Mysore
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾ ಪತಿ 42 ಕೋಟಿ ರೂ. ಹಣ ಜಪ್ತಿ – ಕಳೆದ ಬಿಜೆಪಿ ಸರ್ಕಾರ ಪ್ರಬಲ ಸಚಿವರ ಸೇರಿದಾಗಿದೆ – ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಮೈಸೂರು: ರಾಜ್ಯ ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲಿ ಐಟಿ ಅಧಿಕಾರಿಗಳು ಜಪ್ತಿ ಮಾಡಿರುವ ಹಣ ಕಳೆದ ಬಿಜೆಪಿ ಸರ್ಕಾರ ಪ್ರಬಲ ಸಚಿವರ ಸೇರಿದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅನುಮಾನ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾ ಪತಿ 42 ಕೋಟಿ ರೂ. ಹಣ ಜಪ್ತಿಯಾಗಿದೆ. ಆದರೆ, ಇಲ್ಲಿಯವರೆಗೂ ಐಟಿ ಹಣದ ಕುರಿತು ಸ್ಪಷ್ಟತೆ ನೀಡಿಲ್ಲ. ಹಣ ಜಪ್ತಿಯಾಗುವ ನಾಲ್ಕು ಗಂಟೆ ಹಿಂದ ಆ ಹಣ ಎಲ್ಲಿತ್ತು? ಯಾವ ಪಕ್ಷದವರು ಯಾರಿಗಾಗಿ ಹಣ ಇಟ್ಟಿದ್ದರು? ಎಂದು ಪ್ರಶ್ನಿಸಿದರು.
ಬಿಜೆಪಿ ಮತ್ತು ಜೆಎಡಿಎಸ್ ಪಕ್ಷದವರು ಇಟ್ ಅಂಡ್ ರನ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮಸಿ ಬಳಿಯು ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ಪ್ರಬಲ ಸಚಿವರ ಹಣ ಇದಾಗಿದೆ. ಹೀಗಾಗಿ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ದಾಖಲೆ ಬಹಿರಂಗ ಪಡಿಸಲಿದೆ ಎಂದು ಆಗ್ರಹಸಿದರು.
ಅಧಿಕಾರಿಗಳು ಕೇವಲ 42 ಕೋಟಿ ರೂ.ಹಣ ಜಪ್ತಿಯಾಗಿದೆ ಎನ್ನುತ್ತಾರೆ. ಆದರೆ, 200 ಕೋಟಿ ರೂ.ಹಣ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ನಗಗೆ ಲಭಿಸಿದೆ. ಈ ಹಣ ಯಾರಿಗೆ ಅಮಾಲಿ ರೂಪದಲ್ಲಿ ಯಾರಿಗೆ ಹೋಗುತ್ತಿತ್ತು. ಆತ ಯಾವ ಪಕ್ಷದವರಿಗೆ ಸೇರಿತಿತ್ತು ಎಂಬುದನ್ನು ಬಹಿರಂಗ ಪಡಿಸಿ ಎಂದು ಹೇಳಿದರು.
ಇಲ್ಲಿಯವರೆಗೂ ಎನ್‌ಡಿಎ ಸರ್ಕಾರ 4000 ಇಡಿ ಮತ್ತು 2700 ಐಟಿ ದಾಳಿ ನಡೆಸಿದೆ. ಇದರಲ್ಲಿ ಬೆರಳೆಣಿಕಷ್ಟು ಸ್ವ ಪಕ್ಷದವರಿಲ್ಲ. ಜೊತೆಗೆ ಈ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರು ವಿರಳ. ಬಿಜೆಪಿ ವಿರುದ್ಧ ಮಾತನಾಡುವವರ ವಿರುದ್ದ ಗನ್ ಪಾಯಿಂಟ್‌ನಲ್ಲಿ ಇಡುವಂತೆ ಐಟಿ, ಇಡಿಯನ್ನು ದಾಳಿ ನಡೆಸಲಾಗುತ್ತಿದೆ. ಮನಮೋಹನ್ ಸಿಂಗ್ ಅವರ ಯುಪಿಎ ಅವಧಿಯಲ್ಲಿ ನಡೆದ 113 ರೇಡ್‌ನಲ್ಲಿ 80 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು.
ಖಾಸಗಿ ಅವರಿಂದ ವಿದ್ಯುತ್ ಖರೀದಿಸಿ ಬಿಜೆಪಿ: ಕಳೆದ ಬಿಜೆಪಿ ಸರ್ಕಾರದಲ್ಲಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಕೊಣುರು ರಾಜು ಎಂಬತ ರಾಜ್ಯದ ವಿದ್ಯುತ್ ಉತ್ಪಾದನ ಘಟಕಗಳನ್ನು ಮುಚ್ಚಿ ಖಾಸಗಿಯವರಿಂದ ಖರೀದಿಸಿ ರಾಜ್ಯದ ಬೊಕ್ಕಸಕ್ಕೆ 40 ಸಾವಿರ ಕೋಟಿ ನಷ್ಟ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಸಾವಿರಾರು ಕೋಟಿ ರೂ.ಕಮಿಷನ್ ಸಿಕ್ಕಿದೆ. ರಾಜ್ಯದಲ್ಲಿ 27 ವಿದ್ಯುತ್ ಉತ್ಪಾದನ ಘಟಕಗಳಿವೆ. ಪ್ರಸ್ತುತ ರಾಜ್ಯಕ್ಕೆ 16 ಸಾವಿರ ಮ್ಯಾಗ ವ್ಯಾಟ್ ವಿದ್ಯುತ್ ಅವಶ್ಯವಾಗಿದೆ. ಇದನ್ನು ಪೂರೈಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಆದರೆ, ಇದೆ ಅವಕಾಶ ಬಿಜೆಪಿಯವರಿಗೆ ಸಿಕ್ಕಿದ್ದರೆ ಕಮಿಷನ್ ಹಬ್ಬ ಮಾಡಿಕೊಳ್ಳುತ್ತಿದ್ದರು. ಗೃಹಜ್ಯೋತಿ ಬಳಕೆಯಿಂದ ಶೇ.18ರಷ್ಟು ವಿದ್ಯುತ್ ಕಳ್ಳತನ ಕಡಿಮೆಯಾಗಿದೆ ಎಂದರು.
2014ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಗೆ ಹೆಚ್ಚು ಯೋಜನೆಗಳನ್ನು ತರಲಾಗಿದೆ. ಇದು ರಾಷ್ಟ್ರಮಟ್ಟದಲ್ಲಿಯು ಸದ್ದು ಮಾಡಿದೆ. ಆದರೆ, ಬಿಜೆಪಿಯವರು ಒಂದೇ ಒಂದು ಮ್ಯಾಗ ವ್ಯಾಟ್ ಉತ್ಪಾದನೆ ಯೋಜನೆ ತರಲಿಲ್ಲ. ಬದಲಾಗಿ ಮೂರುವರೆ ವರ್ಷದಲ್ಲಿ 9 ಬಾರಿ ವಿದ್ಯುತ್ ಬಿಲ್ ಹೆಚ್ಚಿಸಿ ಜನತೆ ಕಾರೆಂಟ್ ಶಾಕ್ ನೀಡಿದ್ದಾರೆ ಎಂದು ಕಿಡಿಕಾರಿದರು.
ಡಿಕೆಶಿ ಜೈಲಿಗೆ ಕಳುಹಿಸುವುದು ಕುಮಾರಸ್ವಾಮಿ ಉದ್ದೇಶ: ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಿರುವುದು ಸಹಿಸದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಸತ್ಯ ಹರಿಶ್ಚಂದ್ರರ ಮೊಮಗ ಕುಮಾರಸ್ವಾಮಿ ಬಾಯಿಬದಂತೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅವರು ಕುಮಾರಸ್ವಾಮಿ ಅವರನ್ನು ಸುಫಾರಿ ಕೊಟ್ಟು ಮೈತ್ರಿ ಮಾಡಿಕೊಂಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಎಲ್ಲಿದೀಯಾಪ್ಪ: ಮಹಿಷ ದಸರಾ ಆಚರಣೆ ವಿರೋಧಿಸಿ ದಲಿತರ ಭಾವನೆಗೆ ಧಕ್ಕೆ ತಂದ ಪ್ರತಾಪ್ ಸಿಂಹ ನೆನ್ನೆ ಯಾವ್ ರೆಸಾರ್ಟ್‌ನಲ್ಲಿದ್ದರು. ಪ್ರತಾಪ್ ಸಿಂಹ್ ಎಲ್ಲಿದೀಯಾಪ್ಪ! ಕಿಡಿ ಹೊತ್ತಿಸುವ ರಾಜಕಾರಣ ಮಾಡುವ ಬದಲು ಬಿಜೆಪಿ ಸರ್ಕಾರದ ಸಾಧನೆಗಳನ್ನಿಟ್ಟು ಚರ್ಚೆ ಮಾಡಿ. ಕುಶಾಲನಗರಕ್ಕೆ ರೈಲು ತರ್ತೀನಿ ಅಂದ್ರೆ ಏನಾಯ್ತು? ಜನತೆ ಪ್ರತಾಪ್ ಸಿಂಹ ರೈಲು ಬಿಡುವುದನ್ನು ಅರ್ಥ ಮಾಡಿಕೊಳ್ಳಬೇಕು.
– ಆರ್.ಲಕ್ಷ್ಮಣ್, ಕೆಪಿಸಿಸಿ ವಕ್ತಾರ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಮಾಧ್ಯಮ ವಕ್ತಾರ ಕೆ.ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Mysore
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಲಯ ಮಟ್ಟದ ಸಾಧನ ಸಮಾವೇಶ

ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಸಾಲಿಗ್ರಾಮ ವಲಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಸಾಲಿಗ್ರಾಮ ವಲಯ ಮಟ್ಟದ ಸಾಧನ ಸಮಾವೇಶವನ್ನು ನಡೆಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕರ್ಪೂರವಳ್ಳಿಯ ಜಂಗಮ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿರವರು ವಹಿಸಿ ಸಮಾವೇಶಕ್ಕೆ ಚಾಲನೆ ನೀಡಿದರು.
ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟಿನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಕೆ.ಮದುಚಂದ್ರ ಯೋಜನೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ಕರ್ತಾಳು ಗ್ರಾಮದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಒಂದುವರೆ ಲಕ್ಷ ರೂ ಮಂಜೂರಾತಿ ಆದೇಶ ಪತ್ರ, ಕರ್ಪೂರವಳ್ಳಿ ಜಂಗಮ ಮಠದ ಶಾಲೆಗೆ 10 ಬೆಂಚು ಡೆಸ್ಕ್ ಗಳ ಮಂಜೂರಾತಿ ಪತ್ರ, ಕರ್ಪೂರವಳ್ಳಿ ಗ್ರಾಮದ ಲಕ್ಷ್ಮಮ್ಮ ಎಂಬುವರಿಗೆ ಮಾಶಾಸನ ಮಂಜುರಾತಿ ಪತ್ರ, ಜನ ಮಂಗಳ ಕಾರ್ಯಕ್ರಮದಲ್ಲಿ ಸಣ್ಣಮ್ಮ ಎಂಬುವರಿಗೆ ವಾಟರ್ ಬೆಡ್ ಮಂಜುರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಸ್ವಾಮಿ, ಪಿಡಿಓ ಕುಳ್ಳೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಬಿ.ಶೇಖರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ, ವಲಯ ಮೇಲ್ವಿಚಾರಕ ಧರಣಪ್ಪಗೌಡ, ಕರ್ಪೂರವಳ್ಳಿ ಸೇವಾ ಪ್ರತಿನಿಧಿ ಉಮೇಶ್, ಸೇವಾ ಪ್ರತಿನಿಧಿಗಳು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಸೇರಿದಂತೆ ಹಲವರು ಸಾಧನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು
ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
Crime
ಪತ್ನಿ ಜೊತೆ ಅನೈತಿಕ ಸಂಬಂಧ ಹಿನ್ನೆಲೆ; ಪ್ರಿಯತಮನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ

ನಂಜನಗೂಡು: ಪತ್ನಿ ಜೊತೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯತಮನನ್ನು ಮಚ್ಚಿನಿಂದ ಕೊಚ್ಚಿ ಪತಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 39 ವರ್ಷದ ಮಹದೇವಸ್ವಾಮಿ ಮೃತ ದುರ್ಧೈವಿಯಾಗಿದ್ದಾನೆ. 40 ವರ್ಷದ ಸೋಮಯ್ಯ ಎಂಬುವವರ ಪತ್ನಿ ಜೊತೆ ಮಹದೇವಸ್ವಾಮಿ ಅಕ್ರಮ ಸಂಬಂಧ ಹೊಂದಿದ್ದ ಎಂದು ಗ್ರಾಮದ ಮಾರಮ್ಮನ ದೇವಾಲಯದಲ್ಲಿ ಮಲಗಿದ್ದ ಮಹದೇವಸ್ವಾಮಿಯನ್ನು ಸೋಮಯ್ಯ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಸೋಮಯ್ಯ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಡಿವೈಎಸ್ ಪಿ ಗೋವಿಂದರಾಜು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mysore
ರೈತರು ಹೈನುಗಾರಿಕೆಗೆ ಒತ್ತು ನೀಡಿ ಶಾಸಕ ಡಿ. ರವಿಶಂಕರ್





-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Hassan3 hours ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Mysore6 days ago
ಗೃಹಲಕ್ಷ್ಮಿ : 1,18,000 ರೂಪಾಯಿ ಹಣ ನಾಡದೇವತೆ ತಾಯಿ ಚಾಮುಂಡೇಶ್ವ ದೇಗುಲಕ್ಕೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.