Connect with us

Chikmagalur

ಚಿಕ್ಕಮಗಳೂರಲ್ಲಿ 4 ಕೊವಿಡ್ ಪಾಸಿಟಿವ್ ಪತ್ತೆ

Published

on

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆತಂಕ ಆರಂಭವಾಗಿದೆ. ರಾಜ್ಯಾದ್ಯಂತ ಕೊರೊನಾ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯಲೂ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿವೆ.

ರ‍್ಯಾಂಡಮ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಚಿಕ್ಕಮಗಳೂರು ತಾಲೂಕಿನವರೇ ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಅದರಲ್ಲಿ ಎರಡು ಪ್ರತ್ಯೇಕ ಕಾಲೇಜುಗಳು ವಿದ್ಯಾರ್ಥಿಗಳು ಇರುವುದು ಆತಂಕಕ್ಕೆ ಕಾರಣವಾಗಿದೆ. ಒಟ್ಟು ನಾಲ್ವರಲ್ಲಿ ಇಬ್ಬರು ಹೆಂಗಸರು ಹಾಗೂ ಇಬ್ಬರು ಗಂಡಸರು ಎಂದು ಮಾಹಿತಿ ಲಭ್ಯವಾಗಿದೆ. ಆದರೆ ಪತ್ತೆಯಾಗಿರುವ ಕೊರೊನಾ ಹೊಸಾ ತಳಿ JN-1ಇರಬಹುದಾ ಎಂಬುದನ್ನು ಖಚಿತ ಪಡಸಿಕೊಳ್ಳಲು ಟೆಸ್ಟ್ ಗಾಗಿ ಸ್ಯಾಂಪಲ್ ಅನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದಾರೆ. ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡ ನಂತರ ಪಾಸಿಟಿವ್ ಬಂದವರಿಗೆಲ್ಲಾ ಇದೀಗ ಹೋಂ ಐಸೋಲೇಷನ್ ನಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಲ್ಯಾಬ್ ಫಲಿತಾಂಶ ಬಂದ ಬಳಿಕ ಕೊವಿಡ್ ರೂಪಾಂತರಿ JN-1 ಎಂಬುದನ್ನು ಖಚಿತಪಡಿಸಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ

Published

on

ಚಿಕ್ಕಮಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನಿಲ್ಲ ಎಂದು ಬಿತ್ತಿ ಪತ್ರಗಳನ್ನು ಹಾಗೂ ಚೊಂಬು ಪ್ರದರ್ಶಿಸಿದ ಕಾರ್ಯಕರ್ತರು, ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಆಂಧ್ರ ಮತ್ತು ಬಿಹಾರಕ್ಕೆ ಸಿಂಹಪಾಲು ನೀಡಿ ಕರ್ನಾಟಕವನ್ನು ಕಡೆಗಣಿಸುವ ಮೂಲಕ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಆರೋಪಿಸಿದರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರೂ ಸಹ ಇಲ್ಲಿಂದ ಆಯ್ಕೆಯಾಗಿ ಹೋದ ಬಿಜೆಪಿ ಸಂಸದರು ಯಾವುದೇ ಚಕಾರ ಎತ್ತಿಲ್ಲ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ಕೆಪಿಸಿಸಿ ವಕ್ತಾರ ಹೆಚ್.ಎಚ್.ದೇವರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಪ್ರಸಾದ್ ಅಮೀನ್ ಇತರರು ಭಾಗವಹಿಸಿದ್ದರು.

Continue Reading

Chikmagalur

ಭದ್ರಾ ನದಿಯಲ್ಲಿ ಮುಳುಗಡೆಯಾಗಿದ್ದ ಹೆಬ್ಬಾಳೆ ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಿದ್ದರೂ ಜೀಪ್ ಓಡಿಸಿ ಹುಚ್ಚಾಟ ಮೆರೆದಿದ್ದ ಜೀಪ್ ಚಾಲಕನನ್ನು ಕಳಸ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Published

on

ಚಿಕ್ಕಮಗಳೂರು: ಪವನ್ ಕುಮಾರ್ (30)ಬಂಧಿತ ಜೀಪ್ ಚಾಲಕನಾಗಿದ್ದು, ಜೀಪ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಈತ ಕಳೆದ ಗುರುವಾರ ಭದ್ರಾ ನದಿ ತುಂಬಿ ಹರಿದ ಪರಿಣಾಮ ಮುಳುಗಡೆಯಾಗಿದ್ದ ಹೆಬ್ಬಾಳೆ ಸೇತುವೆ ಮೇಲೆ ಜೀಪ್‌ ಓಡಿಸುತ್ತಿದ್ದ.

ಸೇತುವೆ ಮುಳುಗಡೆಯಿಂದಾಗಿ ಕಳಸ- ಹೊರನಾಡು ಸಂಪರ್ಕ ಕಡಿತಗೊಂಡಿತ್ತು. ಸೇತುವೆ ಮೇಲೆ ಭದ್ರಾ ನದಿಯ ನೆರೆ ನೀರು ತುಂಬಿ ಹರಿಯುತ್ತಿದ್ದ ಪರಿಣಾಮ ಪ್ರಾಣಾಪಾಯ ತಪ್ಪಿಸುವ ಉದ್ದೇಶದಿಂದ ಸೇತುವೆಗೆ ಬ್ಯಾರಿಕೇಡ್ ಹಾಕಿದ್ದರೂ ತನ್ನ ಜೀಪ್ ನಲ್ಲಿ ಸಂಚಾರ ನಿಷೇಧ ಲೆಕ್ಕಿಸದೇ ಸೇತುವೆ ಮೇಲೆ ಜೀಪ್ ಓಡಿಸಿದ್ದ ವಿಡಿಯೋ ವೈರಲ್ ಆಗಿತ್ತು.

ಈ ವೇಳೆ ನೀರಿನ ರಭಸಕ್ಕೆ ಜೀಪ್ ತೇಲಾಡಿ ಸೇತುವೆ ಅಂಚಿಗೆ ಹೋಗಿತ್ತು, ಆದರೆ ಚಾಲಕ ಜೀಪ್ ನಿಯಂತ್ರಿಸಿ ನೀರು ಪಾಲಾಗುವುದರಿಂದ ಪಾರಾಗಿದ್ದ, ಈ ಹಿನ್ನೆಲೆಯಲ್ಲಿ ಕಳಸ ಪೊಲೀಸರು ಚಾಲಕ ಹಾಗೂ ಜೀಪ್‌ ವಶಕ್ಕೆ ಪಡೆದು ಕಾನೂನು ಕ್ರಮಕೈಗೊಂಡಿದ್ದಾರೆ.

Continue Reading

Chikmagalur

ಮಳೆಗಾಲದಲ್ಲಿ ಕರೆಂಟ್ ಹೋದ್ರೆ ಥೋ…. ಅಂತ ವಿದ್ಯುತ್ ಇಲಾಖೆಯವ್ರಿಗೆ ಬೈತೀರಾ…

Published

on

ಚಿಕ್ಕಮಗಳೂರು :

ಮಳೆಗಾಲದಲ್ಲಿ ಕರೆಂಟ್ ಹೋದ್ರೆ ಥೋ…. ಅಂತ ವಿದ್ಯುತ್ ಇಲಾಖೆಯವ್ರಿಗೆ ಬೈತೀರಾ…

2-3 ದಿನ ಕರೆಂಟ್ ಬರ್ದಿದ್ರಂತು ಅವರ ಕಥೆ ಮುಗೀತು… ವಂಶವನ್ನೇ ಜಾಲಾಡಿರ್ತೀರಾ

ಆದ್ರೆ, ಈ ವಿಡಿಯೋ ನೋಡಿದ್ರೆ ಕರೆಂಟ್ ಹೋದ್ರು ವಿದ್ಯುತ್ ಇಲಾಖೆಯವ್ರಿಗೆ ಯಾರೂ ಬೈಯಲ್ಲ

ಮಳೆಗಾಲದಲ್ಲಿ ಪ್ರಕೃತಿ ಜೊತೆ ಅವರ ಹೋರಾಟದ ಬದುಕು-ಸೇವೆ ಹೇಗಿರುತ್ತೆ ಗೊತ್ತಾ…

ವಿದ್ಯುತ್ ಇಲಾಖೆಯವ್ರ ಅಂತಹದ್ದೊಂದು ಭಯಂಕರ ವಿಡಿಯೋ ನೋಡಿ…

ಅಪಾಯ ಮಟ್ಟ ಮೀರಿ ಧುಮ್ಮಿಕ್ಕಿ ಹರಿಯೋ ಹಳದಲ್ಲಿ ಧುಮುಕಿ ಲೈನ್ ಎಳೀತಾರೆ ಸಿಬ್ಬಂದಿಗಳು

ಈ ದಡದಿಂದ ಆ ದಡಕ್ಕೆ ಸೊಂಟಕ್ಕೆ ವೈರ್ ಕಟ್ಕೊಂಡು ಈಜಿ ಆ ದಡ ಮುಟ್ಟುತ್ತಾರೆ

ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮಕ್ಕೆ ಕರೆಂಟ್ ಕೊಡಲು ಲೈನ್ ಮ್ಯಾನ್ ಪ್ರಕೃತಿ ಜೊತೆ ಫೈಟಿಂಗ್

ಲೈನ್ ಮೇಲೆ ಮರ ಬಿದ್ದು 3 ದಿನದಿಂದ ಕತ್ತಲಿನಲ್ಲಿದ್ದ ಹುಯಿಗೆರೆ ಗ್ರಾಮ

ಲೈನ್ ಮ್ಯಾನ್ ರವಿಕುಮಾರ್ ಹಳ್ಳದಲ್ಲಿ ಈಜಿ ಹೋಗಿ ವಿದ್ಯುತ್ ದುರಸ್ಥಿಗೆ ಹೋರಾಟ

ಲೈನ್ ಮ್ಯಾನ್ ರವಿಯವರ ಈ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು

Continue Reading

Trending

error: Content is protected !!