Connect with us

Mysore

ಚನ್ನಂಗೆರೆ ಹಾಲು ಉತ್ಪದಕರ ಸಂಘದ ಚುನಾವಣೆಗೆ ಅಧ್ಯಕ್ಷರ ಸ್ಥಾನಕ್ಕೆ ಸಿಪಿ ಪ್ರಕಾಶ್ ಉಪಾಧ್ಯಕ್ಷರ ಸ್ಥಾನಕ್ಕೆ ಕರಿಯಯ್ಯ

Published

on

ಇಂದು ನಡೆದ ಚನ್ನಂಗೆರೆ ಹಾಲು ಉತ್ಪದಕರ ಸಂಘದ ಚುನಾವಣೆಗೆ ಅಧ್ಯಕ್ಷರ ಸ್ಥಾನಕ್ಕೆ ಸಿಪಿ ಪ್ರಕಾಶ್ ಉಪಾಧ್ಯಕ್ಷರ ಸ್ಥಾನಕ್ಕೆ ಕರಿಯಯ್ಯ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿದ ಶ್ರೀಮತಿ ಶಿಲ್ಪ ಶ್ರೀ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾಗಲು ನನಗೆ ಸಹಕಾರ ನೀಡಿದ ವಿದೇಶಕರುಗಳು ಗ್ರಾಮದ ಮುಖಂಡರಗಳಿಗೆ ಕೃತಜ್ಞತೆ ಸಲ್ಲಿಸಿದರು ಹಾಗೂ ರೈತರಿಗೆ ಜೀವನಾಡಿ ಆಗಿರುವ ಹೈನುಗಾರಿಕೆಯನ್ನು ಮತ್ತು ಸಂಘವನ್ನು ಇನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು. ರೈತರು ಗುಣಮಟ್ಟದ ಹಾಲು ಹಾಕಿ ಸಂಘವನ್ನು ಬೆಳೆಸಬೇಕೆಂದು ಈ ಮೂಲಕ ಕೇಳಿಕೊಂಡರು.
ಈ ಸಮಯದಲ್ಲಿ ನಿರ್ದೇಶಕರುಗಳಾದ ಸಿಎಂ ನಟೇಶ್, ಸಿ ಕೆ ಶೇಷಾದ್ರಿ, ಸಿಎನ್ ಪರಶಿವ, ಸಿಎಂ ರಾಜೇಗೌಡ, ಅರುಣ್ ಕುಮಾರ್, ನೀಲಕಂಠಪ್ಪ, ಸಿ ಎಸ್ ಹರೀಶ, ನಾಗ ನಾಯಕ, ರಾಜ ಶೆಟ್ಟಿ, ಧನಲಕ್ಷ್ಮಿ, ಲೀಲಾವತಿ ಹಾಜರಿದ್ದರು.
ಕಾರ್ಯದರ್ಶಿಗಳಾದ ಸಿ ಬಿ ಶ್ರೀಧರ್ ಹಾಲು ಪರೀಕ್ಷಕರಾದ ರಾಮ ಶೆಟ್ಟಿ ಚುನಾವಣೆ ಅಧಿಕಾರಿ ಶಿಲ್ಪ ಶ್ರೀ ಹಾಜರಿದ್ದರು
ಗ್ರಾಮದ ಮುಖಂಡರುಗಳಾದ ಮಲ್ಲಿಕಾರ್ಜುನ ಸಿಬಿ ಚೇರ್ಮನ್, ಕಾಂತರಾಜ್ ಸಿ ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸಿಪಿ ದಿನೇಶ್ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಪಂಚಾಯಿತಿ ಸದಸ್ಯರಾದ ಬಾಪು,ಸಿ ಕೆ ಗಂಗಾಧರ ಸಿ ಕೆ ಮಲ್ಲೇಶ್ ಹರೀಶ್ ಸಿ ಕೆ ಶಿವಮೂರ್ತಿ ಕುಮಾರ್ ನಾಯಕ ಚೆನ್ನಪ್ಪ ರವಿ ರಾಜಪ್ಪ ಮಹೇಶ್ ಶಂಕರ್ ನಾಯಕ ಅಂಬರೀಶ್ ಮಂಜು ಏನ್ ಮಾದೇವ ಸಿಆರ್ ಕುಮಾರ ಭೋಜರಾಜ್ ಕೇಶವ ರೈತ ಯೋಧ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, ಸಿಎಚ್ ಬೋರೇಗೌಡ ಮುಂತಾದವರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಟೈಗರ್ ಬ್ಲಾಕ್ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿ

Published

on

ಹ್ಯಾಂಡ್ ಪೋಸ್ಟ್: ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಎಚ್‌ಡಿ ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಓಬಯ್ಯ ಅವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಣಿ ಎಂಬುವವರಿಗೆ ಸೇರಿದ ಹಸುವನ್ನು ಶನಿವಾರ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದರೂ ಯರೊಬ್ಬರೂ ಸ್ಥಳಕ್ಕೆ ಆಗಮಿಸಿದ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಕರ್ನಾಟಕ ರಾಜ್ಯ ಹಸಿರು ಸೇನೆ ನೇತೃತ್ವದಲ್ಲಿ ಕೆ ಎಡತೊರೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಹಸಿರು ಸೇನೆ ಅಧ್ಯಕ್ಷ ಸುಬ್ರಮಣ್ಯ ಗೌಡ, ಗಂಗಾಧರ್, ಬೂದ್ನೂರು ಮಹದೇವ, ತಸ್ಲಿಂ, ಶಶಿಕುಮಾರ್, ಟೈಗರ್ ಬ್ಲಾಕ್ ಹಾಗೂ ಕೆ ಎಡತೊರೆ ಗ್ರಾಮಸ್ಥರು ಇದ್ದರು.

Continue Reading

Mysore

ಗುಂಡು ಎಸೆದ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಆಯ್ಕೆ: ವಿದ್ಯಾರ್ಥಿ ಮನ್ನಾ ಖಾನಮ್

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ :-  ತಾಲೂಕಿನ    ಭೇರ್ಯ  ಗ್ರಾಮದಲ್ಲಿರುವ ಪ್ಯಾರಡೈಸ್ ಇಂಟರ್ನ್ಯಾಷನಲ್ ಸ್ಕೂಲಿನ ಎಂಟನೇ ತರಗತಿ ವಿದ್ಯಾರ್ಥಿನಿ ಕುಮಾರಿ  ಮನ್ನಾ ಖಾನಂ ಜಿಲ್ಲಾ ಮಟ್ಟದ  ಕ್ರೀಡಾಕೂಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ  ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ಯಾರಡೈಸ್ ಇಂಟರ್ನ್ಯಾಷನಲ್ ಸ್ಕೂಲಿನ ಆಡಳಿತ ಮಂಡಳಿಯ ಅಧ್ಯಕ್ಷ ಮುಶಿರ್ ಅಹಮದ್ ಖಾನ್  ಮಾತನಾಡಿ ಕುಮಾರಿ ಮನ್ನಾ ಖಾನಂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಶಾಲೆಗೆ ಹೆಮ್ಮೆ ಮತ್ತು  ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿನಿಯ ಈ ಸಾಧನೆಯಿಂದ  ನಮ್ಮ ಶಾಲೆಗೆ ಉತ್ತಮ ಹೆಸರು ಕೀರ್ತಿ ತಂದಿದ್ದು ಇದಕ್ಕೆ ಸಹಕರಿಸಿ, ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿದ ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ  ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಯ ಪೋಷಕರಿಗೆ ಪ್ಯಾರಡೈಸ್ ಇಂಟರ್ನ್ಯಾಷನಲ್ ಸ್ಕೂಲಿನ ಆಡಳಿತ ಮಂಡಳಿಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ತಜಮುಲ್  ಅಹಮದ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading

Mysore

ನಿರಾಶ್ರಿತ ವ್ಯಕ್ತಿಗೆ, ಯುವಕರು ಹಣ ಸಂಗ್ರಹಿಸಿ, ಆಶ್ರಮ ಸೇರಿಸಿ, ಮಾನವೀಯತೆ ಮೆರೆದರು.

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ  : ಎರಡು ಕಣ್ಣು ಕಾಣದೆ, ಬಸ್ ನಿಲ್ದಾಣದಲ್ಲಿ ಕಾಲದೂಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮದ ಯುವಕರೇ ವಂತಿಗೆ ಹಣ ಸಂಗ್ರಹಿಸಿ ನಿರಾಶ್ರಿತರ ಆಶ್ರಮಕ್ಕೆ ಸೇರಿಸಿ ಹೃದಯವಂತಿಗೆ ಮೆರೆದಿದ್ದು,ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಪರೋಟ ರಾಜಣ್ಣ ಎಂಬುವರಿಗೆ ಎರಡು ಕಣ್ಣು ಕಾಣದೆ,  ಗ್ರಾಮದ ಬಸ್ ನಿಲ್ದಾಣದಲ್ಲಿ, ಗ್ರಾಮಸ್ಥರು ಉದಾರತೆಯಿಂದ ನೀಡುವ  ಆಹಾರ ಸೇವಿಸಿ ಕೊಂಡು ಬದುಕು ಸಾಗಿಸುತ್ತಿದ್ದರು.

ಮೂಲತ  ಹಾಸನ ಜಿಲ್ಲೆಯ ಹಾಸನ ತಾಲೂಕಿನ ವ್ಯಾಪ್ತಿಗೆ ಬರುವ ವರ್ತಿಕೆರೆ ಗ್ರಾಮದವರು ಎನ್ನಲಾದ ರಾಜಣ್ಣ ಅವರು ಉದ್ಯೋಗ ಅರಸಿ ಸಾಲಿಗ್ರಾಮ ತಾಲೂಕಿನ‌  ಚುಂಚನಕಟ್ಟೆ ಗ್ರಾಮಕ್ಕೆ ಬಂದು ಇಲ್ಲಿನ ಕೆಲವು ಹೊಟೇಲ್ ಗಳಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು.

ನಂತರ ಚಿಕ್ಕಕೊಪ್ಪಲು ಗ್ರಾಮದ ಯುವತಿಯನ್ನು ಮದುವೆ ಅದ ರಾಜಣ್ಣ ಅವರು ನಂತರ ಹೊಟೇಲ್ ಕೆಲಸ ಬಿಟ್ಟು ಚಿಕ್ಕಕೊಪ್ಪಲು ದೊಡ್ಡಕೊಪ್ಪಲು ಗ್ರಾಮದಲ್ಲಿ ಕೂಲಿ-ನಾಲಿ ಮಾಡಿಕೊಂಡಿದ್ದ ಇವರಿಗೆ ಪತ್ನಿ  ಅವರು ಹಲವಾರು ವರ್ಷದಿಂದ ಗ್ರಾಮದಿಂದ ಕಾಣಿಯಾಗಿ ಹೋದವರು ಮತ್ತೆ ಗ್ರಾಮಕ್ಕೆ ಬಾರದ ಹಿನ್ನಲೆಯಲ್ಲಿ ಒಂಟಿಯಾಗಿಯೇ ಜೀವನ‌ ಸಾಗಿಸುತ್ತಿದ್ದರು.

ಕೆಲ ತಿಂಗಳ ಹಿಂದೆ ಮಧುಮೇಹ ದಿಂದ ಒಂದು ಕಣ್ಣು ಕಳೆದುಕೊಂಡಿದ್ದ ರಾಜಣ್ಣ ಅವರು 15 ದಿವಸಗಳ ಹಿಂದೆ‌ ಕೂಲಿ ಕೆಲಸ ಮಾಡುತ್ತಿದ್ದಾಗ ಕಡ್ಡಿ ಕಣ್ಣಿಗೆ ತಾಕಿ ಇರೋ ಇನ್ನೊಂದು ಕಣ್ಣು ಕಳೆದು ಕೊಂಡು ಗ್ರಾಮದ ಬಸ್ ನಿಲ್ದಾಣದಲ್ಲಿ ಬದುಕು ಸಾಗಿಸುತ್ತಿದ್ದರು, ಇದರಿಂದ ನಿತ್ಯ ಕಾರ್ಯಕ್ರಮಗಳಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. .

ಇದನ್ನು ಕಂಡ ಗ್ರಾಮದ ಯುವಕ ಮಂಜುನಾಥ್  ಹಾಗು  ಪ್ರಸಾದ್ ಅವರು ಕೆ.ಆರ್.ನಗರ ಮತ್ತು ಮೈಸೂರು ಹಾಗು ಬೆಂಗಳೂರಿನ ವಿವಿಧ ಆಶ್ರಮಗಳನ್ನ ಪತ್ರಕರ್ತ ವಿನಯ್ ದೊಡ್ಡಕೊಪ್ಪಲು ಅವರ ಸಹಕಾರದೊಂದಿಗೆ ಸಂಪರ್ಕಿಸಿ, ಇವರ ಇರುವ  ವಾಸ್ಥವವನ್ನು ಆಶ್ರಮಗಳ ಮುಖ್ಯಸ್ಥರಿಗೆ ತಿಳಿಸಿದ್ದರು.

ಕೆಲವರು ಮಾಹಿತಿ ತಿಳಿದರು ಕೂಡ ಸೂಕ್ತ ಸ್ಪಂದನೆ‌ ಕೊಡದೆ ಹೋದ ಸಂದರ್ಭದಲ್ಲಿ ಬೆಂಗಳೂರಿನ ದಾಸನಪುರ ಹೋಬಳಿಯ  ಸೊಂಡೆಕೊಪ್ಪದ ಜನಸ್ನೇಹಿ ನಿರಾಶ್ರಿತರ ಆಶ್ರಮದ ಮುಖ್ಯಸ್ಥರಾದ ಯೋಗಿಶ್ ಅವರು  ಇವರಿಗೆ ಉಚಿತವಾಗಿ ಆಶ್ರಯ ಕೊಡುವುದಾಗಿ ತಿಳಿಸಿದ್ದರು.

ಈ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಲು ವಾಹನ ಮತ್ತು ಔಷದ ಉಪಚಾರದ ಅನುಕೂಲಕ್ಕಾಗಿ ಹಣದ ಅವಶ್ಯಕತೆ ಇದ್ದುದನ್ನು ಕಂಡು ಈ ಎರಡು ಗ್ರಾಮದ ಯುವಕರು,

ದೊಡ್ಡಕೊಪ್ಪಲು ಡೈರಿ ರಘು ಅವರ ಅಂಗಡಿ ಬಳಿ ಸಭೆ ಸೇರಿ  ಎರಡು ಗ್ರಾಮದವರಿಂದ ಸುಮಾರು 10 ಸಾವಿರ  ರೂಗಳ  ವಂತಿಗೆ ಸಂಗ್ರಹಿಸಿ, ವಾಹನದ ವ್ಯವಸ್ಥೆ ಮಾಡಿ ರಾಜು ಅವರನ್ನು ಕಳಿಸಿ ಕೊಡಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ರಾಜು ಅವರು ಕಣ್ಣು ಕಾಣದ ಸಂದರ್ಭದಲ್ಲಿ ಅನ್ನ ನೀರು ಕೊಟ್ಟು ಉದಾರತೆ ತೋರಿ ಬದುಕಿಗೆ ಆಶ್ರಮ ಸೇರಿಸಲು ಸಹಕಾರ ಕೊಟ್ಟ ಚಿಕ್ಕಕೊಪ್ಪಲು-ದೊಡ್ಡಕೊಪ್ಪಲು ಅವಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕಣ್ಣಿರು ಇಡುತ್ತಾ ಬೆಂಗಳೂರಿನತ್ತ ಹೊರಟರು

ಈ ಒಂದು ಕಾರ್ಯಕ್ಕೆ ಚಿಕ್ಕಕೊಪ್ಪಲು- ದೊಡ್ಡಕೊಪ್ಪಲು ಗ್ರಾಮದ ಯುವಕರಾದ ಡಿ.ಪುನಿತ್, ಅರುಣ್ ಕಲ್ಲಹಟ್ಟಿ, ಸಿ.ಬಿ.ಸಂತೋಷ್, ಸಿ.ಎಸ್.ಗಿರೀಶ್, ಸಿ.ಎಚ್.ನವೀನ್,

ಕೋಳಿಮನು, ಅಭಿ,ಮೋಹನ, ದರ್ಶನ್, ಅಶೋಕ್,ಡೈರಿರಘು,ಪುಟ್ಟರಾಜು,ಲೋಕಣ್ಣ,   ಸುನೀಲ್, ಕೋಳಿ ಮಂಜ, ಚಂದ್ರಣ್ಣ, ಭರತ್, ಮಾವತ್ತೂರು

ಉದಯ್,ಸ್ವಾಮಿ,ವೆಂಕಟೇಶ್, ಅರುಣ,ಅಮಿತ್ ಗಾಂಧಿ, ಡೈರಿ ಉಮೇಶ್, ಜೆಸಿಬಿ ದೀಪು,ಚರಣ್ ,ದೀಲೀಪ್, ಸಿ.ಬಿ.ಆಶೋಕ್, ಕೃಷ್ಣನಾಯಕ,ಕಾಡುವಿಜಿ,ಚಿರಂತ್, ಕಾರ್ತಿಕ್,ಏಳನೀರುರಾಜು, ಸತೀಶ್,ಲಕ್ಷಣ್,ಶೇಖರ್, ಹೋಟೆಲ್ ರಘು ಸೇರದಂತೆ ಮತ್ತಿತರರು ಸಾಥ್ ನೀಡಿದರು.

Continue Reading

Trending

error: Content is protected !!