Connect with us

Uncategorized

ಜಂಬೂ ಸವಾರಿಗೆ ಮೆರುಗು ತಂದ ೩೧ಜಿಲ್ಲೆಗಳ ಸ್ತಬ್ದಚಿತ್ರ

Published

on

ಮೈಸೂರು: ನಾಡಹಬ್ಬ ಜಂಬೂ ಸವಾರಿಗೆ ಮೆರುಗು ತರುವ ನಿಟ್ಟಿನಲ್ಲಿ ಈ ಬಾರಿ ೩೧ ಜಿಲ್ಲೆಗಳ ೭೦ಕ್ಕೂ ಹೆಚ್ಚು ಮಾದರಿಯ ಸಂದೇಶ ಸಾರುವ ಸ್ತಬ್ಧಚಿತ್ರಗಳು ಸಾಗಿ ಜನ ಮನಗೆದ್ದವು.
ಬಾಗಲಕೋಟೆಯ ಬಾದಾಮಿ ಚಾಲುಕ್ಯರ ರಾಜವಂಶ ಹಾಗೂ ಶ್ರೀ ಬನಶಂಕರಿ, ಬಳ್ಳಾರಿಯ ಕುಮಾರಸ್ವಾಮಿ ದೇವಾಸ್ಥಾನ ಪಾರ್ವತಿ ದೇವಾಲಯ, ಕಸೂತಿ, ನಾರಿಹಳ್ಳಿ ಅಣೆಕಟ್ಟು, ಬೆಳಗಾವಿಯ ಮಹಾಲಿಂಗೇಶ್ವರ ದೇವಾಲಯ, ಕಿತ್ತೂರುರಾಣಿ ಚೆನ್ನಮ್ಮ ಹಾಗೂ ಸುವರ್ಣಸೌಧ ಹಾಗೂ ಸಂಗೊಳ್ಳಿರಾಯಣ್ಣ ಪ್ರತಿಮೆ, ಬೆಂಗಳೂರು ಗ್ರಾಮಾಂತರದ ನೆಲಮಂಗಲದ ದಕ್ಷಿಣ ಕಾಶಿ ಶಿವಗಂಗೆ ದೇವಾಲಯ, ಬೆಂಗಳೂರು ನಗರದಿಂದ ಚಂದ್ರಯಾನ-೩ ಹಾಗೂ ಕೆಂಪೇಗೌಡರ ಪ್ರತಿಮೆ ಮಾದರಿ, ಬೀದರ್‌ ಜಿಲ್ಲೆಯ ಕೃಷ್ಣಮೃಗ ಸಂರಕ್ಷಾಣಾಧಾಮ ಅರಣ್ಯ ಪ್ರದೇಶ, ಚಾಮರಾಜನಗರದಿಂದ ಜನಪದ ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡಿನ ಅನಾವರಣ. ಚಿಕ್ಕಬಳ್ಳಾಪುರದಿಂದ ಏಕತೆಯಲ್ಲಿ ಅನೇಕತೆ ಸಾರುವ ನಿಟ್ಟಿನಲ್ಲಿ ಹಿಂದೂ, ಮುಸ್ಲಿ ಹಾಗೂ ಕ್ರೈಸ್ತ ಧರ್ಮದ ದೇವಾಲಯ, ಚಿಕ್ಕಮಗಳೂರಿನಿಂದ ಕಾಫಿ ನಾಡನ್ನು ಬಿಂಬಿಸುವ ಬೆಟ್ಟದಿಂದ ಬಟ್ಟಲಿಗೆ ಸಂದೇಶ, ಚಿತ್ರದುರ್ಗದಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಮಾದರಿ, ದಕ್ಷಿಣ ಕನ್ನಡ ಜಿಲ್ಲೆಯಿಂದ ಪಿಲಕುಳ ಗುತ್ತಿಗೆಮನೆ-ವಿವೇಕಾನಂದ ತಾರಾಲಯ- ಬೀಚ್‌ ಸರ್ಫಿಂಗ್‌, ದಾವಣಗೆರೆಯಿಂದ ಸಂತ ಸೇವಾಲಾಲರ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ ಬಿಂಬಿಸುವ ಸ್ತಬ್ಧಚಿತ್ರ ಮನಸೂರೆಗೊಂಡಿತು.
ಧಾರವಾಡಜಿಲ್ಲೆಯ ಪೇಡಾ ಹಾಗೂ ಎಮ್ಮೆ ನಮ್ಮ ಹೆಮ್ಮೆ ಎಂಬ ಸಂದೇಶ ಸಾರಿತು. ಗದಗ ಜಿಲ್ಲೆಯಿಂದ ಗಾಂಧೀಜಿಯವರ ಸಬರಮತಿ ಆಶ್ರಮ ಮಾದರಿ, ಹಾಸನ ಜಿಲ್ಲೆಯಿಂದ ಶ್ರೀ ಹಾಸನಾಂಬ ಸಮೂಹ ದೇವಾಲಯ, ಹಾವೇರಿ ಜಿಲ್ಲೆಯಿಂದ ಶಂಕನಾದ ಮೊಳಗಿಸುವ ಶ್ರೀ ಕನಕದಾಸರು ಹಾಗೂ ಕಾಗಿನೆಲೆ ಪೀಠ, ಕಲ್ಬುರ್ಗಿಯಿಂದ ರಾಜವಂಶಸ್ಥರ ಕೋಟೆ ಹಾಗೂ ಅರಣ್ಯ ಪ್ರದೇಶ, ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಾದ ತಲಕಾವೇರಿ, ಜಲಪಾತ ಹಾಗೂ ದುಬಾರೆ ಆನೆ ಸಂರಕ್ಷಣೆ ಪ್ರದೇಶ, ಕೋಲಾರದಿಂದ ನರೇಗಾದಡಿಯಲ್ಲಿ ವೀರಗಲ್ಲುಗಳ ಉತ್ಖನನ ಮತ್ತು ಮರುಸ್ಥಾಪನೆ, ಕೊಪ್ಪಳದ ಕಿನ್ನಾಳೆ ಕಲೆ ಮತ್ತು ಕೈ ಮಗ್ಗ, ಮಂಡ್ಯ ಜಿಲ್ಲೆಯ ಸಿಹಿ ಕಬ್ಬಿನ ಆಲೆ ಮನೆ, ಮೈಸೂರಿನಿಂದ ನಾಲ್ವಡಿಯವರ ಕೊಡುಗೆಗಳು, ರಾಯಚೂರಿನಿಂದ ನವರಂಗ ದರ್ಬಾಜ ಹಾಗೂ ಆರ್‌ಟಿಪಿಎಸ್‌, ರಾಮನಗರದಿಂದ ಚೆನ್ನಪಟ್ಟಣದ ಗೊಂಬೆಗಳು ಇತ್ಯಾದಿ, ಶಿವಮೊಗ್ಗ ಜಿಲ್ಲೆಯ ಕುವೆಂಪು, ಕುಪ್ಪಳ್ಳಿ ಹಾಗೂ ಶಿವಪ್ಪನಾಯಕನ ಪ್ರತಿಮೆ, ತುಮಕೂರಿನಿಂದ ಮೂಡಲಕಾಡು ಯಕ್ಷಗಾನ, ಉಡುಪಿಯಿಂದ ತ್ಯಾಜ್ಯಮುಕ್ತ ಮತ್ಸ್ಯಸ್ನೇಹಿ ಸಮುದ್ರ, ಉತ್ತರ ಕನ್ನಡ ಜಿಲ್ಲೆಯ ವನ್ಯಜೀವಿ ಹಾಗೂ ಸಿಂಹದ ಬಾಲದ ಸಿಂಗಳಿಕ ರಕ್ಷಣೆ ಸಂದೇಶ, ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜ್ಞಾನ ಯೋಗಾಶ್ರಮ ಹಾಗೂ ಯಾದವಗಿರಿ ಜಿಲ್ಲೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮಾದರಿ ಸ್ತಬ್ಧಚಿತ್ರಗಳು ಕಂಡು ಬಂದವು.

Continue Reading
Click to comment

Leave a Reply

Your email address will not be published. Required fields are marked *

Uncategorized

ಬಿರಿಯಾನಿ ತಿಂದು ೧೭ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Published

on

ಚಿಕ್ಕಮಗಳೂರು : ಬಿರಿಯಾನಿ ತಿಂದು 17 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

ಒಂದು ದಿನ ಹಿಂದೆ ಮಾಡಿದ್ದ ಬಿರಿಯಾನಿ ತಿಂದಿದ್ದ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಬಿರಿಯಾನಿ ಸೇವಿಸಿದವರಲ್ಲಿ 17 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಡೂರು ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಶುಭಕಾರ್ಯ ಮುಗಿಸಿ ಸಂಜೆ ಸಂಬಂಧಿಕರಿಗಾಗಿ ಬಿರಿಯಾನಿ ಮಾಡಲಾಗಿತ್ತು. ಆದರೆ, ಬಿರಿಯಾನಿಯನ್ನು ತಿಂದ ಕೂಡಲೇ ವಾಂತಿ ಭೇದಿಯಾಗಿದೆ.
ತಕ್ಷಣ ಅಸ್ವಸ್ಥಗೊಂಡವರನ್ನು ಕಡೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕ್ಕ ಪುಟ್ಟ ಮಕ್ಕಳು ಸೇರಿದಂತೆ 17 ಜನ ಅಸ್ವಸ್ಥಗೊಂಡು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ, ಇನ್ನೂ ವಿಷಯ ತಿಳಿಯುತ್ತಿದ್ದಂತೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ

Continue Reading

Uncategorized

ಮಾದಕ ವಸ್ತು ಮಾರಾಟ ಮಾಡುತಿದ್ದ ಇಬ್ಬರ ಬಂಧನ

Published

on

ಮಡಿಕೇರಿ : ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹೆಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ನ. 19 ರಂದು ಮಡಿಕೇರಿ – ಮಂಗಳೂರು ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಕುಂಜಿಲ ನಿವಾಸಿ ನೌಫಲ್ (25), ಎಮ್ಮೆಮಾಡು ಪೈಸಾರಿ ನಿವಾಸಿ ಸಾದಿಕ್ (32) ಎಂಬುವವರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಜಿಲಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.

Continue Reading

Uncategorized

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೀರ್ಣೋದ್ಧಾರ ಹಾಗೂ ಕಳಸ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Published

on

ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಚನ್ನರಾಯಪಟ್ಟಣ ತಾಲ್ಲೂಕು ಅತ್ತಿಹಳ್ಳಿ ಗ್ರಾಮದ
ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವಸ್ಥಾನದ
ಜೀರ್ಣೋದ್ಧಾರ ಹಾಗೂ ಕಳಸ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೊತೆಯಲ್ಲಿ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ ರವರು ಹಾಗೂ ಗ್ರಾಮಸ್ಥರು ಇದ್ದರು.

Continue Reading

Trending