Deficiency
ಕೊಡಗಿನಲ್ಲಿ ಕಾಡಾನೆಗಳ ಉಗ್ರ ಪ್ರತಾಪ

ಮಡಿಕೇರಿ : ಕೊಡಗಿನಲ್ಲಿ ಕಾಡಾನೆ ಹಾವಳಿ ಎಲ್ಲೆ ಮೀರಿದ್ದು, ಕೊಡಗಿನ ಮಂದಿ ಜೀವಭಯದಿಂದ ಓಡಾಡುವಂತೆ ಆಗಿದೆ.
ಆನೆಗಳು ನಾಡಿಗೆ ಲಗ್ಗೆಯಿಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಒಂದೆಡೆ ಕೃಷಿಕರು ಬೆಳೆದ
ಬೆಳೆಗಳನ್ನು ರಕ್ಷಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಾದರೆ, ಮತ್ತೊಂದೆಡೆ ಜಿಲ್ಲೆಯ ವಿವಿಧೆಡೆ
ಹಗಲಿನಲ್ಲಿಯೇ ಸಂಚರಿಸಲು ತಿಣುಕಾಡುವಂತಿದೆ. ಮಾತ್ರವಲ್ಲದೇ ತೋಟದಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡಲು
ಹಿಂದೇಟು ಹಾಕುವ ಸ್ಥಿತಿಯಾದರೆ, ಮಗದೊಂದಷ್ಟು ಕಡೆ ಮನೆಯಂಗಳಕ್ಕೂ ಆನೆ ಕಾಲಿಟ್ಟು ಆತಂಕ ಸೃಷ್ಟಿ
ಮಾಡುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇದೆ. ಜಿಲ್ಲೆಯ ೫ ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಮಾತ್ರ
ನಿಲ್ಲದಂತಾಗಿದೆ.
ಕೊಡಗಿನ ನಾಪೋಕ್ಲು, ಸಿದ್ದಾಪುರ, ಅವರೆಗುಂದ ಸೇರಿದಂತೆ ವಿವಿಧೆಡೆ ಕಾಡಾನೆ ಹಾವಳಿ ಹೆಚ್ಚಿದೆ. ರೈತರು ಪ್ರತಿಭಟನೆ,
ರಸ್ತೆತಡೆ, ಮನವಿ ನೀಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ. ಅದರೆ ಪ್ರಯೋಜನ ಮಾತ್ರ ಶೂನ್ಯ ಎಂಬAತಾಗಿದೆ
ಜಿಲ್ಲೆಯ ಜನರ ಪರಿಸ್ಥಿತಿ.
ರೈತರಿಗೆ ನಿತ್ಯ ಗೋಳು : ಆನೆ ಹಾವಳಿ ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದ್ದು, ವರ್ಷವಿಡೀ ಬೆಳೆದ ಬೆಳೆಯನ್ನೇ
ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇತ್ತೀಚೆಗೆ ಆನೆ ಗಣತಿ ನಡದ ಸಂದರ್ಭ ಕೆಲವೂ ಆನೆಗಳು
ತೋಟದಲ್ಲಿಯೇ ಉಳಿದುಕೊಂಡಿದ್ದಾಗಿಯೂ, ಅವುಗಳ ಗಣತಿ ನಡೆದಿಲ್ಲವೆಂದು ಸ್ಥಳೀಯರು ಆರೋಪಿಸಿದ್ದರು. ಅದಕ್ಕೆ
ಪುಷ್ಟಿ ನೀಡುವಂತೆ ಈಗ ತೋಟದೊಳಗಿನಿಂದಲೇ ಕಾಡಾನೆ ದಾಳಿ ನಡೆಸುತ್ತಿದ್ದು, ಸ್ಥಳೀಯರ ನಿದ್ದೆ ಗೆಡಿಸುತ್ತಿದೆ.
ಮಾನವ ಪ್ರಾಣಕ್ಕೂ ಆನೆಗಳು ಕಂಟಕ : ಇತ್ತೀಚೆಗೆ ನಾಪೋಕ್ಲು ಭಾಗದಲ್ಲಿ ಆನೆ ಹಾವಳಿ ಹೆಚ್ಚಿದ್ದು,
ಮನೆಯಂಗಳಕ್ಕೂ ಹೆಜ್ಜೆ ಹಾಕಿ ಸ್ಥಳೀಯರಿಗೆ ಜೀವಭಯ ತರಿಸಿದೆ. ಕಾಡಾನೆ ಹಾವಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವ
ಸಂದರ್ಭ ಓಡಿ ಪಾರಾಗುವ ಸಂದರ್ಭ ಕೂಡ ಹಲವು ಮಂದಿ ಬಿದ್ದು, ಕೈಕಾಲು ಮುರಿದುಕೊಂಡಿದ್ದಾರೆ. ಕೆಲವು ಜೀವಗಳು
ಬಲಿಯಾಗಿದೆ.
ಆಹಾರ ಅರಸಿ ನಾಡಿಗೆ : ಕೊಡಗಿನಲ್ಲಿ ಮಳೆಬಿದ್ದರೂ ಅರಣ್ಯ ಪ್ರದೇಶದಲ್ಲಿರುವ ಕೆರೆ, ಬಾವಿ, ತೋಡುಗಳಲ್ಲಿ ನಿರೀಕ್ಷಿತ
ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಆನೆಗಳಿಗೆ ಅಗತ್ಯವಿದ್ದ ಆಹಾರವೂ ಅರಣ್ಯದಲ್ಲಿ ಲಭಿಸುತ್ತಿಲ್ಲ. ಇದರಿಂದ
ಕಾಡಾನೆಗಳು ನಾಡಿನತ್ತ ವಲಸೆ ಬರುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಜಿಲ್ಲೆಯ ಐದು ತಾಲ್ಲೂಕು ವ್ಯಾಪ್ತಿಯ
ಬಹುತೇಕ ಗ್ರಾಮಗಳು ಆನೆ ಹಾವಳಿಯಿಂದ ತತ್ತರಿಸಿವೆ.
‘ಶಾಶ್ವತ ಪರಿಹಾರಕ್ಕೆ ಒತ್ತಾಯ : ಕಂದಕ ನಿರ್ಮಾಣ, ಸೋಲಾರ್ ಬೇಲಿ ಅಳವಡಿಕೆ ಉಪಾಯಗಳು ಈ ಹಾವಳಿ ತಡೆಯಲು
ಸಾಧ್ಯವಾಗಿಲ್ಲ. ‘ಶಾಶ್ವತ ಪರಿಹಾರ ಕ್ರಮ ರೂಪಿಸಿ’ ಎಂದು ಗ್ರಾಮಸ್ಥರು ಬೇಡಿಕೆಯಿಟ್ಟಿದ್ದರೂ ಅರಣ್ಯ ಇಲಾಖೆ ಮಾತ್ರ
ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.
ಪ್ರತಿಭಟನೆಗೆ ಸಿದ್ಧತೆ : ಕಾಫಿ, ಬಾಳೆ ಬೆಳೆಯು ಆನೆ ಹಾವಳಿಗೆ ನಾಶವಾಗುತ್ತಿವೆ ಎಂದು ಗ್ರಾಮಸ್ಥರು ನೋವು
ತೋಡಿಕೊಳ್ಳುತ್ತಿದ್ದಾರೆ. ಸಮಸ್ಯೆಗೆ ಮುಕ್ತಿ ನೀಡದಿದ್ದರೆ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಹಲವು ಗ್ರಾಮಸ್ಥರು
ಬಂದಿದ್ದಾರೆ. ಹೆಚ್ಚಾಗಿ ಕಾಫಿ ತೋಟವನ್ನೇ ಒಳಗೊಂಡಿರುವ ಕೊಡಗಿನಲ್ಲಿ ಕಾಡಾನೆ ಹಾವಳಿ ವಿಪರೀತ. ಇದರಿಂದ ರೈತರು
ಹೈರಾಣಾಗಿದ್ದಾರೆ. ಸಣ್ಣಪುಟ್ಟ ರೈತರು ಕೃಷಿಯನ್ನೇ ಕೈಬಿಡುತ್ತೇವೆ ಎನ್ನುವಷ್ಟರ ಮಟ್ಟಿಗೆ ಸಮಸ್ಯೆಗೆ
ತುತ್ತಾಗಿದ್ದಾರೆ.
ಸೋಲಾರ್ ಬೇಲಿಗೂ ಕ್ಯಾರೆ ಎನ್ನುತ್ತಿಲ್ಲ! : ಆನೆ ದಾಳಿ ತಡೆಗೆ ಅರಣ್ಯ ಇಲಾಖೆ ಸೋಲಾರ್ ಬೇಲಿ ನಿರ್ಮಿಸಿದೆ. ಆದರೆ, ಅದಕ್ಕೆ
ಆನೆಗಳು ಕ್ಯಾರೆ ಎನ್ನುತ್ತಿಲ್ಲ. ಅವುಗಳನ್ನೇ ಮೆಟ್ಟಿ ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ ಫಸಲು ನಾಶ ಪಡಿಸುತ್ತಿವೆ.
ಆನೆಗಳು ಬರೀ ಕಾಫಿ ಫಸಲು ನಾಶ ಪಡಿಸುತ್ತಿಲ್ಲ. ಅಲ್ಲೇ ಠಿಕಾಣಿ ಹೂಡಿ ತೋಟದ ಆನೆಗಳಾಗಿ ಬದಲಾಗಿವೆ.
Deficiency
ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಮತ್ತು ಪ್ರತ್ಯಕ್ಷಿತೆ ಕಾರ್ಯಕ್ರಮ

ಸಾಲಿಗ್ರಾಮ : ತೆಂಗಿನ ಬೆಳೆ ಕೀಟ ನಿಯಂತ್ರಣ ತರಬೇತಿ ತೋಟಗಾರಿಕೆ ಇಲಾಖೆ ಹಾಗು ತೋಟಗಾರಿಕೆ ಮಹಾವಿದ್ಯಾಲಯ ಇವರ ಸಹ ಬಾಗಿತ್ವದಲ್ಲಿ ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಮತ್ತು ಪ್ರತ್ಯಕ್ಷಿತೆ ಕಾರ್ಯಕ್ರಮ ವನ್ನು ಮಿರ್ಲೆ ಹೋಬಳಿಯ ಎಲೆಮುದ್ದನಹಳ್ಳಿ ಕೊಪ್ಪಲು ಗ್ರಾಮದ ರೈತ ಪುಟ್ಟಸ್ವಾಮಿಗೌಡ ಅವರ ತೆಂಗಿನತೋಟದಲ್ಲಿ ಅಕ್ಟೋಬರ್ 31 ರ ಮಂಗಳವಾರ ಬೆಳ್ಳಿಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಟಿ. ಎಸ್. ಭಾರತಿ ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಿ. ರವಿಶಂಕರ್ ನೆರವೇರಿಸಳಲಿದ್ದು, ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಉಪ ನಿರ್ದೇಶಕ ಡಾ: ಮಂಜುನಾಥ್ ಅಂಗಡಿ,ಡಾ : ಸುದರ್ಶನ್, ಡಾ : ಮುತ್ತು ರಾಜ್, ಭಾಗವಹಿಸಲಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೆಂಗಿನ ಬೆಲೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಪಡೆದುಕೊಳ್ಳುವಂತೆ ಕೊರಿದ್ದಾರೆ.
ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
Deficiency
ಅಧಿಕಾರಿಗಳು ಹಣ ಮಾಡೋದು ಒಂದೇ ದಾರಿಯಲ್ಲ ರೈತರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು

ಹುಣಸೂರು : ಅಧಿಕಾರಿಗಳು ಹಣ ಮಾಡೋದು ಒಂದೇ ದಾರಿಯಲ್ಲ ರೈತರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು ಎಂದು ಕೆಲವರು ಆರೋಪಿಸಿದರೆ, ಕೆಲವರು ಸಣ್ಣ ಪುಟ್ಟ ರೈತರ ಮೇಲೆ ನಡೆಯುವ ತೊಂದರೆಗಳನ್ನು ಪ್ರಶ್ನೆಸಿದರೆ ಆ ರೈತರಿಗೆ ಅಧಿಕಾರಿಗಳು ಮಾನಸಿಕವಾಗಿ ತೊಂದರೆ ನೀಡುತ್ತಾರೆ ಆದರೆ ಈಗ ರೈತನಿಗೆ ಶೂ ನಲ್ಲಿ ಹೊಡೆಯಲು ಮುಂದಾಗಿರೋ ಅಧಿಕಾರಿಗೆ ಏನು ಕ್ರಮ ಕೈಗೊಳ್ಳಬೇಕು ಎಂದು ರೈತರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸಭೆಯಲ್ಲಿ ಹೊರಹಾಕಿದ್ದು ಹೀಗೆ.
ಅವರು ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದ ತಂಬಾಕು ಮಂಡಳಿಯ ರೈತ ಭವನದಲ್ಲಿ ಪ್ಲಾಟ್ ಫಾರಂ ನಂಬರ್ 62ರ ಹರಾಜು ಅಧೀಕ್ಷಕ ಬ್ರಿಜ್ ಭೂಷಣ್ ವಿರುದ್ಧ ರೈತರು ಸೋಮವಾರ ಸಭೆ ಸೇರಿ ಚರ್ಚಿಸಿ ನಿರ್ಣಯ ಕೈಗೊಂಡು ತಂಬಾಕು ಮಂಡಳಿಯ ಅಧಿಕಾರಿ ಒಬ್ಬ ತಂಬಾಕು ರೈತನಿಗೆ ಶೂ ನಿಂದ ಹೊಡೆಯಲು ಮುಂದಾಗಿರುವುದು ರೈತ ಕುಲಕ್ಕೆ ಅವಮಾನ ಆ ಅಧಿಕಾರಿಯನ್ನು ಕರ್ನಾಟಕ ರಾಜ್ಯದಿಂದ ವರ್ಗಾವಣೆ ಮಾಡಬೇಕು, ಹಾಗೂ ಆತ ಸಭೆಯಲ್ಲಿ ಕ್ಷಮೆ ಕೇಳಬೇಕು ಜೊತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ವಿಚಾರಣೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಂಡು ಈ ನಿರ್ಣಯವನ್ನು ಸಭೆಯಲ್ಲಿ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆದ ಗೊಬ್ಬರ ಕಮಿಟಿಯ ಅಧ್ಯಕ್ಷ ಅಣ್ಣೂರು ಕಾಳೇಗೌಡ ಈ ನಿರ್ಣಯವನ್ನು ಓದಿ ತಿಳಿಸಿದರು.
ಈ ನಿರ್ಣಯದ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲು ಆರ್.ಎಂ. ಓ ಲಕ್ಷ್ಮಣ್ ರಾವ್ ರವರಿಗೆ ನೀಡಿದರು. ಕಾರ್ಯಕ್ರಮದಲ್ಲಿ ತಂಬಾಕು ಮಂಡಳಿಯ ಉಪಾಧ್ಯಕ್ಷ ಬಸವರಾಜಪ್ಪ, ಸದಸ್ಯರಾದ ವಿಕ್ರಂ ಗೌಡ ,ದಿನೇಶ್ , ಗೊಬ್ಬರ ಕಮಿಟಿಯ ಉಪಾಧ್ಯಕ್ಷ ಮಂಜುನಾಥ್ ಕೆರೆಗೋಡು, ಕಾರ್ಯದರ್ಶಿ ಮರಿಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಡಿಎಸ್ಎಸ್ ಸಂಚಾಲಕ ರಾಮಕೃಷ್ಣ ಅತ್ತಿಕುಪ್ಪೆ, ಪ್ರಭಾಕರ್, ಮೋದೂರು ಶಿವಣ್ಣ, ದೇವರಾಜ್, ಉಂಡವಾಡಿ ಚಂದ್ರೇಗೌಡ, ರವಿಕುಮಾರ್, ನವೀನ್, ಅಗ್ರಹಾರ ರಾಮೇಗೌಡ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.
Chikmagalur
ಧಾರಾಕಾರ ಮಳೆಗೆ ಎರಡು ಮನೆಗಳಿಗೆ ಹಾನಿ

ಚಿಕ್ಕಮಗಳೂರು : ಮಲೆನಾಡಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಪಶ್ಚಿಮ ಘಟಕ್ಕೆ ಹೊಂದಿಕೊಂಡಂತೆ ಇರುವ ಮಲೆನಾಡಿನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮೂಡಿಗೆರೆ ತಾಲೂಕಿನಲ್ಲಿ ಎರಡು ಮನೆಗಳು ಕುಸಿದಿವೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಜೂರು ಗ್ರಾಮದಲ್ಲಿ ದಿನೇಶ್ ಎಂಬುವವರು ಮನೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಸಿದಿದೆ. ಹಾಗೆಯೇ ಬಾಳೂರು ಹೋಬಳಿ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮದಲ್ಲಿ ಮನೆಯೊಂದು ಕುಸಿದಿದೆ.
ಮೇಗೂರು ಗ್ರಾಮದ ರಾಮಯ್ಯ ಎಂಬುವವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಮನೆಯ ಗೋಡೆ ಮತ್ತು ಮೇಲ್ಚಾವಣಿ ಬಹುತೇಕ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಮನೆಯವರು ಒಳಗಡೆಯೇ ಇದ್ದರು ಎಂದು ತಿಳಿದುಬಂದಿದ್ದು. ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಕಂದಾಯ ಮತ್ತು ಗ್ರಾಮ
ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರ ಮನೆಗೆ ತಾತ್ಕಾಲಿಕ ರಕ್ಷಣೆಗಾಗಿ ಟಾರ್ಪಲ್ ಹೊದಿಸಲು ವ್ಯವಸ್ಥೆ ಮಾಡಿದ್ದು. ಕುಟುಂಬದವರನ್ನು ಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ.
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan4 hours ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore2 months ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Mysore3 days ago
ಮುಖ್ಯ ಶಿಕ್ಷಕ ಮತ್ತು ಡಿ ದರ್ಜೆ ನೌಕರ, ಶಾಲಾ ಪ್ರವಾಸದ ಸಂದರ್ಭ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ – ಆರೋಪ