Hassan
ಖಾಸಗೀ ಶಾಲೆಯಲ್ಲಿ ಎಲ್ಲಾ ಉಚಿತ ನೀಡಿ, ಉತ್ತಮ ಶಿಕ್ಷಣ ಕಾರ್ಯಕ್ರಮಗಳಲ್ಲಿ ಪೋಷಕರ ಭಾಗವಹಿಸುವಿಕೆ ಇಲ್ಲ: ಚಂದ್ರಕಾಂತ್ ಬೇಸರ
ಹಾಸನ: ಫೀಸ್ ಸಂಗ್ರಹಿಸುವ ಖಾಸಗೀ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಿದರೂ ಸಹ ಮಕ್ಕಳ ಕಾರ್ಯಕ್ರಮದಲ್ಲಿ ಪೋಷಕರು ಭಾಗವಹಿಸದೆ ಇರುವುದು ಬೇಸರದ ಸಂಗತಿ ಎಂದು ಸಿ.ಆರ್.ಪಿ. ಚಂದ್ರಕಾಂತ್ ತಿಳಿಸಿದರು.
ನಗರದ ಚನ್ನಪಟ್ಟಣ ವೃತ್ತದ ಬಳಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಯಾಟ್ ಹಾಗೂ ಬಿ.ಆರ್.ಸಿ. ವತಿಯಿಂದ ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದ ಇಂಗ್ಲೀಷ್ ಫೆಸ್ಟಿವಲ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,
ನಗರದ ಡಯಾಟ್ ಹಾಗೂ ಬಿ.ಆರ್.ಸಿ. ವತಿಯಿಂದ ಜಂಟಿಯಾಗಿ ಈ ಇಂಗ್ಲೀಷ್ ಫೆಸ್ಟಿವಲ್ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಮೂಲ ಉದ್ದೇಶ ಎಂದರೇ ೨೦೨೩-೨೪ನೇ ಸಾಲಿನಲ್ಲಿ ನಾವು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಕರೆಯುತ್ತೇವೆ. ಈ ಹಿನ್ನಲೆಯಲ್ಲಿ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಡಯಾಟ್ ವತಿಯಿಂದ ಅನೇಕ ವಿಭಿನ್ನವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬರಲಾಗಿದೆ ಎಂದರು. ಪ್ರತಿ ತಿಂಗಳು ಒಂದೊಂದು ವಿಶೇಷವಾದ ಕಾರ್ಯಕವನ್ನು ಆಯೋಜಿಸುತ್ತಾ ಬರಲಾಗಿದೆ. ಅದರಲ್ಲಿ ಕನ್ನಡ ಭಾಷ ಮಾಸಾಚರಣೆ, ಮೆಟ್ರಿಕ್ ಮೇಳವನ್ನು ಡಿಸೆಂಬರ್ ತಿಂಗಳು ನಡೆಸಲಾಗಿದ್ದು, ಈ ತಿಂಗಳಲ್ಲಿ ಇಂಗ್ಲೀಷ್ ಅರಿವು ಮೂಡಿಸಲು ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ತಿಂಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಮಾಡಲಾಗುವುದು. ಇನ್ನೆರಡು ದಿನಗಳಲ್ಲಿ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕೊಟ್ಟು ನಂತರ ಕಾರ್ಯಕ್ರಮ ನಡೆಸಲಾಗುವುದು ಎಂದು ಕಿವಿಮಾತು ಹೇಳಿದರು. ಕಳೆದ ತಿಂಗಳು ಇಂಗ್ಲೀಷ್ ಭಾಷೆಯ ಶಿಕ್ಷಕರಿಗೆ ಒಂದು ದಿನದ ತರಬೇತಿ ಕೊಡಲಾಗಿದ್ದು, ಪರಿಚಯ ಮಾಡಿಕೊಟ್ಟು ಚಟುವಟಿಕೆಗಳ ಬಗ್ಗೆ ಮೌಲ್ಯ ಮಾಪನ ಮಾಡುವ ದೃಷ್ಠಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಇಂತಹ ಮಕ್ಕಳ ಇಂಗ್ಲೀಷ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿತ್ತು. ದುರಂತ ಏನೆಂದರೇ ಪೋಷಕರು ಇಂತಹ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ. ಇದೆ ಕಾರ್ಯಕ್ರವನ್ನು ಕಾನ್ವೇಂಟ್ ಗಳಲ್ಲಿ ನಡೆದರೇ ಮಕ್ಕಳ ಡೈರಿಯಲ್ಲಿ ಶಿಕ್ಷಕರು ಬರೆದು ಕಳುಹಿಸಿದರೇ ಸಾಕು ಎಲ್ಲಾರು ತಪ್ಪದೆ ಭಾಗವಹಿಸುತ್ತಾರೆ. ಸರಕಾರಿ ಶಾಲೆಗಳಲ್ಲಿ ಎಲ್ಲಾ ಕಾರ್ಯಕ್ರಮವನ್ನು ವಿಭಿನ್ನವಾಗಿ ಮಾಡಲಾಗುತ್ತಿದ್ದರೂ ಪೋಷಕರು ಪಾಲ್ಗೊಳ್ಳುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಮಕ್ಕಳ ಕಲಿಕೆಗೆ ಪೋಷಕರ ಸಹಕಾರ ಎಷ್ಟೆದೆ ಎಂಬುದನ್ನು ಇದರಲ್ಲೆ ತೋರಿಸುತ್ತದೆ. ಕಾನ್ವೇಂಟ್ ಗಳಲ್ಲಿ ಪೋಷಕರು ಮಕ್ಕಳಿಗೆ ಹೆಚ್ಚಿನ ಸಹಕಾರ ಕೊಡುತ್ತಾರೆ. ಆದರೇ ನಮ್ಮ ಸರಕಾರಿ ಶಾಲೆಗಳಿಗೆ ಪೋಷಕರು ಗಮನ ಕೊಡುವುದಿಲ್ಲ. ಇದರಿಂದಲೇ ಮಕ್ಕಳು ಕಲಿಕೆಯಲ್ಲಿ ಸಲ್ಪ ಹಿಂದೆ ಬೀಳುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆಗೆ ಪ್ರೋತ್ಸಹ ಕೊಡುವ ನಿಟ್ಟಿನಲ್ಲಿ ಸರಕಾರಿ ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಪೋಷಕರ ಜೊತೆಗೆ ಅಕ್ಕಪಕ್ಕದವರನ್ನು ಕರೆದುಕೊಳ್ಳುವ ಕೆಲಸ ಮಾಡುವಂತೆ ಮನವಿ ಮಾಡಿದರು. ಕಾನ್ವೇಂಟ್ ಗಳಿಗೆ ದುಬಾರಿ ಫೀಸ್ ಎಲ್ಲಾವನ್ನು ಕಟ್ಟುತ್ತಾರೆ. ಆದರೇ ಅಲ್ಲಿ ಯಾವ ಸೌಲಭ್ಯ ಕೊಡುವುದಿಲ್ಲ. ಸರಕಾರಿ ಶಾಲೆಗೆ ಸೇರುವ ಮಕ್ಕಳಿಗೆ ಉಚಿತವಾಗಿ ಬಟ್ಟೆ, ಪುಸ್ತಕ, ಹಾಲು, ಮೊಟ್ಟೆ, ಬಾಳೆಹಣ್ಣು, ಶೂಷ್, ಚಿಕ್ಕಿ, ಸಾಲೆಡ್ ಚಿಪ್ಸ್ ಸೇರಿದಂತೆ ಎಲ್ಲಾ ಸೌಲಭ್ಯ ಕೊಟ್ಟು ಪೋಷಕರಿಂದ ಒಂದು ರೂಗಳ ಫೀಸ್ ನ್ನು ಸಂಗ್ರಹಿಸುವುದಿಲ್ಲ. ಕೆಲ ದಾನಿಗಳು ಸರಕಾರಿ ಶಾಲೆಗಳಿಗೆ ಇತರೆ ವಸ್ತುಗಳನ್ನು ದಾನವಾಗಿ ಮಕ್ಕಳಿಗೆ ನೀಡುತ್ತಿರುವುದಾಗಿ ಇದ್ದ ಕೆಲವೇ ಪೋಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಇಂಗ್ಲೀಷ್ ಫೆಸ್ಟಿವಲ್ ದಿನದ ಅಂಗವಾಗಿ ಸರಕಾರಿ ಶಾಲಾ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟು ಗಮನಸೆಳೆದರು.
ಇದೆ ವೇಳೆ ಪ್ರಾಂಶುಪಾಲರಾದ ವಿನಯಕುಮಾರಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶೈಲಜಾ, ಬಿ.ವಿ. ಪುಷ್ಪಲತಾ, ದೈಹಿಕ ಶಿಕ್ಷಕರಾದ ಕೃಷ್ಣೇಗೌಡ, ಸಹ ಶಿಕ್ಷಕರಾದ ಹೆಚ್.ಎಂ. ಗೀತಾ, ಹೆಚ್.ಪಿ. ಮಂಜುನಾಥ್, ಕೆ.ಎಂ. ಹರೀಶ್, ಸಿ.ಡಿ. ಭಾರತಿ, ಕೆ.ಬಿ. ರಕ್ಷಾ, ಹೆಚ್.ಪಿ. ಅನುಪಮ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಲಕ್ಷ್ಮಿ ಇತರರು ಉಪಸ್ಥಿತರಿದ್ದರು.
Hassan
ಲಂಚ ಸ್ವೀಕರಿಸಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮಂಜುನಾಥ್
ಅರಸೀಕೆರೆ : ಬಿಎಚ್ಎಸ್ಸಿಯಲ್ಲಿರುವ ಕೆಇಬಿ ಕಚೇರಿಯಲ್ಲಿ ತುಂಬಾ ದಿನಗಳಿಂದ ವಿದ್ಯುತ್ ಗುತ್ತಿಗೆದಾರರ ಮೇಲೆ ಅಧಿಕಾರಿಗಳು ಮತ್ತು ಲೈನ್ ಮ್ಯಾನ್ ಗಳು ಪ್ರತಿಯೊಂದು ಕೆಲಸಕ್ಕೂ ಅಸಡ್ಡೆ ತೋರುತ್ತಿದು ಕೆಲವು ಕೆಲಸಗಳಿಗೆ ಹಣದ ಬೇಡಿಕೆಗಳನ್ನು ಇಡುತ್ತಿದ್ದರು. ಇಂದು ಕಂಟ್ರಾಕ್ಟರ್ ಮಧು ಎಂಬುವವರಿಂದ 25000 ಲಂಚವನ್ನು aee ಮಂಜುನಾಥ್ ರವರು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಹಿಂದೂ ನಡೆದ ದಾಳಿಯಿಂದ ಕೆಲವು ಗುತ್ತಿಗೆದಾರರಿಗೆ ನ್ಯಾಯದ ಭರವಸೆ ಸಿಕ್ಕಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಲಂಚ ಪಡೆಯುವಂಥ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಲಿ ಮತ್ತು ಕೆಇಬಿ ಅಧಿಕಾರಿ ವರ್ಗ ಹಾಗೂ ಲೈನ್ ಮ್ಯಾನ್ ಗಳು ನ್ಯಾಯಯುತವಾಗಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.
Hassan
ಕುಡಿದ ಮತ್ತಿನಲ್ಲಿ ಯುವಕನೋರ್ವನ ಬರ್ಬರ ಹ*ತ್ಯೆ
ಹಾಸನ: ಕುಡಿದ ಮತ್ತಿನಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ಶವನದ ಮುಂದೆಯೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು
ಯಶಸ್ವಿಯಾಗಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕು ಶ್ರವಣಬೆಳಗೊಳ ಹೋಬಳಿ ಶಿವಪುರ ಗ್ರಾಮದ ಚರಣ್ ಅಲಿಯಾಸ್ ಸಮಂತ್ (21), ಹಾಸನ ನಗರದ ಹೊಸಕೊಪ್ಪಲಿನ ನಿವಾಸಿಗಳಾದ ಚಂದು ( 21), ಅಭಿಷೇಕ್ ಅಲಿಯಾಸ್ ತೀರ್ಥ (21), ಪವನ್ (22) ಹಾಗೂ ಚನ್ನಪಟ್ಟಣ ನಿವಾಸಿ ಚಂದು ಬಿ.ಎ ಅಲಿಯಾಸ್ ಬೇಕರಿ ಚಂದು ಬಂಧಿತ ಆರೋಪಿಗಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ
ಆಲೂರು ತಾಲೂಕು ದೊಡ್ಡಕಣಗಾಲು ಗ್ರಾಮದ ಆಟೋರಿಕ್ಷಾ ಚಾಲಕ ಉಲ್ಲಾಸ್ ಕ್ಯಾಟಿ(21) ಎಂಬಾತತನ್ನು ಘಟನೆ ನಡೆದು ಮರು ದಿನವೇ ಪೊಲೀಸರು ಬಂಧಿಸಿದ್ದರು.

ಏನಿದು ಪ್ರಕರಣ?:
ಹೂವಿನಹಳ್ಳಿ ಗ್ರಾಮದ ಆಟೋ ಚಾಲಕ ಕೀರ್ತಿ (೨೧)
ಎಂಬಾತನನ್ನು ನ. 8 ರಂದು ಸಂಜೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಉಲ್ಳಾಸ್ ಹಾಗು ಇತರ ಐವರು ಆರೋಪಿಗಳು ಕೀರ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಬಂಧಿತ ಆರೋಪಿ ಉಲ್ಲಾಸ್ ಶವದ ಮುಂದೆಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ.
ನ. 9 ರಂದು ಬೆಳಗ್ಗೆ ಮೃತ ಕೀರ್ತಿ ಸಹೋದರ ಕಿರಣ್ ಅವರ ಮೊಬೈಲ್‌ಗೆ ಬಂದ ವೀಡಿಯೋ ನೋಡಿ ಕೂಡಲೇ ಹಾಸನ ನಗರ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ತಿಳಿಸಿದ್ದರು. ಬಳಿಕ ನಗರ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕ, ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹರೀಶ್, ಸಿಬ್ಬಂದಿ ಲತೇಶ ಅವರೊಂದಿಗೆ ವಿಡಿಯೋದಲ್ಲಿದ್ದ ಜಾಗದ ಅಂದಾಜಿನಲ್ಲಿ ಚನ್ನಪಟ್ಟಣ ಮತ್ತು ಬಿಟ್ಟಗೌಡನಹಳ್ಳಿ ಜಂಕ್ಷನ್ ನಡುವಿನ ಪವನಪುತ್ರ ಕೋಳಿ ಫಾರಂ ಹಿಂಭಾಗದ ಖಾಲಿ ಜಾಗದ ಮುಳ್ಳು ಮತ್ತು ಗಿಡಗಳ ನಡುವೆ ಹುಡುಕುತ್ತಾ ಬಂದಾಗ ಕೀರ್ತಿ ಶವ ಪತ್ತೆಯಾಗಿತ್ತು.
Hassan
ತಾತನ ಜೊತೆ ಮೊಮ್ಮಕ್ಕಳು ಬೈಕ್‌ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ : ಓರ್ವ ಬಾಲಕ ಸ್ಥಳದಲ್ಲೇ ಸಾವು
ಹಾಸನ : ಕಾನ್ವೆಂಟ್ ಮುಗಿಸಿಕೊಂಡು ತಾತನ ಜೊತೆ ಮೊಮ್ಮಕ್ಕಳು ಬೈಕ್‌ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ
ಓರ್ವ ಬಾಲಕ ಸ್ಥಳದಲ್ಲೇ ಸಾವು, ಮತ್ತೋರ್ವ ಬಾಲಕನಿಗೆ ಗಂಭೀರ ಗಾಯ
ದೀಕ್ಷಿತ್‌ಗೌಡ (4) ಮೃತ ಬಾಲಕ
ಸಾರ್ಥಕ್ (4) ಗಂಭೀರವಾಗಿ ಗಾಯಗೊಂಡಿರುವ ಬಾಲಕ

ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಮಂಡಿಕೊಪ್ಪಲು ಗೇಟ್ ಬಳಿ ನಿನ್ನೆ ಸಂಜೆ ಘಟನೆ
ಮಂಡಿಕೊಪ್ಪಲು ಗೇಟ್‌ನಲ್ಲಿರುವ ಗಾರ್ಡವಿನ್ ಕಾನ್ವೆಂಟ್‌ನಲ್ಲಿ ಎಲ್‌ಕೆಜಿ ಓದುತ್ತಿರುವ ದೀಕ್ಷಿತ್‌ಗೌಡ ಹಾಗೂ ಸಾರ್ಥಕ್
ಕಾನ್ವೆಂಟ್ ಮುಗಿದ ಮೇಲೆ ಮೊಮ್ಮಕ್ಕಳನ್ನು ಕರೆದುಕೊಂಡು ಬರಲು ಬೈಕ್‌ನಲ್ಲಿ ಕೂರಿಸಿಕೊಂಡಿದ್ದ ತಾತ ಚೋಳರಾಜು
ಎರಡು ಕಡೆ ರಸ್ತೆಯಲ್ಲಿ ವಾಹನಗಳು ಬರುತ್ತಿವೆಯಾ ಎಂದು ನೋಡುತ್ತಿದ್ದ ಚೋಳರಾಜು
KA-02-HM-9313 ನಂಬರ್‌ನ ಬೈಕ್‌ನಲ್ಲಿ ಮೊಮ್ಮಕ್ಕಳೊಂದಿಗೆ ಕುಳಿತಿದ್ದ ಚೋಳರಾಜು

ಈ ವೇಳೆ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ KA-54-8690 ನಂಬರ್ ಗೂಡ್ಸ್ ವಾಹನ
ಸ್ಥಳದಲ್ಲೇ ಮೃತಪಟ್ಟ ದೀಕ್ಷಿತ್‌ಗೌಡ
ಗಂಭೀರವಾಗಿ ಗಾಯಗೊಂಡಿರುವ ಸಾರ್ಥಕ್
ಸಾರ್ಥಕ್‌ಗೆ ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

ಚೋಳರಾಜುಗೂ ಕೈ ಮುರಿತ, ಸಣ್ಣ-ಪುಟ್ಟ ಗಾಯ
ನವೀನ್ ಹಾಗೂ ಬಾಬು ಸಹೋದರರು
ನವೀನ್ ಪುತ್ರ ದೀಕ್ಷಿತ್‌ಗೌಡ, ಬಾಬು ಪುತ್ರ ಸಾರ್ಥಕ್
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಘಟನೆ
-
State37 minutes agoಟಾಟಾ ಸ್ಕಾಲರ್ಶಿಪ್ 2025–26: ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ: ₹1,00,000 ವರೆಗೆ ಆರ್ಥಿಕ ನೆರವು
-
Mysore22 hours agoಗೃಹಲಕ್ಷ್ಮೀ ಯೋಜನೆ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ: ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೆ ಹೇಮಾ ನಂದೀಶ್ ಆಗ್ರಹ
-
Hassan14 hours agoಕುಡಿದ ಮತ್ತಿನಲ್ಲಿ ಯುವಕನೋರ್ವನ ಬರ್ಬರ ಹ*ತ್ಯೆ
-
Hassan23 hours agoಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಹಾಗೂ ತಾಲ್ಲೂಕು ಘಟಕಗಳ ಆಯ್ಕೆ
-
Mandya19 hours agoಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಹೆಚ್ಚು: ಡಾ.ಕುಮಾರ
-
Mysore19 hours agoಡಿ. 21 ರಂದು ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಪಿಲಾ ಆರತಿ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮ
-
Manglore24 hours agoಗಾಂಜಾ ‘ಪೆಡ್ಲರ್’ ಅಪ್ಪಿ ಮೂಡುಬಿದಿರೆ ಪೊಲೀಸ್ ವಶಕ್ಕೆ
-
Hassan18 hours agoಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಗೆ ಶತಮಾನೋತ್ಸವ
