Connect with us

Chikmagalur

ಕ್ರಿಕೆಟ್ ಆಡಲು ಬಂದಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ಪಶುವೈದ್ಯ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ

Published

on

ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ಪಶುವೈದ್ಯ ಹೃದಯಾಘಾತದಿಂದ ಕ್ರೀಡಾಂ ಗಣದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟ ಆಯೋಜಿಸ ಲಾಗಿತ್ತು.
ಕೊಡಗು ಜಿಲ್ಲೆ ಸೋಮವಾರ ಪೇಟೆಯ ಪಶುವೈದ್ಯ ಶಿವಪ್ಪ ಬಾದಾಮಿ ಎಂಬುವರು ಕ್ರಿಕೆಟ್ ಆಡಿ ಪೋಟೋ ಸೆಷನ್ ನಲ್ಲಿ ಪಾಲ್ಗೊಂಡ ನಂತರ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.


ತಕ್ಷಣ ಇತರೆ ವೈದ್ಯರು ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.
ಮೈಸೂರು ವಿಭಾಗ ಮಟ್ಟದ ಪಶುವೈದ್ಯರ ಕ್ರೀಡಾಕೂಟಕ್ಕೆ ಏಳು ಜಿಲ್ಲೆಗಳ 12 ತಂಡಗಳು ಆಗಮಿಸಿದ್ದವು. ಚಿಕ್ಕಮಗ ಳೂರು ಪಶುವೈದ್ಯ ಸಂಘ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್‌ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಡಗು ತಂಡದಿಂದ ಶಿವಪ್ಪ ಬಾದಾಮಿ ಇಂದು ನಗರಕ್ಕೆ ಆಗಮಿಸಿದ್ದರು.
ಒಂದು ಪಂದ್ಯ ಉತ್ಸಾಹದಿಂದ ಆಡಿದ ಅವರು ಗ್ರೂಪ್ ಪೋಟೋ ತಗೆಸಿಕೊಳ್ಳುವ ವೇಳೆ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಮೂಲತಃ ಶಿವಪ್ಪ ಬಾದಾಮಿ ಅವರು ಬೆಳಗಾವಿ ಜಿಲ್ಲೆಯವರಾಗಿದ್ದು, ಅವರ ಹಠತ್ ನಿಧನದಿಂದ ಕ್ರೀಡಾಕೂಟವನ್ನು ಸ್ಥಗಿತಗೊ ಳಿಸಲಾಗಿದೆ. ಈ ಅಕಾಲಿಕ ಮರಣಕ್ಕೆ ಪಶು ವೈದ್ಯರು ಕಂಬನಿ ಮಿಡಿದಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಮಳೆಗೆ ಮತ್ತೊಂದು ಬಲಿ: ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾವು

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಾರಂಭವಾದ ಬಳಿಕ ಈಗಾಗಲೇ‌ 9 ಸಾವು ಸಂಭವಿಸಿದ್ದು, ಇಂದು ಮತ್ತೊಂದು ಸಾವು ಸಂಭವಿಸಿದ.

ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಮೃತಪಟ್ಟಿರುವ ಘಟನೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದ

ಸಿಎ ಅಭ್ಯಾಸ ಮಾಡುತ್ತಿದ್ದ ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿ ಆಶ್ನಿ ಶೆಟ್ಟಿ (20) ಮೃತಪಟ್ಟವರು.

ಹರೀಶ್ ಅವರು ಮನೆಯಲ್ಲಿ ಸಣ್ಣ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದು ಎಂದಿನಂತೆ ಶುಕ್ರವಾರ ಬೆಳಿಗ್ಗೆ ದನ ಮೇಯಿಸಲು ತೆರಳಿದ್ದರು. ಈ ವೇಳೆ ಅವರೊಂದಿಗೆ ಮನೆಯ ನಾಯಿಯೂ ತೆರಳಿತ್ತು.

ತಂದೆಯೊಂದಿಗೆ ತೆರಳಿದ್ದ ನಾಯಿಯನ್ನು ಕರೆತರಲು ಆಶ್ನಿ ಶೆಟ್ಟಿ ತೆರಳಿದ್ದರು. ನಾಯಿ ಗದ್ದೆಯಲ್ಲಿದ್ದ ನೀರಿಗೆ ತೆರಳಿರುವುದನ್ನು ಕಂಡ ಆಶ್ನಿ ನಾಯಿಯನ್ನು ಹಿಡಿಯಲು ನೀರಿಗೆ ಇಳಿದಾಗ ವಿದ್ಯುತ್ ಆಘಾತ ಸಂಭವಿಸಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗದ್ದೆಯಲ್ಲಿದ್ದ ವಿದ್ಯುತ್ ಕಂಬದಿಂದ ತಂತಿಯೊಂದು ತುಂಡಾಗಿ ಗದ್ದೆಗೆ ಬಿದ್ದಿತ್ತು. ಇದರಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ನೀರಿನಲ್ಲಿ ವಿದ್ಯುತ್ ಹರಿದು ಈ ದುರ್ಘಟನೆ ಸಂಭವಿಸಿದೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಮೆಸ್ಕಾಂ ಗೆ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸಿದ ಬಳಿಕ ನಾಯಿ ಮತ್ತು ಆಶ್ಮಿಯ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.

Continue Reading

Chikmagalur

ಕೇಂದ್ರ ರೈಲ್ವೆ ರಾಜ್ಯಸಚಿವ ವಿ ಸೋಮಣ್ಣ ಬೇಟಿ

Published

on

ಲೋಕಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ರೈಲ್ವೆ ವಿಭಾಗೀಯ ವ್ಯವಸ್ಥಾಪಕರು (ಡಿಆರ್‌ಎಂ) ಒಳಗೊಂಡ ಸಲಹಾ ಸಮಿತಿಗಳನ್ನು ರಚನೆ ಮಾಡಲು ಸಾಧ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿದರು.


ಕಡೂರು- ಚಿಕ್ಕಮಗಳೂರು ರೈಲ್ವೆ ಮಾರ್ಗ ಮೇಲ್ದರ್ಜೆಗೆ ಹಾಗೂ ಚಿಕ್ಕಮಗಳೂರು- ಬೇಲೂರು- ಹಾಸನ ನೂತನ ರೈಲ್ವೆ ಮಾರ್ಗದ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಲಹಾ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ನಡೆಸಿ ಇಲಾಖೆಗೆ ವರದಿಯನ್ನು ಕಳುಹಿಸಬೇಕೆಂದು ಸೂಚನೆ ನೀಡಲಾಗುವುದು ಎಂದರು.


ರಾಜ್ಯದ ೫೯ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ೫೪ ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ ಚಿಕ್ಕಮಗಳೂರು ನಿಲ್ದಾಣವೂ ಸಹ ಒಂದಾಗಿದೆ. ಇದಕ್ಕೆ ಈಗಾಗಲೇ ೨೬ ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.


ಜಿಲ್ಲಾ ಕೇಂದ್ರದಲ್ಲಿರುವ ರೈಲ್ವೆ ನಿಲ್ದಾಣಗಳು ಎಲ್ಲಾ ಮೂಲಭೂತ ಸವಲತ್ತುಗಳನ್ನು ಹೊಂದಿರಬೇಕು, ಪ್ರಮುಖವಾಗಿ ಮೀಟಿಂಗ್ ರೂಂ, ಶೌಚಾಲಯ ಕೊಠಡಿಗಳು, ಚಿಕ್ಕದಾದ ರೆಸ್ಟೋರೆಂಟ್, ಟಿಕೇಟ್ ಕೌಂಟರ್ ತೆರೆಯಲು ಉದ್ದೇಶಿಸಲಾಗಿದೆ ಎಂದರು.

Continue Reading

Chikmagalur

ಮಳೆಯಲ್ಲಿ ಬಸ್ ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ ಟಯರ್

Published

on

ಚಿಕ್ಕಮಗಳೂರು :

ಮಳೆಯಲ್ಲಿ ಬಸ್ ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ ಟಯರ್

ಚಲಿಸುವಾಗಲೇ ಹಿಂಬದಿ ಟೈರ್ ಕಳಚಿ ನಿಂತ ಖಾಸಗೀ ಬಸ್

ಕೂದಲೆಳೆ ಅಂತರದಲ್ಲಿ ತಪ್ಪಿದ ದುರ್ಘಟನೆ

ಎನ್..ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರೋಟರಿ ಸರ್ಕಲ್ ನಲ್ಲಿ ಘಟನೆ

ಬೆಂಗಳೂರಿನಿಂದ ಶೃಂಗೇರಿಗೆ ಹೋಗುತ್ತಿದ್ದ ಖಾಸಗಿ ಬಸ್

ಬಸ್ಸಿನ ಟೈಯರ್ ಕಳಚಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಏಕಕಾಲಕ್ಕೆ ಬಸ್ಸಿನ ಎರಡು ಟೈಯರ್ ಗಳು ಕಳಚಿ ಬೀಳುವ ದೃಶ್ಯ ಸೆರೆ

ಘಾಟಿ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದರೆ ಮಹಾ ದುರಂತವೇ ನಡೆಯುತ್ತಿತ್ತು

ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು

ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು

Continue Reading

Trending

error: Content is protected !!