Connect with us

Chamarajanagar

ಕೋಟಂಬಳ್ಳಿ ಗ್ರಾಮದಲ್ಲಿ ಸಾಕ್ಷರತಾ ಜಾಗೃತಿ

Published

on

ಚಾಮರಾಜನಗರ ಜ೧೯ ತಾಲೋಕಿನ ಕೋಟಂಬಳ್ಳಿ ಗ್ರಾಮದಲ್ಲಿ  ,  ಸಾಕ್ಷರತಾ ಜಾಥಾ ಏರ್ಪಡಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಮಕ್ಕಳು ಹಾಗೂ ಗ್ರಾಮಸ್ಥರು ಊರಿನಲ್ಲಿ ಸಾಕ್ಷರತಾಜಾಗೃತಿ ಜಾಥಾ ಮಾಡುವುದರ ಜೊತೆಗೆ ಮೂರು ಪ್ರಮುಖ  ಬೀದಿಗಳಲ್ಲಿ ವಿದ್ಯಾರ್ಥಿಗಳೇ  ಸ್ವತಃ ನಾಟಕ ಮತ್ತು ಹಾಡಿನ ಮೂಲಕ ಊರಿನ ಹಿರಿಯರಿಗೆ ಸಾಕ್ಷರತೆಯ ಹಾಗೂ ಸಾಕ್ಷರರಾಗುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಿದರು….
BRC ರಾಜೀವ್ ಮಾತಾನಾಡಿ ಅಕ್ಷರಕಲಿಯಲು ವಯಸ್ಸಿನ ತಾರತಮ್ಯವಿಲ್ಲ ನಾವು ಒಂದಲ್ಲು ಒಂದು ರೀತಿ ಕಲಿಯುತ್ತ ಇರುತ್ತೇವೆ ವಯಸ್ಕರ ಶಿಕ್ಷಣದಿಂದಾಗಿ ಗ್ರಾಮದಲ್ಲಿ ಅಕ್ಷರವಂತರು ಹೆಚ್ಚಾಗುತ್ತಾರೆ ಅದ್ದರಿಂದ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು
ಕಾರ್ಯಕ್ರಮದಲ್ಲಿ  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ರವರು  ಸಾಕ್ಷರತಾ ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ಗ್ರಾಮಸ್ಥರಿಗೆ ತಿಳಿಸಿಕೊಟ್ಟರು
ಅತಿಥಿ ಶಿಕ್ಷಕ ಕಲಾವಿದರು ಆದಾ  ಮನೋಜ್ ಮಸು  ಬೀದಿ ನಾಟಕ ಹಾಗೂ ಹಾಡುಗಳನ್ನು ಮಕ್ಕಳಿಗೆ 2 ಗಂಟೆಯಲ್ಲಿ  ಕಲಿಸಿ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಶ್ರಮಿಸಿದರು….
ಈ ಸಂದರ್ಭದಲ್ಲಿ  CRP ಕಿಟ್ಟು, ಗ್ರಾಮಪಂಚಾಯಿತಿ ಸದ್ಯಸರು ಚಿನ್ನಸ್ವಾಮಿ, SDMC ಅಧ್ಯಕ್ಷರು ಶಿವಸ್ವಾಮಿ, ಶಾಲಾ  ಶಿಕ್ಷಕರು ನಾಗಸೇನ, ಸಾವಿತ್ರಿಭಾಪುಲೆ ಸಂಘದ ಜಿಲ್ಲಾಧ್ಯಕ್ಷರು ಭವಾನಿದೇವಿ,
 ಕೋಟಂಬಳ್ಳಿ ಶಾಲಮಕ್ಕಳು ಗ್ರಾಮಸ್ಥರು ಭಾಗವಹಿಸಿದ್ದರು
Continue Reading
Click to comment

Leave a Reply

Your email address will not be published. Required fields are marked *

Chamarajanagar

ಬೆಳಗಿನ ವೇಳೆ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ

Published

on

ಕೊಳ್ಳೇಗಾಲ: ತಾಲೂಕಿನ ಕುಂತೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕಚೇರಿ ಮುಂಭಾಗದಲ್ಲಿ ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಲಾಯಿತು.

ಕುಂತೂರು ಭಾಗದ ಜಮೀನುಗಳಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಜಮೀನಿಗೆ ತೆರಳಲು ಕಾಡು ಪ್ರಾಣಿಗಳಿಂದ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ರೈತರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸೆಸ್ಕ್ ಕಾರ್ಯಪಾಲಕ ಅಭಿಯಂತರ ತಬಸ್ಸುಮ್ ಆಗಮಿಸಿ ಮಾತನಾಡಿದ ಅವರು, ಬಳ್ಳಾರಿಯಿಂದ ಹೆಚ್ಚುವರಿ ವಿದ್ಯುತ್ ತರಲು ಹೆವಿ ಲೈನ್ ಕಾಮಗಾರಿ ನಡೆಯುತ್ತಿರುವ ಕಾರಣಕ್ಕೆ ರಾತ್ರಿ ವೇಳೆ ವಿದ್ಯುತ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಫೆ. 12ರ ನಂತರ ಬೆಳಗಿನ ಸಮಯದಲ್ಲಿ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು. ಈ ಭರವಸೆಯ ಮೇರೆಗೆ ರೈತರು ಪ್ರತಿಭಟನೆಯನ್ನು ಕೈಬಿಟ್ಟು ತೆರಳಿದರು. ಈ ವೇಳೆ ಎಇಇ ರಾಜು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಕುಂತೂರು ನಂಜುಂಡಸ್ವಾಮಿ, ಗಿರೀಶ್ ಆಲಹಳ್ಳಿ, ತೋಟದಾರ್ಯ ತೇರಂಬಳ್ಳಿ, ಲೋಕೇಶ್, ರೇಚಣ್ಣ, ಸತೀಶ್, ಗುರುಪಾದಸ್ವಾಮಿ ತೇರಂಬಳ್ಳಿ, ಮಹೇಶ್, ಕುಂತೂರು ಮಲ್ಲಿಕಾರ್ಜುನ, ನಿರಂಜನಮೂರ್ತಿ, ಬಾಬು, ನಾಗೇಶ್, ಅಂಗಡಿ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Continue Reading

Chamarajanagar

ಗಾಜನೂರಿನಲ್ಲಿ ರಾಜಕುಮಾರ್ ಸರ್ಕಲ್ ಸ್ಥಾಪನೆ

Published

on

ಚಾಮರಾಜನಗರ:  ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಾಜನೂರು ಗ್ರಾಮದಲ್ಲಿ ಗ್ರಾಮಸ್ಥರ ಮುಂದಾಳತ್ವದಲ್ಲಿ ಇಂದು ಕಣ್ಮನ ಸೆಳೆಯುವಂತೆ ವರನಟ ಡಾ. ರಾಜಕುಮಾರ್ ಅವರ ಹೆಸರಿನ ಸರ್ಕಲ್ ಸ್ಥಾಪಿಸಲಾಯಿತು.

ಗಾಜನೂರಿನ ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ಸರ್ಕಲ್ ಗೆ ಡಾ.ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಇದೇ ಸಂದರ್ಭದಲ್ಲಿ ಡಾ.ರಾಜಕುಮಾರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ವಿವಿಧ ಪ್ರದರ್ಶನಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದವು.

ಈ ಸಂದರ್ಭದಲ್ಲಿ ಡಾ.ರಾಜಕುಮಾರ್ ಅವರ ಸಂಬಂಧಿಗಳಾದ ಗೋಪಾಲ್, ರಾಮಮೂರ್ತಿ, ಕದಿರಯ್ಯ ಮಾಸ್ಟರ್, ನಾಗರಾಜು, ಪ್ರೇಮಗೋಪಾಲ್, ಮಂಗಳಮ್ಮ ಸೇರಿದಂತೆ ದೊಡ್ಡ ಗಾಜನೂರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

Chamarajanagar

ಶೆಟ್ಟಳ್ಳಿ ಗ್ರಾಮದಲ್ಲಿ ಆರು ಹಸುಗಳ ಅಕಾಲಿಕ ಸಾವು: ಗ್ರಾಮಸ್ಥರಲ್ಲಿ ಆತಂಕ

Published

on

ಹನೂರು: ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಮೇಯಲು ಹೋಗಿ ವಾಪಸ್ ಬರುತ್ತಿದ್ದ ಆರು ಹಸುಗಳು ಅಚಾನಕ್ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೃತಪಟ್ಟ ಜಾನುವಾರುಗಳು ಗ್ರಾಮದ ಪರಶಿವ ಅವರಿಗೆ ಸೇರಿದವು ಎನ್ನಲಾಗಿದೆ. ವಿಷಯುಕ್ತ ಮೇವು ಸೇವನೆಯಿಂದಲೇ ಜಾನುವಾರುಗಳ ಸಾವು ಸಂಭವಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಜಾನುವಾರುಗಳು ಮೇಯಲು ಹೋಗಿ ಮರಳುವ ವೇಳೆ ಏಕಾಏಕಿ ಕುಸಿದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ರೈತರು ಹಾಗೂ ಗ್ರಾಮಸ್ಥರು, ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಜಾನುವಾರುಗಳ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue Reading

Trending

error: Content is protected !!