Connect with us

National - International

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಿಡುಗಡೆ

Published

on

ಪ್ರಸ್ತುತ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಗಗನಕ್ಕೇರುತ್ತ ಸಾಗಿದೆ. ಕೇಂದ್ರ ಸರ್ಕಾರ ಮನೆಯ ಸಿಲಿಂಡರ್ ಗೆ ಸಬ್ಸಿಡಿ ಘೋಷಿಸಿದೆ. ದೇಶಾದ್ಯಂತ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಗ್ರಾಹಕರಿಗೆ ಉತ್ತಮ ಸುದ್ದಿ ನೀಡಿದ್ದು, ಬೆಲೆ ಏರಿಕೆಯ ನಡುವೆಯೇ ಸರ್ಕಾರ ಎಲ್‌ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಬಿಡುಗಡೆ ಮಾಡಿದೆ.

ಎಷ್ಟು ಎಲ್‌ಪಿಜಿ ಸಿಲಿಂಡರ್ ಗಳಿಗೆ ಸಬ್ಸಿಡಿ:
ಇನ್ನು ಫಲಾನುಭವಿಗಳಿಗೆ ಸರ್ಕಾರ ವರ್ಷಕ್ಕೆ 12 ಸಿಲಿಂಡರ್ ಗಳನ್ನು ಪಡೆಯಲು ಅನುಮತಿ ನೀಡಿದೆ. ಅಂದರೆ ಒಂದು ವರ್ಷದಲ್ಲಿ 12 ಅಡುಗೆ ಸಿಲಿಂಡರ್ ಗಳ ಸಬ್ಸಿಡಿ (cylinder subsidy) ಪಡೆಯಬಹುದಾಗಿದೆ.

ಸಬ್ಸಿಡಿ ಎಷ್ಟು?
ಪ್ರತಿ ಸಿಲಿಂಡರ್ ಗೆ 200 ರೂ. ಅಂತೆ ಸಬ್ಸಿಡಿ

ಸಿಲಿಂಡರ್ ಸಬ್ಸಿಡಿ ಪಡೆಯುವುದು ಹೇಗೆ?:
ಅರ್ಹ ಫಲಾನುಭವಿಗಳು ಗ್ಯಾಸ್ ಸಬ್ಸಿಡಿ ಪಡೆಯಲು ತಮ್ಮ ಆಧಾರ್ ಸಂಖ್ಯೆಯನ್ನು lpg ಸಂಪರ್ಕದೊಂದಿಗೆ ಲಿಂಕ್ ಮಾಡಬೇಕು. ಮತ್ತು ನೀವು ಪ್ರತಿ ತಿಂಗಳು ಸಿಲಿಂಡರ್ ಖರೀದಿ ಮಾಡುವ ಎಜೆನ್ಸಿಯ ಕಚೇರಿಯಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ಅಪೇಟ್ ಮಾಡಿಕೊಂಡಿರಬೇಕಾಗುತ್ತದೆ. (ಈಗಾಗಲೇ ಈ ಕೆಲಸ ಮಾಡಿಕೊಂಡಿರುವವರು ಪುನಃ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ.)

ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭ ಪ್ರಕ್ರಿಯೆಯ ಮೂಲಕ ಪರಿಶೀಲಿಸಬಹುದು. ಹೇಗೆ ಅಂತಿರಾ ಇಲ್ಲಿದೆ ನೊಡಿ.

* ಮೊದಲಿಗೆ ಈ ಲಿಂಕ್ https://www.mylpg.in ಮೇಲೆ ಕ್ಲಿಕ್ ಮಾಡಿ ಮೈ ಎಲ್.ಪಿ.ಜಿ ವೆಬ್ಬೆಟ್ ಭೇಟಿ ಮಾಡಬೇಕು ನಂತರ ನಿಮ್ಮ ಮನೆಯಲ್ಲಿ ಬಳಕೆ ಮಾಡುವ ಸಿಲಿಂಡರ್ ಕಂಪನಿಯ ಸಿಲಿಂಡರ್ ಚಿತ್ರದ ಮೇಲೆ ಕ್ಲಿಕ್ ಮಾಡಬೇಕು.

* ನಂತರ ಇಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡು “ಹೊಸ ಬಳಕೆದಾರ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸಿಲಿಂಡರ್ ನ ಗ್ರಾಹಕರ ಸಂಖ್ಯೆಯನ್ನು ಮತ್ತು ನೊಂದಾಯಿತ ಮೊಬೈಲ್ ಸಂಸ್ಥೆಯನ್ನು ನಮೂದಿಸಿ “ಮುಂದುವರೆಯಿರಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

* ಈ ಮೇಲಿನ ಪ್ರಕ್ರಿಯೆ ಮುಗಿಸಿದ ನಂತರ ನಿಮ್ಮ ಮೊಬೈಲ್ ಗೆ “ಒಟಿಪಿ” ಬರುತ್ತದೆ ಅದನ್ನು ಇಲ್ಲಿ ನಮೂದಿಸಿ ಮತ್ತೆ “ಮುಂದುವರೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಒಂದೊಮ್ಮೆ otp ಬರದೆ ಇದ್ದಲ್ಲಿ “click here to generate otp” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮತ್ತೊಮೆ ಒಟಿಪಿ ಬರುತ್ತದೆ.

* ಇದಾದ ಬಳಿಕೆ ನಿಮ್ಮ ಬಳಕೆ ದಾರರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು “ಮುಂದುವರೆಯಿರಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬಳಕೆದಾರರ ಐಡಿ ಸಕ್ರಿಯಕೊಳ್ಳುತ್ತದೆ.(ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ರಚನೆ ಮಾಡಿಕೊಳ್ಳಬೇಕು.)

* ತದನಂತರ “ಸೈನ್ ಇನ್” ಅಥವಾ “ಇಲ್ಲಿ ಕ್ಲಿಕ್ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿ ನೀವು ರಚನೆ ಮಾಡಿಕೊಂಡಿರುವ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಹಾಕಿ ಲಾಗಿನ್ ಅದ ಬಳಿಕ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ “ಸಿಲಿಂಡರ್ ಬುಕಿಂಗ್ ಇತಿಹಾಸವನ್ನು ನೋಡಿ” ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನೀವು ಯಾವ ದಿನಾಂಕದಂದು ಸಿಲಿಂಡರ್ ಬುಕ್ ಮಾಡಿದ್ದೀರಾ? ಸಿಲಿಂಡರ್ ಸಬ್ಸಿಡಿ ಎಷ್ಟು ಜಮಾ ಅಗಿದೆ? ಯಾವ ಬ್ಯಾಂಕ್‌ ಖಾತೆಗೆ ಜಮಾ ಅಗಿದೆ? ಎಂದು ಸಂಪೂರ್ಣ ವಿವರವನ್ನು ತೋರಿಸುತ್ತದೆ.

National - International

ರಾಜ್ಯ ಕೈ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದ ಖರ್ಗೆ: ಯಾವೆಲ್ಲಾ ನಾಯಕರು ಏನಂದ್ರು ಗೊತ್ತಾ?

Published

on

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಗಾದಿಗೆಗೆ ಕುಸ್ತಿ, ಸಚಿವ ಸಂಪುಟ ಬದಲಾವಣೆ ಕುರಿತಂತೆ ಒಲಬೇಗುಧಿ ಕಂಡಿರುವ ರಾಜ್ಯ ಕಾಂಗ್ರೆಸ್‌ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರಲ್ಲದೇ ರಾಜ್ಯದ ನಾಯಕರು ಬಾಯಿ ಮುಚ್ಚಿಕೊಂಡಿರಬೇಕು ಎಂದು ಖಡಕ್‌ ಸೂಚನೆಯನ್ನು ಸಹಾ ನೀಡಿದ್ದಾರೆ.

ಈ ಸಂಬಂಧ ರಾಜ್ಯದ ಹಲವು ಪ್ರಮುಖ ಕೈ ನಾಯಕರು ಮಾತನಾಡಿದ್ದು, ತಾವು ಖರ್ಗೆ ಅವರ ನಿಲುವಿಗೆ ಬದ್ಧ ಎಂದು ಹೇಳಿದ್ದಾರೆ.

ಈ ಸಂಬಂಧ ಮಾತನಾಡಿರುವ ಡಿಕೆ ಶಿವಕುಮಾರ್‌, ನಾನು ಖರ್ಗೆ ಅವರ ಬುದ್ದಿವಾದವನ್ನು ಪಾಲಿಸುತ್ತೇನೆ. ಉಳಿದವರು ಪಾಲಿಸಲಿ ಎಂದು ಹೇಳಿದ್ದಾರೆ.

ಎಚ್‌.ಸಿ ಮಹದೇವಪ್ಪ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವುದು ನೂರಕ್ಕೆ ನೂರು ಸರಿಯಿದೆ. ಎಲ್ಲರೂ ಅವರ ಮಾತನ್ನು ಪಾಲಿಸಬೇಕಿದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ ಮಾತನಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ಹೇಳಿದ್ದನ್ನು ಎಐಸಿಸಿ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ. ಇಲ್ಲಿ ಯಾರ ಬಾಯಿಗೂ ಬೀಗ ಹಾಕಲು ಆಗಲ್ಲ. ನಮ್ಮ ವಿವೇಚನೆಯಿಂದ ಮಾತನಾಡಬೇಕು. ಮಾತಿನಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗದಂತೆ ಮಾತನಾಡಬೇಕು ಎಂದರು.

Continue Reading

National - International

ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್‌ ದೋಷಿ

Published

on

ಕೊಲ್ಕತ್ತಾ: ಕೊಲ್ಕತ್ತಾ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 57 ದಿನಗಳಲ್ಲಿ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಗಸ್ಟ್‌ 9 ರಂದು ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನ 31 ವರ್ಷದ ವೈದ್ಯೆಯ ರಕ್ತಸಿಕ್ಕ ಮೃತದೇಹ ಪತ್ತೆಯಾಗಿತ್ತು. ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶದಲ್ಲಿಯೇ ದೊಡ್ಡಮಟ್ಟದ ಸಂಚಲನ ಮೂಡಿಸಿತ್ತು. ದೇಶಾದ್ಯಂತ ಹಲವಾರು ಹೋರಾಟ ಪ್ರತಿಭಟನೆಗಳು ನಡೆದಿದ್ದವು.

ಈ ಸಂಬಂಧ ಸಂಜಯ್‌ ರಾಯ್‌ ಎಂಬುವವನನ್ನು ಬಂಧಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಕೊಲ್ಕತ್ತಾ ಸಿಬಿಐನ ವಿಶೇಷಾ ನ್ಯಾಯಾಲಯದ ನ್ಯಾಯಾಧೀಶರಾದ ಅನಿರ್ಬನ್‌ ದಾಸ್‌ ಅವರು ಕೇವಲ 57 ದಿನಗಳಲ್ಲಿ ತೀರ್ಪು ಪ್ರಕಟಿಸಿದ್ದು, ಸಂಜಯ್‌ ರಾಯ್‌ ದೋಷಿ ಎಂದು ಹೇಳಿದೆ. ಜೊತೆಗೆ ಶಿಕ್ಷೆಯ ಪ್ರಮಾಣವನ್ನು ಜನವರಿ 20 ರಂದು ಪ್ರಕಟಿಸಲಾಗುವುದು ಎಂದು ಹೇಳಿದೆ.

Continue Reading

National - International

ಸೈಫ್‌ ಅಲಿ ಖಾನ್‌ ಚಾಕು ಇರಿತ ಪ್ರಕರಣ: ಮಹಾರಾಷ್ಟ್ರ ಸಿಎಂ ಫಡ್ನವೀಸ್‌ ಹೇಳಿದ್ದೇನು?

Published

on

ಮುಂಬೈ: ಮುಂಬೈನಲ್ಲಿ ಗುರುವಾರ (ಜ.16) ಬೆಳಗಿನ ಜಾವ 2.30 ರ ವೇಳೆ ಬಾಲಿವುಡ್‌ ಖ್ಯಾತನಟ ಸೈಫ್‌ ಅಲಿ ಖಾನ್‌ ಅವರಿಗೆ ಮುಸುಕುದಾರಿಯೊಬ್ಬ ಆರು ಬಾರಿ ಚಾಕುವಿನಿಂದ ಇರಿದ ಪ್ರರಣಕ್ಕೆ ಸಂಬಂಧಿಸಿದಂತೆ ಮುಂಬೈ ನಗರದ ಬಗ್ಗೆ ಎಲ್ಲೆಡೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದವು.

ಸಾಮಾಜಿಕ ಜಾಲತಾಣ, ವಿರೋಧ ಪಕ್ಷಗಳ ನಾಯಕರು ಮುಂಬೈ ನಗರದ ಇನ್ಮುಂದೆ ವಾಸಿಸಲು ಯೋಗ್ಯವಾಗಿರದ ನಗರವಾಗಿದೆ. ಇದೊಂದು ಸುರಕ್ಷಿತ ನಗರವಲ್ಲ ಎಂದು ಟೀಕೆಗಳು ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಪ್ರತಿಕ್ರಿಯೆ ನೀಡಿದ್ದು, ಎಲ್ಲರ ಟೀಕೆಗೆಳನ್ನು ಅಲ್ಲೆಗೆಳೆದಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, ಮುಂಬೈ ಸುರಕ್ಷಿತ ಸ್ಥಳವಲ್ಲ ಎನ್ನುವುದನ್ನು ನಾನು ನಂಬುವುದಿಲ್ಲ. ದೇಶದ ಎಲ್ಲಾ ಮಹಾನಗರಗಳ ಪೈಕಿ ಮುಂಬೈ ಅತ್ಯಂತ ಸುರಕ್ಷಿತ ನಗರ ಎಂದು ನಾನು ಭಾವಿಸುತ್ತೇನೆ.

ಮುಂಬೈ ಪ್ರತಿಷ್ಠೆಯನ್ನು ಹಾಳುಮಾಡಲು ಈ ಘಟನೆಯನ್ನು ಬಳಸಿಕೊಂಡು ಅಸುರಕ್ಷಿತ ಎಂದು ಹೇಳುವುದು ಅನ್ಯಾಯವಾಗುತ್ತದೆ. ಮುಂಬೈ ನಗರವನ್ನು ಇನ್ನಷ್ಟು ಸುರಕ್ಷಿತವಾಗಿರಿಸಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ನಾವು ಕೂಡಾ ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಫಡ್ನವೀಸ್‌ ಹೇಳಿದ್ದಾರೆ.

Continue Reading

Trending

error: Content is protected !!