Chamarajanagar
ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ – ರಾಜ್ಯಮಟ್ಟ ಚೆಸ್ ಪಂದ್ಯಾವಳಿಗೆ ಆಯ್ಕೆ
ಯಳಂದೂರು ಪಟ್ಟಣದ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳಾದ ವರ್ಷಿತ ವೈ ಪಿ, ಸಂಜನಾ ಆರ್, ಸಾನಿಕ ಎಂಬ ವಿದ್ಯಾರ್ಥಿಗಳು ದಿನಾಂಕ 6/11/2023ರಂದು ಚಾಮರಾಜನಗರ ದಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. ಕೀರ್ತಿ ಎಂಬ ವಿದ್ಯಾರ್ಥಿನಿ ರಾಜ್ಯ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರು ಗಳನ್ನು ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕರು ಎಲ್ಲರೂ ಅಭಿನಂದಿಸಿರುತ್ತಾರೆ.
Chamarajanagar
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಚೇರ್ ನೀಡಿದ ಗ್ರಾಪಂ ಸದಸ್ಯ ಗುರುಲಿಂಗಯ್ಯ
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-2 ಗೆ ಗ್ರಾಮ ಪಂಚಾಯತಿ ಸದಸ್ಯ ಗುರುಲಿಂಗಯ್ಯ ಕೆಸ್ತೂರು ಗ್ರಾಮ ಪಂಚಾಯತಿ 15 ನೇ ಹಣಕಾಸಿನಲ್ಲಿ 30 ಚೇರ್ ಗಳನ್ನು ಒದಗಿಸಿಕೊಟ್ಟಿದ್ದಾರೆ.
ವಿದ್ಯಾರ್ಥಿಗಳು ಚೇರ್ ನಲ್ಲಿ ಕೂತು ಅಧ್ಯಾಯನ ಮಾಡಲಿ. ವಿದ್ಯಾರ್ಥಿಗಳ ಹಿತಾ ದೃಷ್ಟಿಯಿಂದ ಚೇರ್ ಗಳನ್ನು ಪಂಚಾಯತಿ ಅನುದಾನದಲ್ಲಿ ನೀಡಲಾಗಿದೆ ಎಂದರು.
ಈ ಶಾಲೆಯು ಪರಿಶಿಷ್ಟರ ಕಾಲೋನಿಯಲ್ಲಿದ್ದು ಶೋಷಿತರ ಮಕ್ಕಳು ಚೆನ್ನಾಗಿ ಓದಬೇಕು ಅವರಿಗೆ ಯಾವುದೇ ಮೂಲಭೂತ ಸಮಸ್ಯೆಗಳು ಇರಬಾರದು ಡಾ ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರೂ ಅವರ ಮಾರ್ಗದಲ್ಲಿ ನಡೆಯಬೇಕಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಂತ ಭಿನ್ನವಾಗಿರಬೇಕು. ಪೋಷಕರು ದಯವಿಟ್ಟು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯಲ್ಲಿಯೇ ಗುಣಮಟ್ಟ ಶಿಕ್ಷಣವನ್ನು ನೀಡಲಾಗುತ್ತದೆ.
ನಮಗೆ ಸಹಕಾರ ನೀಡಿದ ಗ್ರಾಮಪಂಚಾಯತಿ ಅಧ್ಯಕ್ಷಕರಿಗೆ, ಎಲ್ಲಾ ಸದಸ್ಯರಿಗೆ ಹಾಗೂ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಸಹಕಾರದಿಂದ ಈ ಶಾಲೆಗೆ ಚೇರ್ ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೆ.ಚಿನ್ನಸ್ವಾಮಿ, ಮುಖ್ಯೋಪಾಧ್ಯಾಯರಾದ ಸಿದ್ದರಾಜು, ಶಿಕ್ಷಕರಾದ ನಂಜಯ್ಯ, ರಾಜೇಶ್, ಯುವ ಮುಖಂಡ ಮನೋಹರ್ ಹಾಗೂ ಇತರರು ಹಾಜರಿದ್ದರು.
Chamarajanagar
ಜ.23ರಂದು ಚಾಮರಾಜನಗರ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಚಾಮರಾಜನಗರ ಉಪವಿಭಾಗ ವ್ಯಾಪ್ತಿಯ ದೊಡ್ಡರಾಯಪೇಟೆ ವಿದ್ಯುತ್ ಉಪಕೇಂದ್ರದ ಫೀಡರ್‌ನಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜನವರಿ 23ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ ಚಾಮರಾಜನಗರ ಪಟ್ಟಣದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಂತೇಮರಹಳ್ಳಿ ರಸ್ತೆ, ಆದಿಶಕ್ತಿ ದೇವಸ್ಥಾನ ಸುತ್ತಮುತ್ತ, ಪುಟ್ಟಮಣಿ ಪಾರ್ಕ್, ರೈಲ್ವೆ ಬಡಾವಣೆ, ಮೈಸೂರು ನಂಜನಗೂಡು ರಸ್ತೆ, ನಂದಿಭವನ ರಸ್ತೆ, ಹೊಸ ಖಾಸಗಿ ಬಸ್ ನಿಲ್ದಾಣ ಸುತ್ತಮುತ್ತ, ಪೊಲೀಸ್ ಕ್ವಾಟ್ರಸ್ ಮತ್ತು ಕೆ.ಹೆಚ್.ಬಿ ಕಾಲೋನಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳ ನಿರ್ದೇಶಕರಾಗಿ ಲಿಂಗರಾಜು ಆಯ್ಕೆ
ಯಳಂದೂರು ಜ 22
ತಾಲೂಕಿನ ವಿವಿಧ ಮುಖಂಡರಿಂದ ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳ ನಿರ್ದೇಶಕರಾಗಿ ಆಯ್ಕೆಯಾದ ಅಗರ ಕೆ ಲಿಂಗರಾಜು ಅವರನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿರುವ ಬುದ್ಧ ಕೇಂದ್ರದಲ್ಲಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಗರ ಕೆ ಲಿಂಗರಾಜು ಜಿಲ್ಲೆಯ ಮೀನುಗಾರರಿಗೆ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಒದಗಿಸುವ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ. ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಮೀನುಗಾರರ ಸಮಸ್ಯೆ ಹೆಚ್ಚಾಗಿದೆ ಇವರ ಅಭಿವೃದ್ಧಿಗೆ ಹಲವಾರು ಯೋಜನೆಗಳಿವೆ. ಸರ್ಕಾರ ಮಟ್ಟದಲ್ಲಿ ಸಂಬಂಧಪಟ್ಟ ಸಚಿವರ ಗಮನ ಸೆಳೆದು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಮೀನುಗಾರರ ಮಕ್ಕಳಿಗೆ ಶಿಕ್ಷಣ ಸಿಗುವುದರ ಜೊತೆಗೆ ಅವರ ಆರ್ಥಿಕ ಮಟ್ಟವನ್ನು ಸುಧಾರಿಸಲಾಗುವುದು. ರಾಜ್ಯದ ಮೀನುಗಾರರು ಸೇರಿದಂತೆ ಜಿಲ್ಲೆಯ ಮೀನುಗಾರರಿಗೆ ಸರ್ಕಾರದಿಂದ ದೊರಕುವ ಸೌಲತ್ತುಗಳನ್ನು ಒದಗಿಸುವ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಮುಖಂಡ ಕಿನಕಹಳ್ಳಿ ರಾಚಯ್ಯ ಮಾತನಾಡಿ ಸತತವಾಗಿ ಎರಡನೇ ಬಾರಿಗೆ ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾಗುವುದು ಸುಲಭವಾದ ಮಾತಲ್ಲ, ಅಗರ ಕೆ ಲಿಂಗರಾಜು ಅವರು ಸರಳ ಜೀವಿಯಾಗಿದ್ದು ಅವರು ಸತತವಾಗಿ ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರಾಮಾಣಿಕತೆ, ಪ್ರಬುದ್ಧತೆ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ .ಮುಂದಿನ ದಿನಗಳಲ್ಲಿ ಮಹಾಮಂಡಲದ ಅಧ್ಯಕ್ಷರಾಗಬೇಕು ಎಂದು ಹಾರೈಸಿದರು.
ಗುತ್ತಿಗೆದಾರ ಮದ್ದೂರು ನಾರಾಯಣಸ್ವಾಮಿ, ಮುಖಂಡರಾದ ಜನಾರ್ಧನ ,ಗೌಡಳ್ಳಿ ಚಂದ್ರು, ಚಕ್ರವರ್ತಿ, ಇರಿಸವಾಡಿ ಶಿವಪ್ರಕಾಶ್, ರೇವಣ್ಣ, ಜಯರಾಮ, ಪರಿಶಿವ ,ಟೌನ್ ನಂಜುಂಡಸ್ವಾಮಿ, ನಟರಾಜು ಸೇರಿದಂತೆ ಇತರರು ಹಾಜರಿದ್ದರು
-
Chamarajanagar19 hours ago
Hannur|ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಜಟಾಪಟಿ
-
Hassan22 hours ago
Hassan| ಕಾಡಾನೆ ದಾಳಿಗೆ ಕಾರ್ಮಿಕ ಬ*ಲಿ
-
State14 hours ago
ಯಲ್ಲಾಪುರ, ಸಿಂಧನೂರಿನಲ್ಲಿ ಭೀಕರ ಅಪಘಾತ: ಮೃತರ ಕುಟುಂಬಕ್ಕೆ 3ಲಕ್ಷ ಪರಿಹಾರ ಘೋಷಿಸಿದ ಸಿಎಂ
-
National - International14 hours ago
ಪನಾಮಾ ಕಾಲುವೆ ವಿವಾದ: ಟ್ರಂಪ್ ಹೇಳಿಕೆ ತಿರಸ್ಕರಿಸಿದ ಪನಾಮಾ ಅಧ್ಯಕ್ಷ ಜೋಸ್ ರೌಲ್
-
Chamarajanagar11 hours ago
ಜ.23ರಂದು ಚಾಮರಾಜನಗರ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Hassan17 hours ago
ಕಾಡಾನೆ ದಾಳಿಯಿಂದ ವೃದ್ದ ಸಾ*ವು ಪ್ರಕರಣ
-
National - International12 hours ago
ರಾಜ್ಯದಲ್ಲಿ ಪ್ರತ್ಯೇಕ ಎರಡು ಕಡೆ ಅಪಘಾತ: ಮೃತರಿಗೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ
-
Hassan17 hours ago
ಮೊಟ್ಟ ಮೊದಲ ಬೃಹತ್ ಎಜುಕೇಷನ್ ಎಕ್ಸ್ ಪೋ 2025 ರ ಪ್ರಚಾರ ವಾಹನಕ್ಕೆ ಚಾಲನೆ