Connect with us

Mysore

ಗಿರಿಜನರಿಗೆ ಅರಣ್ಯ ಹಕ್ಕುಪತ್ರ ವಿತರಿಸಿದ ಡಾ. ಎಚ್.ಸಿ.ಮಹದೇವಪ್ಪ

Published

on

ಮೈಸೂರು: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಎಚ್.ಡಿ.ಕೋಟೆ ತಾಲ್ಲೂಕಿನ ಭೋಗಾಪುರ, ಹುಲ್ಮೆಟ್ಲು, ಗುಂಡ್ರೆ, ಮಚ್ಚೂರು ಗ್ರಾಮದಲ್ಲಿನ ಬುಡಕಟ್ಟು ಸಮುದಾಯದ 249 ಕುಟುಂಬಳಿಗೆ 2006ರ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕುಪತ್ರಗಳನ್ನು ಬುಧವಾರ ವಿತರಿಸಿದರು

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಡಿ.ಪಿ.ಕುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಹಕ್ಕುಪತ್ರ ವಿತರಿಸಿ ಮಾತನಾಡಿದ ಸಚಿವರು, ನಿಮ್ಮ ಕೃಷಿ ಭೂಮಿಯಲ್ಲಿ ನೀವೇ ವ್ಯವಸಾಯ ಮಾಡಬೇಕು. ಬೇರೆಯವರು ಬಂದು ನಿಮ್ಮ ಭೂಮಿ ಕೇಳಿದರೆ ಮಾರಾಟ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಅರಣ್ಯ ಹಕ್ಕು ಕಾಯ್ದೆಯನ್ನು ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರ ನೇತೃತ್ವದ ಕಾಂಗ್ರೇಸ್ ಸರ್ಕಾರವು ಅರಣ್ಯದಲ್ಲಿ 70 ವರ್ಷಗಳಿಂದ ವಾಸಿಸುವ ಗಿರಿಜನರ ಹೆಸರಿಗೆ ಖಾತೆ ಮಾಡಿಕೊಡಲು ಜಾರಿಗೆ ತಂದರು. ಭೂ ಮಾಲೀಕರಾಗುವುದು ಒಂದು ಬಗೆಯ ಸಾಮಾಜಿಕ ಸಮಾನತೆಯ ಸಂಕೇತವಾಗಿದೆ. ನಿಮ್ಮ ಭೂಮಿಯಲ್ಲಿ ಅಗತ್ಯವಿರುವ ಆಹಾರ ಧಾನ್ಯಗಳನ್ನು ಬೆಳೆಯಬೇಕು‌. ಪೌಷ್ಠಿಕ ಆಹಾರ ಸೇವನೆ ಮಾಡುವ ಮೂಲಕ ನೀವು ಮತ್ತು ನಿಮ್ಮ ಮಕ್ಕಳು ಹೆಚ್ಚು ಆರೋಗ್ಯವಂತರಾಗಬೇಕು ಎಂದು ಸಲಹೆ ನೀಡಿದರು.

ಹಾಡಿಯಲ್ಲಿ ವಾಸಿಸುವ ಜನರು ಕಾಡಿನ ಮಕ್ಕಳಾಗಿದ್ದು, ಕಾಡನ್ನು ಸಂರಕ್ಷಿಸುವಲ್ಲಿ ನಿಮ್ಮ ಪಾತ್ರ ಹಿರಿದು‌. ಈ ಹಿನ್ನೆಲೆ ನೀವು ಯಾವುದೇ ದುಶ್ಚಟಗಳಿಗೆ ಒಳಗಾಗಬಾರದು‌. ಇದರಿಂದ ಆರೋಗ್ಯ ಕೆಡುತ್ತದೆ. ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಅನಿಮೀಯ ಮುಕ್ತ ಮಾಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಇಲ್ಲಿನ ಎಲ್ಲಾ ಮಹಿಳೆಯರು ಪೌಷ್ಠಿಕಯುತ ಆಹಾರ ಸೇವಿಸಬೇಕು ಎಂದು ಹೇಳಿದರು.

ಹಾಡಿಗಳ ಜನರ ಜೀವನ ಸುಧಾರಿಸಲು ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಸರ್ಕಾರದ ಯೋಜನೆಗಳು ಗಿರಿಜನರಿಗೆ ತಲುಪಿಸುವಲ್ಲಿ ಕ್ರಮವಹಿಸಲಾಗುವುದು. ಅನುವಂಶಿಕವಾಗಿ ಬರುವ ಕಾಯಿಲೆಗಳನ್ನು ತಡೆಗಟ್ಟಲು ಸಂಬಂಧಗಳಲ್ಲದೆ ಬೇರೆ ಕಡೆಗೆ ವಿವಾಹವಾಗುವುದನ್ನು ರೂಢಿಸಿಕೊಳ್ಳಿ ಎಂದು ತಿಳಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಅವರು ಮಾತನಾಡಿ, ಈ ಭಾಗದಲ್ಲಿ ಶೈಕ್ಷಣಿಕ ಸೌಲಭ್ಯ ಅಗತ್ಯವಿದೆ. ಒಂದರಿಂದ ಪಿಯುಸಿ ವರಗೆ ತರಗತಿಗಳನ್ನು ತೆರೆದು ಇಲ್ಲಿನ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ನೆರವು ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಮೂಲಕ ಜನರಿಗೆ ದಿನನಿತ್ಯ ಕೆಲಸ ನೀಡಬೇಕು. ಸಣ್ಣ ಕೈಗಾರಿಕೆಯನ್ನು ಆರಂಭಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿ ಆರ್ಥಿಕ ಸಬಲರನ್ನಾಗಿಸಲು ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ, ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್, ತಹಸೀಲ್ದಾರ್ ಶ್ರೀನಿವಾಸ್, ತಾಲ್ಲೂಕು ಪಂಚಾಯತ್ ಇಒ ಧರಣೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ವಾಂತಿ-ಬೇದಿಯಿಂದ ತತ್ತರಿಸಿದ ಗ್ರಾಮಸ್ಥರು ..! ತಬ್ಬಿಬ್ಬಾದ ಅಧಿಕಾರಿಗಳು..!*

Published

on

ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಕಂಡು ಬಂತು ಭೀಕರ ಕಾಲರಾ..! ಆರೋಗ್ಯ ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ

 

ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿರುವ ವರುಣ ವಿಧಾನಸಭಾ ಕ್ಷೇತ್ರದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಭೀಕರ ಕಾಲರ ಕಾಯಿಲೆ ಕಂಡುಬಂದು ತಗಡೂರು ಗ್ರಾಮಸ್ಥರು ತತ್ತರಿಸಿದ್ದಾರೆ.

ಈಗಾಗಲೇ ತಗಡೂರು ಗ್ರಾಮದಲ್ಲಿ 25 ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 114 ಕಾಲರ ರೋಗಿಗಳು ಕಂಡು ಬಂದಿದ್ದಾರೆ. ಇದರಲ್ಲಿ 5 ರೋಗಿಗಳನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ತಗಡೂರು ಗ್ರಾಮ ಪಂಚಾಯಿತಿಯ 1,2,3,ನೇಯ ವಾರ್ಡಿನಲ್ಲಿ ವಾಸಿಸುತ್ತಿರುವ ಜನರಿಗೆ ಕಾಲರ ಕಾಯಿಲೆ ವಾಂತಿ ಬೇದಿ ಕಂಡು ಬಂದಿದೆ. ಗ್ರಾಮದಲ್ಲಿ ಬರೋಬರಿ 12 ಕೈ ಪಂಪುಗಳಿದ್ದು ನಾಲ್ಕು ಕೈ ಪಂಪುಗಳ ನೀರನ್ನು ಕುಡಿಯಲು ಯೋಗ್ಯವಿಲ್ಲ ಎಂಬ ಆತಂಕಕಾರಿ ವರದಿ ಮಾಹಿತಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡಿಲ್ಲ. ಗ್ರಾಮಕ್ಕೆ ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹಾಗೂ ಜಿಲ್ಲಾ ಕಾಲಾರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ ತಾಲ್ಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೀಕರ ವಾಂತಿ ಭೇದಿ ಹಿಂದ 114 ರೋಗಿಗಳು ತಗಡೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ಪ್ರತಿ ಮನೆ ಮನೆಗೆ ಒರಸ್ ಪೌಡರ್ ಕಡ್ಡಾಯವಾಗಿ ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗಿದೆ. ತಗಡೂರು ಗ್ರಾಮದಲ್ಲಿ ಕಾಲರ ಕಾಯಿಲೆ ಕಂಡುಬಂದಿರುವುದು ಕೈ ಪಂಪಿನಲ್ಲಿರುವ ಕಲುಷಿತ ನೀರು ಸೇವನೆ ಎಂದು ಬೆಳಕಿಗೆ ಬಂದಿದೆ. ಹತ್ತಕ್ಕೂ ಹೆಚ್ಚು ವೈದ್ಯಾಧಿಕಾರಿಗಳನ್ನು ಗ್ರಾಮದಲ್ಲಿ ಬಿಡು ಬಿಟ್ಟಿದ್ದಾರೆ. ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯ ಜೊತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕಾಲರ ಕಾಯಿಲೆ ತಡೆಗಟ್ಟಲು ಮುಂದಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ

ಸಿದ್ದರಾಮಯ್ಯನವರ ತವರು ಕ್ಷೇತ್ರದ ತಗಡೂರು ಗ್ರಾಮದಲ್ಲಿ ಭೀಕರ ಕಾಲರ ಕಾಯಿಲೆ ಕಂಡು ಬಂದಿರುವುದು ಜಡ್ಡು ಗಟ್ಟಿದ ಅಧಿಕಾರಿಗಳ ನಿರ್ಲಕ್ಷ್ಯ ಕಾರ್ಯವೈಕರಿ ಎಂದು ಸಾರ್ವಜನಿಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ.

ಪಿಡಿಒ ದಿವಾಕರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿರುವ ದೆಸೆಯಿಂದ ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.

Continue Reading

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

Published

on

ನಂಜನಗೂಡು ಮೇ.19

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಮಹಾಗಣಪತಿ, ನವಗ್ರಹ,ನಾಗದೇವತೆ ಮತ್ತು ಶಿಖರ ಕಳಶ ಪ್ರತಿಷ್ಠಾಪನೆ ಮಾಡಲಾಯಿತು.


ಗೋ ದೇವತೆ ಗಂಗಾ ಪೂಜೆಯೊಂದಿಗೆ ಅಗ್ರೋದಕ ಸಹಿತ ಯಾಗ ಶಾಲೆ ಪ್ರವೇಶ ಮಾಡಿ ಗಣಪತಿ ಪೂಜೆ ಮಾಡಿ ಸ್ವಸ್ತಿ ಪುಣ್ಯಹ ವಾಹನ, ಪಂಚಗವ್ಯ ಸಾಧನ, ವಾಸ್ತು ಪೂಜೆ ಮತ್ತು ರಾಕ್ಸೊಘ್ನ ಹೋಮ, ಪರ್ಯಾಗ್ನಿ ಕರಣ ಶಿಖರ ಕಲಶ ಹಾಗೂ ನೂತನ ಶಿಲಾಮೂರ್ತಿಗೆ ಜಲಾದಿ ವಾಸ, ಧಾನ್ಯ ದಿವಾಸ, ಮೂರ್ತಿ ಸಂಸ್ಕಾರ ನ್ಯಾಸ ವಿಧಿ ಶಯನಾದಿ ವಾಸ ಮಾಡಲಾಯಿತು . ಬೆಳಿಗ್ಗೆ 4.50 ರಿಂದ 5.50ರ ವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತ ಶುಭ ಲಗ್ನದಲ್ಲಿ ಅಷ್ಟ ಬಂದ ಪ್ರತಿಷ್ಠಾಪನೆ

ನೆರವೇರಿಸಿದರು. ಅಯೋಧ್ಯೆ ಶ್ರೀಬಾಲ ರಾಯನ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ರವರ ಕೈಚಳಕದಲ್ಲಿ ಮೂಡಿ ಬಂದಿರುವ ಶ್ರೀ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಮಹಾ ಮಂಗಳಾರತಿ

ಮಾಡಲಾಯಿತು. ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

Published

on

ಪಿರಿಯಾಪಟ್ಟಣ: ದಂಪತಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಗೊಲ್ಲರ ಬೀದಿಯಲ್ಲಿ ನಡೆದಿದೆ.

ಪಟ್ಟಣದ ಬಿ.ಎಂ ರಸ್ತೆಯ ಪ್ರವಾಸಿ ಮಂದಿರ ಬಳಿ ಕ್ಯಾಂಟೀನ್ ವ್ಯಾಪಾರ ನಡೆಸುತ್ತಿದ್ದ ಪ್ರಕಾಶ್ (51) ಹಾಗೂ ಚಿಲ್ಲರೆ ಅಂಗಡಿ ಮತ್ತು ಹಲ್ಲರ್ ಮಿಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಪ್ರಕಾಶ್ ಅವರ ಪತ್ನಿ ಯಶೋದ (48) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದಂಪತಿಗಳು,

ಗುರುವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದ ದಂಪತಿಗಳು

ಶುಕ್ರವಾರ ಬೆಳಗ್ಗೆ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳು ತನುಶ್ರೀ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ ರಾತ್ರಿವರೆಗೂ ಹಲವಾರು ಬಾರಿ ಕರೆ ಮಾಡಿ ಕರೆ ಸ್ವೀಕರಿಸದ ಕಾರಣ ಸಂಬಂಧಿಕರಿಗೆ ಫೋನ್ ಮೂಲಕ ಮನೆಯ ಬಳಿ ತೆರಳಿ ನೋಡುವಂತೆ ಕೋರಿದಾಗ ಸಂಬಂಧಿಕರು ಮನೆಯ ಬಳಿ ತೆರಳಿ ಕಿಟಕಿ ತೆರೆದು ನೋಡಿದಾಗ  ಅನುಮಾನ ರೀತಿಯಲ್ಲಿ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ, ತಕ್ಷಣ ಪೊಲೀಸರಿಗೆ ಕರೆ ಮಾಡಿ ಪೊಲೀಸರು ಬಾಗಿಲು ಮುರಿದು ಮನೆ ಒಳಗಡೆ ಪ್ರವೇಶಿಸಿ ಶವಗಳನ್ನು ಪಟ್ಟಣದ  ಶವಗಾರಕ್ಕೆ ಸಾಗಿಸಿದ್ದಾರೆ.


ಘಟನೆ ಸಂಭಂದ ಅನುಮಾನ ವ್ಯಕ್ತಪಡಿಸಿ ಮೃತ ದಂಪತಿ ಪುತ್ರಿ ತನುಶ್ರೀ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

Trending

error: Content is protected !!