Connect with us

Mysore

ಚುಂಚನಕಟ್ಟೆ ಧನಗಳ  ಜಾತ್ರೆ  ಬಲು ಜೋರು : ಆಕರ್ಷಣೀಯ ವಾಗಿ  ಬಿಂಬಿಸುವ ಜಾನುವಾರು ಜಾತ್ರೆ,

Published

on

ಸುಗ್ಗಿಯ ನಂತರ ನಡೆಯುವ ದಕ್ಷಿಣ ಭಾರತದ ಮೊದಲ ಜಾತ್ರೆ, ಎಂದೇ ಹೆಸರು ಪಡೆದಿರುವ   ಜಾತ್ರೆಯಲ್ಲಿ  ಕಣ್ತುಂಬಿ ಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ. ಕೃಷಿಯಂತ್ರೋ ಪಕರಣಗಳು ಬಂದರು ರೈತರ ಅಭಿಮಾನ ಮತ್ತು ಪ್ರೀತಿಗೆ ಸಾಕ್ಷಿ ಯಾಗಿರುವ ಜೋಡೆತ್ತುಗಳು,ಇಲ್ಲಿ ಎಲ್ಲಿ ನೋಡಿದರೂ ದೇಶಿ ತಳಿಯ ಗೋಸಂಪತ್ತಿನ ದರ್ಬಾರ್, ಶ್ರೀಮಂತ ರೈತರ ವೈಭೋಗಕ್ಕೆ ರಾಸುಗಳಿಗೆ ಶೃಂಗಾರಗೊಂಡ ಚಪ್ಪರ, ಜಾನುವಾರುಗಳನ್ನು ಕೊಳ್ಳುವ ಮಾರಾಟ ಮಾಡುವ ಭರ್ಜರಿ ಭರಾಟೆ, ಜಾತ್ರೆ ನೋಡಲು ಹರಿದು ಬರುತ್ತಿರುವ ಜನಸಾಗರ,
ಮೈಸೂರು ಜಿಲ್ಲೆಯ ಭತ್ತದ ಕಣಜ ಎಂದೇ ಹೆಸರು ಪಡೆದಿರುವ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆಯಲ್ಲಿ ಕಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿ, ಸೊಗಡು ಬಿಂಬಿಸುವ ಜಾನುವಾರು ಜಾತ್ರೆಯ ದೃಶ್ಯ ವೈಭವಗಳು.
ಕಳೆದ ಬಾರಿ ಚರ್ಮ ಗಂಟು ರೋಗದ ಹಿನ್ನಲೆಯಲ್ಲಿ ರದ್ದು ಗೊಂಡಿದ್ದ ಈ ಜಾನುವಾರು ಜಾತ್ರೆ ಈ ಬಾರಿ  ಭರ್ಜರಿಯಾಗಿ ಆರಂಭಗೊಂಡಿರುವ ಚುಂಚನಕಟ್ಟೆ ಜಾನುವಾರು ಜಾತ್ರೆಯಲ್ಲಿ ಸಿಂಗಾರಗೊಂಡ ಜಾನುವಾರುಗಳ ಮೇಳ ಕಿ.ಮೀ. ಗಟ್ಟಲೆ ಕಂಡು ಬರುತ್ತಿದ್ದು, ಸುಗ್ಗಿಯ ದಣಿವನ್ನು ತಣಿಸಿಕೊಳ್ಳಲು ರೈತರು ಜಾನುವಾರು ಜಾತ್ರೆಯತ್ತ ಮುಗಿ ಬೀಳುತ್ತಿದ್ದು 50 ಸಾವಿರ ರೂ.ಗಳಿಂದ ಆರಂಭಿಸಿ 5 ಲಕ್ಷಕ್ಕೂ ಅಧಿಕ ಬೆಲೆಬಾಳುವ ದುಬಾರಿ ಎತ್ತುಗಳು ಜಾತ್ರೆಯಲ್ಲಿ ಜನಾ ಕರ್ಷಣೆಯ ಕೇಂದ್ರಬಿಂದುವಾಗಿವೆ.
ಸುಗ್ಗಿಯ ನಂತರ ನಡೆಯವ ಮತ್ತು ದಕ್ಷಿಣ ಭಾರತದಲ್ಲಿ ಅತ್ಯಂತ ಹೆಸರುವಾಸಿಯಾದ ಚುಂಚನಕಟ್ಟೆ ಜಾತ್ರೆಯಲ್ಲಿ ಈಗ ಮೈಸೂರು ಜಿಲ್ಲೆ ಮಾತ್ರವಲ್ಲದೇ ಮಂಡ್ಯ, ಹಾಸನ, ಚಿಕ್ಕಮಂಗಳೂರು, ಹುಬ್ಬಳ್ಳಿ, ಧಾರವಾಡ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ,  ತುಮಕೂರು, ಕೋಲಾರ ಸೇರಿದಂತೆ ಇನ್ನಿತರ ಜಿಲ್ಲೆಗಳ ರೈತರು ಪ್ರತಿಷ್ಠೆಗೆ ಬಿದ್ದವರಂತೆ ಜಾನುವಾರು ಗಳನ್ನು ಇಲ್ಲಿಗೆ ವಾದ್ಯಗೋಷ್ಠಿಯ ಮೂಲಕ ಕರೆತರುತ್ತಿರುವುದು ನೋಡಲು ಎರಡು ಕಣ್ಣು ಸಾಲದಾಗಿದೆ.

ಚುಂಚನಕಟ್ಟೆಯಲ್ಲಿ 5 ಲಕ್ಷ ಬೆಲೆಬಾಳುವ ಹೊಸೂರು ಗ್ರಾಮದ ವಸಂತ್ ಅವರ ರಾಸುಗಳು
ಚುಂಚನಕಟ್ಟೆಯ ಜಾನುವಾರು ಜಾತ್ರೆ ಯಲ್ಲಿ ಸದ್ಯ ಪಶುಸಂಗೋಪನೆ ಇಲಾಖೆಯ ಮಾಹಿತಿಯ ಪ್ರಕಾರ  ಸುಮಾರು 6 ರಿಂದ 7 ಸಾವಿರಕ್ಕೂ ಅಧಿಕ ಎತ್ತುಗಳು ಬಂದಿದ್ದು,  ರೈತರು ತಮ್ಮ ರಾಸುಗಳ ಮೇಲಿರುವ ಪ್ರತಿಷ್ಠೆಯನ್ನು  ಹೆಚ್ಚಿಸಿಕೊಳ್ಳಲು ತಮ್ಮ ರಾಸುಗಳಿಗೆ ಬೃಹತ್ ಶಾಮಿಯಾನ, ವಿದ್ಯುತ್ ಅಲಂಕಾರಿಕ ಚಪ್ಪರಗಳನ್ನು ಹಾಕಿಸಿ ದೇಶಿ ತಳಿಯ ಗೋಸಂಪತ್ತಿನ ರಾಜ ದರ್ಬಾರ್ ನಡೆಸುತ್ತಿರುವುದು ಅಕರ್ಷಣೀಯವಾಗಿದೆ.
ಸದ್ಯ ರೈತರಿಗೆ ಕೃಷಿ ಯಂತ್ರೋಪಕರಣಗಳು ಹೆಜ್ಜೆ-ಹೆಜ್ಜೆಗೂ ಸಿಗುತ್ತಿದ್ದರು ಸಹ ರೈತರಿಗೆ ಮಾತ್ರ ಜೊಡೆತ್ತುಗಳ ಮೇಲೆ ಪ್ರೀತಿ ಕಮ್ಮಿಯಾಗುತ್ತಿಲ್ಲ ಇದರಿಂದಲೇ  ಚುಂಚನಕಟ್ಟೆ ಜಾತ್ರೆಯ ರಾಸುಗಳಿಗೆ ರಾಜ್ಯದಲ್ಲಿಯೇ ಉತ್ತಮ ಹೆಸರಿದ್ದು ಅಲ್ಲದೇ `ಗಂಡು  ರಾಸುಗಳ ಜಾತ್ರೆ’ ಎಂದೇ ಹೆಸರು ಪಡೆದಿರುವ ಈ ಜಾತ್ರೆಯ ವಿಶೇಷವೆಂದರೆ ಭಾಗಶಃ ಎತ್ತುಗಳೇ ಭಾಗವಹಿಸುವುದು ಮಾತ್ರ ವಲ್ಲದೇ ಬೀಜದ ಹೋರಿಗಳು ಮತ್ತು ಹೆಚ್ಚು ದುಡಿಮೆಗೆ ಒಗ್ಗುವ ಹಳ್ಳಿ ಕಾರ್ ತಳಿಯ ಎತ್ತುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ.
ಚುಂಚನಕಟ್ಟೆಯು ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರು ವಾಸಿಯಾಗಿದ್ದು, ಇಲ್ಲಿಗೆ ರಾಸುಗಳನ್ನು ಕೊಳ್ಳಲು ದೂರದ ಗದಗ, ಹುಬ್ಬಳ್ಳಿ, ಧಾರವಾಡ, ಕಲಬರುಗಿ, ವಿಜಯಪುರ ದಾವಣಗೆರೆ, ಶಿವಮೊಗ್ಗ ಸೇರಿ ದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಮತ್ತು ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇನ್ನಿತರ ಕಡೆ ಯಿಂದ ರೈತರು ಬರುತ್ತಿದ್ದು, ಇದು ಜಾತ್ರೆಯಲ್ಲಿ ಭಾಗವಹಿಸುವ ರೈತರಲ್ಲಿ ಕೋಟ್ಯಾಂತರ ರೂಗಳ ಉತ್ತಮ ವ್ಯವಹಾರದ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ  ಉತ್ತಮ ಮಳೆ ಆಗದ ನಡುವೆಯು ರೈತರು ಮಾತ್ರ ರಾಸುಗಳ ಮೇಲೆ ಇಟ್ಟಿರುವ ಪ್ರೀತಿ‌ ಮಾತ್ರ ಕಡಿಮೆ ಆಗಿಲ್ಲ ರಾಸುಗಳನ್ನು ಕೊಳ್ಳುವುದು ಮತ್ತು ಮಾರುವುದರಲ್ಲೂ ಸಾಕಷ್ಟು ಲಾಭ ದೊರೆಯುವುದರಿಂದ ಮತ್ತು ಉತ್ತಮ ರಾಸುಗಳ ಕೊಳ್ಳುವಿಕೆಗೆ ಈ ಚುಂಚನಕಟ್ಟೆ ಜಾನುವಾರು   ಜಾತ್ರೆ ಉತ್ತಮ ವೇದಿಕೆಯಾಗುತ್ತಿದ್ದು ಇದರಿಂದಲೇ ರೈತರು ಮತ್ತು ದಲ್ಲಾಳಿಗಳು ಇತ್ತ ಮುಖಮಾಡಿ ಭರ್ಜರಿ‌ ಲಾಭಗಳಿಸುತ್ತಿರುವುದು ವಿಶೇಷವಾಗಿದೆ.
ಈಗಾಗಲೇ ಸಾವಿರಾರು ರೈತರು ತಮ್ಮ ಎತ್ತುಗಳನ್ನು ಜಾತ್ರಾ ಮಾಳಕ್ಕೆ ಕರೆತರುವಾಗ ಸಾವಿರಾರು ರೂ ಖರ್ಚು ಮಾಡಿ ನೂರಾರು ಮಂದಿಗೆ ಔತಣಕೂಟವನ್ನು ಏರ್ಪಡಿಸಿ ವಾದ್ಯ ಗೋಷ್ಠಿ ಮತ್ತು ಅದ್ಧೂರಿ ಮೆರವಣಿಗೆ ಮೂಲಕ ತಂದಿದ್ದು, ಜತಗೆ ನಿತ್ಯ ಹಾಲು, ರವೆ, ತುಪ್ಪ ಮತ್ತಿತರ ಪೌಷ್ಟಿಕಾಂಶಭರಿತ ‘ಮೃಷ್ಟಾನ್ನ ಭೋಜನ ಉಣಬಡಿಸುತ್ತಾ ತಮ್ಮ ರಾಸುಗಳ ಮೇಲಿರುವ ಕಾಳಜಿಯನ್ನು ತೋರುತ್ತಿರುವ ರೈತರ ಕಾಳಜಿ ನಿಜಕ್ಕು ರೈತರು ಜಾನು ವಾರುಗಳ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿಯಾಗುತ್ತಿದೆ ಈ ಜಾತ್ರೆ
ಬೀಡು ಬಿಟ್ಟ ಪಶು ಇಲಾಖೆ
ಇನ್ನು ಜಾತ್ರೆಯಲ್ಲಿ ರಾಸುಗಳಿಗೆ ಯಾವುದೇ ರೋಗ ರುಜಿನಗಳು ಬಾರದಂತೆ‌ ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರಗೆ ಕೆ.ಆರ್.ನಗರ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಅವರ ನೇತೃತ್ವದಲ್ಲಿ ಪಶುವೈದ್ಯಾಧಿಕಾರಿಗಳಾದ ಕೆ.ಸಿ.ರಾಮು,ಸಂಜಯ್, ಸಂತೋಷ್, ಸುರೇಂದ್ರ  ಹರೀಶ್, ಡಾ. ಕೃಷ್ಣರಾವ್ ಡಾ. ಚಂದನ್, ಪ್ರಹ್ಲಾದ್,ಪ ಪಶುಪರಿಕ್ಷಕರಾದ ಕೃಷ್ಣಸ್ವಾಮಿ, ಚಿಕ್ಕೇಗೌಡ, ಸಿದ್ದರಾಜು, ರೇವಣ್ಣ, ಮದನ್,  ಸಿಬ್ಬಂದಿಗಳಾದ ಸೋಮಣ್ಣ, ಋಷಿಕುಮಾರ, ಮುಂತಾದವರು ಇಲ್ಲಿನ ಮಂಟದ ಬಾರೆಯಲ್ಲಿ  ಕೃತಕವಾಗಿ  ಪಶು ಚಿಕಿತ್ಸಾಲಯವನ್ನು ತೆರೆದು ಶ್ರಮಿಸುತ್ತಿರುವುದು ರೈತರ ಮೆಚ್ವುಗೆಗೆ ಪಾತ್ರವಾಗಿದೆ.

ರಾಸುಗಳ ಕ್ಯಾಟ್ ವಾಕ್ 
ಜಾತ್ರೆಯ ಮಾಳದಲ್ಲಿ ಅಲಕಾಂರಗೊಂಡ ರಾಸುಗಳನ್ನು ಕ್ಯಾಟ್ ವಾಕ್ ಮಾದರಿಯಲ್ಲಿ ರಸ್ತೆಗಳಲ್ಲಿ ನಡೆಸಿ ತಮ್ಮ ರಾಸುಗಳ ಬಗ್ಗೆ  ಖರೀದಿದಾರರನ್ನು ಆಕರ್ಷಿಸುವ ಪ್ರಯತ್ನ ಮಾಡುವ ರೈತರ ಪ್ರಯತ್ನ ಗಮನ ಸೆಳೆಯುತ್ತಿದೆ.
ಇದೀಗ ಚುಂಚನಕಟ್ಟೆ ಜಾನುವಾರು ಜಾತ್ರೆಗೆ ಉತ್ತಮ ಆರಂಭ ದೊರೆಯುತ್ತಿದ್ದಂತೆಯೇ ಇಲ್ಲಿ ಹಾಕಲಾಗಿರುವ ಸಿಹಿ ತಿಂಡಿ, ಜ್ಯೂಸ್, ಪಾನಿಪುರಿ,ಗೋಬಿ, ನೊಗ, ಓನಕೆ, ಸೇರಿದಂತೆ ವಿವಿಧ ಬಗೆಯ ಆಟಿಕೆಗಳ ಅಂಗಡಿ ಮುಗ್ಗಟ್ಟು ಮತ್ತು  ವಿವಿಧ ಬಗೆಯ ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್‍ಗಳಿಗೆ ಭರ್ಜರಿ ವ್ಯಾಪಾರ ಶುರುವಾಗಿದ್ದು ಇದರಿಂದ ದೂರದ ಊರುಗಳಿಂದ ಬಂದ ಪ್ರವಾಸಿಗರು ಜಾತ್ರೆಯ ಸೊಬಗನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಇತ್ತೀಚಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಆಧುನಿಕ ಜೀವನ ಶೈಲಿಯಿಂದ ಮರೆಯಾಗುತ್ತಿರುವ ಗ್ರಾಮೀಣ ಪರಂಪರೆಯ ನಡುವೆಯೂ ಇಲ್ಲಿನ ಜಾನುವಾರು ಜಾತ್ರೆಯ ಸೊಬಗನ್ನು ಕಣ್ತುಂಬಿ ಕೊಳ್ಳಲು ಮತ್ತು ಶ್ರೀರಾಮದೇವರ ದೇವಾಲಯ, ಕಾವೇರಿ ನದಿಯ ಜಲಪಾತ, ಜಾತ್ರೆಯ ತಿಂಡಿತಿನಿಸುಗಳನ್ನು ಸವಿಯಲು ಇಲ್ಲಿಗೆ ನೀವೂ ಒಮ್ಮೆ ಬರಬೇಕು. ಅದಕ್ಕಾಗಿ ಕೈಬೀಸಿ ಕರೆಯುತ್ತಿದೆ ಚುಂಚನಕಟ್ಟೆ ಜಾನುವಾರು ಜಾತ್ರೆ.

ಉತ್ತಮ ರಾಸುಗಳಿಗಾಗಿ ಈ ಜಾತ್ರೆಗೆ ಬರುತ್ತೇವೆ 
ಚುಂಚನಕಟ್ಟೆ ಜಾನುವಾರು ಜಾತ್ರೆಯಲ್ಲಿ ಭೂಮಿ ಉಳುಮೆ ಮಾಡಲು ಹೆಸರು ಪಡೆದಿರುವ ಹಳ್ಳಿಕಾರ್ ತಳಿಯ ರಾಸುಗಳು ಸಿಗುವುದರಿಂದ ಇಲ್ಲಿ 4 ಜೊತೆ ರಾಸುಗಳನ್ನು ಕೊಳ್ಳಲು ಇಲ್ಲಿಗೆ ಆಗಮಿಸಿದ್ದೇವೆ ಜತಗೆ ಈ ಜಾತ್ರೆಯ ನೋಡಿ ಕಣ್ಣು ತುಂಬಿ ಕೊಳ್ಳುವುದೇ ಒಂದು ಸೌಭಾಗ್ಯವಾಗಿದ್ದು ಜಾತ್ರೆಯ ಬಗ್ಗೆ ಹೆಚ್ಚು ಪ್ರಚಾರದ ಅವಶ್ಯಕತೆ ಇದೆ

ಪ್ರದೀಪ್ ಕಿಲ್ಲದ,  ಧಾರವಾಡದ ಯುವ ರೈತ

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ 

Continue Reading
Click to comment

Leave a Reply

Your email address will not be published. Required fields are marked *

Mysore

ಅಂಬೇಡ್ಕರ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆ

Published

on

ನಗರದಲ್ಲಿ ಜುಲೈ 13 ಅಥವಾ 14ರಂದು ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗಿದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಳಿ ತಾರೀಕನ್ನು ನಿಗದಿ ಪಡಿಸುತ್ತೇನೆ
ಎಂದು ಕ್ಷೇತ್ರದ ಶಾಸಕ ದರ್ಶನ್ ದ್ರುವ ನಾರಾಯಣ್ ತಿಳಿಸಿದ್ದಾರೆ.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಮುಖಂಡರ ಅಭಿಪ್ರಾಯಗಳನ್ನು ತಿಳಿದುಕೊಂಡು ಅಂಬೇಡ್ಕರ್ ಜಯಂತಿಯನ್ನು ಸಾಮರಸ್ಯದಿಂದ ಆಚರಿಸೋಣ ಎಂದು ತೀರ್ಮಾನಿಸಿದರು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಚಾಮರಾಜನಗರ ಸಂಸದರಾದ ಸುನಿಲ್ ಬೋಸ್, ಎಂಎಲ್ಸಿ ಯತೀಂದ್ರ ಸಿದ್ರರಾಮಯ್ಯ,
ಶಾಸಕರುಗಳಾದ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಭಾಗವಹಿಸಲಿದ್ದಾರೆ.

ಅಂಬೇಡ್ಕರ್ ಜಯಂತಿಯ ಮೊದಲಿಗೆ 9 ಗಂಟೆಗೆ ಮೆರವಣಿಗೆಯನ್ನು ಪ್ರಾರಂಭಿಸಬೇಕು. 12 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಬೇಕು ಎಂದು ಸಲಹೆ ಸೂಚಿಸಿದರು.

ನಗರದ ಪ್ರಮುಖ ಬೀದಿಯಲ್ಲಿ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಮತ್ತು ಬುದ್ಧ ಹಾಗೂ ಸಂವಿಧಾನ ಪೀಠಿಕೆಯ ಸ್ತಬ್ದ ಚಿತ್ರಗಳೊಂದಿಗೆ ಜಾನಪದ ಕಲಾತಂಡಗಳ ಮೂಲಕ ವಿಚಾರ ಸಂಕೀರಣ ನಡೆಯಲಿದೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಬ್ಲಾಕ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ನಾಗೇಶ್ ರಾಜ್, ಶಂಕರಪುರ ಸುರೇಶ್, ನಗಲೆ೯ ವಿಜಯ್ ಕುಮಾರ್, ಮಲ್ಲಹಳ್ಳಿ ನಾರಾಯಣ್, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ದೇಬೂರು ಅಶೋಕ್, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ರಪ್ತು ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವನ್ನು ಹೆಚ್ಚಿಸುತ್ತದೆ – ಟಿ ದಿನೇಶ್

Published

on

ಮೈಸೂರು, ಜೂ.24: ರಪ್ತು ಮಾಡುವುದರಿಂದ ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ.ದಿನೇಶ್ ಅವರು ತಿಳಿಸಿದರು.

ನಗರದ ಹೋಟೆಲ್ ಪ್ರೆಸಿಡೆಂಟ್ ನಲ್ಲಿ ಇಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ರಪ್ತು ಹಮ್ಮಿಕೊಂಡಿದ್ದ ರಪ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಉದ್ದಿಮೆದಾರರಿಗೆ ನಾನು ಪ್ರತಿದಿನ ಹೊಸತನ್ನು ಕಲಿಯಬೇಕು ಎನ್ನುವ ಹಂಬಲ ಇರಬೇಕು. ದೇಶದಲ್ಲಿ 778 ಮಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ರಪ್ತು ಮಾಡಿದ್ದು, 860 ಮಿಲಿಯನ್ ಡಾಲರ್ ಮೊತ್ತದ ಸರಕನ್ನು ಆಮದನ್ನು ಮಾಡಿಕೊಂಡಿದ್ದೇವೆ. ಕರ್ನಾಟಕವು ರಪ್ತು ಮಾಡುವುದರಲ್ಲಿ 4 ನೇ ಸ್ಥಾನದಲ್ಲಿ ಇದೆ. ನಮ್ಮ ರಾಜ್ಯವು ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರಬೇಕು ಎಂದರು.

ಭಾರತ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ರಫ್ತು ಉತ್ತೇಜನ ಕೇಂದ್ರವನ್ನು ಸ್ಥಾಪಿಸಿದೆ. ಮೈಸೂರು ಜಿಲ್ಲೆಯಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ಪ್ರತಿ ವರ್ಷ ಶೇಕಡಾ 5% ರಫ್ತನ್ನು ಹೆಚ್ಚಳ ಮಾಡಬೇಕು ಎಂದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕರಾದ ಸಿ.ಎಸ್.ಬಾಬು ನಾಗೇಶ್ ಅವರು ಮಾತನಾಡಿ, ತಾವೆಲ್ಲರೂ ಯುವ ಉದ್ಯಮಿಗಳು ಇದ್ದೀರಾ. 6 ದಿನಗಳ ಕಾಲ ಹಮ್ಮಿಕೊಂಡಿರುವ ರಪ್ತು ನಿರ್ವಹಣಾ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ. ರಪ್ತು ಕೈಗಾರಿಕೆಗಳ ಆರ್ಥಿಕ ಆದಾಯವನ್ನು ಹೆಚ್ಚಿಸುತ್ತದೆ. ಇದರಿಂದ ಹೆಚ್ಚಿನ ಉತ್ಪಾದನೆ ಮಾಡಿ ಕೈಗಾರಿಕೆಯು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಗಳಾದ ಸುರೇಶ್ ಕುಮಾರ್ ಜೈನ್ ಅವರು ಮಾತನಾಡಿ, ಮೈಸೂರಿನಲ್ಲಿ ರಪ್ತು ಕೇಂದ್ರ ಸ್ಥಾಪನೆ ಆಗುತ್ತಿದೆ. ಕಟ್ಟಡ ಈಗಾಗಲೇ ಪ್ರಾರಂಭವಾಗಿದೆ. ರಫ್ತಿನಲ್ಲಿ ಪ್ಯಾಕಿಂಗ್ ಉತ್ತಮ. ನಮ್ಮ ವಸ್ತುಗಳು ತಲುಪಬೇಕಾದ ಸ್ಥಳವನ್ನು ಕೆಡದಂತೆ ಸಕಾಲದಲ್ಲಿ ತಲುಪಬೇಕು. ರಪ್ತು ದೇಶದ ಆದಾಯವನ್ನು ಹೆಚ್ಚಿಸುತ್ತದೆ. ರಫ್ತಿನಲ್ಲಿ ಸಣ್ಣ ಕೈಗಾರಿಕೆಗಳ ಪಾಲು ಶೇಕಡಾ 45 ರಷ್ಟು ಇದೆ. ನೋಟು ಮುದ್ರಣವನ್ನು ಸಹ ಮೈಸೂರಿನಲ್ಲಿ ಮಾಡುತ್ತೇವೆ. ಮೈಸೂರು ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದೆ. ಸೆಮಿ ಕಂಡಕ್ಟರ್ ಗಳ ಉತ್ಪಾದನಾ ಕೇಂದ್ರ ಸ್ಥಾಪನೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ.ಲಿಂಗರಾಜು ಅವರು ಮಾತನಾಡಿ, ಯಾವುದೇ ಪದಾರ್ಥವನ್ನು ನಾವು ರಪ್ತು ಮಾಡಲು ರಾಸಾಯನಿಕ ಮುಕ್ತವಾಗಿ ಇರಬೇಕು. ನಾವು ರಪ್ತು ಮಾಡುವ ಉತ್ಪಾದನೆ ಗುಣಮಟ್ಟದಿಂದ ಕೂಡಿರಬೇಕು. ಮೈಸೂರಿನಲ್ಲಿ ಈಗಾಗಲೇ ಸುಮಾರು 165 ಜನ ರಪ್ತು ಮಾಡುತ್ತಾ ಇದ್ದಾರೆ. ಇನ್ನು ಹೆಚ್ಚಿನ ಜನರು ದೇಶ ವಿದೇಶಕ್ಕೆ ರಪ್ತು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ರಪ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕರಾದ ಮೇಘಲಾ ಸೇರಿದಂತೆ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

Continue Reading

Mysore

ಮಡೆ ಹಬ್ಬದ ಪ್ರಯುಕ್ತ ಗಮನ ಸೆಳೆದ ಬಡವ- ರೈತರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ- ಕೊಡವ್ವ”ಘೋಷಣೆ 

Published

on

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ತಾಲೂಕಿನ    ಚಿಕ್ಕಕ್ಕೊಪ್ಪಲು ಗ್ರಾಮದಲ್ಲಿ ಮಡೆ ಹಬ್ಬದ ಪ್ರಯುಕ್ತ ನಡೆದ ತಂಬಿಟ್ಟಿನ ಮೆರವಣಿಗೆ ಮತ್ತು ಗುಡ್ಡದ ತಂಡದ ಹಾಡು ನೃತ್ಯ ಇನ್ನೊಂದೆಡೆ ಜೈಕಾರದ ಪಟಾಕಿಗಳ ಆರ್ಭಟದ ನಡುವೆ ಯುವಕರು ಬಡವರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ…ರೈತರ ಮಕ್ಕಳಿಗೆ ಹೆಣ್ಣು ಕೊಡವ್ವ ಆರ್ಶಿವಾದ ಮಾಡವ್ವ ಮುತ್ತುತಾಳಮ್ಮ‌ ಎಂಬ ಘೋಷಣೆ ಹಬ್ಬದಲ್ಲಿ‌ ವಿಶೇಷವಾಗಿ ಗಮನ ಸೆಳೆಯಿತು.

 

ಗ್ರಾಮದಲ್ಲಿ ಮಡೆ ಹಬ್ಬವು ತಂಬಿಟ್ಟಿನ ಅರತಿಯೊಂದಿಗೆ ಸಾವಿರಾರು ಮಂದಿಯ ಸಮ್ಮುಖದಲ್ಲಿ ಬಾರಿ ಸಂಭ್ರಮ ಮತ್ತು ಪಟಾಕಿಗಳ ಆರ್ಭಟದೊಂದಿಗೆ ವೈಭವಯುತವಾಗಿ ನಡೆಯಿತು.
ಗ್ರಾಮದ ಹೊರವಲಯದಲ್ಲಿರುವ ಮಲ್ಲಮ್ಮನ ಕೊಳದ ಬಳಿ ಗ್ರಾಮದ ಮಹಿಳೆಯರು ಗಂಗೆ ಪೂಜೆ ಮಾಡಿ, ಕಿಚಡಿ ಅನ್ನದ ಪ್ರಸಾದವನ್ನು ತಯಾರಿಸಿ, ತಂಬಿಟ್ಟು ಮಾಡಿ,ಅಲ್ಲಿಯೇ ಪ್ರತಿಷ್ಠಾಪಿಸಲಾಗಿದ್ದ ಆದಿ ಶಕ್ತಿ ಮುತ್ತು ತಾಳಮ್ಮ‌ ದೇವರಿಗೆ ಮಹಿಳೆಯರು ಮತ್ತು ಗ್ರಾಮಸ್ಥರು ಪೂಜೆ ಸಲ್ಲಿಸಿದರು. ನಂತರ ಹಬ್ಬಕ್ಕಾಗಿ ಕರೆಸಲಾಗಿದ್ದ ಕೆ.ಆರ್.ನಗರದ ಮಧುವನಹಳ್ಳಿಯ ಗುಡ್ದೆದೇವರುಗಳ ತಂಡದವರು ನಡೆಸಿ ಕೊಟ್ಟ ದೇವರ ವಿವಿಧ ಭಕ್ತಿಯ ಹಾಡಿನ ಮೂಲಕ ಮನೆಸೂರೆಗೊಳ್ಳುವ ನೃತ್ಯದ ನಂತರ ಗ್ರಾಮದ ಕನ್ನಂಬಾಡಮ್ಮ,

ಮುತ್ತುತಾಳಮ್ಮ,ಬಂದಂತೆಯಮ್ಮ, ಹಳಿಯೂರು ದೊಡಮ್ಮ ದೇವತೆಗಳನ್ನು ಬರಮಾಡಿ ಕೊಂಡರು.
ಬಳಿಕ ಮಡೆ ಹಬ್ಬಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಹಾಜರಿದ್ದ ಸಾವಿರಾರು ಗ್ರಾಮಸ್ಥರು ಮತ್ತು ಮಹಿಳೆಯರು ಉತ್ತಮ ಮಳೆ, ಬೆಳೆ ಅಗಲಿ, ಗ್ರಾಮಕ್ಕೆ ಒಳಿತಾಗಲಿ, ಮತ್ತು ತಮ್ಮ‌ ಹತ್ತಾರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಆದಿಶಕ್ತಿ ಮುತ್ತುತ್ತಾಳಮ್ಮ ದೇವರಲ್ಲಿ ಪ್ರಾರ್ಥಿಸಿ ಕೊಂಡು‌ಭಕ್ತಿ ಪರವಶವಾದರು.

ಬಳಿಕ ತಂಬಿಟ್ಟಿನ ಆರತಿ ಹೊತ್ತ ಮಹಿಳೆಯರು ಮತ್ತು ಕಳಸ ಹೊತ್ತ ಬಾಲಕಿಯರು ಗ್ರಾಮದ ದೇವರಹಟ್ಟಿ ಮಾರ್ಗವಾಗಿ ಗ್ರಾಮದ ಚೌಡಿ ಬೀದಿಯ ವರಗೆ ಮೆರವಣಿಗೆ ನಡೆಸುವ ವೇಳೆ ಗ್ರಾಮಸ್ಥರು ಆಡು,ಕುರಿಗಳನ್ನು ಬಲಿ ಕೊಟ್ಟು ಮುತ್ತುತಾಳಮ್ಮ ದೇವರಿಗೆ ಆರ್ಶಿವಾದ ಕೋರಿದ ಬಳಿಕ‌ ಚೌಡಿ ಬೀದಿಯಲ್ಲಿ ಗುಡ್ಡೆ ದೇವರ ತಂಡದವರ ನೃತ್ಯದೊಂದಿಗೆ ಮಡೆ ಹಬ್ಬ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ 13 ಕೋಮಿನ ಯಜಮಾನರಲ್ಲಿ‌ ಒಬ್ಬರಾದ ಟಿ.ಪುರುಷೋತ್ತಮ್ ಕಳೆದ 11 ವರ್ಷದ ಹಿಂದೆ ನಡೆದಿದ್ದ ಈ ಹಬ್ಬ ಮುತ್ತುತ್ತಾಳಮ್ಮ ತಾಯಿ ಅನುಗ್ರಹ ದಿಂದ ಈ ಬಾರಿ ಈ ಬಂಡಿ ಮತ್ತು ಮಡೆ ಹಬ್ಬ ಯಶಸ್ವಿಯಾಗಿದ್ದು, ಇದಕ್ಕೆ ಸಹಕಾರ ನೀಡಿದ ಗ್ರಾಮಸ್ಥರಿಗೆ ಎಲ್ಲಾ ಕೋಮಿನ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು,ಸಾವಿರಾರು ಮಂದಿ ಭಕ್ತರು  ಹಾಜರಿದ್ದರು.

Continue Reading

Trending

error: Content is protected !!