕಾಂಗ್ರೇಸ್ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಭಾಗದ ಪ್ರಮುಖ ಸಮಸ್ಯೆಯಾಗಿದ್ದ ತಳವಾರ, ಪರಿವಾರ ಸಮಸ್ಯೆಯನ್ನು ಬಗೆಹರಿಸಿದೆ ಅಲ್ಲದೆ ಶೇ3 ರಷ್ಟಿದ್ದ ಮೀಸಲಾತಿಯನ್ನು ಶೇ7ಕ್ಕೆ ಹೆಚ್ಚಳ ಮಾಡಿ ನಾಯಕ ಸಮುದಾಯಕ್ಕೆ ನೆರವು ನೀಡಿದೆ. ಬಿ.ಎಸ್.ಯಡೀಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಪ್ರಥಮಬಾರಿಗೆ ವಾಲ್ಮೀಕಿ ಜಯಂತೋತ್ಸವ ಆಚರಣೆಗೆ ಅವಕಾಶ ನೀಡುವ ಮೂಲಕ ಸಮಾಜ ಸಂಘಟನೆಗೊಳ್ಳಲು ಕಾರಣೋಭೂತವಾಗಿದೆ. ಅಲ್ಲದೆ ಬಿಜೆಪಿ ಸರ್ಕಾರದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ 28.375 ಸಾವಿರ ಕೋಟಿಗಳನ್ನು ಅನುದಾನ ನೀಡಿತ್ತು. ಕಾಂಗ್ರೇಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ದ್ರೋಹ ಬಗೆದಿದೆ. ಆದ್ದರಿಂದ ಎಸ್ಟಿ ಸಮುದಾಯದ ಏಳಿಗೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಕಾಂಗ್ರೇಸ್ ಪಕ್ಷದವರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬುದಾಗಿ ಸುಳ್ಳು ವದಂತಿ ಹರಡುತ್ತಿದೆ. ಸಂವಿಧಾನ ಮಗ್ಗಿ ಪುಸ್ತಕವಲ್ಲ ಬದಲಾವಣೆ ಮಾಡಲು ಎಂದು ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸಿ ಬಾಲರಾಜು ರವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಂಗಲ್ ರೆಸಾರ್ಟ್ ಮಂಡಳಿ ಮಾಜಿ ಅಧ್ಯಕ್ಷ ಅಪ್ಪಣ್ಣ, ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಮುದ್ದುಕೃಷ್ಣ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಮೇಯರ್ ಶಿವಕುಮಾರ್, ಮಾಜಿ ಜಿ.ಪಂ ಅಧ್ಯಕ್ಷ ರಾಮಚಂದ್ರ, ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ, ಜಿಲ್ಲಾ ಉಪಾಧ್ಯಕ್ಷ ಹುಲ್ಲ ಹಳ್ಳಿ ಶಿವಣ್ಣ, ಬಿಜೆಪಿ ರಾಜ್ಯ ಕಾರ್ಯಾಕಾರಣಿ ಸದಸ್ಯ ಕಾರ್ಯ ಪ್ರಶಾಂತ್, ಎಸ್.ಟಿ. ಮೋರ್ಚಾ ಬಿಜೆಪಿ ಮಂಡಲ ಅಧ್ಯಕ್ಷರಾದ ಚಂದ್ರು, ಸೋಮೇಶ್, ಸುರೇಂದ್ರ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ
ಮುಸ್ಲಿಂ ಮಹಿಳೆಯೊಬ್ಬಳು ಮೋದಿ ಸರ್ಕಾರವನ್ನು ಬೆಂಬಲಿಸಿ ಎಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ನಗರ್ಲೆ ಗ್ರಾಮದ ನಾಜೀಯ ಬಾನು ಎಂಬ ಮಹಿಳೆ ಬಿಜೆಪಿ ಸರ್ಕಾರದಲ್ಲಿ ತ್ರಿವಳಿ ತಲಾಖ್ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಸೇರ್ಪಡೆಗೊಂಡಿರುವುದು ಎಲ್ಲರ ಗಮನವನ್ನು ಸೆಳೆದಿದೆ. ಇವರ ಜೊತೆ ಶಫಿ, ಜಬಿ ಸಾಥ್ ನೀಡಿದ್ದಾರೆ.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ಈ ಬಾರಿ ಎನ್ ಡಿ ಎ 350ಕ್ಕೂ ಅಧಿಕ ಸೀಟು ಗಳಿಸಲಿದೆ-ಪ್ರೊ. ಕೆ.ಎಸ್. ರಂಗಪ್ಪ

Published

on

ವರದಿ:    ಎಸ್ ಬಿ  ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ದೇಶದಲ್ಲಿ ಎನ್ ಡಿ ಎ ಮತ್ತೆ ಅಧಿಕಾರಕ್ಕೆ ಬರಲಿದ್ದು,ಈ ಬಾರಿ 350ಕ್ಕೂ ಅಧಿಕ ಸೀಟುಗಳನ್ನು ಗಳಿಸಲಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ,ಖ್ಯಾತ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದ್ದಾರೆ.
ಸಾಲಿಗ್ರಾಮ ತಾಲೂಕಿನ ಹರದನಹಳ್ಳಿಯ ಮುಡಾ ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೆಚ್.ಎನ್. ವಿಜಯ್ ಅವರ ನಿವಾಸಕ್ಕೆ ಭೇಟಿ ನೀಡಿ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರ ಮತಯಾಚಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಮೈತ್ರಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ 20ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿವೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದು‌ ಹೇಳಿದರು. ಮತಕ್ಕಾಗಿ ದೇಶದಲ್ಲಿ ಎಲ್ಲಾ ಪಕ್ಷಗಳು ಉಚಿತ ಸೌಲಭ್ಯಗಳ ಘೋಷಣೆ ತರವಲ್ಲ.ಉದ್ಯೋಗ ಸೃಷ್ಟಿ ಮಾಡಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸರ್ಕಾರಗಳು ಮುಂದಾಗಬೇಕು.ಉಚಿತ ಯೋಜನೆಗಳು(ಪ್ರೀಬೀಸ್) ರಾಜ್ಯ,ದೇಶವನ್ನು ದಿವಾಳಿ ಮಾಡಲಿವೆ.ವೆನಿಜುಯೆಲಾ ದೇಶ ಉಚಿತ ಸೌಲಭ್ಯಗಳನ್ನು ಕೊಟ್ಟು ಸಂಪೂರ್ಣ ದಿವಾಳಿಯಾಗಿದೆ ಎಂದರು.
ಬಡಜನರು,ಸಮಾಜದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ,ಮುಖ್ಯಮಂತ್ರಿಯಾಗಿ‌ ಮಾದರಿ‌ ಆಡಳಿತ ನೀಡಿದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹೆಚ್ಚು ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ವಿಜಯ್ ಅವರಿಗೆ ಉತ್ತಮ ಭವಿಷ್ಯ:
ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ಹೆಚ್.ಎನ್.ವಿಜಯ್ ಅವರು ಸಜ್ಜನ ರಾಜಕಾರಣಿ.ಕೊಡುಗೈ ದಾನಿ,ವಿಜಯ್ ಅಂಥವರು ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೇರಿದರೆ ಸಮಾಜಕ್ಕೆ ಒಳಿತಾಗಲಿದೆ.ವಿಜಯ್ ಅವರು ಶಾಸಕರಾಗುವ ಎಲ್ಲಾ ಅರ್ಹತೆ ಹೊಂದಿದ್ದು,ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, , ,ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಸೋಮಣ್ಣ,ಜೆಡಿಎಸ್ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಅಮಿತ್ ದೇವರಹಟ್ಟಿ,  ಮುಖಂಡರಾದ ಮೆಡಿಕಲ್  ರಾಜಣ್ಣ,   ಮಿರ್ಲೆ ರಾಜೀವ್,ಉಪ್ಪಾರ ಸಮಾಜದ ಮುಖಂಡರಾದ ಎಲ್ ಐಸಿ ನಿಂಗೇಗೌಡ,.ಟಿ.ಸೋಮಶೇಖರ್,  ಮಧುಚಂದ್ರ, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ರಾಮೇಗೌಡ, , ರಾಜೇಶ್, ನಿಂಗಪ್ಪ, ಅನಂತ್, ಮುದುಗುಪ್ಪೆ ಕುಮಾರ್, ಸತೀಶ್, ಕೃಷ್ಣೇಗೌಡ, ರವಿ, ಅಂಕನಹಳ್ಳಿಶಿವಣ್ಣ, ಮಹೇಶ್, ಗೊಪಾಲ್, ಮೈಸೂರುಚಂದ್ರಣ್ಣ ಪ್ರದೀಪ್, ಮಂಜು ಸೇರಿದಂತೆ ಇನ್ನಿತರರು ಹಾಜರಿದ್ದರು

Continue Reading

Mysore

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಒಕ್ಕಲಿಗ ಮುಖಂಡ ಮೈಸೂರಿನ ಡಾ.ಸುಶ್ರುತ್ ಗೌಡ.

Published

on

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರು,ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಕಾಕ್ಷಿ ಕಳೆದ ಎರಡು ವರ್ಷದಿಂದ ಟಿಕೆಟಿಗಾಗಿ ಪ್ರಯತ್ನಿಸಿದ್ದ ಮೈಸೂರಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಪ್ರಭಾವಿ ಒಕ್ಕಲಿ ಗೌಡ ನಾಯಕ ಡಾ..ಸುಶ್ರುತ್ ಗೌಡ ಇಂದು ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ .

ಕಾಂಗ್ರೆಸ್ ಅಭ್ಯರ್ಥಿ ಆಗಿ ಅವರು ಈ ಬಾರಿ ಆಕಾಂಕ್ಷಿ ಆಗಿದ್ದರು.

ಚುನಾವಣೆಗೆ ಇನ್ನು ಎರಡು ದಿನಗಳಿರುವಾಗ ಸುಶ್ರುತ್ ಗೌಡ ಅವರ ಬಿಜೆಪಿ ಸೇರ್ಪಡೆ ಅಚ್ಚರಿ ಮೂಡಿಸಿದೆ..

Continue Reading

Trending

error: Content is protected !!