Health
ಗಂಟಲು ನೋವು ಇದ್ರೆ ಯೋಚ್ನೆ ಬೇಡ, ಇಲ್ಲಿದೆ ಇದಕ್ಕೆ ಪರಿಹಾರ!
ಈ ನಿಯಮವನ್ನು ಸತತ ಐದು ದಿನಗಳವರೆಗೆ ಅನುಸರಿಸಿ ಮತ್ತು ಎಲ್ಲಾ ನೋವುಗಳು ಮಾಯವಾಗುತ್ತವೆ. ಟಾನ್ಸಿಲ್ ಸಮಸ್ಯೆಗಳೂ ಕಡಿಮೆಯಾಗುತ್ತವೆ. ಶೀತ ನೋಯುತ್ತಿರುವ ಗಂಟಲಿನಿಂದ ಬಳಲುತ್ತಿದ್ದೀರಾ? ಈ ಮೂರು ಮನೆ ಸಲಹೆಗಳೊಂದಿಗೆ ನೀವು ಪರಿಹಾರವನ್ನು ಕಂಡುಕೊಳ್ಳುತ್ತೀರಿ. ಶೀತವು ಗಂಟಲು ನೋವು, ಜ್ವರ, ಉಸಿರಾಟದ ತೊಂದರೆ ಮತ್ತು ಕಿವಿನೋವಿನಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಅವಧಿಯಲ್ಲಿ ಅನೇಕ ಜನರು ಗಲಗ್ರಂಥಿಯ ಉರಿಯೂತದಿಂದ ಬಳಲುತ್ತಿದ್ದಾರೆ.

ಆದರೆ ಅಂತಹ ಸಂದರ್ಭಗಳಲ್ಲಿ ಗಲಗ್ರಂಥಿಯ ಉರಿಯೂತವನ್ನು ಕೆಲವು ಮನೆಮದ್ದುಗಳಿಂದ ಸುಲಭವಾಗಿ ಪರಿಹರಿಸಬಹುದು. ಗಲಗ್ರಂಥಿಯ ಉರಿಯೂತದ ಸಮಸ್ಯೆಯನ್ನು ತೊಡೆದುಹಾಕಲು ಈ ಮೂರು ಮನೆಮದ್ದುಗಳು ನಿಮಗೆ ಈ ನೋವಿನಿಂದ ಬಹಳ ಸುಲಭವಾಗಿ ಪರಿಹಾರವನ್ನು ನೀಡುತ್ತದೆ ಎಂದು ತಜ್ಞ ವೈದ್ಯ ಚಿನ್ಮೊಯ್ ದೇವಗುಪ್ತ ಹೇಳುತ್ತಾರೆ. ಟಾನ್ಸಿಲ್ ನೋವನ್ನು ತೊಡೆದುಹಾಕಲು, ಟಾನ್ಸಿಲ್ ನೋವಿನಿಂದ ಸುಲಭವಾಗಿ ಪರಿಹಾರವನ್ನು ಪಡೆಯಲು ನೀವು ಐದು ದಿನಗಳವರೆಗೆ ನಿಯಮಿತವಾಗಿ ಯಾವುದಾದರೂ ಒಂದು ಕಟ್ಟುಪಾಡುಗಳನ್ನು ಅನುಸರಿಸಬಹುದು.

ಗಾರ್ಗ್ಲ್ – ಟಾನ್ಸಿಲ್ ನೋವನ್ನು ನಿವಾರಿಸಲು ಉಪ್ಪು ನೀರಿನಿಂದ ಗಾರ್ಗ್ಲ್ ಮಾಡಿ. ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಬಹುದು – ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿ, ಟಾನ್ಸಿಲ್ ಸೋಂಕನ್ನು ನಿವಾರಿಸಲು ಜೇನುತುಪ್ಪವನ್ನು ಶಿಫಾರಸು ಮಾಡಲಾಗುತ್ತದೆ.

ತುಳಸಿ ಮತ್ತು ಜೇನು ಮಿಶ್ರಣ ಮಹಾಶಾಧಿ – ತುಳಸಿ ಮತ್ತು ಜೇನು ಮಿಶ್ರಣ ಮಹಾಶಾಧಿ. ತುಳಸಿ ಮತ್ತು ಜೇನುತುಪ್ಪದ ಮಿಶ್ರಣವು ನೋಯುತ್ತಿರುವ ಗಂಟಲಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Health
ಈ ಲಕ್ಷಣಗಳು ಕಂಡು ಬಂದರೆ ಅದು ಶ್ವಾಸಕೋಶ ಕ್ಯಾನ್ಸರ್ : ಆರಂಭದಲ್ಲೇ ಪತ್ತೆ ಹಚ್ಚಿ ಜೀವ ಉಳಿಸಿಕೊಳ್ಳಿ
Lung Cancer Symptoms – ಯಾವುದೇ ಒಂದು ರೋಗ ಬಂದರೆ ಅದನ್ನು ನಾವು ಆರಂಭದ ಹಂತದಲ್ಲೇ ಕಂಡುಕೊಂಡಲ್ಲಿ ಸುಲಭವಾಗಿ ಮತ್ತು ವೇಗವಾಗಿ ಅದಕ್ಕೆ ಉಪಾಯ ಕಂದುಕೊಳ್ಳಬಹುದು. ಇದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು.
ಈ ಲೇಖನದಲ್ಲಿ ನಾವು ಶ್ವಾಸಕೋಶ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳು ಯಾವವು? ಶ್ವಾಶಕೋಶ ಕಾಯಿಲೆಗಳನ್ನು ಹೇಗೆ ತಡೆಗಟ್ಟಬೇಕು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಿದ್ದೇವೆ.
ಶ್ವಾಸಕೋಶ ಕಾಯಿಲೆಗಳ ಪ್ರಮುಖ ಲಕ್ಷಣಗಳು :
* ಎದೆ ನೋವು
* ವಿಪರೀತ ಕೆಮ್ಮು
* ಕಫದಲ್ಲಿ ರಕ್ತ
* ಉಸಿರಾಟದ ತೊಂದರೆ

* ಧ್ವನಿಯಲ್ಲಿ ಒಂಟಿತನ
* ಉಬ್ಬಸ
* ಹಸಿವು ಆಗದೇ ಇರುವುದು
* ದೇಹದ ತೂಕ ಕಡಿಮೆ ಆಗುವುದು
ಈ ಮೇಲಿನ ಯಾವುದಾದರೂ ಲಕ್ಷಣಗಳು ನಿಮಗೆ ಕಂಡು ಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ಸರಿಯಾದ ಮಾಹಿತಿ ತಿಳಿದುಕೊಳ್ಳಿ.

ಶ್ವಾಸಕೋಶ ಕಾಯಿಲೆಯ ಅಪಾಯಗಳನ್ನು ಕಡಿಮೆ ಮಾಡುವುದು ಹೇಗೆ?
* ಪ್ರಮುಖವಾಗಿ ಧೂಮಪಾನ ಮಾಡುವವರು ಧೂಮಪಾನವನ್ನು ತಿಳಿಸಬೇಕು ಏಕೆಂದರೆ ಇದರಿಂದ ಲಂ ಕ್ಯಾನ್ಸರ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
* ಮಾಲಿನ್ಯಕಾರಕಗಳಿಂದ ದೂರವಿರಬೇಕು
* ಆರೋಗ್ಯಕರ ಹಾಗೂ ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸಬೇಕು.
* ನಿಯಮಿತವಾಗಿ ವ್ಯಾಯಾಮ ಮಾಡಿ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
ನೆನಪಿಡಿ: ನಾವು ಯಾವುದೇ ಒಂದು ಅಮೂಲ್ಯ ಜೀವವನ್ನು ಉಳಿಸಲು ರೋಗ ಬಾರ್ದಂತೆ ತಡೆಗಟ್ಟುವುದು ಮತ್ತು ಅದನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಪ್ರಮುಖವಾಗಿರುತ್ತದೆ.
Health
ಜಂಕ್ ಫುಡ್ ತ್ಯೆಜಿಸಿ, ಪೌಷ್ಟಿಕ ಆಹಾರ ಸೇವಿಸಿ : ಎಸ್.ಡಿ.ಬೆನ್ನೂರ್
ಶ್ರೀರಂಗಪಟ್ಟಣ : ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಅಗತ್ಯವಾಗಿದ್ದು ಹಾಗಾಗಿ ಜಂಕ್ ಫುಡ್ ತ್ಯಜಿಸಿ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಹುಲಿಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ”ದಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ “ಪೌಷ್ಠಿಕ ಆಹಾರದ ಮಹತ್ವ ಹಾಗೂ ವೈಯಕ್ತಿಕ ಅರೋಗ್ಯದ ಬಗ್ಗೆ” ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ದೇಹದ ಬೆಳವಣಿಗೆಗೆ,ಮಾಸ ಖಂಡಗಳ ನಿರ್ಮಾಣಕ್ಕೆ,ರಕ್ತ ಉತ್ಪಾದನೆಗೆ, ಮೂಳೆಗಳ ತಯಾರಿಗೆ ಹಾಗೂ ಉತ್ತಮ ಅರೋಗ್ಯಕ್ಕೆ ಪೌಷ್ಠಿಕ ಆಹಾರ ಅಗತ್ಯವಾಗಿ ಬೇಕು. ರಕ್ತ ಹೀನತೆಯಿಂದ ನಾನಾ ಖಾಯಿಲೆಗಳು ಬರುತ್ತವೆ ಮತ್ತು ಕಲಿಕೆಯಲ್ಲಿ ಗ್ರಹಿಕಾ ಶಕ್ತಿ ಕಡಿಮೆಯಾಗಿ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ರಕ್ತ ಹೀನತೆ ಅಲಕ್ಷ ಬೇಡ ಕಬ್ಬಿಣಾಂಶ ಕೊರತೆಯಿಂದ ಹಿಮೊಗ್ಲೋಬಿನ್ ಕಡಿಮೆಯಾಗುತ್ತದೆ ಇದರಿಂದ ಸುಸ್ತು,ಆಯಾಸ ಆಗುತ್ತದೆ ಆದ್ದರಿಂದ ಸಕ್ಕರೆ,ಜ್ಯೂಸ್,ತಂಪು ಪಾನೀಯಗಳು, ಸಿಹಿ ತಿಂಡಿ, ಖರಿದ ಮತ್ತು ಎಣ್ಣೆ ಪದಾರ್ಥಗಳು ತಿನ್ನದಿರುವುದು ಒಳ್ಳೆಯದು. ಹಾಲು ಮತ್ತು ಹಾಲಿನ ಉತ್ಪನ್ನಗಳು,ಮಾಂಸ, ಮೀನು ಮತ್ತು ಮೊಟ್ಟೆ ಮಿತವಾಗಿ ಬಳಸಬೇಕು. ತರಕಾರಿ ಮತ್ತು ಹಣ್ಣುಗಳು ನಿಯಮಿತವಾಗಿ ಸೇವಿಸಿ ಚಪಾತಿ, ಅನ್ನ, ರಾಗಿ ಮುದ್ದೆ ದವಸ ಮತ್ತು ಧಾನ್ಯಗಳನ್ನು ಹೆಚ್ಛಾಗಿ ತೆಗೆದು ಕೊಳ್ಳಬಹುದಾದ ಆಹಾರಗಳಾಗಿವೆ. ಆದ್ದರಿಂದ ದಿನನಿತ್ಯ ಪೌಷ್ಟಿಕ ಆಹಾರ ತಪ್ಪದೇ ಸೇವನೆ ಮಾಡಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.

ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ ಟಿ ಜ್ಯೋತಿ ಮಕ್ಕಳಿಗೆ ವೈಯಕ್ತಿಕ ಶುಚಿತ್ವದ ಕುರಿತು ಹಾಗೂ ಕೈ ತೊಳೆಯುವ ವೈಜ್ಞಾನಿಕ ವಿಧಾನಗಳ ಕುರಿತು ಆರೋಗ್ಯ ಶಿಕ್ಷಣ ನೀಡಿದರು. ಈ ವೇಳೆ ಗ್ರಂಥಾಲಯ ಮೇಲ್ವಿಚಾರಕಿ ಪುಷ್ಪಲತಾ,
ಸಮುದಾಯ ಆರೋಗ್ಯ ಅಧಿಕಾರಿ ಉಷಾ, ಆಶಾ ಕಾರ್ಯಕರ್ತೆ ಜ್ಯೋತಿ ಉಪಸ್ಥಿತರಿದ್ದರು.
Health
ತೋಟಗಾರಿಕೆ ಇಲಾಖೆಯಲ್ಲಿ ಯುವಕರಿಗೆ ಶಿಷ್ಯವೇತನದ ಜೊತೆಗೆ ಉಚಿತ 10 ತಿಂಗಳ ತರಬೇತಿ : ಅರ್ಜಿ ಅಹ್ವಾನ
Free Training by Horticulture Department : ರಾಜ್ಯ ತೋಟಗಾರಿಕೆ ಇಲಾಖೆಯು 2025 – 26 ನೇ ಸಾಲಿಗೆ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ವೈಜ್ಞಾನಿಕವಾಗಿ ಉತ್ತಮ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಹಾಗೂ ಆರ್ಥಿಕವಾಗಿ ಸಬಲರಾಗಲು ಅವಶ್ಯವಿರುವ ತರಬೇತಿಯನ್ನು ಯುವಕರಿಗೆ ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಿದೆ.
ಉಚಿತ ತರಬೇತಿ ಯೋಜನೆಯ ವಿವರ :
ಈ ಉಚಿತ ತರಬೇತಿಯನ್ನು ಒಟ್ಟು 10 ತಿಂಗಳ ಅವಧಿಯವರೆಗೆ ನೀಡಲಾಗುವುದು. ತರಬೇತಿಯು ಮೇ 02, 2025 ರಿಂದ ಆರಂಭವಾಗಲಿದೆ. ವಿಶೇಷವೇನೆಂದರೆ ಈ ಉಚಿತ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ 1,750ರೂ. ಶಿಷ್ಯವೇತನವನ್ನು ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ತೋಟಗಾರಿಕೆ ಇಲಾಖೆಯ ಈ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು ಕೇವಲ ರೈತರ ಮಕ್ಕಳಿಗೆ ಮಾತ್ರ ಅವಕಾಶವಿದೆ. ಅದೇ ರೀತಿ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಹಾಗೂ 18 ರಿಂದ 30 ವರ್ಷದ ವಯೋಮಿತಿಯಲ್ಲಿರಬೇಕು. ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವಾಗ?
ಅರ್ಜಿ ಸಲ್ಲಿಸಲು ನೀವು ಅರ್ಹತೆ ಹೊಂದಿದ್ದಲ್ಲಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಫಾರಂ ಪಡೆದು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ, ” ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಧಾರವಾಡ ಕಚೇರಿಗೆ” ಸಲ್ಲಿಸಬೇಕು.
ತೋಟಗಾರಿಕೆ ಇಲಾಖೆಯ ಅಧಿಕೃತ ಜಾಲತಾಣ : https://horticulturedir.karnataka.gov.in/
-
Mysore19 hours agoಮಲೆ ಮಹದೇಶ್ವರ ಶತನಾಮಾವಳಿ ಲೋಕಾರ್ಪಣೆ: ಶ್ರೀಮಾಯಕಾರ ಗುರುಕುಲದಿಂದ ನಿರ್ಮಾಣ
-
Hassan24 hours agoನಿಗೂಢ ನಾಪತ್ತೆಯ ಪ್ರಕರಣಕ್ಕೆ ಬಹುದೊಡ್ಡ ಮೇಜರ್ ಟ್ವಿಸ್ಟ್ : ಮಹಿಳೆ ಪೊಲೀಸರ ವಶಕ್ಕೆ,
-
Mysore23 hours agoಅಪರಂಜಿ ಚಿನ್ನದ ಕೊಳಗದಲ್ಲಿ ಕಂಗೊಳಿಸುತ್ತಿರುವ ತ್ರಿನೇಶ್ವರ
-
National - International11 hours agoIND v/s PAK T-20 WC| 114ಕ್ಕೆ ಪಾಕ್ ಆಲೌಟ್: ಟೀಂ ಇಂಡಿಯಾಗೆ ಭರ್ಜರಿ ಜಯ
-
Hassan19 hours agoಸಂತ ಸೇವಾಲಾಲ್ ಜಯಂತಿ ಆಚರಣೆ : ಕೆ.ಎಂ.ಶಿವಲಿಂಗೇಗೌಡರವರಿಂದ ಪುಷ್ಪನಮನ
-
Chikmagalur11 hours agoತಾಯಿ ಬುದ್ಧಿವಾದ ಹೇಳಿದ್ದಕ್ಕೆ ಬೇಸತ್ತು ಬಾಲಕಿ ಆತ್ಮಹ*ತ್ಯೆಗೆ ಶರಣು
-
Kodagu23 hours agoಬೆಟ್ಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಉದ್ಘಾಟನೆ
-
Mysore41 minutes agoನಂಜುಂಡೇಶ್ವರಸ್ವಾಮಿ ಸನ್ನಿಧಿಯಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ವೇಳೆಯೂ ಪ್ರಸಾದ : ಶಾಸಕ ದರ್ಶನ್ ಧೃವನಾರಾಯಣ್ ಚಾಲನೆ
