Mysore
ಕೋವಿಡ್ ಬಗ್ಗೆ ಜಿಲ್ಲೆಯ ಜನರು ಮುಂಜಾಗ್ರತೆವಹಿಸಿ: *ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಬಂಧ ಮುನ್ನೆಚ್ಚರಿಕೆಯಾಗಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಪರೀಕ್ಷೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಡ್‌ಗಳ ವ್ಯವಸ್ಥೆ, ಅಗತ್ಯ ಔಷಧಿಗಳ ದಾಸ್ತಾನಿಗೆ ಕ್ರಮವಹಿಸಿ ಎಂದರಲ್ಲದೆ, ಅಂಬುಲೆನ್ಸ್ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದರ ಜೊತೆಗೆ ಆಕ್ಸಿಜನ್ ಪ್ಲಾಂಟ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಶೀತ, ನೆಗಡಿ, ಕೆಮ್ಮು ಸಾಮಾನ್ಯವಾಗಿ ಬರುತ್ತದೆ ಅದಕ್ಕೆ ಹೆದರುವುದು ಬೇಡ ಮುನ್ನೆಚ್ಚರಿಕೆಯಿಂದ ಚಿಕಿತ್ಸೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
ವೃದ್ದರು ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಕಡಿಮೆ ಮಾಡುವ ಬಗ್ಗೆ ಹಾಗೂ ಆರೋಗ್ಯದ ಕಡೆ ಹೆಚ್ಚು ಗಮನಹರಿಸಲು ಅರಿವು ಮೂಡಿಸಿ ಎಂದು ತಿಳಿಸಿದರು.
ಕೋವಿಡ್ RTPCR ಪರೀಕ್ಷೆ ಪ್ರತಿ ತಾಲೂಕಿನಲ್ಲಿಯೂ ಮಾಡಿಸಲಾಗುತ್ತಿದೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಪಾಸಿಟಿವಿಟಿ ಜಾಸ್ತಿ ಇದೆ. ಕಳೆದ 8 ದಿನಗಳಲ್ಲಿ ಮೂರು ಸಾವಾಗಿದ್ದು 84 ಕೋವಿಡ್ ಪ್ರಕರಣಗಳು ಸಕ್ರಿಯವಾಗಿದೆ. ನಿನ್ನೆ 25 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. 20 ಕೋವಿಡ್ ಸೋಂಕಿತರು ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿಗಳಾದ ಡಾ. ಮಹಾದೇವ ಪ್ರಸಾದ್ ಅವರು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಆರ್. ಲೋಕನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರ ಸ್ವಾಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Mysore
ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅನ್ನೊದು ಅವರಿಗೆ ಗೊತ್ತಾಗಿದೆ – ಛಲವಾದಿ ನಾರಾಯಣಸ್ವಾಮಿ

ಮೈಸೂರು:
ಮೈಸೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ.
ಅಧಿಕಾರಕ್ಕೆ ಬಂದ ತಕ್ಷಣ ಪೆಟ್ರೋಲ್ ಡೀಸೆಲ್, ಹಾಲು, ವಿದ್ಯುತ್ ಸೇರಿದಂತೆ ಎಲ್ಲಾ ವಸ್ತುಗಳು ಏರಕೆಯಾಗಿದೆ.
ಹಾಲಿನ ದರ ಮೂರು ಬಾರಿ ಏರಿಕೆಯಾಗಿದೆ.
ವಿದ್ಯುತ್ ನಾಲ್ಕು ಬಾರಿ ಏರಿಕೆಯಾಗುತ್ತಿದೆ.
ಗ್ಯಾರಂಟಿಯ ಹಣವನ್ನ ಮೂರು ತಿಂಗಳಿಗೆ ಒಂದು ಬಾರಿ ಕೊಡುತ್ತಿದ್ದಾರೆ.
5 ಗ್ಯಾರೆಂಟಿ ಹೆಸರು ಹೇಳಿಕೊಂಡು 5 ವರ್ಷ ಕಳೆಯುತ್ತಾರೆ.
ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅನ್ನೊದು ಅವರಿಗೆ ಗೊತ್ತಾಗಿದೆ.
ಪರಿಶಿಷ್ಟ ವರ್ಗದ ಜನರಿಗೆ ಗ್ಯಾರೆಂಟಿ ಸಿಗುತ್ತಿಲ್ಲ.
40 ಸಾವಿರ ಕೋಟಿ ರೂಪಾಯಿ ಮೂರು ಬಜೆಟ್ ಗೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಇಷ್ಟೊಂದು ಕನಿಷ್ಟ ಅಂದುಕೊಂಡಿರಲಿಲ್ಲ.
ಕನಿಷ್ಟ ಅನಿಷ್ಟವಾಗಿದೆ.
ಕಳೆದ 5 ವರ್ಷಗಳಲ್ಲಿ ಸಾಕಷ್ಟು ತಪ್ಪುಗಳಾಗಿತ್ತು.
ಅದನ್ನ ತಿದ್ದಿಕೊಂಡು ಒಳ್ಳೆಯ ಅಧಿಕಾರ ಕೊಡಬಹುದಿತ್ತು.
ಕರ್ನಾಟಕದಲ್ಲಿ ಹಣ ಮಾಡಿ ದೇಶದಲ್ಲಿ ಕಾಂಗ್ರೆಸ್ ಕಾಪಾಡಬೇಕಾದ ಪರಿಸ್ಥಿತಿ ಬಂದಿದೆ.
ಮೈಸೂರು:
ಹನಿಟ್ರ್ಯಾಪ್ ಬಗ್ಗೆ ಸೂಕ್ತ ತನಿಖೆಯಾಗಬೇಕು.
ಹನಿಟ್ರ್ಯಾಪ್ ಎಂದರೇನು ಎಂದು ಜನ ತಲೆ ಕೆಡಿಸಿಕೊಂಡಿದ್ದಾರೆ.
ರಾಜೇಂದ್ರ ರಾಜಣ್ಣ ಹೊಸ ವಿಚಾರ ತೆಗೆದಿದ್ದಾರೆ.
ನನ್ನ ಮೇಲೆ ಕೊಲೆಗೆ ಯತ್ನ ನಡೆದಿದೆ ಎಂದು ಹೇಳಿದ್ದಾರೆ.
ದೇಶದ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ.
ಡಿ.ಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಡಿಸಿಎಂ ಸ್ಥಾನದಲ್ಲಿ ಮುಂದುವರೆಯ ಬಾರದು
ತಕ್ಷಣ ರಾಜೀನಾಮೆ ನೀಡಬೇಕು.
ಸಿಎಂ ಸಿದ್ದರಾಮಯ್ಯ ಡಿಸಿಎಂ ಶಿವಕುಮಾರ್ ಅವರನ್ನು ಉಚ್ಚಾಟನೆ ಮಾಡಲಿ.
ಸಿಎಂ ಕೈಯಲ್ಲಿ ಡಿಸಿಎಂ ಅವರನ್ನು ಉಚ್ಚಾಟನೆ ಮಾಡಲು ಸಾಧ್ಯವಿಲ್ಲದಿದ್ದರೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೊಟ್ಟು ಬಿಡಲಿ.
ಮೈಸೂರು:
ಬಿಜೆಪಿಯಿಂದ ಉಚ್ಚಾಟನೆಯಾಗ್ತಾರಾ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್.
ಮಹತ್ವದ ಸುಳಿವು ನೀಡಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ.
ಹೈಕಮಾಂಡ್ ಟೆಸ್ಟ್ ಆಟ ಬಿಟ್ಟಿದೆ.
ನೆಕ್ಷ್ಟ್ ಏನಿದ್ರು ಟಿ ಟ್ವೆಂಟ್ ಮ್ಯಾಚ್ ಆಡುತ್ತೆ.
ನೆಕ್ಷ್ಟ್ ವಿಕೆಟ್ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್.
ಮೈಸೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ.
ಮೈಸೂರು:
ರಾಜೇಂದ್ರ ರಾಜಣ್ಣ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಯಾರ ಕಿವಿಗೆ ಹೂ ಇಡುತ್ತಿದ್ದಾರೆ ಗೊತ್ತಿಲ್ಲ.
ಯತ್ನಾಳ್ ಉಚ್ಚಾಟನೆ ವಿಚಾರ.
ಯತ್ನಾಳ್ ನನಗೆ ಬಹಳ ಆತ್ಮೀಯರು.
ಮೈಕ್ ಮುಂದೆ ನಿಂತಾಗ ಮಾತನಾಡುಬಿಡುತ್ತಾರೆ.
ಪಕ್ಷವನ್ನೇ ಸಾಕಷ್ಟು ಬಾರಿ ಅವರಿಗೆ ತಪ್ಪು ತಿದ್ದುಕೊಳ್ಳಲು ಅವಕಾಶ ಕೊಟ್ಟಿತ್ತು.
ಇದು ಬೇರೆಯವರಿಗೆ ಎಚ್ಚರಿಕೆ ಗಂಟೆ.
ನಮ್ಮ ಪಕ್ಷ ಕಾರ್ಯಕರ್ತರಿಂದ ಉಳಿದಿದೆ ಹೊರತು ನಾಯಕರಿಂದಲ್ಲ.
ಈ ಪಕ್ಷ ಕಾರ್ಯಕರ್ತರ ಪಕ್ಷ.
ನಮ್ಮಲ್ಲಿ ಹುಲಿ ಯಾರು ಇಲ್ಲ.
ಹುಲಿ ಎಂದರೆ ಕಾಡಿಗೆ ಕಳುಹಿಸಿಬಿಡುತ್ತಾರೆ.
ಹೈಕಮಾಂಡ್ ನಿರ್ಧಾರವನ್ನ ಯಾರು ವಿರೋಧ ಮಾಡಬಾರದು.
ಯತ್ನಾಳ್ ಪರವಾಗಿ ನಾವಿದ್ದೇವೆ ಎಂದು ಯಾರ ಹೇಳಬಾರದು.
ಅಡ್ಜಸ್ಟಮೆಂಟ್ ರಾಜಕಾರಣಕ್ಕೆ ಹೈಕಮಾಂಡ್ ಬ್ರೇಕ್ ಹಾಕುತ್ತೆ.
ಮೈಸೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ.
Mysore
ಜಿಡಿ ಹರೀಶ್‌ಗೌಡ ಸಹಕಾರ ಸಂಘದ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ: ಎಚ್.ಪಿ.ಮಂಜುನಾಥ್

ಮೈಸೂರು: ಸಹಕಾರ ಕ್ಷೇತ್ರದಲ್ಲಿ ಇವರು ಮಾಡಿರುವ ಭ್ರಷ್ಟಾಚಾರ ಮತ್ತು ಸಹಕಾರ ಪತ್ತಿನ ಸಂಘಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರ ಸಂಬಂಧಿಕರುಗಳು ಮಾಡಿರುವ ಹಗರಣಗಳನ್ನು ಮುಚ್ಚಿಕೊಳ್ಳಲು ಶಾಸಕ ಜಿ.ಡಿ.ಹರೀಶ್ ಗೌಡ ಸಾರ್ವಜನಿಕವಾಗಿ ಮೈಸೂರಿನ ಎಂಸಿಡಿಸಿಸಿ ಬ್ಯಾಂಕ್ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಆರೋಪಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಾಸಕ ಜಿ.ಡಿ.ಹರೀಶ್ ಗೌಡ ಅವರೇ ಕಳೆದ 20 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿದ್ದಾರೆ. ಇವರೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದವರು. ಧರ್ಮಾಪುರ ಮತ್ತು ಹನಗೋಡು ಸಹಕಾರ ಪತ್ತಿನ ಸಂಘದಲ್ಲಿ ರೈತರು ಸಾಲ ಮರುಪಾವತಿಸಿದ್ದರು ಸಾಲ ಕೊಡುತ್ತಿಲ್ಲ. ಇದಕ್ಕೆ ಮಾಜಿ ಶಾಸಕರ ಹಸ್ತಕ್ಷೇಪ ಇದೆ. ನಾನು ರೈತರ ವಿರೋಧಿ ಎನ್ನುವ ರೀತಿಯಲ್ಲಿ ಬಿಂಬಿಸಿ ಮಾತನಾಡಿದ್ದಾರೆ. ಇವರು ಪ್ರತಿಭಟನೆ ಮಾಡಿದರೆ ನನ್ನ ಅಭ್ಯಂತರವಿಲ್ಲ ಆದರೆ ಸುಖಾ ಸುಮ್ಮನೆ ನನ್ನನ್ನು ಎಳೆದು ತಂದಿರುವುದು ಸರಿಯಲ್ಲ ಎಂದು ಹೇಳಿದರು.
Mysore
ನಂಜನಗೂಡು ದೊಡ್ಡ ಜಾತ್ರೆ: ಭಕ್ತರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ದರ್ಶನ್ ಧ್ರುವ ಸೂಚನೆ

ಮೈಸೂರು: ಜಾತ್ರಾ ಮಹೋತ್ಸವದ ಸಿದ್ದತೆ ಬಗ್ಗೆ ಚರ್ಚಿಸಿ, ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಮತ್ತು ಅಗತ್ಯ ತೀರ್ಮಾನಗಳನ್ನು ಕೈಗೊಳ್ಳುವಂತೆ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ತಿಳಿಸಿದರು.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದ ಸಭಾಂಗಣದಲ್ಲಿ ಇದೇ ಏಪ್ರಿಲ್ 09-04-2025 ರಂದು ನಡೆಯುವ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವದ ಹಿನ್ನೆಲೆ ಗುರುವಾರ 2 ನೇ ಹಂತದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ತಹಸೀಲ್ದಾರ್ ಶಿವಕುಮಾರ್ ಕಾಸನೂರ್ ಅವರು, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ಅವರು, ನಗರಸಭೆ ಪೌರಯುಕ್ತ ವಿಜಯ್ ಅವರು, ಎ.ಎಸ್.ಪಿ ಮಲ್ಲೇಶ್ ರವರು, ಇ.ಓ.ಜಗದೀಶ್ ರವರು, ಡಿ.ವೈ.ಎಸ್.ಪಿ ರಘು ಅವರು, ಸೇರಿದಂತೆ ವಿವಿಧ ಗ್ರಾಮದ ಯಜಮಾನರುಗಳು, ಮುಖಂಡರುಗಳು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
-
State23 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan21 hours ago
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು
-
Chamarajanagar20 hours ago
ಗುಂಡ್ಲುಪೇಟೆ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ
-
Kodagu21 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ
-
Hassan21 hours ago
ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ
-
Hassan24 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
Mysore20 hours ago
ಜಿಡಿ ಹರೀಶ್‌ಗೌಡ ಸಹಕಾರ ಸಂಘದ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ: ಎಚ್.ಪಿ.ಮಂಜುನಾಥ್
-
State16 hours ago
ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಜಸ್ಟ್ 4ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ : ಹೇಗೆ ಅರ್ಜಿ ಸಲ್ಲಿಸುವುದು?