Mysore
ಗೃಹಲಕ್ಷ್ಮಿ, ವೇತನಗಳ ಸಮಸ್ಯೆ ಬಗೆ ಹರಿಸಿ, ಮನವಿ ಮುತ್ತಾರ್ ಪಾಷಾ
ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಗೆ ನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ ತಹಸೀಲ್ದಾರ್ ನರಗುಂದ ರವರಿಗೆ ತಾಲೂಕು ರಾಜೀವ್ ಗಾಂಧಿ ಪಂಚಾಯತ್ ರಾಜ್ ಉಪಾಧ್ಯಕ್ಷ ಮುತ್ತಾರ್ ಪಾಷಾ ರವರು ಹೂ ಗುಚ್ಚ ನೀಡಿ ಗೌರವಿಸಿ ನಂತರ ಮಾತನಾಡಿ ಈ ಭಾಗದ ಜನ ಸಾಮಾನ್ಯರ ಹಾಗೂ ರೈತರ ಕಡತಗಳು ಹಾಗೆ ಉಳಿದಿವೆ,ಮುಖ್ಯವಾಗಿ ಸರ್ಕಾರದ ಗ್ಯಾರಂಟಿಯಾದ ಗೃಹಲಕ್ಷ್ಮಿ,ಯೋಜನೆಯ ಹಣ ಇನ್ನು ಕೆಲವು ಮಹಿಳೆಯರಿಗೆ ತಲುಪಿಲ್ಲ, ಇವುಗಳನ್ನು ಪರಿಶೀಲಿಸಿ ಸರ್ಕಾರದ ಯೋಜನೆ ತಲುಪುವಂತೆ ಮಾಡಬೇಕು. ಮತ್ತು ವೃದ್ಧಾಪಿ, ವಿಧವಾ ವೇತನಗಳು ಹಲವು ತಿಂಗಳಿಂದ ಮಹಿಳೆಯರಿಗೆ ಬಂದಿಲ್ಲಾ, ಯಾವ ಹಂತದಲ್ಲಿ ಇದೆ ಎಂದು ಪರಿಶೀಲನೆ ಮಾಡಿ ವೇತನ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಸ್ಪಂದಿಸಿದ ತಹಸೀಲ್ದಾರ್ ರವರು ಸರ್ಕಾರದ ಯೋಜನೆಗಳು ಅರ್ಹ ಪಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
Mysore
ಸಿಎಂ ಸಿದ್ದರಾಮಯ್ಯ ಕೂಡ ಪ್ರೊ. ನಂಜುಂಡಸ್ವಾಮಿ ಗರಡಿಯಲ್ಲಿ ಬೆಳೆದವರು : MLC ಡಾ. ಯತೀಂದ್ರ ಸಿದ್ದರಾಮಯ್ಯ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಪ್ರೊ. ನಂಜುಂಡಸ್ವಾಮಿಯವರು ಹಲವಾರು ನಾಯಕರನ್ನು ಗುರುತಿಸಿ ಬೆಳೆಸಿದವರು.ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಅವರ ಗರಡಿ ಯಲ್ಲಿ ಬೆಳೆದು ಬಂದವರು.ದೇಶದ ಬಹುಸಂಖ್ಯಾತ ರು ಇಂದು ಕೃಷಿಯನ್ನೆ ಅವಲಂಬಿಸಿದ್ದಾರೆ. ಆದ್ದರಿಂದ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಂದು ತಾಲೂಕಿನ ತಾಂಡವಪುರ ಗ್ರಾಮದ ಶ್ರೀ ಮಾರಮ್ಮನವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರೊ. ನಂಜುಂಡಸ್ವಾಮಿ ಅವರ 90ನೇ ಹುಟ್ಟು ಹಬ್ಬದ ಅಂಗವಾಗಿ ಸ್ಥಳೀಯ ಶಾಸಕಾಂಗ ಹಾಗೂ ರೈತ, ದಲಿತ ಮುಖಂಡರ ರೈತ ಸ್ನೇಹಿ ಮುಖಾಮುಖಿ ಭೇಟಿ ಸಮಾವೇಶದಲ್ಲಿ ಮಾತನಾಡುತ್ತಾ ಇಂದು ರೈತ ಸಂಘಟನೆಗಳು ಪ್ರಬಲವಾಗಿ ಬೆಳೆದಿವೆ ಎಂದರೆ ಅದಕ್ಕೆ ಕಾರಣ ಪ್ರೋಪೆಸರ್ ನಂಜುಂಡಸ್ವಾಮಿಯವರು.

ರೈತರ ಪರ ದೂರ ದೃಷ್ಟಿ ಯುಳ್ಳ, ಹಾಗು ಸಾಮಾಜಿಕ ಕಳಕಳಿ ಇದ್ದ ನಂಜುಂಡಸ್ವಾಮಿಯವರು ಹಲವಾರು ನಾಯಕರನ್ನ ಗುರುತಿಸಿ ಬೆಳೆಸಿದವರು.ಅವರ ಗರಡಿಯಲ್ಲಿ ಬೆಳೆದ ಅನೇಕ ರು ಇಂದು ವಿವಿದ ಪಕ್ಷಗಳಲ್ಲಿ ಉನ್ನತ ಸ್ಥಾನ ವನ್ನ ಹೊಂದಿದ್ದಾರೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಅವರ ಗರಡಿ ಯಲ್ಲಿ ಬೆಳೆದು ಬಂದವರು.ದೇಶದ ಬಹುಸಂಖ್ಯಾತ ರು ಇಂದು ಕೃಷಿಯನ್ನೆ ಅವಲಂಬಿಸಿದ್ದಾರೆ. ಆದ್ದರಿಂದ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದು ಆಳುವ ಸರಕಾರಗಳ ಕರ್ತವ್ಯ, ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಸರಕಾರ ಬಸವಣ್ಣನವರ ಕಾಯಕದ ಮೇಲೆನಿಂತಿರುವ ಸರಕಾರ ,ಸದಾ ರೈತರ ಪರ ದುಡಿಯುತ್ತಿದೆ. ಮಾಜಿ ಪ್ರದಾನಿ ದಿವಂಗತ ಮನಮೋಹನ ಸಿಂಗ್ ಅವರು ಬರಗಾಲದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ಮನ್ರೆಗಾ ಯೋಜನೆಯನ್ನು ಜಾರಿಗೆ ತಂದು ಗ್ರಾಮೀಣ ಜನರು ಯಾವುದೆ ಪ್ರದೇಶದಲ್ಲಿ ಕೂಡ ದುಡಿಮೆ ಮಾಡುವ ಅವಕಾಶ ನೀಡಿತ್ತು. ಆದರೆ ಇಂದಿನ ಕೇಂದ್ರ ಸರಕಾರ ಅದನ್ನು ಬದಲಿಸಿ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕೆಲಸ ಮಾಡುವಂತೆ ನಿರ್ಬಂಧ ಮಾಡಿರುವುದಲ್ಲದೆ, ಪಂಚಾಯಿತಿ ಮಟ್ಟದಲ್ಲಿ ಮಾಡುವ ನಿರ್ಧಾರವನ್ನು ತಾನೇ ಮಾಡುವ ಮೂಲಕ ಗ್ರಾಮಪಂಚಾಯತ ಹಕ್ಕುಗಳನ್ನು ಮೊಟಕು ಗೊಳಿಸಿದೆ. ಕೃಷಿ ಆದಾರಿತ ಉದ್ದಿಮೆಗಳನ್ನು ಬೆಳೆಸಬೇಕು. ಇಂದು ರೈತರ ಉತ್ಪನ್ನ ಗಳಿಗೆ ಬೆಲೆ ನಿಗದಿ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಅನ್ನದಾತನೆನಿಸಿದ ರೈತರು ತಮಗೆ ಏನೇ ಕಷ್ಟಗಳು ಎದುರಾದರು ಸಹನಾ ಮೂರ್ತಿಗಳಂತೆ ಬೇಸಾಯವನ್ನೇ ನಂಬಿ ಜೀವನ ಮುನ್ನಡೆಸುವ ಗಟ್ಟಿಗರು,
ಬೆಳೆ ನಷ್ಟ, ಕಾಡುಪ್ರಾಣಿಗಳ ಹಾವಳಿ, ಬೆಳೆ ರೋಗಭಾದೆ ಇನ್ನಿತರ ಕಾರಣಗಳಿಂದ ರೈತರು ಸಂಕಷ್ಟಗಳಿಗೆ ಗುರಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದರೊಂದಿಗೆ ಅದರ ಹಿತ ಕಾಪಾಡುವುದು ಸರ್ಕಾರಗಳ ಧ್ಯೇಯ. ಅದರಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಏಳಿಗೆಯನ್ನು ಮುಖ್ಯ ಗುರಿಯನ್ನಾಗಿ ನಾನಾ ಯೋಜನೆಗಳನ್ನು ಗೊಳಿಸುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಪರ ಕಾಳಜಿ ಉಳ್ಳವರಾಗಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ವೇದಿಕೆಯಲ್ಲಿ ಬಿಚ್ಚಿಡಲಾಗಿದೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಸೂಜಿಸಬೇಕಾದದ್ದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಕೆರೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರಸ್ತೆಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ಕೈಗೊಳ್ಳಲಾಗಿದೆ.ಮುಖ್ಯನಾಲ ಹಾಗೂ ಉಪನದಿಗಳ ಲೈನಿಂಗ್ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಟಿ. ವಿದ್ಯಾಸಾಗರ್ ಮಾತನಾಡುತ್ತಾ, ಇಂದು ರೈತರು ಏನೇ ಫಸಲು ಬೆಳೆದರು ಖರ್ಚು, ಬೆಳೆದ ಮಾರಾಟ ಮಾಡಿ ಸಂಕಷ್ಟಗಳಿಗೆ ಸಿಲುಕುತ್ತಿದ್ದಾರೆ. ಖರೀದಿ ಕೇಂದ್ರಗಳನ್ನು ತೆರೆದು ರೈತರ ಫಸಲು ಗಳಿಗೆ ಸೂಕ್ತ ಬೆಲೆ ದೊರಕಿಸಿ ಅವರ ಹಿತರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಶಾಸಕ ಅನಿಲ್ ಚಿಕ್ಕ ಮಾದು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಸತೀಶ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು, ರಾಜ್ಯಾಧ್ಯಕ್ಷ ಚಿನ್ನಪ್ಪ ಪೂಜಾರಿ, ಶಿವಾನಂದ ಮುರಳಿಧರ್ ಶರಣಪ್ಪ, ವಿಜಯ್, ರಾಮಯ್ಯ, ಮಂಡ್ಯ ಮಹೇಂದ್ರ, ಮಂಡ್ಯ ಶಾಮಿಯಾನ ಚಂದ್ರಣ್ಣ, ಮಹಿಳೆ ಘಟಕದ ಅಧ್ಯಕ್ಷ ಶ್ವೇತಾ, ಬಂಗಾರ ಸ್ವಾಮಿ, ಶಿವಣ್ಣ, ಮಹೇಶ್, ಯೋಗೇಶ್, ಸೋಮಣ್ಣ, ಸೇರಿದಂತೆ ಸಾವಿರಾರು ರೈತರು ಹಾಜರಿದ್ದರು.
Mysore
ನಾಳೆ ಸ್ವಚ್ಛತೆಗಾಗಿ ಬೃಹತ್ ಸೈಕಲ್ ಜಾಥಾ
ಮೈಸೂರು: ಮೈಸೂರನ್ನು ಸ್ವಚ್ಛತೆಯಲ್ಲಿ ದೇಶಕ್ಕೆ ‘ನಂಬರ್ 1’ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೃಹತ್ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿಯಂತೆ ಆಯೋಜಿಸಲಾಗಿರುವ ಕಾರ್ಯಕ್ರಮ ರೂಪಿಸಲಾಗಿದೆ.

ನಾಳಿನ ಉತ್ತಮ ಪರಿಸರಕ್ಕಾಗಿ ಇಂದೇ ಏರೋಣ ಸೈಕಲ್ ಸವಾರಿ ಶೀರ್ಷಿಕೆಯಡಿ ಫೆ.14ರಂದು ಮುಂಜಾನೆ 6:30ಕ್ಕೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ ಸೈಕಲ್ ಜಾಥಾಕ್ಕೆ ಚಾಲನೆ ಸಿಗಲಿದೆ.
ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಿ ದೊಡ್ಡ ಗಡಿಯಾರ, ಕೆ.ಆರ್ ವೃತ್ತ, ಆಯುರ್ವೇದಿಕ್ ವೃತ್ತ, ಹೈವೇ ಸರ್ಕಲ್, ಎಲ್.ಐ.ಸಿ ವೃತ್ತ, ಜೆ.ಎಸ್.ಎಸ್. ಮೆಡಿಕಲ್ ಕಾಲೇಜು ಮೂಲಕ ಸಾಗಿ ಪುನಃ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ.

ಪರಿಸರ ಸಂರಕ್ಷಣೆ ಮತ್ತು ನಗರದ ನೈರ್ಮಲ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ವ್ಯಾಪಕ ಪ್ರಚಾರ ನೀಡಲು ತಾವುಗಳು ಆಗಮಿಸಬೇಕೆಂದು ಪ್ರಕಟಣೆ ಕೋರಿದೆ.
Manglore
ಧರ್ಮಸ್ಥಳದಲ್ಲಿ ನಾಳೆ ಶಿವರಾತ್ರಿ ವೈಭವ! : ಪಾದಯಾತ್ರಿಗಳ ಗಡಣ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಜಾಗರಣೆ, ಕಲಾಸೇವೆ
ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆ, ಭಾನುವಾರ ಶಿವರಾತ್ರಿ ಪ್ರಯುಕ್ತ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸಲಿದ್ದು ಅವರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಬರುವುದಾಗಿ ಈಗಾಗಲೆ ಖಚಿತಪಡಿಸಿದ್ದು, ಅವರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಧರ್ಮಸ್ಥಳದಲ್ಲಿ ಸಾಕೇತ ಗಂಗೋತ್ರಿ, ಎಸ್.ಡಿ.ಎಂ. ಹೈಸ್ಕೂಲ್, ಅಮೃತವರ್ಷಿಣಿ ಸಭಾಭವನ ಹಾಗೂ ಉಜಿರೆಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ರಾಂತಿ ಹಾಗೂ ಉಜಿರೆಯಲ್ಲಿರುವ ಶಿಕ್ಷಣಸಂಸ್ಥೆಗಳಲ್ಲಿ ವಿಶ್ರಾಂತಿ ಹಾಗೂ ವಸತಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತಕಾರ್ಯಾಲಯ ತೆರೆದಿದ್ದು ಮಾಹಿತಿಕೇಂದ್ರ, ಉಚಿತ ವೈದ್ಯಕೀಯ ಚಿಕಿತ್ಸೆ, ಪಾನೀಯ ವಿತರಣೆ, ಪೊಲೀಸ್ ಚೌಕಿ, ಅಂಬುಲೆನ್ಸ್ ಸೇವೆ ಲಭ್ಯವಿದೆ.
ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ, ಬೂಡುಜಾಲು ಮೊದಲಾದ ಕಡೆ ಪಾದಯಾತ್ರಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಪಾದಯಾತ್ರಿಗಳು ತಂಗುವ ಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಧಾರ್ಮಿಕ ಉಪನ್ಯಾಸ, ಭಜನೆ ಹಾಗೂ ಸತ್ಸಂಗ ಮೊದಲಾದ ಧರ್ಮಪ್ರಭಾವನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವೈವಿಧ್ಯಮಯ ಸೇವೆ: ಶಿವರಾತ್ರಿ ಪ್ರಯುಕ್ತ ಭಾನುವಾರ ಭಕ್ತಾದಿಗಳು ದೇವರ ದರ್ಶನ ಮಾಡಿ ಶ್ರದ್ಧಾ-ಭಕ್ತಿಯಿಂದ ಎಳನೀರಿನ ಅಭಿಷೇಕ ಹಾಗೂ ಶತರುದ್ರಾಭಿಷೇಕ ಸೇವೆ ಅರ್ಪಿಸುವರು.
ಭಕ್ತರು ಅಹೋರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಹಾಗೂ ಉಪವಾಸ ವೃತಾಚರಣೆ ಮಾಡುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭಾನುವಾರ ಸಂಜೆ ಆರು ಗಂಟೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡುವರು.
ಬಳಿಕ ಅಹೋರಾತ್ರಿ ಭಕ್ತರಿಂದ ಶಿವಪಂಚಾಕ್ಷರಿ ಪಠಣ ನಡೆಯುತ್ತದೆ.ಭಾನುವಾರ ರಾತ್ರಿ ಅನ್ನಪೂರ್ಣ ಭೋಜನಾಲಯದ ಹಿಂಬದಿ ಇರುವ ಮೈದಾನದಲ್ಲಿ ಹಾಗೂ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಬೆಂಗಳೂರಿನ ಭಕ್ತರು ಉಚಿತ ಅನ್ನದಾಸೋಹ ಸೇವೆ ನಡೆಯಲಿದೆ.
ಕಲಾಸೇವೆ: ನಾಡಿನೆಲ್ಲೆಡೆಯಿಂದ ಬಂದು ಸುಮಾರು ಎರಡು ಸಾವಿರ ಕಲಾವಿದರು ವಾಲಗ, ಕೊಳಲು, ಶಂಖ, ಜಾಗಟೆ, ಚೆಂಡೆ ವಾದನ ಮೊದಲಾದ ಕಲಾಸೇವೆ ಅರ್ಪಿಸುವರು.ಶಿವರಾತ್ರಿ ಪ್ರಯುಕ್ತ ರಾಜ್ಯದ ವಿವಿಧ ಊರುಗಳಿಂದ ಕೆ.ಎಸ್. ಆರ್.ಟಿ.ಸಿ. ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
-
Mandya13 hours agoಬೂದನೂರು ಗ್ರಾ.ಪಂ. ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಮುಂದೂಡಿದ ಗ್ರಾಮಸ್ಥರು
-
Hassan21 hours agoಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್ಚೇಂಜ್ ಮೇಳ
-
State15 hours agoಫಿಲ್ಮ್ ಚೇಂಬರ್ನಲ್ಲೇ ಹೃದಯಾಘಾತದಿಂದ ಜೊ ಸೈಮನ್ ಸಾ*ವು
-
Hassan20 hours agoರಾಜ್ಯ ಸರ್ಕಾರದಿಂದ ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿ: ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
-
Mandya17 hours agoಪಾಂಡವಪುರ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿ
-
Manglore17 hours agoಮಂಗಳೂರು: ಬೆಂಗಳೂರಿನಿಂದ ಮಾದಕದ್ರವ್ಯ ಖರೀದಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಅರೆಸ್ಟ್
-
Chamarajanagar17 hours agoಕುಡಿಯುವ ನೀರಿಗೆ ಸಮಸ್ಯೆಗೆಯಾಗದಂತೆ ಕ್ರಮ ವಹಿಸಲು ಶಾಸಕ ಮಂಜುನಾಥ್ ಸಲಹೆ
-
Mysore17 hours agoನಾಳೆ 1 ಲಕ್ಷ ಜನರಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಠಣೆ
