Hassan
ಕ್ಯಾನ್ಸರ್ ಯೂನಿಟ್ ಹಾಸನದಲ್ಲೆ ಉಳಿಸಲು ಸಭೆಯಲ್ಲಿ ನಿರ್ಧಾರ ಸ್ಥಳಾಂತರ ಮಾಡಿದ್ರೆ ಹೋರಾಟದ ಎಚ್ಚರಿಕೆ ನೀಡಿದ ಹಿರಿಯ ನಾಗರೀಕರ ವೇದಿಕೆ
ಹಾಸನ: ಈಗಾಗಲೇ ಸರಕಾರಿ ಆಸ್ಪತ್ರೆಯಲ್ಲಿ ಇರುವ ಕ್ಯಾನ್ಸರ್ ಯೂನಿಟ್ ನ್ನು ಹಾಸನದಲ್ಲೆ ಉಳಿಸಬೇಕು. ಮೈಸೂರಿಗೆ ಏನಾದರೂ ಸ್ಥಳಾಂತರ ಮಾಡಲು ಮುಂದಾದರೇ ಎಲ್ಲಾ ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಹಿರಿಯ ನಾಗರೀಕರ ವೇದಿಕೆಯ ಡಾ. ವೈ.ಎಸ್. ವೀರಭದ್ರಪ್ಪ ಎಚ್ಚರಿಕೆ ನೀಡಿದರು.

ನಗರದ ಸ್ಕೌಟ್ ಅಂಡ್ ಗೈಡ್ಸ್ ಭವನದಲ್ಲಿ ಶನಿವಾರದಂದು ಮದ್ಯಾಹ್ನ ನಡೆದ ಹಿರಿಯ ನಾಗರೀಕರ ವೇದಿಕೆಯ ಸಭೆಯಲ್ಲಿ ಕ್ಯಾನ್ಸರ್ ಯೂನಿಟ್ ನ್ನು ಜಲ್ಲೆಯಲ್ಲೆ ಉಳಿಸುವ ಬಗ್ಗೆ ಸುಧೀರ್ಘ ಚರ್ಚೆ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ವೀರಭದ್ರಪ್ಪ ಅವರು, ಪ್ರಸ್ತೂತ ದಿನಗಳಲ್ಲಿ ಪ್ರಮುಖವಾಗಿ ಕ್ಯಾನ್ಸರ್ ಖಾಯಿಲೆ ಬಗ್ಗೆ ಜಾಗೃತಿವಹಿಸಬೇಕಾಗಿದ್ದು, ಇದಕ್ಕಾಗಿ ಸುಮಾರು ೧೭ ರಿಂದ ೧೮ ಕೋಟಿ ಅನುಧಾನ ಬಿಡುಗಡೆಗೊಂಡು ೫ ಕೋಟಿ ಖಾತೆಗೆ ಬಂದಿದೆ. ಕ್ಯಾನ್ಸರ್ ಗೆ ಸಂಬಂಧಿಸಿದ ಮಿಷನೆರಿಗಳು ಕೂಡ ತರಲಾಗಿ ಹಲವಾರು ವರ್ಷಗಳಿಂದ ನಡೆಯುತ್ತಿತ್ತು. ಈಗ ಏಕಾಏಕಿ ಮೈಸೂರಿಗೆ ಶಿಫ್ಟ್ ಮಾಡಬೇಕೆನ್ನುವ ವಿಚಾರದಲ್ಲಿ ಸರಕಾರ ತೊಡಗಿದೆ. ಯಾವ ಕಾರಣಕ್ಕೂ ಕ್ಯಾನ್ಸರ್ ತಪಾಸಣೆಯ ಮಿಷೆನರಿಯನ್ನು ಬೇರೆಡೆಗೆ ಹೋಗಲು ಬಿಡದೆ ಇಲ್ಲೆ ಉಳಿಯುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಾಗರೀಕರು ಹೋರಾಟಕ್ಕೆ ಸಿದ್ಧರಾಗಬೇಕು ಎಂದರು. ಕ್ಯಾನ್ಸರ್ ಸೆಂಟರ್ ಇಲ್ಲಿ ಇರುವುದರಿಂದ ಬಡವರಿಗೆ, ಕ್ಯಾನ್ಸರ್ ಆದವರಿಗೆ ವರ್ಷನುಗಟ್ಟಲೆ ಚಿಕಿತ್ಸೆ ಇರುತ್ತದೆ. ಅವರು ಎಲ್ಲಾರೂ ಇಲ್ಲಿಂದ ಬೆಂಗಳೂರು, ಮೈಸೂರಿಗೆ ಹೋಗಬೇಕು. ಆದರೇ ಅನೇಕರಿಗೆ ಹೋಗುವ ಶಕ್ತಿ ಇರುವುದಿಲ್ಲ. ಒಬ್ಬರಿಗೆ ಏನಾದರೂ ಕ್ಯಾನ್ಸರ್ ಬಂದರೇ ಅವರು ಸರ್ವನಾಶವಾದಂತೆ. ಈ ಚಿಕಿತ್ಸೆಗಾಗಿ ಇರುವ ಆಸ್ತಿಗಳನ್ನೆಲ್ಲಾ ಮಾರಿಕೊಳ್ಳಬೇಕಾಗುತ್ತದೆ ಎಂದು ಬೇಸರವ್ಯಕ್ತಪಡಿಸಿದರು. ಕ್ಯಾನ್ಸರ್ ಚಿಕಿತ್ಸೆ ಪಡೆಯಬೇಕಾದರೇ ವೆಚ್ಚ ಹೆಚ್ಚು ಭರಿಸಬೇಕು. ಈಗ ಹೊಸ ತಂತ್ರಜ್ಞಾನದಲ್ಲಿ ಹೊಸ ವಿಧದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಔಷಧಿಗಳು ಬಂದಿದ್ದು, ಹಿಂದಿನ ದಿನಗಳಲ್ಲಿ ಕ್ಯಾನ್ಸರ್ ಯಾರಿಗಾದರೂ ಬಂದಿದೆ ಎಂದರೇ ಆತ ಹೆಚ್ಚು ದಿನ ಬದುಕುವುದಿಲ್ಲ ಎನ್ನುವ ಮಾತಿತ್ತು. ಈಗ ವಿಜ್ಞಾನ ಮುಂದುವರೆದಿರುವುದರಿಂದ ಕ್ಯಾನ್ಸರ್ ನ್ನು ವಾಸಿ ಮಾಡುವ ಖಾಯಿಲೆ ಆಗಿದೆ. ಹುಷಾರು ಮಾಡದೆ ಇರುವ ಖಾಯಿಲೆಯಲ್ಲ. ಹೊಸ ಹೊಸ ಟೆಕ್ನಾಲಜಿಯಲ್ಲಿ ವಾಸೆ ಮಾಡಬಹುದಾಗಿದೆ ಎಂದು ಹೇಳಿದರು. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗಿರುವ ಕ್ಯಾನ್ಸರ್ ಯೂನಿಟನ್ನು ಯಾವುದೆ ಕಾರಣಕ್ಕೂ ಬೇರೆಡೆಗೆ ಸ್ಥಳಾಂತರ ಮಾಡಬಾರದು. ಎಲ್ಲಾ ಸೇರಿ ಹೋರಾಟದ ಮೂಲಕ ಕ್ಯಾನ್ಸರ್ ಯೂನಿಟ್ ಉಳಿಸೆ ಉಳಿಸುತ್ತೇವೆ. ಹಾಸನ ಜಿಲ್ಲೆಯ ಹಿರಯ ನಾಗರೀಕರ ವೇದಿಕೆ ಮತ್ತು ಇತರೆ ಸಂಘ ಸಂಸ್ಥೆಗಳು ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡಿ ಮೈಸೂರಿಗೆ ಸ್ಥಳಾಂತರ ಆಗುವುದನ್ನು ನಿಲ್ಲಿಸಲಾಗುವುದು, ಬೀದಿರಂಪ ಮಾಡಿ ರಾಜಕಾರಣಿಗಳಿಗೆ ಮುಟ್ಟಿಸಿದಾಗಲೆ ಅರ್ಥವಾಗುವುದು ಎಂದು ಎಚ್ಚರಿಸಿ ಹೋರಾಟಕ್ಕೆ ಕರೆ ನೀಡಿದರು.

ಹಿರಿಯ ನಾಗರೀಕರ ವೇದಿಕೆಯ ಬಿ.ಕೆ. ಮಂಜುನಾಥ್ ಮಾತನಾಡಿ, ಇಡೀ ರಾಜ್ಯ ಮತ್ತು ಜಿಲ್ಲೆಯಲ್ಲಿ ಇಂತಹ ಕಾಲೇಜು ಕ್ಯಾನ್ಸರ್ ಯೂನಿಟ್ ತಂದಿರುವ ಎಲ್ಲರಿಗೂ ವಂಧನೆಗಳನ್ನು ತಿಳಿಸುತ್ತೇವೆ. ಹಿಮ್ಸ್ ನಲ್ಲಿ ಉತ್ತಮವಾದ ವೈದ್ಯರು ಕೆಲಸ ಮಾಡುತ್ತಿದ್ದು, ಅದಕ್ಕೆ ಸಹಕಾರವಾಗಿ ಎಲ್ಲಾ ಜನಪ್ರತಿನಿಧಿಗಳು ಕೂಡ ಕೈಜೋಡಿಸಿ ಅತಾಧುನಿಕ ಕ್ಯಾನ್ಸರ್ ಯೂನಿಟ್ ಹಾಸನ ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ಕೂಡ ಯಾವ ಹಣಕಾಸು ಖರ್ಚು ಇಲ್ಲದೇ ಚಿಕಿತ್ಸೆ ಸಿಗಬೇಕು ಎಂದು ಉದ್ದೇಶದಲ್ಲಿ ಇಲ್ಲಿ ಸ್ಥಾಪನೆ ಮಾಡಲಾಗಿದೆ ಎಂದರು. ಕ್ಯಾನ್ಸರ್ ಯೂನಿಟ್ ಹಾಸನದಲ್ಲೆ ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ ಹಿರಿಯ ನಾಗರೀಕರ ವೇದಿಕೆಯಿಂದ ಮನವಿ ಮಾಡಲಾಗುವುದು. ಭಾನುವಾರದಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮೊದಲ ಹಂತದಲ್ಲಿ ಮನವಿ ನೀಡಿದ ನಂತರ ವೈದ್ಯಕಿಯ ಮಂತ್ರಿಗಳಿಗೆ ಮನವಿ ಕೊಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಹಿರಿಯ ನಾಗರೀಕರ ವೇದಿಕೆಯ ಆರ್.ಪಿ. ವೆಂಕಟೇಶ್ ಮೂರ್ತಿ, ಚಂದ್ರೇಗೌಡ, ಈರೇಗೌಡ, ಮಹಾಲಕ್ಷ್ಮಿ ದೊಡ್ಡಯ್ಯ, ಜಯಲಕ್ಷ್ಮಿ ರಾಜಣ್ಣಗೌಡ, ಕಾಮಾಕ್ಷಿ, ವೆಂಕಟರಾಮು, ವನಜಾಕ್ಷಮ್ಮ, ಹಿರಿಯ ಪತ್ರಕರ್ತರಾದ ವೆಂಕಟೇಶ್ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
Hassan
2026ರ ಜು.18ಕ್ಕೆ ದಿ.ಹೆಚ್.ಸಿ.ಶ್ರೀಕಂಠಯ್ಯ ಜನ್ಮ ಶತಮಾನೋತ್ಸವ: ಉದಯಕುಮಾರ್
ವರದಿ: ದಯಾನಂದ ಶೆಟ್ಟಿಹಳ್ಳಿ
ಚನ್ನರಾಯಪಟ್ಟಣ: ತಾಲೂಕಿಗೆ ಹಲವಾರು ಕೊಡಿಗೆ ನೀಡಿರುವ ಮಾಜಿ ಕಂದಾಯ ಸಚಿವ ದಿ.ಹೆಚ್.ಸಿ.ಶ್ರೀಕಂಠಯ್ಯ ಅವರ ಜನ್ಮ ಶತಮಾನೋತ್ಸವವನ್ನು 2026ರ ಜು.18 ರಂದು ಆಚರಿಸಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಉದಯಕುಮಾರ್ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ, ಜಿಲ್ಲೆ ಹಾಗೂ ತಾಲೂಕಿಗೆ ಅವರ ಕೊಡುಗೆ ಅಪಾರ ಎಂದರು.

ಚನ್ನರಾಯಪಟ್ಟಣ ಹಾಗೂ ಹಿರೀಸಾವೆ ಗ್ರಾಮದ ಸೂಕ್ತ ಸ್ಥಳದಲ್ಲಿ ಶ್ರೀಕಂಠಯ್ಯ ಅವರ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದು. ರಾಜ್ಯ ಮಟ್ಟದ ಮಹಿಳಾ ಸಬಲೀಕರಣ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಮುಖಂಡರೆಲ್ಲಾ ಸೇರಿ ಪೂರ್ವಭಾವಿ ಸಭೆ ನಡೆಸಿ ದಿನಾಂಕ ನಿಗದಿಪಡಿಸಲಿದ್ದು ಹಂತ ಹಂತವಾಗಿ ಅವರ ಹೆಸರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕ್ರೀಡಾಕೂಟಗಳು ಹಾಗೂ ವಿವಿಧ ವಿಶೇಷ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಕಂದಾಯ ಸಚಿವ ದಿ.ಹೆಚ್.ಸಿ.ಶ್ರೀಕಂಠಯ್ಯ ಅವರ ಸಾಧನೆ ಕುರಿತ ವಿಚಾರಗಳನ್ನು ಒಳಗೊಂಡ 2026 ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಬು, ತಾಲ್ಲೂಕು ಯೂಥ್ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಆಕರ್ಷಗೌಡ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರು, ವಾಸಣ್ಣ, ಪ್ರಮುಖರಾದ ಅಶೋಕ್ ಹಾಗೂ ಇತರರು ಇದ್ದರು.
Hassan
ಭಾರಿ ಹೊಂಡದಲ್ಲಿ ಸಿಲುಕಿದ ಲಾರಿ: ಒಂದು ಗಂಟೆ ಕಾಲ NH-75 ಬಂದ್
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಗ್ರಾಮ ಸಮೀಪ ಲಾರಿಯೊಂದು ಭಾರೀ ಹೊಂಡದಲ್ಲಿ ಸಿಲುಕಿದ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.
ಮಂಗಳೂರಿನಿಂದ ಗೂಡ್ಸ್ ತುಂಬಿಕೊಂಡು ಬೆಂಗಳೂರಿನತ್ತ ಸಾಗುತ್ತಿದ್ದ ಲಾರಿಯೂ, ದೋಣಿಗಾಲ್ ಸಮೀಪದ ಕಿರಿದಾದ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿದ್ದ ಭಾರೀ ಹೊಂಡದಲ್ಲಿ ಸಿಲುಕಿಕೊಂಡಿತ್ತು. ಮುಂದೆ ಚಲಿಸಲು ಆಗದೆ ನಿಂತ ಲಾರಿಯಿಂದ ಇತರೆ ವಾಹನಗಳು ಸಾಗಲಾರದೆ ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮಂಗಳೂರು-ಬೆಂಗಳೂರು ಮಾರ್ಗದ ವಾಹನಗಳನ್ನು ಕಪ್ಪಳಿ ಗ್ರಾಮದ ಮೂಲಕ ಹಾಗೂ ಬೆಂಗಳೂರು-ಮಂಗಳೂರು ಮಾರ್ಗದ VoZಮಾನಗಳನ್ನು ಸುಬ್ರಮಣ್ಯ ರಸ್ತೆಯ ಮೂಲಕ ತಿರುಗಿಸಿ ಸಂಚಾರಕ್ಕೆ ಅವಕಾಶ ಮಾಡಿ, ವಾಹನ ದಟ್ಟಣೆಯನ್ನು ನಿಯಂತ್ರಿಸಿದರು. ನಂತರ ಕ್ರೇನ್ ಬಳಸಿ ಲಾರಿಯನ್ನು ಹೊಂಡದಿಂದ ಹೊರತೆಗೆದ ನಂತರ ಸಂಚಾರ ಸುಗಮಗೊಂಡಿತು.
Hassan
ಅಖಿಲ ಭಾರತ ಸರ್ಕಾರಿ ನೌಕರರ ಫುಟ್ಬಾಲ್ ಟೂರ್ನಿ: ಸಕಲೇಶಪುರ ತಾಲೂಕಿನ 2 ಪಿಡಿಒಗಳು ಆಯ್ಕೆ
ಸಕಲೇಶಪುರ: ಅಖಿಲ ಭಾರತ ಸರ್ಕಾರಿ ನೌಕರರ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ತಾಲೂಕಿನ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

ಆನೆಮಹಲ್ ಗ್ರಾಪಂ ಪಿಡಿಒ ವೇಣುಗೋಪಾಲ್ ಹಾಗೂ ಹಾನುಬಾಳು ಗ್ರಾ.ಪಂ. ಪಿಡಿಒ ಕೆ. ಹರೀಶ್ ಕರ್ನಾಟಕ ಸರ್ಕಾರಿ ನೌಕರರ ಫುಟ್ಬಾಲ್ ತಂಡದಲ್ಲಿ ಸ್ಥಾನಗಿಟ್ಟಿಸಿದ್ದಾರೆ. ಈಗಾಗಲೇ ಹಲವಾರು ಟೂರ್ನಿಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಪ್ರಮುಖ ಫುಟ್ಬಾಲ್ ಆಟಗಾರರಾಗಿ ಗುರುತಿಸಿಕೊಂಡಿರುವ ಅವರನ್ನು ಸ್ನೇಹಿತರು, ಸಹೋದ್ಯೋಗಿಗಳು ಅಭಿನಂದಿಸಿದ್ದಾರೆ.
-
Mysore24 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mandya7 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Hassan3 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Mandya43 minutes agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Special22 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
Kodagu5 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
-
Mysore9 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
-
Hassan3 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
