Crime
ಕೇರಳದಲ್ಲಿ ಪೈಶಾಚಿಕ ಕೃತ್ಯ: 5 ವರ್ಷದ ಮಗು ಮೇಲೆ ಅತ್ಯಾಚಾರ, ಹತ್ಯೆ; ಆರೋಪಿಯನ್ನು ಗಲ್ಲಿಗೇರಿಸಲು ಆಗ್ರಹ

ಕೊಚ್ಚಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿದೆ. 5 ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರವೆಸಗಿ ಹತ್ಯೆಗೈದಿರುವ ಪೈಶಾಚಿಕ ಕೃತ್ಯ ವರದಿಯಾಗಿದ್ದು, ಮಗುವಿನ ಅಂತಿಮಯಾತ್ರೆಯನ್ನು ಭಾನುವಾರ ನಡೆಯಿತು. ಅಂತ್ಯಸಂಸ್ಕಾರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು, ಆರೋಪಿಗೆ ಮರಣದಂಡನೆ ವಿಧಿಸಲು ಆಗ್ರಹಿಸಿದ್ದಾರೆ.
ಎರ್ನಾಕುಲಂ ಜಿಲ್ಲೆಯ ಅಲುವಾದಲ್ಲಿ ಬಿಹಾರ ಮೂಲದ ವಲಸಿಗ ದಂಪತಿಯೊಬ್ಬರ 5 ವರ್ಷದ ಮಗು ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿತ್ತು. ಪ್ರಕರಣ ದಾಖಲಿಸಿ ಮಗುವಿಗಾಗಿ ಹುಡುಕಾಟ ನಡೆಸಲಾಗಿದೆ. ಆದರೆ, 20 ಗಂಟೆಗಳವರೆಗೆ ಮಗುವಿನ ಪತ್ತೆಯಾಗಿರಲಿಲ್ಲ.
ಬಳಿಕ ದಂಪತಿ ವಾಸವಿದ್ದ ಕಟ್ಟಡದಲ್ಲೇ, ವಾಸವಿದ್ದ ಬಿಹಾರ ಮೂಲದ ವಲಸಿಗನೊಬ್ಬನನ್ನು ಮಗುವಿನ ಅಪಹರಣದ ಶಂಕೆಯ ಮೇಲೆ ಪೊಲೀಸರು ಬಂಧಿಸಿದ್ದು, ಆತ ತಪ್ಪೊಪ್ಪಿಕೊಂಡ ಬಳಿಕ ಶನಿವಾರ ಮಧ್ಯಾಹ್ನದ ವೇಳೆಗೆ ಅಲುವಾ ಮಾರ್ಕೆಟ್ ಬಳಿ ಮಗುವಿನ ದೇಹ ರಕ್ತಸಿಕ್ತ ಸ್ಥಿತಿಯಲ್ಲಿ, ಪ್ಲಾಸ್ಟಿಕ್ ಕವರ್ ಒಂದರಲ್ಲಿ ಸುತ್ತಿಟ್ಟಿರುವುದು ಪತ್ತೆಯಾಗಿದೆ. ಮಗುವಿನ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದಿರುವುದು ತಿಳಿದುಬಂದಿದೆ.
ಆರೋಪಿ ಅಸ್ಫಾಕ್ ಆಲಂ (28) ಎಂಬಾತನನ್ನು ಶುಕ್ರವಾರ ರಾತ್ರಿಯೇ ಪೊಲೀಸರು ಬಂಧಿಸಿದ್ದರು, ಆದರೆ ಶನಿವಾರವಷ್ಟೇ ಆತ ತಪ್ಪೊಪ್ಪಿಕೊಂಡಿದ್ದು, ಆಲುವಾದ ಮಾರುಕಟ್ಟೆ ಬಳಿಯ ನಿರ್ಜನ ಪ್ರದೇಶದ ಕಸದ ರಾಶಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಆರೋಪಿಯು ಮಗುವಿಗೆ ಸಿಹಿ ಕೊಡಿಸುವುದಾಗಿ ಆಸೆ ತೋರಿಸಿ ಮಾರ್ಕೆಟ್‌ಗೆ ಕರೆದೊಯ್ದಿದ್ದಾನೆ. ಮಾರ್ಗಮಧ್ಯೆ ನೆರೆಮನೆಯವರು ವಿಚಾರಿಸಿದಾಗ ಇದು ತನ್ನದೇ ಮಗು, ಮಾರ್ಕೆಟ್ ತೋರಿಸುವುದಕ್ಕಾಗಿ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಕೃತ್ಯದಲ್ಲಿ ಬೇರೋಬ್ಬರು ಭಾಗಿಯಾಗಿರುವ ಶಂಕೆ ಇದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಮೇಲೆ ಅಮಾನುಷ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದು ಪೋಸ್ಟ್‌ಮಾರ್ಟಂ ವರದಿಯು ದೃಢಪಟ್ಟಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣದ ಜೊತೆಗೆ ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್ ದಾಖಲಿಸಲಾಗಿದೆ. ಈ ಕುರಿತು ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿ, ಬಿಹಾರದ ವಲಸೆ ಕಾರ್ಮಿಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತ ಮಗುವಿನ ತಾಯಿ, ಪೋಷಕರು ಒತ್ತಾಯಿಸಿದ್ದಾರೆ.
Crime
ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ – ಕಿಡ್ನಾಪರ್ಸ್‌ನ್ನು ಪತ್ತೆ ಹಚ್ಚಿದ ಪೊಲೀಸರು

ಹಾಸನ : ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ
ಕಿಡ್ನಾಪರ್ಸ್‌ನ್ನು ಪತ್ತೆ ಹಚ್ಚಿದ ಪೊಲೀಸರು
ನೆಲ್ಯಾಡಿ ಬಳಿ ತೆರಳುತ್ತಿದ್ದ ವೇಳೆ ಎಲ್ಲರೂ ಪೊಲೀಸರ ವಶಕ್ಕೆ
ಅರ್ಪಿತಳನ್ನು ರಕ್ಷಿಸಿ ಕಿಡ್ನಾಪ್ ಮಾಡಿದವರನ್ನು ವಶಕ್ಕೆ ಪಡೆದ ಪೊಲೀಸರು
ಹಾಸನ ನಗರ ಪೊಲೀಸ್ ಠಾಣೆಗೆ ಕರೆತರುತ್ತಿರುವ ಪೊಲೀಸರು
ಯುವತಿ ಅಪಹರಿಸಿ ಸೋಮವಾರಪೇಟೆ ಕಡೆ ಕರೆದೊಯ್ದಿದ್ದ ಖತರ್ನಾಕ್ ಕಿಡ್ನಾಪರ್ಸ್
ಪೊಲೀಸರಿಗೆ ಸಿಗದ ರೀತಿ ಪ್ಲಾನ್ ಮಾಡಿ ಅರ್ಪಿತಾಳನ್ನು ಕರೆದೊಯ್ಯಲು ಯತ್ನಿಸುತ್ತಿದ್ದ ರಾಮು ಮತ್ತು ತಂಡ
ಅಪರಹರಣಕ್ಕೊಳಗಾಗಿದ್ದ ಅರ್ಪಿತಾಳನ್ನು ರಕ್ಷಿಸಿ ರಾಮು ಮತ್ತು ತಂಡವನ್ನು ವಶಕ್ಕೆ ಪಡೆದು ಹಾಸನಕ್ಕೆ ಕರೆತರುತ್ತಿರುವ ಪೊಲೀಸರು
Crime
ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ CIDಗೆ – ಇಂದಿನಿಂದಲೇ CID ಡ್ರಿಲ್

ಹಾಸನ : ಮಾಜಿ ಸಚಿವ ಎಚ್.ಡಿ.ರೇವಣ್ಣ ಆಪ್ತ ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ
ಆರೋಪಿಗಳ ಬಂಧನದ ವಿಷಯದಲ್ಲಿ ಜಿಲ್ಲಾ ಪೊಲೀಸ್ ವಿಫಲ
ಪ್ರಕರಣ ಮುಚ್ಚಿ ಹೋಗಬಹುದು ಸಾಧ್ಯತೆ ಹಿನ್ನಲೆ
ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ
ತಕ್ಷಣದಿಂದ ಜಾರಿಗೆ ಬರುವಂತೆ ಪ್ರಕರಣದ ತನಿಖಾಧಿಕಾರಿ ಹತ್ಯೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸಿಐಡಿಗೆ ಸಲ್ಲಿಸಲು ಸೂಚನೆ
ಕೃಷ್ಣೇಗೌಡ ಹತ್ಯೆ ನಂತರ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು
ಪ್ರಮುಖ ಆರೋಪಿಗಳಾದ ಯೋಗಾನಂದ ಹಾಗೂ ಅನಿಲ್ ಅವರಿಬ್ಬರ ಸುಳಿವು ಪತ್ತೆಯಲ್ಲಿ ಸಂಪೂರ್ಣ ವಿಫಲ
ಈ ನಡುವೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ
ಇಡೀ ರಾಜ್ಯದ ಗಮನ ಸೆಳೆದಿದ್ದ ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆ
ಪ್ರಕರಣದ ಗಂಭೀರತೆಗೆ ತಕ್ಕಂತೆ ತನಿಖೆ ನಡೆಯದಿರುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಚರ್ಚೆ
ಪ್ರಕರಣ ನಡೆದಾಗ ಇದ್ದ ಎಸ್ಪಿ ಹರಿರಾಂಶಂಕರ್ ವರ್ಗಾವಣೆ
ಆ ಸ್ಥಾನಕ್ಕೆ ಬಂದ ಮೊಹಮದ್ ಸುಜೀತಾ ಅವರಿಂದಲೂ ಆರೋಪಿಗಳ ಬಂಧಿಸುವಲ್ಲಿ ವಿಫಲ
ಈಗ ಸಿಐಡಿ ಪ್ರವೇಶದಿಂದ ಪ್ರಕರಣದ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ
Crime
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

ಹಾಸನ : ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಆಲೂರು ತಾಲ್ಲೂಕಿನ ಕವಳಗೆರೆ ಗ್ರಾಮದ ಸುಚಿತ್ರಾ (20) ಕೊಲೆಯಾದ ಯುವತಿ
ಹಾಸನ ತಾಲ್ಲೂಕಿನ, ಕುಂತಿಗುಡ್ಡದಲ್ಲಿ ಘಟನೆ
ತೇಜಸ್ (23) ಕೊಲೆ ಮಾಡಿರುವ ಆರೋಪಿ
ಮೊಸಳೆಹೊಸಳ್ಳಿ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಮ್ಯಾಕಾನಿಕಲ್ ಓದುತ್ತಿದ್ದ ಸುಚಿತ್ರಾ
ಸುಚಿತ್ರಾಳ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ ತೇಜಸ್
ಮುಂಚಿನ ಕಾರ್ಯಾಚರಣೆ ನಡೆದಿ ಗ್ರಾಮಾಂತರ ಪೊಲೀಸರು
ಯುವತಿ ಕೊಂದಿದ್ದ ಇಂಜಿನಿಯರಿಂಗ್ ಪದವಿಧರ ತೇಜಸ್ ಪೊಲೀಸರ ವಶಕ್ಕೆ
ಪ್ರೇಮ ವೈಫಲ್ಯದಿಂದ ಗೆಳತಿಯನ್ನೇ ಬರ್ಬರವಾಗಿ ಕೊಲೆ ಮಾಡಿರೊ ಆರೋಪ
ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡಿದ್ದ ತೇಜಸ್
ಪ್ರೀತಿಸಲು ನಿರಾಕರಿಸಿದ್ದಕ್ಕೆ ಕುಂತಿ ಬೆಟ್ಟಕ್ಕೆ ಕರೆದೊಯ್ದು ಹತ್ಯೆ ಮಾಡಿರೊ ಆರೋಪ
ಇಂದು ಮುಂಜಾನೆ ಯುವತಿಯನ್ನು ತನ್ನೊಟ್ಟಿಗೆ ಕರೆದೊಯ್ದಿದ್ದ ತೇಜಸ್
ಒಂಟಿಯಾಗಿ ಕರೆದೊಯ್ದು ಕುತ್ತಿಗೆ ಸೀಳಿ ಹತ್ಯೆಮಾಡಿದ್ದ ಪಾತಕಿ
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime2 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan6 days ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Crime1 month ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
-
State1 month ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ