Connect with us

Mysore

ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ   ವಿಜೃಂಭಣೆ ಯಿಂದ ನಡೆದ ತೆಪ್ಪೋತ್ಸವ 

Published

on

ಜೈ..ಜೈ..ಶ್ರೀರಾಮ್ ಝೇಂಕಾರ. ಸಿಡಿ ಮದ್ದಿನ ಚಿತ್ತಾರದ ಬೆಳಕು, ಬೋರ್ಗರೆತದ ವೈಯ್ಯಾರದ ನೀನಾದದ ಕಲರವದೊಂದಿಗೆ ಹರಿಯುತ್ತಿರುವ ಪವಿತ್ರ  ಕಾವೇರಿ ನದಿಯಲ್ಲಿ ಗುರುವಾರ ರಾತ್ರಿ ಸಾವಿರಾರು ಮಂದಿ ಭಕ್ತಾದಿಗಳ ಸಮ್ಮಿಲನದ ನಡುವೆ  ವಿಜೃಂಭಣೆಯಿಂದ ತೆಪ್ಪೋತ್ಸವ ನೆರವೇರಿತು,

ಸಾಲಿಗ್ರಾಮ :ತಾಲೂಕಿನ     ಇತಿಹಾಸ ಪುರಾಣ ಪ್ರಸಿದ್ಧ  ಚುಂಚನಕಟ್ಟೆ ಜಾತ್ರೆ ಮಹೋತ್ಸವ ಹಾಗೂ ಪ್ರಮುಖ ಕೇಂದ್ರಬಿಂದುವಾಗಿದ್ದ   ಶ್ರೀಕೋದಂಡರಾಮನ ಬ್ರಹ್ಮರಥೋತ್ಸವ  ಮುಗಿದ ಬಳಿಕ ತೆಪ್ಪೋತ್ಸವದ ಹಿನ್ನಲೆಯಲ್ಲಿ ಬೆಳಗ್ಗೆ ಶ್ರೀರಾಮ ಲಕ್ಷ್ಮಣ ಹಾಗೂ ಸೀತೆ ಉತ್ಸವ ಮೂರ್ತಿಗಳಿಗೆ  ಪವಿತ್ರ ಕಾವೇರಿ ನದಿಯ ತೀರ್ಥ ಕಡ  ದಡದಲ್ಲಿ  ಕಾವೇರಿ ನೀರಿನ  ಮಜ್ಜನ ಮಾಡಿಸಿ. ವಿಧಿ-ವಿಧಾನಗಳ, ಸಕಲ ಧಾರ್ಮಿಕ ಕೈಂ ಕಾರ್ಯಗಳನ್ನು ನಡೆಸಿದ ಅರ್ಚಕ ವೃಂದದವರು  ಮೂರ್ತಿಗಳಿಗೆ  ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಮೂರ್ತಿಗಳನ್ನು ದೇಗುಲಕ್ಕೆ ತರಲಾಯಿತು,

ತಡ ರಾತ್ರಿ ದೇವಾಲಯದಿಂದ ಚಿನ್ನಾಭರಣಗಳಿಂದ ಶೃಂಗಾರಗೊಂಡಿದ್ದ ಉತ್ಸವ ಮೂರ್ತಿಗಳನ್ನು  ಮಂಗಳಕರ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಕಾವೇರಿ ನದಿಯ ತೀರ್ಥ ಕಡಕ್ಕೆ ತರಲಾಯಿತು. ವಿವಿಧ ಪುಷ್ಪಗಳೊಂದಿಗೆ ಹಾಗೂ ಮ್ಯೂಸಿಕಲ್ ವಿದ್ಯುತ್ ದೀಪಗಳಿಂದ ಶೃಂಗಾರ ಗೊಂಡು ನಳನಳಿಸುತ್ತಿದ್ದ ತೆಪ್ಪದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿ, ಕಾವೇರಿ ನದಿಯ ಮಧ್ಯ ಭಾಗದಲ್ಲಿ ಮೂರು ಸುತ್ತು ಪ್ರದಕ್ಷಿಣೆಯೊಂದಿಗೆ ದೇವರಿಗೆ ಮಹಾ ಮಂಗಳಾರತಿ ಮಾಡುವಾಗ ನೆರೆದಿದ್ದ ಭಕ್ತ ಮಹಾಷೆಯರು ಭಕ್ತಿ ಮೆರೆದು ಜೈ ಶ್ರೀರಾಮ್, ಗೋವಿಂದ..! ಗೋಪಾಲ…! ಎಂಬ ಜಯಘೋಷಣೆ ಮೇಳೈಹಿಸಿತು.

ಗ್ರಾಮ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ  ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಆ ದೃಶ್ಯವನ್ನು ಕಂಡು ಕಣ್ತುಂಬಿಕೊಂಡು ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗಾಗಿ ಚಿತ್ತದಲ್ಲೇ ಪ್ರಾರ್ಥಿಸಿದರು,

ಈ ಸಂದರ್ಭದಲ್ಲಿ  ತಹಸೀಲ್ದಾರ್ ಪೂರ್ಣಿಮಾ, ಶಿರಸ್ಡೆದಾರ್ ಶಿವಕುಮಾರ್, ಉಪ ತಹಶೀಲ್ದಾರ್ ಶರತ್ ಕುಮಾರ್,   ದೇವಾಲಯದ ಇ ಒ ರಘು, ಪಾರುಪತ್ತೆದಾರು ಯತಿರಾಜು, ಪವನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಎಸ್ ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್, ವಿ. ಎಸ್. ಎಸ್. ಎನ್. ಉಪಾಧ್ಯಕ್ಷ ಕೊತ್ವಾಲ್ ಮಂಜು,ಮಾದು, ರಮೇಶ್, ಮಂಜುನಾಥ್, , ಲಾಯರ್ ಪುನೀತ್, ಹರ್ಷಿತ್, ಭರತ್, ಸಿಬ್ಬಂದಿಗಳಾದ ಶಿವಣ್ಣ, ತಿಮ್ಮಣ್ಣ, ಚಂದ್ರಣ್ಣ, ಮಣಿ, ಹರೀಶ, ಅರ್ಚಕ ವೃಂದ   ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು,

ಮುನ್ನೆಚ್ಚರಿಕೆ ಕ್ರಮವಾಗಿ ಸಾಲಿಗ್ರಾಮ  ವೃತ್ತ ನಿರೀಕ್ಷಕ  ಕೃಷ್ಣ ರಾಜು,  ಸಬ್ ಇನ್ ಸ್ಪೆಕ್ಟರ್ ಕುಮುದ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Continue Reading
Click to comment

Leave a Reply

Your email address will not be published. Required fields are marked *

Mysore

ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣಗೆ ಅಭಿನಂದನೆ ಸಮಾರಂಭ

Published

on

ಮೈಸೂರು: ಭಾರತೀಯ ಜನತಾ ಪಾರ್ಟಿಯ ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಕುಂಬ್ರಳ್ಳಿ ಸುಬ್ಬಣ್ಣ ಅವರಿಗೆ ಶನಿವಾರ ಪಕ್ಷದ ಕಚೇರಿಯಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ನಗರ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ವಕ್ತಾರ ಎಂ ಜಿ ಮಹೇಶ್,ಬಿಜೆಪಿ ಹಿರಿಯ ಮುಖಂಡರೂಗಳಾದ ಎಸ್. ಮಹಾದೇವಯ್ಯ, ಸುರೇಶ್ ಬಾಬು, ಕೃಷ್ಣಪ್ಪ ಗೌಡ ಗೋಪಾಲ್ ರಾವ್, ಮಿರ್ಲೆ ಶ್ರೀನಿವಾಸ್ ಗೌಡ, ಡಾ ಶಿವರಾಂ,ವಸಂತ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿಗಳಾದ ಬಾಲಕೃಷ್ಣ, ಮಹೇಶ್ ಮಡವಾಡಿ, ಕಿರಣ್ ಜೈ ರಾಮ್ ಗೌಡ, ಕೇಬಲ್ ಮಹೇಶ್,ಜಿಲ್ಲಾ ಉಪಾಧ್ಯಕ್ಷರಾದ ರಮೇಶ್, ವಿನಯ್, ಗಿರೀಶ್ ಕೋಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆಂಪಣ್ಣ, ಎ.ಎಂ. ಗುರುಸ್ವಾಮಿ,ಜಿಲ್ಲಾ ವಕ್ತಾರ ದಯಾನಂದ್ ಪಟೇಲ್ ,ಮಾಜಿ ಮೇಯರ್ ಶಿವಕುಮಾರ್, ಎಸ್. ಸಿ. ಮೋರ್ಚಾ ಮೈಸೂರು ನಗರ ಅಧ್ಯಕ್ಷ ಶೈಲೆಂದ್ರ ರವರು, ಹಿಣಕಲ್ ಪಾಪಣ್ಣ, ನಗರ ಮಾಧ್ಯಮ ಸಹ ಸಂಚಾಲಕರಾದ ಬಿ.ಎಂ. ಕುಮಾರ್ ಹಾಗೂ ಆದಿ ದೇವಲಪುರ, ಮಲ್ಲೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mysore

ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಇಬ್ಬರಲ್ಲಿ ಒಬ್ಬರು ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Published

on

ಮೈಸೂರು: ಈ ವರ್ಷದ ನವೆಂಬರ್‌ಗೆ ಸಿಎಂ ಬದಲಾವಣೆ ಆಗುತ್ತದೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರಲ್ಲಿ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಎಂಎಲ್‌ಸಿ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹತ್ತು ವರ್ಷದ ಹಿಂದೆಯೇ ಜಾತಿವಾರು ಜನಗಣತಿ ಮಾಡಿಸಿದ್ದರು. ಒಂದುವರೆ ಲಕ್ಷ ಶಿಕ್ಷಕರು 2 ವರ್ಷ ಗಣತಿ ಮಾಡಿದ್ದರು. ಅದಕ್ಕಾಗಿ 170 ಕೋಟಿ ರೂ. ಅಧಿಕ ಹಣ ಖರ್ಚಾಗಿತ್ತು. ಆಗಿನ ಕಾಲದಿಂದಲೂ ವರದಿ ಬಹಿರಂಗ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದರು. ಇದೀಗ ಹೈಕಮಾಂಡ್‌ಗೆ ಹೆದರಿಕೊಂಡು ಮತ್ತೆ ಜಾತಿಗಣತಿ ಮಾಡಿರುವುದಾಗಿ ಹೇಳಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಜಾತಿಗಣತಿ ಮಾಡಲು ಶಿಕ್ಷಕರು ಬೇಕು. ಈಗ ತಾನೇ ಶಾಲೆಗಳು ಪ್ರಾರಂಭವಾಗಿರುವುದರಿಂದ ಶಿಕ್ಷಕರು ಲಭ್ಯವಾಗೋದಿಲ್ಲ. ಸಿದ್ದರಾಮಯ್ಯ ಹಾವಾಡಿಗನ ರೀತಿ ಈಗ ಮತ್ತೆ ಜಾತಿಗಣತಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಮುಂದಿನ ನವೆಂಬರ್ ಮತ್ತು ಡಿಸೆಂಬರ್‌ಗೆ ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಆಗುತ್ತಾರೆ. ಅದು ಹೇಗೆ ಜಾತಿಗಣತಿ ಮಾಡಿಸುತ್ತೀರಿ? ಮರುಜಾತಿಗಣತಿ ಮಾಡಿಸುವುದಿಲ್ಲವೆಂದು ಹೈಕಮಾಂಡ್‌ಗೆ ಹೇಳಿದ್ದರೇ ಸಿದ್ದರಾಮಯ್ಯ ಹೀರೋ‌ ಆಗುತ್ತಿದ್ದರು. ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದರು. ಮೂರು ತಿಂಗಳೊಳಗೆ ಜಾತಿಗಣತಿ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸುಮ್ಮನೇ ದೇವರಾಜ ಹೆಸರು ಹೇಳಬೇಡಿ. ಪ್ರಾಮಾಣಿಕತೆ ಇಲ್ಲದ ಸಿಎಂ ಸಿದ್ದರಾಮಯ್ಯ ಎಂದು ಚರಿತ್ರೆಯಲ್ಲಿ ದಾಖಲಾಗಿ ಹೋದರು. ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಸಿಎಂ ಸಿದ್ದರಾಮಯ್ಯ ಎಂದು ಚರಿತ್ರೆಯಲ್ಲಿ ದಾಖಲಾಗುತ್ತಾರೆ. 170 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಜಾತಿಗಣತಿ ಮಾಡಿಸಿದ‌ ವರದಿಯನ್ನು ತಿಪ್ಪೆಗೆ ಎಸೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಡಿ.ಕೆ.ಶಿವಕುಮಾರ್ ಎಲ್ಲವನ್ನೂ ಕೆಡಿಸಿಬಿಟ್ಟರು

ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದುಕೊಂಡಿದ್ದೆ, ಆದರೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಡಿಕೆ ಶಿವಕುಮಾರ್ ಎಲ್ಲವನ್ನೂ ಕೆಡಿಸಿಬಿಟ್ಟರು. ಆರ್‌ಸಿಬಿಯಲ್ಲಿ ಕರ್ನಾಟಕದ ಆಟಗಾರರೇ ಇಲ್ಲ. ಆರ್‌ಸಿಬಿಗೂ ನಮ್ಮ ರಾಜ್ಯಕ್ಕೂ ಸಂಬಂಧವೇ ಇಲ್ಲ. ಕಾಲ್ತುಳಿತ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಗಳು ವೈರುಧ್ಯದಿಂದ ಕೂಡಿವೆ ಎಂದು ಕಿಡಿಕಾರಿದರು.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ 3:30ಕ್ಕೆ ಕಾಲ್ತುಳಿತ ಆದರೂ ಸಂಜೆ 5:30 ಕ್ಕೆ ಗೊತ್ತಾಯಿತು. ವಿಧಾನಸೌಧ ಕಾರ್ಯಕ್ರಮಕ್ಕೂ, ಚಿನ್ನಸ್ವಾಮಿ ಕ್ರೀಡಾಂಗಣ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ‌‌. ರಾಜ್ಯಪಾಲರನ್ನು ಆಹ್ವಾನಿಸಿರಲಿಲ್ಲ ಎಂದೆಲ್ಲ ಸಿದ್ದರಾಮಯ್ಯ ಹೇಳಿದ್ದರು. ಆ ಬಳಿಕ ರಾಜ್ಯಪಾಲರನ್ನು ಆಹ್ವಾನಿಸಿದ್ದು ನಾನೇ ಎಂದು ಹೇಳಿದ್ದಾರೆ. ಇವರ ತಪ್ಪು ಇಲ್ಲದಿದ್ದರೇ ಗೋವಿಂದರಾಜು ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಏಕೆ ತೆಗೆದರು ಎಂದು ಹೇಳಬೇಕು? ಎಂದು ಎಚ್ ವಿಶ್ವನಾಥ್ ಆಗ್ರಹಿಸಿದರು.

Continue Reading

Mysore

ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕಿ ನಿರ್ಮಾಣ ಖಂಡಿಸಿ ಪ್ರತಿಭಟನೆ.

Published

on

ಮೈಸೂರು: ಕೆ,ಆರ್,ಎಸ್, ಅಣೆಕಟ್ಟೆಯ ಬಳಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕಿಗಲ್ಲ ನಿರ್ಮಾಣ ಮಾಡುವುದನ್ನು ಖಂಡಿಸಿ ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನೆಡೆಸಲಾಯಿತು.
ಇಲ್ಲಿನ ಹಳೆ ಜಿಲ್ಲಾಧಿಕಾರಿ ಕಚೇರಿಯ ಬಳಿ ಶನಿವಾರ ಜಮಾಗೊಂಡ ಪ್ರತಿಭಟನಕಾರರು, ಕೆ. ಆರ್.ಎಸ್. ಅಣೆಕಟ್ಟೆ ನಿರ್ಮಾಸಿರೋದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮೋಜು ಮಸ್ತಿ ಮಾಡೋದಕ್ಕೆ ಅಲ್ಲ. ರೈತಾಪಿ ವರ್ಗದವರು ಕೃಷಿ ಚಟುವಟಿಕೆಗಳು, ಹಾಗೂ ಮೈಸೂರು ಬೆಂಗಳೂರಿನ ಕುಡಿಯುವ ನೀರಿನ ಯೋಜನೆಗಾಗಿ ರಾಣಿ ಕೆಂಪ ನಂಜಮ್ಮಣಿ ಕೃಷ್ಣರಾಜಸಾಗರ ಮೀಸಲಾಗಿದೆ. ವಿನಹ ಮೋಜು ಮಸ್ತಿ ಮಾಡುವಂತಹ ಅಮ್ಯೂಸ್ಮೆಂಟ್ ಪಾರ್ಕಿಗಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕನ್ನಡ ವೇದಿಕೆ ಅಧ್ಯಕ್ಷ ಎಸ್ ಬಾಲಕೃಷ್ಣ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡು ಜನರ ಜೀವ ನದಿ ಕಾವೇರಿ ಮೈಸೂರಿನ ಇತಿಹಾಸ ತಿಳಿಯದ ಸಚಿವರು ವಿಧಾನಸೌಧದ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದು ಎಷ್ಟು ಸಮಂಜಸ. ಈಗಾಗಲೇ ಡಿ.ಸಿಎಂ. ಡಿ.ಕೆ.ಶಿವಕುಮಾರ ಅವರ ನಿರ್ಧಾರದಿಂದ ಆರ್‌.ಸಿ.ಬಿ ಕ್ರಿಕೆಟಿನ ವಿಜಯ್ಯೋತ್ಸವ ಆಚರಣೆಯಲ್ಲಿ ಕಾಲು ತುಳಿತಕ್ಕೆ 11 ಅಮಾಯಕ ಜನ ಬಲಿಯಾಗಿದ್ದಾರೆ. ಮೈಸೂರು ಮತ್ತು ಮಂಡ್ಯ ಭಾಗದ ಕೆಲವು ಶಾಸಕರು,ರೈತ ಹೋರಾಟಗಾರರು, ಕನ್ನಡ ಪರ ಹೋರಾಟಗಾರರು ಅಮ್ಯುಸ್ಮೆಂಟ್ ಪಾರ್ಕ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಆದರೆ ಸರ್ಕಾರದ ಮಂತ್ರಿಮಂಡಲದವರು ನಾವೇ ಕೆ.ಆರ್.ಎಸ್ ಅಣೆಕಟ್ಟು ಕಟ್ಟಿದ ರೀತಿಯಲ್ಲಿ ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.


ಮಂಡ್ಯ ಮತ್ತು ಮೈಸೂರು ಜನತೆಯನ್ನು ಗಣನೆಗೆ ತೆಗೆದುಕೊಳ್ಳದೆ ತುಘುಲಕ್ ದರ್ಬಾರಿನಂತೆ ಸರ್ಕಾರ ದರ್ಬಾರು ಮಾಡುತ್ತಿದೆ ಯಾವೊಬ್ಬ ರೈತನಿಗಾಗಲಿ ಕಿಂಚಿತ್ತು ಗೌರವ ನೀಡುತ್ತಿಲ್ಲ. ಕೋಟ್ಯಾಂತರ ಜನರಿಗೆ ಆಶ್ರಯವಾಗಿರುವ ಕಾವೇರಿ ನೀರು ಇವರ ಮನೆ ಸ್ವತ್ತಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ನೂರು ಕೋಟಿ ರೂ ವೆಚ್ಚ ಮಾಡಿ ಕಾವೇರಿ ಆರತಿ ಮಾಡುತ್ತಿವೆ ಅಂತ ಹೇಳುತ್ತಿದ್ದಾರೆ ಅದೇ ಹಣವನ್ನು ರೈತರ ನಿಧಿಗೆಂದು ಉಪಯೋಗಿಸಿದರೆ ಬೆಳೆ ನಷ್ಟವಾದಾಗ ಅಥವಾ ಯಾವುದಾದರೂ ಬಡ ರೈತ ತೀರಿಕೊಂಡರೆ ಪರಿಹಾರ ನೀಡಬಹುದು. ಇವೆಲ್ಲವನ್ನೂ ಲೆಕ್ಕಿಸದೆ ನಾವು ಕಾವೇರಿ ಆರತಿ ಮಾಡೇ ಮಾಡುತ್ತೇವೆ ಎಂದು ಪಟ್ಟು ಹಿಡಿತಿರುವುದು ರೈತರ ದಂಗೆ ಉಂಟು ಮಾಡುವುದಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.
ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗುರು ಬಸಪ್ಪ, ಮಾದಪ್ಪ, ಗೋವಿಂದರಾಜು, ಕಾವೇರಮ್ಮ, ಹರೀಶ್, ಮಾಲಿನಿ, ಪ್ರೇಮ, ಪುಷ್ಪ, ಸುನಿಲ್, ಶಿವು ಗೌಡ, ಚಿನ್ನಪ್ಪ, ಸ್ವಾಮಿ ಗೈಡ್, ಎಲ್ಐಸಿ ಸಿದ್ದಪ್ಪ, ಸ್ವಾಮಿ ಹೊನಕೆರೆ, ಮೋದಿ, ರಮೇಶ್ ಮುಂತಾದವರಿದ್ದರು.

Continue Reading

Trending

error: Content is protected !!