Connect with us

Hassan

ಕೊಳಚೆ ನೀರು ಸಂಸ್ಕರಣೆ ಕೇಂದ್ರ ಸ್ಥಳಾಂತರಕ್ಕೆ ಆಗ್ರಹ, ಡಿಸಿಗೆ ಮನವಿ

Published

on

ಹಾಸನ : ತಾಲ್ಲೂಕು, ಕಸಬಾ ಹೋಬಳಿ, ಹಾಸನ ಗ್ರಾಮದ ಟೌನ್‌ನಲ್ಲಿರುವ ಸ.ನಂ ೪೪೧ರ ಜಮೀನಿನಲ್ಲಿ, ಕೊಳಚೆ ಮತ್ತು ಒಳಚರಂಡಿ ನಿರ್ಮೂಲನ ಮಂಡಳಿ, ಇಲಾಖೆಯವರಿಂದ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸ್ಥಳಾಂತರಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ಸಯ್ಯಾದ್ ನದೀಮ್ ಮಾಧ್ಯಮದೊಂದಿಗೆ ಮಾತನಾಡಿ, ಈ ಜಾಗವು ಸರ್ಕಾರದ ದಿಶಾಂಕ್ ಆಪ್‌ನಲ್ಲಿ ಪರಿಶೀಲಿಸಲಾಗಿ, ಕೆರೆಯ ಜಾಗವಾಗಿದ್ದು, ಹಾಸನ ನಗರದ ವಾರ್ಡ್ ನಂ ೧೬,೧೭,೧೮ ರಲ್ಲಿ ಸಾರ್ವಜನಿಕರು ವಾಸವಾಗಿದ್ದು, ಹಾಗೂ ಹಾಲಿ ಪವಿತ್ರ ಈದ್ಗಾ ಮೈದಾನದ ಮುಂಭಾಗದಲ್ಲಿದೆ. ಸರ್ಕಾರಿ ನಿಯಮದಂತೆ ಕೆರೆಯ ಜಾಗವು ಸರ್ಕಾರದ ಸ್ವತ್ತಾಗಿದ್ದು, ಕೆರೆಯ ಜಾಗದಲ್ಲಿ ಯಾವುದೇ ಇತರೆ ಕಾಮಗಾರಿಗಾಗಲೀ, ಕಟ್ಟಡಗಳಿಗಾಗಲೀ ನೀಡಲು ಅವಕಾಶವಿರುವುದಿಲ್ಲ ಎಂದರು. ನಮಗೆ ತಿಳಿದು ಬಂದಿರುವಂತೆ ಕೆರೆಯ ಜಾಗದಲ್ಲ ಕರ್ನಾಟಕ ಕೊಳಚೆ ಮತ್ತು ಒಳಚರಂಡಿ ನಿರ್ಮೂಲನ ಮಂಡಳಿಯಿಂದ, ಕೊಳಚೆ ನೀರು ಸಂಸ್ಕರಣೆ ಕೇಂದ್ರ ಮಾಡುವ ಉದ್ದೇಶವಿದೆ, ಇದರಿಂದ, ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ ಎಂದು ದೂರಿದರು. ಈ ಜಾಗದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಮೀನಿನಲ್ಲಿ, ಸರ್ಕಾರಿ ಶಾಲೆಯಾಗಲಿ, ಪಾರ್ಕ್ ಆಗಲಿ, ಆಸ್ಪತ್ರೆಯಾಗಲಿ, ನಿರ್ಮಿಸಿದಲ್ಲಿ ನಮ್ಮ ಅಭ್ಯಂತರವಿರುವುದಿಲ್ಲ. ಆದರೆ ಇತರೆ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗುವ ಕೊಳಚೆ ನೀರು ಸಂಸ್ಕರಣೆ ಕೇಂದ್ರ ತೆರೆಯಲು ಅವಕಾಶ ಕೊಡ ಬಾರದು ಎಂಬುದು ಎಲ್ಲಾ ಸಾರ್ವಜನಿಕರ ಅಭಿಪ್ರಾಯವಾಗಿದ್ದು, ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಿವಾಸಿಗಳಾದ ಇಸ್ಮಾಯಿಲ್, ಅಮಾನುಲ್ಲಾ ಶರೀಫ್, ಆಸೀಫ್, ರಶೀದ್, ಶಾರುಕ್, ನದೀಮ್, ಅಲೀಮ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ವಿಕಸಿತ ಭಾರತ ಸಂಕಲ್ಪಕ್ಕೆ ಕೇಂದ್ರದ ಬಜೆಟ್ ಪೂರಕ – ಶಾಸಕ ಸಿಮೆಂಟ್ ಮಂಜು.

Published

on

 ಸಕಲೇಶಪುರ : ವಿಕಸಿತ ಭಾರತ ಮೋದಿಜಿಯವರ ಕನಸು. 2047ಕ್ಕೆ ವಿಕಸಿತ ಭಾರತ ಆಗಬೇಕು ಅನ್ನೊ ಸಂಕಲ್ಪಕ್ಕೆ ಪೂರಕವಾಗಿ ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಈ ಭಾರಿಯ ಬಜೆಟ್ ಮಂಡಿಸಿದ್ದಾರೆ.  ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸೋಮವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಈ ಬಜೆಟ್ ಮೂರು ಪ್ರಮುಖ ಕರ್ತವ್ಯಗಳ ಆಧಾರದ ಮೇಲೆ ಅಭಿವೃದ್ಧಿ ಪೂರಕ ಆಡಳಿತದತ್ತ ಸ್ಪಷ್ಟ ದಿಕ್ಸೂಚಿಯನ್ನು ನೀಡಿದೆ. ಮೊದಲನೆಯದಾಗಿ, ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಗೆ ವೇಗ ನೀಡುವುದು ಮತ್ತು ಆರ್ಥಿಕತೆ ಚೇತರಿಸಿಕೊಳ್ಳುವ ಶಕ್ತಿಯನ್ನು ವೃದ್ಧಿಸುವುದು; ಎರಡನೆಯದಾಗಿ, ಯುವಜನತೆಯ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಅವರಲ್ಲಿ ಹೊಸ ಸಾಮರ್ಥ್ಯ ಬೆಳೆಸುವುದು ಹಾಗೂ ಮೂರನೆಯದಾಗಿ, ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಪ್ರತಿಯೊಂದು ಕುಟುಂಬ, ಸಮುದಾಯ ಮತ್ತು ಪ್ರದೇಶಗಳಿಗೆ ಅಗತ್ಯ ಸಂಪನ್ಮೂಲ ಹಾಗೂ ಸಮಾನ ಅವಕಾಶಗಳನ್ನು ಒದಗಿಸಿ, ಎಲ್ಲರೂ ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಈ ಬಜೆಟ್‌ನ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


◦ ಈ ಬಜೆಟ್ ’ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ನಂತಹ ವೇದಿಕೆಗಳ ಮೂಲಕ ಯುವಜನರ ಆಲೋಚನೆಗಳನ್ನು ನೀತಿ ನಿರೂಪಣೆಯಲ್ಲಿ ಅಳವಡಿಸಿಕೊಂಡಿರುವುದು ಶ್ಲಾಘನೀಯ. ಇದು ಯುವಜನರನ್ನು ಕೇವಲ ಫಲಾನುಭವಿಗಳನ್ನಾಗಿ ನೋಡದೆ, ರಾಷ್ಟ್ರದ ನಿರ್ಧಾರಗಳಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಿದೆ. ಆ ಮೂಲಕ ಭಾರತದ ಮುಂದಿನ ಪ್ರಗತಿಯನ್ನು ಯುವಜನರು ಮುನ್ನಡೆಸುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪದೇ ಪದೇ ಒತ್ತಿ ಹೇಳಿದ್ದು, ಅದರತ್ತ ಈ ಬಜೆಟ್ ಕೂಡ ಗಮನಹರಿಸಿರುವುದು ಸಮಯೋಚಿತವೆನಿಸಿದೆ ಎಂದು ಹೇಳಿದರು.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಜೆಟ್ ಮಂಡಿಸಿದ್ದಾರೆ.

ಕರ್ತವ್ಯ ಭವನದಲ್ಲಿ ಈ ಬಜೆಟ್ ತಯಾರಾಗಿದ್ದು.ನಿರ್ಮಲಾ ಸೀತಾರಾಮನ್ ನಮ್ಮವರು. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಅವರು 9ನೇ ಬಾರಿ ದಾಖಲೆಯ ಬಜೆಟ್ ಮಂಡಿಸಿದ್ದಾರೆ.ಕ್ರೀಡಾ ಕ್ಷೇತ್ರ, ನಾರಿ ಶಕ್ತಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಯಾವುದೇ ಹೊಸ ತೆರಿಗೆಯನ್ನ ಹೇರಿಲ್ಲ. ಸರ್ವಸ್ಪರ್ಷಿ, ಸರ್ವವ್ಯಾಪಿ ಬಜೆಟ್ ಇದು.ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಆರ್ಥಿಕ ಸದೃಢತೆ, ವಿಶ್ವಗುರುವಾಗಲು ಪೂರಕ ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದರು.

Continue Reading

Hassan

ಅರೇಹಳ್ಳಿಯಲ್ಲಿ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರ

Published

on

ಅರೇಹಳ್ಳಿ: ಸಮಾಜದಲ್ಲಿ ಶಾಂತಿ ಕಾಪಾಡುತ್ತ ಸಾರ್ವಜನಿಕರ ರಕ್ಷಣೆಗಾಗಿ ಪಣತೊಟ್ಟು, ಕಾನೂನು ಸುವ್ಯವಸ್ಥೆ ಪಾಲನೆಯ ಜೊತೆಗೆ ಅಪರಾದ ತಡೆಯಲು ಶ್ರಮಿಸುವ ಆರಕ್ಷಕರು ಇದೀಗ ಇನ್ನೊಬ್ಬರ ಜೀವರಕ್ಷಣೆಗಾಗಿ ರಕ್ತದಾನ ಮಾಡುತ್ತಿರುವುದು ಪ್ರಶಂಸನೀಯ ಎಂದು ಸ್ಥಳೀಯರು ಸ್ಲಾಘನೆ ವ್ಯಕ್ತಪಡಿಸಿದ್ದಾರೆ.

ಜೀವದಾನಕ್ಕೆ ಸಮಾನ ಪವಿತ್ರ ಕಾರ್ಯವಾದ ರಕ್ತದಾನವು ಕೇವಲ ಜೀವಗಳನ್ನು ಉಳಿಸುವುದಲ್ಲದೆ, ದಾನಿಯ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಒಬ್ಬರ ರಕ್ತದಾನದಿಂದ ಮತ್ತೊಬ್ಬರ ಜೀವಕ್ಕೆ ಸಂಜೀವಿನಿಯಾಗಬಹುದು ಆದ್ದರಿಂದ ಎಲ್ಲರೂ ಅದಕ್ಕಾಗಿ ಮುಂದಾಗಬೇಕು ಎಂಬ ಚಿಂತನೆಯಿಂದ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಇತರರಿಗೂ ಪ್ರೇರಣೆಯಾಗಿದ್ದಾರೆ.

ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರದಂದು ಲಯನ್ಸ್ ಸಂಸ್ಥೆ, ಯೋಗ ಚೇತನ ಕೇಂದ್ರ ಹಾಗೂ ಶಿವಕುಮಾರ ಸ್ವಾಮೀಜಿ ಭಕ್ತ ವೃಂದದದವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ವೈದ್ಯಾಧಿಕಾರಿ ಡಾ. ಅನುಪಮಾ, ಪಿ.ಎಸ್.ಐ ಶೋಭಾ ಬರಮಣ್ಣನವರ್, ವೀರಶೈವ ಘಟಕದ ಹೋಬಳಿ ಅಧ್ಯಕ್ಷ ತೇಜಪಾಲ್, ಲಯನ್ ಸಂಸ್ಥೆಯ ಅಧ್ಯಕ್ಷ ಚಾಮರಾಜ, ಸ್ಥಳೀಯು ಮುಖಂಡರು ಸೇರಿದಂತೆ ವಿವಿದ ಆಸ್ಪತ್ರೆಯ ವೈದ್ಯರು ಸಿಬ್ಬಂದಿವರ್ಗದವರು ಹಾಗೂ ಇತರರು ಹಾಜರಿದ್ದರು.

Continue Reading

Hassan

ಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

Published

on

ಹಾಸನ: ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಶ್ರೀನಗರ ನಿವಾಸಿ ಆದಿಲ್ ಪಾಷಾ (29), ಅಂಬೇಡ್ಕರ್ ನಗರ ನಿವಾಸಿ ಮಹಮದ್ ಸಬ್ರಿಜ್ ಕಾಲು ಹಾಗೂ ಹಳೇಬೀಡು ತರಗಿನ ಪೇಟೆ ಗೋವಿಂದ (40) ಬಂಧಿತ ಆರೋಪಿಗಳು.

ಏನಿದು ಪ್ರಕರಣ-1? 

ಫೆ. 3 ರಂದು ಹಾಸನದ ದೇವೇಗೌಡ ನಗರದ ಬಸ್ಸು ನಿಲ್ದಾಣದ ಹತ್ತಿರ ಇಬ್ಬರು ವ್ಯಕ್ತಿಗಳು ಗಾಂಜಾವನ್ನು ತರುತ್ತಿದ್ದಾರೆಂದು ಹಾಸನ ನಗರ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆದಿಲ್ ಆದಿಲ್ ಪಾಷಾ ಹಾಗೂ ಮಹಮದ್ ಸಬ್ರಿಜ್ ಕಾಲುನನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 1301 ಗ್ರಾಂ ತೂಕವುಳ್ಳ ಅಂದಾಜು ಬೆಲೆ 2,08,500 ರೂ. ಬೆಲೆಬಾಳುವ ಗಾಂಜಾಸೊಪ್ಪು ಹಾಗು ಒಂದು ಓಪೋ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹಾಸನದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ 2:
ಹಗರೆ-ಹಳೇಬೀಡು ರಸ್ತೆ ಪುಷ್ಪಗಿರಿ ಬೆಟ್ಟದ ಹತ್ತಿರ ಬಂಡಾರಿಕಟ್ಟೆ ಬಸ್ ನಿಲ್ದಾಣದಲ್ಲಿ ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹಳೇಬೀಡು ಠಾಣೆ ಪೊಲೀಸರು ದಾಳಿ ನಡೆಸಿ ಬಸ್ ನಿಲ್ದಾಣದೊಳಗೆ ಕುಳಿತುಕೊಂಡಿದ್ದ ಹಳೇಬೀಡಿನ ನಯನ ಕ್ಷತ್ರಿಯ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ತರಗಿನಪೇಟೆ ನಿವಾಸಿ ಗೋವಿಂದನ ಬಳಿಯಿದ್ದ ೫೧೦ ಗ್ರಾಂ ತೂಕವುಳ್ಳ ಗಾಂಜಾ ಸೊಪ್ಪನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.


ಈ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!