Connect with us

State

ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ

Published

on

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹ ಜ್ಯೋತಿ ಯೋಜನೆ ಮಹತ್ವದ್ದಾಗಿದೆ. ಈ ಯೋಜನೆಯಲ್ಲಿ 200 ಯೂನಿಟ್‌ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈವರೆಗಿನ ನಿಯಮದಂತೆ ಗ್ರಾಹಕರು ತಾವು ಬಳಕೆ ಮಾಡಿದ 200 ಮೀಟರ್‌ ಒಳಗಿನ ವಿದ್ಯುತ್ ಯೂನಿಟ್‌ಗೆ ಹೆಚ್ಚುವರಿಯಾಗಿ 10% ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಇದೀಗ ಬದಲಾವಣೆಯನ್ನು ತರಲಾಗಿದೆ. ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರ ಪ್ರಕಾರ ಈವರೆಗೆ ನೀಡಲಾಗುತ್ತಿದ್ದ ಶೇ 10% ಬದಲಾಗಿ 10 ಯೂನಿಟ್‌ ವಿದ್ಯುತ್ ರಿಯಾಯಿತಿ ನೀಡಲು ನಿರ್ಧಾರ ಮಾಡಲಾಗಿದೆ. ಇದರಿಂದ ಅತಿ ಕಡಿಮೆ ವಿದ್ಯುತ್ ಬಳಕೆದಾರನಿಗೆ ಹೆಚ್ಚು ಲಾಭ, 200 ಯೂನಿಟ್ ಹತ್ತಿರದವರೆಗೂ ವಿದ್ಯುತ್ ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ ಈ ಹೊಸ ನಿಯಮದಿಂದ ಯೂನಿಟ್ ಗಳ ಲೆಕ್ಕಾಚಾರದಲ್ಲಿ ಉಚಿತವಾಗಿ ಸಿಗುವ ಯೂನಿಟ್ ಗಳಲ್ಲಿ ಕೊಂಚ ಇಳಿಕೆಯಾಗಲಿದೆ.


ಉದಾಹರಣೆಗೆ ಓರ್ವ ಗ್ರಾಹಕ ಸರಾಸರಿಯಾಗಿ 48 ಯೂನಿಟ್‌ ವಿದ್ಯುತ್ ಬಳಕೆ ಮಾಡಿದರೆ ಈವರೆಗಿನ ನಿಯಮಾವಳಿ ಪ್ರಕಾರ ಅದಕ್ಕೆ 10% ಹೆಚ್ಚುವರಿಯಾಗಿ ರಿಯಾಯಿತಿಯನ್ನು ನೀಡಿ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿತ್ತು. ಅಂದರೆ, ಆತನು 4.8 ಯೂನಿಟ್ ಗಳನ್ನು ಹೆಚ್ಚುವರಿಯಾಗಿ ಬಳಸಬಹುದಿತ್ತು. ಆದರೆ ಇದೀಗ ಶೇ. 10ಕ್ಕೆ ಬದಲಾಗಿ 10 ಯೂನಿಟ್‌ ಮಾಡಲಾಗಿದೆ. ಅಂದರೆ, 48 ಯೂನಿಟ್ ಬಳಕೆ ಮಾಡುತ್ತಿದ್ದ ಗ್ರಾಹಕನಿಗೆ ಇನ್ನು ಮುಂದೆ 58 ಯೂನಿಟ್ ಸಿಗಲಿದೆ.
ಆದರೆ, ಸರ್ಕಾರದ ಈ ನಿರ್ಧಾರದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ನಷ್ಟ ಆಗಲಿದೆ. ಉದಾಹರಣೆ ಓರ್ವ ಗ್ರಾಹಕ 150 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಗೃಹ ಜ್ಯೋತಿ ಯೋಜನೆ ಪ್ರಕಾರ 10% ಸೇರಿಸಿ ಉಚಿತ ಕೊಡುವುದರಿಂದ 165 ಯೂನಿಟ್‌ ವಿದ್ಯುತ್ ಬಳಕೆಗೆ ಅವಕಾಶ ಇತ್ತು. ಆದರೆ ಇದೀಗ ಶೇ. 10 ಬದಲಾಗಿ 10 ಯೂನಿಟ್‌ ನೀಡುತ್ತಿರುವುದರಿಂದ 160 ಯೂನಿಟ್ ಬಳಕೆ ಮಾಡಬಹುದುದಾಗಿದೆ. 5 ಯೂನಿಟ್‌ ಹೆಚ್ಚುವರಿಯಾಗಿ ಬಳಸುವ ಅವಕಾಶ ತಪ್ಪಲಿದೆ. ಹೆಚ್ಚು ಯೂನಿಟ್ ಗಳನ್ನು ಬಳಸುವವರಿಂದ ಕೆಲವು ಯೂನಿಟ್ ಗಳನ್ನು ಕಡಿತಗೊಳಿಸಿ, ವಿದ್ಯುತ್ ಇಲಾಖೆಗೆ ಆಗುತ್ತಿದ್ದ ಹೆಚ್ಚುವರಿ ಹೊರೆ ತಪ್ಪಿಸಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

State

ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ: ಆರೋಪಿ ರನ್ಯಾರಾವ್‌ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Published

on

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಎ1 ಆರೋಪಿ ರನ್ಯಾರಾವ್‌ ಹಾಗೂ ಎ2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠವೂ ಆದೇಶ ಹೊರಡಿಸಿದೆ.

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ನಟಿ ರನ್ಯಾರಾವ್‌ ಹಾಗೂ ಆಪ್ತ ತರುಣ್ ರಾಜ್ ಜಾಮೀನು ಕೋರಿ ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆಯನ್ನು ಇಂದು(ಏಪ್ರಿಲ್‌.26) ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ವಿಶ್ವಜಿತ್ ಏಕಸದಸ್ಯ ಪೀಠವೂ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತೀರ್ಪು ನೀಡಿದೆ.

ನಟಿ ರನ್ಯಾರಾವ್‌ ಅವರ ಜಾಮೀನು ಅರ್ಜಿ ಇಲ್ಲಿಯವರೆಗೆ 2 ಬಾರಿ ವಜಾ ಆಗಿದೆ. ಹೀಗಾಗಿ ಇನ್ನೂ ಮುಂದಿನ ಒಂದು ವರ್ಷಗಳ ಕಾಲ ರನ್ಯಾರಾವ್ ಖಾಯಂ ವಿಳಾಸ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಬೇಕಾಗುತ್ತದೆ.

Continue Reading

State

ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

Published

on

ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ಅವರು ನಿಧನರಾಗಿದಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸಿದ್ದ ಖ್ಯಾತ ಭೌತ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅವರ ನಿಧನದಿಂದ ಆಘಾತವಾಗಿದೆ ಎಂದಿದ್ದಾರೆ.

ಕರ್ನಾಟಕ ಮೂಲದ ಡಾ.ಕಸ್ತೂರಿರಂಗನ್ ಅವರಿಗೆ ನಮ್ಮ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿ ಇತ್ತು. ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಗೆ ದೀರ್ಘ ಕಾಲ ಅಧ್ಯಕ್ಷರಾಗಿ ಮತ್ತು ಕೇಂದ್ರದ ಬಾಹ್ಯಾಕಾಶ ಮಂಡಳಿಯ ನಿರ್ದೇಶಕರಾಗಿ ಡಾ.ಕಸ್ತೂರಿ ರಂಗನ್ ಅವರು ಸಲ್ಲಿಸಿದ ಸೇವೆಯಿಂದಾಗಿ ಭಾರತ ಇಂದು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.

ಡಾ.ಕಸ್ತೂರಿ ರಂಗನ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

Continue Reading

State

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದ ಪ್ರಕರಣ: ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ಆರ್‌.ಅಶೋಕ್‌

Published

on

ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ಅವರ ಧಾರ್ಮಿಕ ಭಾವನೆಗಳಿಗೆ, ಹಕ್ಕುಗಳಿಗೆ ಚ್ಯುತಿ ತಂದ ರಾಜ್ಯ ಸರ್ಕಾರದ ನಡೆ ವಿರುದ್ಧ ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿ, ನಾಗರೀಕರ ಸಂವಿಧಾನದತ್ತ ಹಕ್ಕುಗಳು ಹಾಗು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ, ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಏಪ್ರಿಲ್.23 ರಂದು, ರಾಜ್ಯಾದ್ಯಂತ ಹಲವಾರು ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಭಯಭೀತ ಧಾರ್ಮಿಕ ಚಿಹ್ನೆಗಳಾದ ಜನಿವಾರ (ಯಜ್ಞೋಪವೀತ), ಶಿವದಾರ ಇತ್ಯಾದಿಗಳನ್ನು ತೆಗೆದುಹಾಕಲು ಒತ್ತಾಯಿಸಿ ಕರ್ನಾಟಕ ಸರ್ಕಾರವು ವೈಯಕ್ತಿಕ ನಂಬಿಕೆಗಳ ಉಲ್ಲಂಘನೆಯ ಘಟನೆಗಳ ಬಗ್ಗೆ ನಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದಿದ್ದಾರೆ.

ಇಂತಹ ಕಾನೂನುಬಾಹಿರ ಮತ್ತು ತಾರತಮ್ಯದ ಅಭ್ಯಾಸಗಳಿಂದ ಭವಿಷ್ಯವು ಅಪಾಯಕ್ಕೆ ಸಿಲುಕಬಾರದು ಎಂದು ನಾಗರಿಕರ, ವಿಶೇಷವಾಗಿ ಯುವಕರ ಹಕ್ಕುಗಳು ಮತ್ತು ಘನತೆಯನ್ನು ಕಾಪಾಡಲು ತ್ವರಿತ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ನಾನು ಆಯೋಗಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

Continue Reading

Trending

error: Content is protected !!