Connect with us

Chikmagalur

ಗಾಂಜಾ ಮಾರಲು ಯತ್ನ, ಓರ್ವನನ್ನು ಬಂಧಿಸಿದ ಪೊಲೀಸರು

Published

on

ಚಿಕ್ಕಮಗಳೂರು :ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಬೇಲೂರು ಮೂಲದ ಇದ್ರಿಸ್ ಪಾಷಾ (33) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಚಾರ್ಮಾಡಿಗೆ ಗಾಂಜಾ ಮಾರಲು ತೆರಳುತ್ತಿದ್ದ ಆರೋಪಿಯನ್ನ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಹೊರನಾಡು ಸಂಪರ್ಕಿಸುವ ರಸ್ತೆ ಕೊಟ್ಟಿಗೆಹಾರ ಸಮೀಪದಲ್ಲೇ 1.550 ಕೆ.ಜಿ. ಗಾಂಜಾ ಹಾಗೂ ಮಾರುತಿ ಕಾರ್ ಸಮೇತ ಅಪರಾಧ ಪೊಲೀಸರು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ CEN ಅಪರಾಧ ಪೊಲೀಸ್ ಠಾಣೆಯ ಪಿ.ಎಸ್.ಐ. ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್, ಹರೀಶ್, ರಮೇಶ್, ಮಹೇಂದ್ರ ಮತ್ತು ಮಂಜುನಾಥ್ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Chikmagalur

ರಸ್ತೆಯಲ್ಲಿ ಕಾಡು ಕೋಣ ಪ್ರತ್ಯಕ್ಷ, ಆತಂಕದಲ್ಲೇ ಜನರ ಓಡ

Published

on

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ‌ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಮುಂದುವರಿದಿದ್ದು. ಕಳಸ ತಾಲೂಕಿನ ಹಳುವಳ್ಳಿಯಿಂದ ತುಂಬಿಕುಡಿಗೆ ಸಂಪರ್ಕ‌ ಕಲ್ಪಿಸುವ‌ರಸ್ಯೆಯಲ್ಲಿ ಮುಜೆಖಾನ್ ಗ್ರಾಮದ ಸಮೀಪ ರಸ್ತೆಯಲ್ಲಿ ಒಂಟಿ‌ ಕಾಡು ಕೋಣವೊಂದು ಕಾಣಿಸಿಕೊಂಡಿದ್ದು. ವಾಹನ‌ಸವಾರರ ಮೊಬೈಲ್‌ನಲ್ಲಿ‌ ದೃಶ್ಯ ಸೆರೆಯಾಗಿದ್ದು.‌ ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ, ಕಾಡುಕೋಣ ಓಡಿಸುವ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Continue Reading

Chikmagalur

ಬಾಬಾ ಬುಡನ್ ಗಿರಿ ರಸ್ತೆಯಲ್ಲಿ ಗುಡ್ಡ ಕುಸಿತ

Published

on

ಚಿಕ್ಕಮಗಳೂರು ‌: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಇಂದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 6 ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷನೆ ಮಾಡಲಾಗಿದೆ.
ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿತವಾಗಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಸಂಚಾರ ಮಾಡುತ್ತಿದ್ದು, ಮಳೆ ಹೆಚ್ಚಾದ್ರೆ ಒಂದು ಭಾಗದ ಗುಡ್ಡವೇ, ಕುಸಿದು ಬೀಳುವ ಆತಂಕ ಶುರುವಾಗಿದೆ.

Continue Reading

Chikmagalur

ಕೆ‌ಎಸ್‌ಆರ್‌ಟಿಸಿ ‌ಬಸ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾ*ವು

Published

on

ಚಿಕ್ಕಮಗಳೂರು : ಕೆ‌ಎಸ್‌ಆರ್‌ಟಿಸಿ ಬಸ್ – ಬೈ ನಡುವೆ‌ ಮುಖಾಮುಖಿ ಡಿಕ್ಕಿ‌ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಬೈಕ್‌‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ‌ ನಡೆದಿದೆ.

ಕಡೂರು ಪಟ್ಟಣದ ಸುಭಾಷ್ ನಗರದ ನಿವಾಸಿ 21 ವರ್ಷದ ಹುಸೇನ್ ಮೃತ ದುರ್ದೈವಿಯಾಗಿದ್ದು.‌ ಬಸ್ ನಿಲ್ದಾಣದಿಂದ ಬಸ್ ಹೊರಬರುವಾಗ‌ ಈ ಅವಘಡ ಸಂಭವಿಸಿದೆ. ಘಟನೆ ಕುರಿತಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!