Chikmagalur
ಚಿಕ್ಕಮಗಳೂರು ನಗರದ ಸಮೀಪ ಕಾಣಿಸಿಕೊಂಡ ಕಾಡಾನೆ ಬೀಟಮ್ಮ ಮತ್ತು ಟೀಂ
ಚಿಕ್ಕಮಗಳೂರು: ಬೇಲೂರಿನ ಕಾಡಾನೆ ಬೀಟಮ್ಮ ಮತ್ತು ಟೀಂ ಚಿಕ್ಕಮಗಳೂರು ನಗರದ ಸಮೀಪಕ್ಕೆ ಧಾವಿಸುತ್ತಿದ್ದು ಕದ್ರಿಮಿದ್ರಿ, ಮೂಗ್ತಿಹಳ್ಳಿ ಸುತ್ತ ಮುತ್ತಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ಬೇಲೂರು ಮಾರ್ಗವಾಗಿ ಗಡಿಭಾಗ ಕೆ.ಆರ್.ಪೇಟೆ ಪ್ರವೇಶಿಸಿದ್ದ ಬೃಹತ್ ಕಾಡಾನೆ ಬೀಟಮ್ಮ ಗುಂಪು ಇದೀಗ ಚಿಕ್ಕಮಗಳೂರು ನಗರದ ಸಮೀಪ ಕಾಣಿಸಿಕೊಂಡಿದೆ. 30 ಕ್ಕೂ ಹೆಚ್ಚಿನ ಕಾಡಾನೆಗಳ ತಂಡ ನಗರದ ಕದ್ರಿಮಿದ್ರಿ ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿದೆ. ಬೀಟಮ್ಮ ಆನೆ ಜೊತೆ ಭೀಮ ಟಸ್ಕರ್ ಸೇರಿದಂತೆ ಮರಿಗಳು ಕೂಡಿ ಇಡೀ ತಂಡ ಜೊತೆಯಲ್ಲಿ ಸಂಚರಿಸುತ್ತಿರುವುದು ಸಾರ್ವಜನಿಕರಿಗೆ ಕಾಣಿಸಿದೆ. ಶುಕ್ರವಾರದಿಂದ ಪಟಾಕಿ ಸಿಡಿಸಿ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ಇಲಾಖೆ ತೊಡಗಿತ್ತು. ಆದರೆ ರಾತ್ರೋರಾತ್ರಿ ಕದ್ರಿಮಿದ್ರಿ ಕಡೆಗೆ ಬೀಟಮ್ಮ ಟೀಂ ಬಂದಿದೆ. ಇಲ್ಲಿನ ಸಮೀಪದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಕದ್ರಿಮಿದ್ರಿಯ ಸರ್ಕಾರಿ ಶಾಲೆ, ರಾಂಪುರ, ಸಾಯಿ ಏಂಜಲ್ಸ್, ಸೇಂಟ್ ಮೇರೀಸ್, ಇನ್ಫೆಂಟ್ ಜೀಸಸ್, ಮೂಗ್ತಿಹಳ್ಳಿ, ದಂಬದಹಳ್ಳಿ ಶಾಲೆಗಳಿಗೆ ರಜೆ ಘೋಷಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
Chikmagalur
ಪ್ರೀತಿಸಿ ಮೋಸ: ಯುವಕನ ಮನೆ ಮುಂದೆ ಯುವತಿ ಗಲಾಟೆ
ಚಿಕ್ಕಮಗಳೂರು : ನಗರದ ಕಲ್ಯಾಣ ನಗರದಲ್ಲಿ 10 ವರ್ಷದಿಂದ ಪ್ರೀತಿಸಿ ಈಗ ಬೇರೆ ಮದುವೆಗೆ ರೆಡಿಯಾದ ಯುವಕನ ಮನೆ ಮುಂದೆ ಬಂದು ಯುವತಿ ಗಲಾಟೆ ಮಾಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ಅಶ್ವಿನಿ ಎಂಬ ಯುವತಿ ಗಲಾಟೆ ಮಾಡಿದ್ದಾರೆ.
ಕಲ್ಯಾಣ ನಗರದ ಶರತ್ ಎಂಬ ಯುವಕನನ್ನು ಅಶ್ವಿನಿ ಪ್ರೀತಿಸಿದ್ದರು. ಆಕೆಯಿಂದಲೇ ಯುವಕ 4 ಲಕ್ಷದ 50 ಸಾವಿರ ಪಡೆದುಕೊಂಡಿರೋ ಆರೋಪ ಮಾಡಿದ್ದಾರೆ.

ಶರತ್ ಮದುವೆಯಾಗಿ ಡಿವೋರ್ಸ್ ಆಗಿರೋದನ್ನು ಮುಚ್ಚಿಟ್ಟು ಪ್ರೀತಿಸಿದ್ದರು. ನಾಳೆ ಬೇರೆ ಹುಡುಗಿ ಜೊತೆ ಮದುವೆಯಾಗಲಿದ್ದಾರೆ. ಹಾಗಾಗಿ ಇಂದು ಶರತ್ ಮನೆ ಮುಂದೆ ಬಂದು ಯುವತಿಯಿಂದ ಗಲಾಟೆ ನಡೆಸಿದ್ದಾರೆ.
ಬೇಲೂರಿನ ಯುವತಿ ಮನೆಗೆ ಹೋಗಿ ಆಕೆ ತಾಯಿ ಬಳಿ ನಿಮ್ಮ ಮಗಳನ್ನು ನಾನೇ ಮದುವೆಯಾಗುತ್ತೀನಿ ಎಂದು ತಿಳಿಸಿದ್ದರು. ಈತ ಮದುವೆಯಾಗುತ್ತೇನೆ ಎಂದು ಆಕೆಗೆ ಬಂದು ಐದು ಸಂಬಂಧಗಳನ್ನು ಬಿಟ್ಟಿದ್ದರು. ಅಶ್ವಿನಿ ತಾಯಿ, ಮೊದಲು ಮದುವೆಯಾಗಿ 2 ತಿಂಗಳಿಗೆ ಡೈವರ್ಸ್ ನೀಡದ್ದಾನೆಂದು ಯುವತಿ ಆರೋಪ ಮಾಡಿದ್ದಾರೆ. ಆದರೆ ಈಗ ನನಗೆ ಮೋಸ ಮಾಡಿದ್ದಾನೆ, ನಾಳೆ ಬೇರೆಯವರಿಗೂ ಮೋಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಯುವತಿ ಆತನ ವಿರುದ್ಧ ಅಟ್ರಾಸಿಟಿ ಸೇರಿದಂತೆ ಮೂರು ಕೇಸ್ ದಾಖಲಿಸಿದ್ದಾರೆ. ಆದರೆ ಯುವಕ ಶರತ್, ಎಲ್ಲಾ ಕೇಸಿಗೂ ಸ್ಟೇ ತಂದು ಬೇರೆ ಮದುವೆಯಾಗುತ್ತಿದ್ದಾರೆ. ಹೀಗಾಗಿ ಇಂದು ಯುವಕನ ಮನೆ ಮುಂದೆ ಬಂದು ಯುವತಿ ಅಶ್ವಿನಿ ನ್ಯಾಯಕ್ಕಾಗಿ ಗಲಾಟೆ ಮಾಡಿದ್ದಾರೆ.
Chikmagalur
ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು
ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಒಬ್ಬರು ಮೃತಪಟ್ಟಿದ್ದಾರೆ.
ಅಡಿಕೆ ಮರದಲ್ಲಿ ಗೊನೆ ಕೊಯ್ಯುವಾಗ ಬಿದ್ದು ಸಾವಪ್ಪಿದ ಘಟನೆ ಕಳಸ ತಾಲೂಕಿನ ಬೂದಿಗುಂಡಿ ಗ್ರಾಮದಲ್ಲಿ ನಡೆದಿದೆ.
ಮಂಜು (35) ಮೃತ ದುರ್ದೈವಿ. ಹಳುವಳ್ಳಿ ಗ್ರಾಮದ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಮಂಜು ಮರ ಹತ್ತಿ ಗೊನೆ ಕೊಯ್ಯುವಾಗ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Chikmagalur
ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿದ ಕೆ.ಎಸ್.ಗೋಪಾಲಕೃಷ್ಣ
ಚಿಕ್ಕಮಗಳೂರು: ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕೆಂಪನಹಳ್ಳಿ ಕನಕ ಗೆಳೆಯರ ಬಳಗದಿಂದ ನಗರ ಸಮೀಪ ಆಯೋಜಿಸಿದ್ಧ ಎರಡನೇ ವರ್ಷದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಬುಧವಾರ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಪ್ರಥಮ ಹಾ ಗೂ ದ್ವಿತೀಯ ಹೆಚ್.ಎಫ್. ಡಿಲಕ್ಸ್ ಬೈಕ್, ತೃತೀಯ 25 ಸಾವಿರ ನಗದು ಟ್ರೋಫಿ ಮತ್ತು ಚತುರ್ಥ ವಿಜೇತರಿಗೆ 20 ಸಾವಿರ ನಗದು ಆಕರ್ಷಕ ಟ್ರೋಫಿ ವಿತರಿಸಲಾಗುವುದು ಎಂದು ಸ್ಪರ್ಧೆಯ ಆಯೋಜಕ ಕೆಂಪನಹಳ್ಳಿ ಸುನೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಂಜುಳಾ ಲಕ್ಷ್ಮಣ್, ಎಲ್.ಬಿ.ಎಸ್. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರತೀಪ್, ಕೆಂಪನಹಳ್ಳಿ ಗ್ರಾಮಸ್ಥರಾದ ಚರಣ್, ಹರೀಶ್, ರಾಕೇಶ್, ಶಶಾಂಕ್, ಸಚಿನ್, ಕಾರ್ತೀಕ್ , ವರುಣ್, ಡಿಂಪು, ವಸಂತ್, ದರ್ಶನ್ ಮತ್ತಿತರರು ಹಾಜರಿದ್ದರು.
-
Kodagu11 hours agoಸಿಎನ್ಸಿ ವತಿಯಿಂದ ಡಿ.18ರಂದು ಗನ್ ಕಾರ್ನಿವಲ್ ತೋಕ್ ನಮ್ಮೆ ಆಚರಣೆ
-
Mandya6 hours agoಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಇಚ್ಛಾಸಕ್ತಿ ಪ್ರದರ್ಶಿಸಬೇಕು : ಎಂ.ಬಿ.ನಾಗಣ್ಣಗೌಡ
-
Manglore7 hours agoಮಂಗಳೂರು: ಆರ್ಟಿಒ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್- ತೀವ್ರ ತಪಾಸಣೆ
-
Chamarajanagar8 hours agoರಾಜ್ಯದ ಧೀಮಂತ ರಾಜಕಾರಣಿ ಶಾಮನೂರು ಶಿವಶಂಕರಪ್ಪ: ಬಿ.ಕೆ.ರವಿಕುಮಾರ್
-
Kodagu4 hours agoಸೈನಿಕ ಶಾಲೆ ಕೊಡಗಿನಲ್ಲಿ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ
-
Hassan5 hours agoನಾಳೆ ಪತ್ರ ಬರಹಗಾರರ ಲೇಖನ ಸ್ಥಗಿತಗೊಳಿಸಿ “ಬೆಳಗಾವಿ ಚಲೋ” ಪ್ರತಿಭಟನೆ
-
Mandya7 hours agoಸುತ್ತೂರು ಸಂಸ್ಥಾನ ಸಮಾಜದಲ್ಲಿ ಜನಪರ ಮೌಲ್ಯಗಳನ್ನು ಬಿತ್ತುತಾ ಬಂದಿದೆ: ಎಂ.ಪಿ. ನರೇಂದ್ರ ಸ್ವಾಮಿ
-
Mysore7 hours agoಡಿ.23ಕ್ಕೆ ರಾಜ್ಯಮಟ್ಟದ ರೈತ ಹೋರಾಟ: ಭಿತ್ತಿಪತ್ರ ಬಿಡುಗಡೆಗೊಳಿಸಿದ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು
