Connect with us

Chamarajanagar

ಕೊಳ್ಳೇಗಾಲ ತಾಲ್ಲೂಕಿನ ಗ್ರಾಮಗಳಾದ ಟಗರಪುರ ಮತ್ತು ಕುಂತೂರು ಗ್ರಾಮ ಪಂಚಾಯತಿ ಗಳಲ್ಲಿ ಕೂಸಿನ ಮನೆ ಉದ್ಘಾಟನೆ ಕಾರ್ಯಕ್ರಮ.

Published

on

ಕ್ಷೇತ್ರ ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ಕೂಸಿನ ಮನೆ ಉದ್ಘಾಟಿಸಿ ಮಾತನಾಡಿ ಘಾನ ಸರ್ಕಾರವು ಗ್ರಾಮ ಪಂಚಾಯತಿ ಗಳಲ್ಲಿ ನರೇಗಾ ಯೋಚನೆ ಮಾಡಿ ಕೂಲಿ ಕೆಲಸ ಮಾಡುವ ತಾಯಂದಿರ ಮನದಲ್ಲಿಟ್ಟುಕೊಂಡು ಈಗ ತಾನೆ ಜನಿಸಿದ ಮಗುವಿನಿಂದ ಮೂರು ವರ್ಷದ ಒಳಗಿನ ಮಗುವನ್ನು ಪಾಲನೆ ಪೋಷಣೆಗಾಗಿ ತೆರೆದಿರುವ ಕೂಸಿನ ಮನೆ ಇದಾಗಿದೆ..

ಪ್ರದೇಶದ ಸಾಮಾನ್ಯ ವರ್ಗದ ಮಕ್ಕಳ ಲಾಲನೆ-ಪಾಲನೆಗೆ ರಾಜ್ಯ ಸರ್ಕಾರದ ಕೂಸಿನ ಮನೆ ಕಾರ್ಯಕ್ರಮ ವರದಾನವಾಗಿದೆ. ಕೂಸಿನ ಮನೆ ಕಾರ್ಯಕ್ರಮ ಅನುಷ್ಟಾನದಿಂದ ಗ್ರಾಮೀಣ ಮಹಿಳಾ ಕೂಲಿಕಾರರಿಗೆ ಉದ್ಯೋಗಾವಕಾಶ ದೊರೆಯಲಿದೆ
ನರೇಗಾ ಕೆಲಸಕ್ಕೆ ಬರುವ ಮಹಿಳೆಯರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಬರುವುದರಿಂದ ಮಕ್ಕಳಿಗೆ ಲಾಲನೆ-ಪಾಲನೆ ಜೊತೆಗೆ ಪೌಷ್ಟಿಕಾಂಶವುಳ್ಳ ಆಹಾರ ದೊರಕುತ್ತದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಉದ್ಯೋಗವೂ ಸಿಗುವುದರ ಜೊತೆಗೆ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯೂ ನೀಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳ ಹಾಗೂ ಮಹಿಳೆಯರ ಶ್ರಯೋಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.

ಅಂತೆಯೇ ತಾಲೂಕಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಆರಂಭಿಸಿ ಅದರ ಕೇರ್ ಟೇಕರ್ಸ್‍ಗಳಿಗೆ(ಆರೈಕೆದಾರರು) ರನ್ನು ಸಹ ನೇಮಿಸಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಗಳಿಗೆ ಈ ಯೋಜನೆ ಪೂರಕವಾಗಿದು, ತಾಯಂದಿರಿಗೆ ಸಂಸಾರ ನಿರ್ವಹಿಸಲು ತೊಂದರೆ ಆಗಬಾರದು ಎಂದು ಮನದಲ್ಲಿಟ್ಟುಕೊಂಡು ಮೂರು ವರ್ಷ ಒಳಗಿನ ಮಕ್ಕಳನ್ನು ಕೂಸಿನ ಮನೆ ಗೆ ಬಿಡುವುದರ ಮುಖಾಂತರ ತಾವು ಕೆಲಸ ನಿರ್ವಹಿಸಬಹುದಾಗಿದೆ.

ತಾಯಂದಿರು ತಾವು ಕೂಲಿ ಕೆಲಸ ಹೋಗುವ ಮೊದಲು ಮೂರು ವರ್ಷದ ಒಳಗಿನ ಮಕ್ಕಳನ್ನು ಕೂಸಿನ ಮನೆಗೆ ಬಿಟ್ಟು ತಾವು ಕೆಲಸಕ್ಕೆ ಹೋಗಬಹುದಾಗಿದೆ,

ಕೊಳ್ಳೇಗಾಲ ತಾಲ್ಲೂಕಿನ 16 ಗ್ರಾಮ ಪಂಚಾಯತಿ ಗಳಲ್ಲಿ 16 ಗ್ರಾಮ ಪಂಚಾಯತಿಯಲ್ಲೂ ಕೂಸಿನ ಮನೆ ನಿರ್ಮಾಣವಾಗಿದ್ದು ಬಹಳ ಸಂತಸ ಎಂದರು.

ಕೂಸಿನ ಮನೆಯ ಮಕ್ಕಳ ಪೋಷಣೆಗಾಗಿ ನಿಯೋಜಿಸಿರುವ ಆರೈಕೆದಾರರಿಗೂ ದಿನಕ್ಕೆ 316 ರೂ ಗಳನ್ನು ನೀಡಲಾಗುವುದು.

ಸರ್ಕಾರವು ಪ್ರತಿ ಕೂಸಿನ ಮನೆ ನಿರ್ವಹಣೆಗೆ 1 ಲಕ್ಷ ಮೀಸಲಿಟ್ಟಿದ್ದು,

ಇದೇ ವೇಳೆ ಮಾತನಾಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀನಿವಾಸ್ ರವರು ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೆ ಹೆಚ್ಚು ಪಂಚಾಯಿತಿಗಳಿದ್ದು , ಅದರಲ್ಲಿ 4 ಸಾವಿರ ಪಂಚಾಯಿತಿಗಳಿಗೆ ಕೂಸಿನ ಮನೆಗೆ ಅವಕಾಶ ಕಲ್ಪಿಸಲಾಗಿದ್ದು, ಯಾವ ಪಂಚಾಯತಿಗಳಲ್ಲಿ 100 ಮಾನವ ದಿನಗಳು ಪೂರೈಸಿದ ಪಂಚಾಯತಿಗಳಿಗೆ ಕೂಸಿನ ಮನೆ ನಿರ್ಮಾಣ ಮಾಡಲಿಕ್ಕೆ ಅವಕಾಶ ಕೊಟ್ಟಿದೆ.
ಹಾಗೂ ಕೂಸಿನ ಮನೆ ಪ್ರಾರಂಭದಿಂದಾಗಿ ಎಲ್ಲ ಬೇಬಿ ಕೇರ್ ಟೇಕರ್ ಗಳು ಮತ್ತು ಬೇಬಿ ಸಿಟ್ಟಿಂಗ್ ಗಳಿಗೆ ಈ ಯೋಜನೆ ಸೈಡ್ ಯೋಡೆಯಲಿದೆ.
ಇದು ಬರಿ ಪ್ರಾಯೋಗಿಕವಾಗಿ ಅಹಿದ ಗ್ರಾಮ ಪಂಚಾಯ್ತಿಗಳಲ್ಲಿ ಕೂಸಿನ ಮನೆ ಪ್ರಾರಂಭಿಸಿದು ಈ ಯೋಜನೆ ಏನಾದರೂ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಪ್ರತಿ ಹಳ್ಳಿ ಗಳಿಗೂ ಈ ಯೋಜನೆ ವ್ಯಾಪಿಸಬಹುದು ಎಂದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ

Published

on

ಯಳಂದೂರು ಪಟ್ಟಣದ ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭಗೊಂಡಿದೆ ಎಂದು ಪ್ರಾಂಶುಪಾಲರಾದ ವಿಜಯ ರವರು ತಿಳಿಸಿದರು

2024-25 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಶಿಕ್ಷಣ ನೀತಿಗೆ ಎಸ್ ಇ ಪಿ ಅನುಗುಣವಾಗಿ ಮೂರು ವರ್ಷಗಳ ಬಿ.ಎ ಬಿ.ಕಾಂ. ಹಾಗೂ ಬಿ.ಬಿ.ಎ. ಪದವಿ ಕೋರ್ಸುಗಳು ಹೆಚ್ ಇ ಕೆ , ಹೆಚ್ ಪಿ ಕೆ, ಪಿ ಇ ಎಸ್, ಹೆಚ್ ಎಸ್ ಕೆ, ಈ ಕೋರ್ಸುಗಳ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದು

Continue Reading

Chamarajanagar

ಸಾರ್ವಜನಿಕರು ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ, ಶಕ್ತಿ, ಸುಕನ್ಯಾ ಸಮೃದ್ಧಿ ಯೋಜನೆ

Published

on

ಸಾರ್ವಜನಿಕರು ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ, ಶಕ್ತಿ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ನೋಡಲ್ ಅಧಿಕಾರಿ ಸಕಲೇಶ್ವರ್ ಅವರು ತಿಳಿಸಿದರು.

ಅವರು ತಾಲೂಕಿನ ಎರಗಂಬಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು 14 15ನೇ ಹಣಕಾಸಿನ ಯೋಜನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನರೇಗಾ ಯೋಜನೆ ಮತ್ತು ಸರ್ಕಾರದಿಂದ ಸಾವು ಸಿಗುವಂತಹ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.

ಸಾಮಾಜಿಕ ಲೆಕ್ಕಪರಿಶೋಧನಾ ಅಧಿಕಾರಿ ನಾರಾಯಣ್ ಮಾತನಾಡಿ ಯರಗಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಗ್ರಾಮ ಪಂಚಾಯತಿ ವತಿಯಿಂದ 119 ಕಾಮಗಾರಿಗಳು, ತೋಟಗಾರಿಕೆ ಇಲಾಖೆ ವತಿಯಿಂದ 9 ಅರಣ್ಯ ಇಲಾಖೆಯಿಂದ ಒಂಬತ್ತು ಕೃಷಿ ಇಲಾಖೆಯಿಂದ ಒಂಬತ್ತು ಕಾಮಗಾರಿಗಳು ಮಾಡಲಾಗಿದ್ದು ಒಟ್ಟು 156 ಕಾಮಗಾರಿಗಳನ್ನು ಮಾಡಲಾಗಿದೆ. ಇದಕ್ಕಾಗಿ ಒಟ್ಟು ಕೂಲಿ ಮತ್ತು 18,24,927 ರೂಪಾಯಿಗಳು ಮತ್ತು ಸಾಮಗ್ರಿ ಮತ್ತು 51,82,599 ರೂಪಾಯಿಗಳು ಸೇರಿ ಒಟ್ಟು ಮೊತ್ತ 70,7,2525 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇದಕ್ಕಾಗಿ ಒಟ್ಟು 596 ಮಾನವ ದಿನಗಳನ್ನು ನಿರ್ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ರೇಷ್ಮೆ ಇಲಾಖೆ ಸಾಮಾಜಿಕ ಅರಣ್ಯ ಇಲಾಖೆ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಯಲ್ಲಿ ಬರುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಗ್ಯ, ಸದಸ್ಯರಾದ ಮಲ್ಲು ಸಿದ್ದರಾಜು, ಪಿಡಿಒ ಮಂಜು, ಸಿಬ್ಬಂದಿಗಳಾದ ಇಂದ್ರ ,ಸಿದ್ದರಾಮು,ಅಧಿಕಾರಿಗಳಾದ ರಂಜಿನಿ ಸೇರಿದಂತೆ ಗ್ರಾಮಸ್ಥರು ಹಾಗೂ ಇತರರು ಹಾಜರಿದ್ದರು

Continue Reading

Chamarajanagar

ಪರಿಹಾರ, ನಾಲೆ ಹಾಗೂ ಒಳ ಚರಂಡಿ   ಮುಚ್ಚಿರುವುದು, ಎ ಸಿ ಗೆ ಮನವಿ 

Published

on

ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಉಪ – ವಿಭಾಗಧಿಕಾರಿ ರವರಿಗೆ

ಕೆ – ಶಿಪ್ ರವರು ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿದ್ದು, ಭೂಮಿ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಿಲ್ಲ,  ಆದರೂ ಕಾಮಗಾರಿ ಮಾಡುವುದಾಗಿ ಹೇಳುತ್ತಿದ್ದಾರೆ.    ಪಟ್ಟಣದ ಸಮೀಪ ಇರುವ  ಹಾರಂಗಿ ಕಿರು ಕಾಲುವೆಯನ್ನು  ಮುಚ್ಚಿದ್ದು, ಈ ಭಾಗದಲ್ಲಿ ಧನ – ಕರು,

ಜಾನುವಾರುಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಮತ್ತು ಒಳ ಚರಂಡಿಯನ್ನು ಮುಚ್ಚಿ, ಈ ಭಾಗದಲ್ಲಿ ವಾಸಿಸುತ್ತಿರುವವರಿಗೆ ಹಿಂಸೆ ಆಗುತ್ತಿದೆ. ಕೇಳಲು ಹೋದರೆ    ಹೆದರಿಸುತ್ತಿದ್ದಾರೆ, ಸ್ಥಳ ಪರಿಶೀಲನೆ ಮಾಡಬೇಕು  ಎಂದು ಡಿ ಎಸ್ ಎಸ್  ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಹುಣಸೂರು ಉಪ – ವಿಭಾಗಾಧಿಕಾರಿ ಮಹಮದ್ ಯಾರಿಸ್ ಸುಮೈ ರ್ ರವರಿಗೆ ಮನವಿ ಸಲ್ಲಿಸಿದರು.

ದೂರು ಸ್ವೀಕರಿಸಿ ಮಾತನಾಡಿದ ಉಪ – ವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಿ, ಭೂ ಮಾಲೀಕರಿಗೆ ಪರಿಹಾರ,ಕೊಡಿಸುವ ಭರವಸೆ ನೀಡಿದರು.

ತಹಸೀಲ್ದಾರ್ ನರಗುಂದ, ಉಪ – ತಹಸೀಲ್ದಾರ್ ಮಹೇಶ್,ರೈತ ಮತ್ತು ಕಾರ್ಮಿಕ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಚಂದ್ರು, ಲಕ್ಕಿಕುಪ್ಪೆ ರಮೇಶ್, ಸ್ಥಳೀಯ ವಾಸಿ ವಿನಯ್, ಹರೀಶ್ ಇನ್ನಿತರರು ಇದ್ದಾರೆ.

Continue Reading

Trending

error: Content is protected !!