Connect with us

Kodagu

ಕೊಡವ ಲ್ಯಾಂಡ್ ಮತ್ತು ಸ್ವಯಂ ನಿರ್ಣಯದ ಹಕ್ಕು ಕೊಡವರ ಜನ್ಮ ಸಿದ್ಧ ಹಕ್ಕು : ಎನ್.ಯು.ನಾಚಪ್ಪ ಪ್ರತಿಪಾದನೆ

Published

on

ಮಡಿಕೇರಿ : ಕೊಡವರಂತಹ ಆದಿಮ ಸಂಜಾತ ಅತೀಸೂಕ್ಷ÷್ಮ ಸಮುದಾಯಗಳ ಉಳಿವಿಗಾಗಿ ಸಂವಿಧಾನದಡಿಯಲ್ಲಿ ನ್ಯಾಯಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಲು ಅವಕಾಶವಿದ್ದು, ಸ್ವಯಂ ನಿರ್ಣಯದ ಹಕ್ಕಿನ ಮೂಲಕ ಕೊಡವ ಲ್ಯಾಂಡ್ ಹೊಂದುವುದು ಕೊಡವರ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.
ರಾಜ್ಯದಲ್ಲಿ ಇತರರ ಬಗ್ಗೆ ಎಂದಿಗೂ ಕಾಳಜಿ ಇಲ್ಲದ ಜನರು ಊಳಿಗಮಾನ್ಯ ಮನೋಭಾವದಿಂದ ರಾಜ್ಯವನ್ನು ಆಳುತ್ತಿದ್ದಾರೆ. ಅವರು ರಾಜ್ಯದ ಕನಿಷ್ಠ ೬೦ ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತವನ್ನು ಹೊಂದಿದ್ದಾರೆ ಮತ್ತು ತಮ್ಮ ೬೦ ವಿಧಾನಸಭಾ ಕ್ಷೇತ್ರಗಳ ಭಾಗವಾಗಿರುವ ಇತರ ಸೂಕ್ಷ÷್ಮ ಸಮುದಾಯಗಳ ಯೋಗಕ್ಷೇಮದ ಬಗ್ಗೆ ಅವರು ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.


ಇತರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಮಂದಿ ತಮ್ಮ ಸಮುದಾಯಕ್ಕೆ ಎಷ್ಟು ಸೀಟು ಬೇಕೆನ್ನುವ ಲೆಕ್ಕಾಚಾರದಲ್ಲಿ ಚುನಾವಣೆಗಳ ಸಂದರ್ಭ ಮತಾಂಧತೆಯ ಅಶ್ಲೀಲತೆಯನ್ನು ಅನಾವಣಗೊಳಿಸುತ್ತಾರೆ. ತಮ್ಮ ಈ ನಡೆ ಜಾತ್ಯತೀತತೆಯ ಮತ್ತು ಅಂತರ್ಗತ ರುಜುವಾತುಗಳಿಗೆ ಅನುಗುಣವಾಗಿದೆ ಎಂದು ಹೇಳಿಕೊಂಡೆ ಮತಾಂಧತೆಯ ವಿಕೃತಿಯನ್ನು ಮೆರೆಯುತ್ತಾರೆ. ಕೊಡವರಂತಹ ಆದಿಮ ಸಂಜಾತ ನಗಣ್ಯ ಅತೀಸೂಕ್ಷ÷್ಮ ಸಮುದಾಯಗಳು ತಮ್ಮ ಉಳಿವಿಗಾಗಿ ಸಂವಿಧಾನದಡಿಯಲ್ಲಿ ನ್ಯಾಯಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಿದರೆ, ಈ ಕೋಮುವಾದಿಗಳು ಮೊಸಳೆ ಕಣ್ಣೀರು ಸುರಿಸುತ್ತಾ, ಕೊಡವರ ಹಕ್ಕುಗಳು ಇತರ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತವೆ ಎಂದು ಅರ್ಥಹೀನವಾಗಿ ವರ್ತಿಸುತ್ತಿದ್ದಾರೆ. ತಾವು ಬಹುದೊಡ್ಡ ಮಾನವತಾವಾದದ ಹರಿಕಾರರು ಮತ್ತು ಸಾಮಾಜಿಕ ಸಮತಾವಾದದ ವೀರಾಗ್ರೇಸರೆಂದು ಹುಸಿಯಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ.
ಸುಳ್ಯ-ಬೆಳ್ತAಗಡಿಯಿAದ ಹಾವೇರಿ ತನಕ, ಹಾವೇರಿಯಿಂದ ಚಿತ್ರದುರ್ಗ, ಚಿತ್ರದುರ್ಗದಿಂದ ಕೋಲಾರÀ, ಕೋಲಾರದಿಂದ ಚಾಮರಾಜನಗರ, ಚಾಮರಾಜನಗರದಿಂದ ಪಿರಿಯಾಪಟ್ಟಣದವರೆಗಿನ ದಟ್ಟ ಬಾಹುಳ್ಯ ಪ್ರದೇಶದಲ್ಲಿ ತಮ್ಮ ಜನಸಂಖ್ಯಾ ತೂಕವನ್ನು ಹೊಂದಿರುವ ಅವರು ಮಾನಸಿಕ ಯುದ್ಧದ ಮೂಲಕ ನಮ್ಮನ್ನು ಬೆದರಿಸಲು ಮತ್ತು ಕೊಡವರಲ್ಲಿ ಭಯದ ಮನೋವಿಕಾರವನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಹೇಯ ಕೃತ್ಯಕ್ಕೆ ರಾಜ್ಯದ ಇತರ ಸಣ್ಣಪುಟ್ಟ ಸಮುದಾಯಗಳನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳುತ್ತಾರೆ. ವಾಸ್ತವವಾಗಿ ಅವರಿಗೆ ಪರಿಶಿಷ್ಟರು ಹಾಗೂ ರಾಜ್ಯದ ಇತರ ಅಳಿವಿನಂಚಿನಲ್ಲಿರುವ ಕೆಳ ಹಂತದ ಸಮುದಾಯಗಳ ಬಗ್ಗೆ ಕಾಳಜಿ ಅಥವಾ ಪ್ರೀತಿ ಲವಲೇಷವು ಇಲ್ಲ. ಮಾನವ ಮಲ(ಅಮೇಧ್ಯ) ತಿನ್ನುವಂತೆ ಮಾಡಿದ ಅನೇಕ ಅಮಾನವೀಯ ಹೇಯ ಕೃತ್ಯಗಳೊಂದಿಗೆ ತಮ್ಮ ಕೊಳಕು ಮುಖವನ್ನು ಪ್ರದರ್ಶಿಸಿದ ನಿದರ್ಶನವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.


ಕೊಡವರಿಗೆ ಸಂವಿಧಾನವೇ ಸರ್ವಶ್ರೇಷ್ಠವಾಗಿದೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಉದಾತ್ತ ಸಂವಿಧಾನ ಮಾತ್ರ ಈ ಬಹುಸಂಖ್ಯಾತ ಸಮುದಾಯಗಳ ದುಷ್ಟ ವಿನ್ಯಾಸಗಳ ಕಪಿಮುಷ್ಠಿಯಿಂದ ಕೊಡವರು ಹೊರಬರಲು ದಿವ್ಯಾಔಷಧವಾಗಿದೆ. ತಮ್ಮ ಜನಸಂಖ್ಯಾ ಬಾಹುಳ್ಯದ ತೂಕದ ಮೂಲಕ ಬೆದರಿಕೆ ಹಾಕುವುದರೊಂದಿಗೆ ವ್ಯವಸ್ಥಿತವಾದ ಸಾಂವಿಧಾನಿಕ ಉಲ್ಲಂಘನೆಯನ್ನು ಈ ಸಮುದಾಯಗಳು ನಡೆಸಿದ್ದು, ನಮ್ಮ ರಕ್ಷಣೆಗಾಗಿ ಮತ್ತು ಅವರಿಂದ ಉಂಟಾದ ಅಸಂಗತತೆಗಾಗಿ ನಮ್ಮ ದೇಶದ ಅತ್ಯುನ್ನತ ಕಾನೂನು ನ್ಯಾಯಾಲಯ (ಸರ್ವೋಚ್ಚ ನ್ಯಾಯಾಲಯ) ಮತ್ತು ವಿಶ್ವಸಂಸ್ಥೆಯ ಬಾಗಿಲು ತಟ್ಟಲು ನಮಗೆ ದಾರಿ ಮಾಡಿಕೊಡುತ್ತಿದೆ ಎಂದು ತಿಳಿಸಿದ್ದಾರೆ.
ಕೊಡವರು ಧೈರ್ಯವಾಗಿರಬೇಕು, ಕೊಡವ ನೆಲ ನಮ್ಮ ಸಾಂಪ್ರದಾಯಿಕ ಮತ್ತು ಪ್ರಾಚೀನ ಅವಿಭಾಜ್ಯ ತಾಯ್ನಾಡಾಗಿದೆ. ಇದನ್ನು ಪುನರುಜ್ಜೀವನಗೊಳಿಸೋಣ ಮತ್ತು ರಕ್ಷಿಸೋಣ. ಇದು ನಮ್ಮ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕು, ನಮ್ಮ ಹಕ್ಕಿನ ಬಗ್ಗೆ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ. ಈ ಪ್ರಜಾಪೀಡಕ ಉಪದ್ರ ಜೀವಿಗಳು ತಮ್ಮ ಬಲಾಢ್ಯ ಜನಸಂಖ್ಯಾ ತೂಕದ ಮೂಲಕ ಒಡ್ಡುವ ಗೊಡ್ಡು ಬೆದರಿಕೆಯನ್ನು ನಾವು ಗಮನಿಸಬಾರದು. ನಮ್ಮ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕು ಕೊಡವ ಲ್ಯಾಂಡ್ ಆಗಿದ್ದು, ಇದನ್ನು ವಿಶ್ವರಾಷ್ಟç ಸಂಸ್ಥೆ ಚಾರ್ಟರ್/ಸನದ್ ಮತ್ತು ನಮ್ಮ ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸುತ್ತದೆ. ಆ ಮೂಲಕ ನಮ್ಮ ಭವಿಷ್ಯ ಮತ್ತು ಸ್ವಯಂ ನಿರ್ಣಯದ ಹಕ್ಕುಗಳÀನ್ನು ನಿರ್ಧರಿಸಿಕೊಳ್ಳೋಣ. ಇರ‍್ಯಾರಿಂದಲೂ ಕೊಡವರನ್ನು ಬೆದರಿಸಲು ಅಥವಾ ಆಮಿಷದಿಂದ ಮಣಿಸಲು ಸಾಧ್ಯವಿಲ್ಲ ಎಂದು ಎನ್.ಯು.ನಾಚಪ್ಪ ದೃಢ ನುಡಿಯಾಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಮತದಾನ ಜಾಗೃತಿಗೆ ಸೆಲ್ಫಿ ಸ್ಪರ್ಧೆ

Published

on

ಮಡಿಕೇರಿ : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸೆಲ್ಫಿ contest ನಡೆಸಲು ತೀರ್ಮಾನಿಸಲಾಗಿರುತ್ತದೆ. ಈ ಸೆಲ್ಫಿ contest ನಲ್ಲಿ #Lets Vote Kodagu! ಶೀರ್ಷಿಕೆಯಲ್ಲಿ ಸ್ಪರ್ಧೆ ನಡೆಯಲಿದೆ.

ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿ, ನಗರದ ರಾಜಾಸೀಟು, ಸೋಮವಾರಪೇಟೆ ತಾಲೂಕು ಪಂಚಾಯತ್ ಕಚೇರಿ, ಪೊನ್ನಂಪೇಟೆ ತಾಲ್ಲೂಕು ಪಂಚಾಯತ್ ಕಚೇರಿ, ವಿರಾಜಪೇಟೆ ತಹಸೀಲ್ದಾರ್ ಕಚೇರಿ, ಕುಶಾಲನಗರ ಕಾವೇರಿ ನಿಸರ್ಗಧಾಮ ಈ 06 ಸ್ಥಳಗಳಲ್ಲಿ ಮತದಾನ ಜಾಗೃತಿಗಾಗಿ ಸೆಲ್ಫಿ ಪಾಯಿಂಟ್‍ಗಳನ್ನು ನಿರ್ಮಿಸಲಾಗಿರುತ್ತದೆ. ಸಾರ್ವಜನಿಕರು ಮತ್ತು ಯುವ ಮತದಾರರು ಪೋಟೊವನ್ನು ಕಳುಹಿಸಬಹುದಾಗಿದೆ.

ಅಲ್ಲದೆ ಏಪ್ರಿಲ್, 26 ರಂದು ಮತದಾನ ನಡೆಯಲಿರುವ ಆಯ್ದ ವಿಶೇಷ ಮತಗಟ್ಟೆಗಳಲ್ಲಿಯೂ ಸೆಲ್ಪಿ ಪಾಯಿಂಟ್ ಗಳನ್ನು ಸ್ಥಾಪಿಸಲಿದ್ದು, ಈ ಮತಗಟ್ಟೆಗಳಲ್ಲಿ ಮತದಾನ ಮಾಡಿದ ನಂತರ ಸೆಲ್ಪಿ ಪಾಯಿಂಟ್‍ನಲ್ಲಿ ಪೋಟೋಗಳನ್ನು ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.


ಜಿಲ್ಲೆಯಾದ್ಯಂತ ಎಲ್ಲಾ ಸಾರ್ವಜನಿಕರು, ಮತದಾರರು ಮತದಾನದ ಪೂರ್ವದಲ್ಲಿ ನಾನು ಮತ ಚಲಾಯಿಸುತ್ತೇನೆ ಎಂಬ ಪರಿಕಲ್ಪನೆಯೊಂದಿಗೆ ತಾವಿರುವ ಸ್ಥಳದಲ್ಲಿಯೇ ವೈಯಕ್ತಿಕವಾಗಿ ಮತ್ತು ಗುಂಪಾಗಿ ಮತದಾನದಲ್ಲಿ ಪೂರ್ವದಲ್ಲಿ ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ವ್ಯಾಟ್ಸಪ್ ಮೊಬೈಲ್ ಸಂಖ್ಯೆ : 9741224300 ಗೆ ಕಳುಹಿಸಿ ಸ್ಪರ್ದೆಯಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಮತದಾನದ ದಿನದಂದು ಮತ ಚಲಾಯಿಸಿದ ನಂತರ “I VOTED’’ ಎಂಬ ಶೀರ್ಷಿಕೆಯೊಂದಿಗೆ ಸೆಲ್ಪಿ ಕ್ಲಿಕ್ಕಿಸಿ 9741224300 ವಾಟ್ಸಪ್ ಸಂಖ್ಯೆಗೆ ಕಳಹಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಇಂದಿನಿಂದ ಮತದಾನ ಪೂರ್ಣಗೊಳ್ಳುವವರೆವಿಗೂ ಈ ಸೆಲ್ಫಿ contest ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಮತದಾರರು/ ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸುವ ಆಯ್ದ ಪೋಟೊಗಳಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು.

ಕೊಡಗು ಜಿಲ್ಲಾ ಸ್ವೀಪ್ ಸಮಿತಿಯ ವ್ಯಾಟ್ಸಪ್ ಸಂಖ್ಯೆಗೆ ಉತ್ತಮವಾಗಿ ಕ್ಲಿಕ್ಕಿಸಿದ ಒಂದು ಪೋಟೊವನ್ನು ಕಳುಹಿಸಲು ಅವಕಾಶ ನೀಡಲಾಗಿದೆ. #Lets Vote Kodagu! ಸೆಲ್ಫಿ ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನ ಗೆಲ್ಲಿರಿ.

ನಿಬಂಧನೆಗಳು: ಒಬ್ಬ ವ್ಯಕ್ತಿ ಒಂದು ಪೋಟೊವನ್ನು ಮಾತ್ರವೇ ಕಳುಹಿಸತಕ್ಕದ್ದು. ಪೋಟೊ ಜೊತೆಯಲ್ಲಿ ತಮ್ಮ ಹೆಸರು, ಊರಿನ ಹೆಸರನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು. ವಿಜೇತರನ್ನು ಆಯ್ಕೆ ಮಾಡುವಲ್ಲಿ ಕೊಡಗು ಜಿಲ್ಲಾ ಸ್ವೀಪ್ ಸಮಿತಿ ನಿರ್ಣಯವೇ ಅಂತಿಮವಾಗಿರುತ್ತದೆ. ಯಾವುದೇ ಧರ್ಮ, ಜಾತಿ, ವ್ಯಕ್ತಿ, ರಾಜಕೀಯ ಪಕ್ಷ, ಚುನಾವಣಾ ಅಭ್ಯರ್ಥಿ ಪರವಾಗಿ ಅಥವಾ ಪಕ್ಷದ ಗುರುತಿನೊಂದಿಗೆ ಕಳುಹಿಸುವ ಪೋಟೊವನ್ನು ಸ್ಫರ್ಧೆಗೆ ಪರಿಗಣಿಸಲಾಗುವುದಿಲ್ಲ. ವ್ಯಾಟ್ಸಪ್ ಮುಖಾಂತರವಾಗಿ ಮಾತ್ರವೇ ಪೋಟೊ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಿಳಿಸಿದ್ದಾರೆ.

Continue Reading

Kodagu

ಬಾರ್ ವೆಂಡರ್ ಕೊಲೆ – ಆರೋಪಿ ಬಂಧನ

Published

on

ವರದಿ : ಟಿ.ಆರ್ ಪ್ರಭುದೇವ್ ಕುಶಾಲನಗರ
=================
ಕುಶಾಲನಗರದ ಹೃದಯ ಭಾಗದಲ್ಲಿರುವ ಖಾಸಗಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ವೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ ನಡೆದ ಘಟನೆ ಭಾನುವಾರ ನಡೆದಿದೆ.
ಮೂಲತ ಸೋಮವಾರಪೇಟೆಯ ನಿವಾಸಿ ಸಂತೋಷ್ (42) ಕೊಲೆಯಾದ ದುರ್ದೈವಿ.
ಸಂತೋಷ್ ಹಲವಾರು ವರ್ಷಗಳಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಕೂಡ ಕೆಲಸದಲ್ಲಿ ಇದ್ದು ಬಾರ್ ಮುಚ್ವುವ ಸಂದರ್ಭದಲ್ಲಿ ಅಂದಾಜು ರಾತ್ರಿ 11.25 ರ ಸಮಯದಲ್ಲಿ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಜನತಾ ಕಾಲೋನಿಯ ನಿವಾಸಿ ಹರ್ಷ (33) ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಬಾರ್ ಸಮೀಪದಲ್ಲಿ ಕೈ ತೊಳೆಯುವ ಜಾಗದಲ್ಲಿ ಹರ್ಷ ಸಂತೋಷ್ ಮೇಲೆ ದೊಡ್ಡ ಬಿಯರ್ ಗ್ಲಾಸ್‌ನಿಂದ ತಲೆಗೆ ಹೊಡೆದು ನಂತರ ಚೂರಾದ ಗ್ಲಾಸ್‌ನ ಹರಿತವಾದ ಭಾಗದಿಂದ ಕುತ್ತಿಗೆ ಇರಿದಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿದೆ.
ಘಟನೆಯಲ್ಲಿ ತೀವ್ರವಾಗಿ ರಕ್ತಸ್ರಾವಗೊಂಡ ಸಂತೋಷ್‌ನನ್ನು ಹೋಟೆಲ್ ಮಾಲೀಕರು ಕೂಡಲೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೇಂದ್ರ ಮಡಿಕೇರಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸಂತೋಷ್ ಮೃತಪಟ್ಟಿದ್ದಾರೆ.
ಆರೋಪಿಹರ್ಷನನ್ನು ಪೋಲಿಸ್ ಬಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‌ಪಿ.ಸುಂದರ್ ರಾಜ್, ಡಿವೈಎಸ್‌ಪಿ ಗಂಗಾಧರಪ್ಪ, ಸಿ.ಐ ಪ್ರಕಾಶ್ ಭೇಟಿ ಪರಿಶೀಲನೆ ನಡೆಸಿದರು.

Continue Reading

Kodagu

ನೆಲಜಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರು ದ್ವಂಸ

Published

on

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಬಳಿಯ ನೆಲಜಿ ಗ್ರಾಮದ ಮನೆಯಂಗಳದ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರನ್ನು ಕಾಡಾನೆಗಳು ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ನಡೆದಿದೆ.

ನೆಲಜಿ ಗ್ರಾಮದ ಕೈಬುಲಿರ ದಿನೇಶ್ ಎಂಬುವವರ ಮನೆಯ ಪಕ್ಕದ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ದಾಳಿನಡೆಸಿದ ಕಾಡಾನೆಗಳು ದ್ವಂಸಗೋಳಿಸಿದೆ. ಇದರಿಂದ ಕಾರಿನ ಹಿಂಬದಿ ಜಖಂಗೊಂಡಿದ್ದು ಶೆಡ್ ನ ಮೇಲ್ಚಾವಣಿಗೂ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.
ಸೋಮವಾರ ಮುಂಜಾನೆ ನೆಲಜಿ ಗ್ರಾಮದ ಕೈಬುಲಿರ ಐನ್ ಮನೆ ಬಳಿಯಲ್ಲಿ ಕಾಡಾನೆಗಳ ಹಿಂಡು ಕಂಡುಬಂದಿದ್ದು ಮನೆಯ ಆವರಣದಲ್ಲೂ ಕಾಡಾನೆಗಳು ಜಾಲಾಡಿ ನಷ್ಟ ಉಂಟು ಮಾಡಿದೆ.

ನೆಲಜಿ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಗಳು ನಿರಂತರ ಧಾಳಿ ನಡೆಸುತ್ತಾ ಗ್ರಾಮಸ್ಥರ ತೋಟಗಳಿಗೆ ಲಗ್ಗೆ ಇಟ್ಟು ಲಕ್ಷಾಂತರ ರುಪಾಯಿ ನಷ್ಟ ಉಂಟುಮಾಡಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳದೇ ಹೋದರೆ ನೆಲಜಿ ಮುಖ್ಯ ರಸ್ತೆಯನ್ನು ತಡೆದು ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Continue Reading

Trending

error: Content is protected !!