Kodagu
ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ವನಮಹೋತ್ಸವ

ಮಡಿಕೇರಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಟಿಚಿಣioಟಿಚಿಟ ಜisಚಿsಣeಡಿ ಡಿesಠಿoಟಿse ಜಿoಡಿಛಿe) ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ
ಕಾರ್ಯಪ್ಪ ಕಾಲೇಜಿನಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.
ವಿವಿಧ ಬಗೆಯ ಹಣ್ಣುಗಳ ಗಿಡ ಮತ್ತು ಔಷಧಿ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ
ನೀಡಲಾಯಿತು.
ಪಕೃತಿ ವಿಕೋಪವನ್ನು ತಡೆಗಟ್ಟಲು ಕಾಡು ಬೆಳಸುವ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು
ವನಮಹೋತ್ಸವ ಯೋಜನೆಯನ್ನು ಅಭಿಯಾನದ ರೀತಿಯಲ್ಲಿ ಕೈಗೊಂಡಿದೆ.
ವನಮಹೋತ್ಸವ ಅಭಿಯಾನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಇನ್ಸ್ಪೆಕ್ಟರ್ ಶಾಂತಿಲಾಲ್, ಹೆಡ್ ಕಾನ್ಟೇಬಲ್
ಅರ್ಜನ್, ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ, ಕೊಡವ ಎಂ ಎ ವಿಭಾಗದ ಸಂಯೋಜಕ ರವಿಶಂಕರ್, ಹಿಂದಿ
ವಿಭಾಗದ ಡಾ. ಶ್ರೀಧರ್ ಹೆಗಡೆ, ಇಂಗ್ಲಿಷ್ ಎಂ ಎ ವಿಭಾಗದ ಸಂಯೋಜಕ ಪೂಣಚ್ಚ ಉಪಸ್ಥಿತರಿದ್ದರು.
Kodagu
ಬಲ್ಲಮಾವಟಿ ಪೇರೂರು ಗ್ರಾಮದ ಲೈನ್ ಮನೆಯಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆ – 112ಪೊಲೀಸರಿಂದ ಮಗುವಿನ ರಕ್ಷಣೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇರೂರು ಗ್ರಾಮದ ಲೈನ್ ಮನೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆಯಾಗಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.
ಬಲ್ಲಮಾವಟಿ ಪೇರೂರು ಗ್ರಾಮದ ತೋಳಂಡ ಪೂಣಚ್ಚ ಎಂಬುವವರ ಲೈನ್ ಮನೆಯಲ್ಲಿ ಶನಿವಾರ ರಾತ್ರಿ (ದಿನಾಂಕ:15/03/2025/ 8.ಗಂಟೆಗೆ )ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿ ಬಳಿಕ ಬಿಟ್ಟುಪರಾರಿ ಯಾಗಿದ್ದಾಳೆ.
ಜನರು ವಾಸವಿಲ್ಲದ ಲೈನ್ ಮನೆಯಲ್ಲಿ ಮಗುವಿನ ಕೂಗು ಕೇಳಿದ ಸ್ಥಳೀಯರು ಮನೆ ಮಾಲೀಕ ಪೂಣಚ್ಚ ಎಂಬುವರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲಿಸಿದ ಮಾಲಿಕ ಪೂಣಚ್ಚ ಎಂಬುವವರು ಮಗುವಿನ ಬಳಿ ಯಾರು ಇಲ್ಲದಿರುವುದನ್ನು ಕಂಡು 112 ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ
ಸ್ಥಳಕ್ಕೆ ಧಾವಿಸಿದ 112 ಸಿಬ್ಬಂದಿಗಳಾದ ಮುಖ್ಯಪೇದೆ ರಾಜೇಶ್, ಮತ್ತು ಮೊಣ್ಣಪ್ಪ ರವರು ಮಗುವನ್ನು ರಕ್ಷಿಸಿ ನಾಪೋಕ್ಲು ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಆಂಬುಲೆನ್ಸಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ರಕ್ತದ ಮಡುವಿನಲ್ಲಿ ಇರುವೆಗಳೊಂದಿಗೆ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆ ಸಂಬಂಧ ಮಡಿಕೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮಗುವಿನ ಅರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Kodagu
ಮಾನವ-ವನ್ಯಜೀವಿ ಸಂಘರ್ಷ ತಡೆಯಿರಿ: ಡಾ.ಮಂತರ್ ಗೌಡ

ಮಡಿಕೇರಿ: ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಒಂದೆಡೆ ರೈತರು, ಮತ್ತೊಂದೆಡೆ ಅರಣ್ಯ ಸಿಬ್ಬಂದಿಗಳು ಸಾವನ್ನಪ್ಪುತ್ತಿದ್ದು ಈ ಸಂಬಂಧ ವೈಜ್ಞಾನಿಕವಾಗಿ ಕ್ರಮ ವಹಿಸುವ ಕೈಗೊಂಡ ಕ್ರಮಗಳನ್ನು ಕುರಿತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸ ಸಚಿವ ಅವರಿಂದ ಮಾಹಿತಿ ಪಡೆದಿದ್ದಾರೆ.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು ಭೌತಿಕ ಅಡೆತಡೆಗಳ ನಿರ್ಮಾಣ: ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ/ನಿರ್ವಹಣೆ, ಆನೆತಡೆ ಕಂದಕ ನಿರ್ಮಾಣ/ನಿರ್ವಹಣೆ ಮಾಡಲಾಗಿದ್ದು ಮತ್ತು ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಾನವ ಆನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ರೈಲ್ವೆ ಹಳಿಗಳನ್ನು ಉಪಯೋಗಿಸಿಕೊಂಡು ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 391.832 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದರು.
ಆನೆ ಕಾರ್ಯಪಡೆಗಳ ಸ್ಥಾಪನೆ: ಸರ್ಕಾರವು ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಾಗೂ ಚಾಮರಾಜನಗರ ಜಿಲ್ಲೆ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ 08 ಆನೆ ಕಾರ್ಯಪಡೆ ರಚಿಸಲಾಗಿದೆ ಎಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ವಿವರಿಸಿದ್ದಾರೆ.
ಚಿರತೆ ಕಾರ್ಯಪಡೆಗಳ ಸ್ಥಾಪನೆ: ಸರ್ಕಾರವು ಮೈಸೂರು ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಟಿ.ನರಸೀಪುರ, ಮಂಡ್ಯ, ಪಾಂಡವಪುರ ಹಾಗೂ ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚಿರತೆ ಹಾವಳಿ ನಿಭಾಯಿಸುವ ನಿಟ್ಟಿನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ, ಮೈಸೂರು ಇವರ ನೇತೃತ್ವದಲ್ಲಿ ಚಿರತೆ ಕಾರ್ಯಪಡೆ ರಚಿಸಲಾಗಿದೆ. ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಗುರುತಿಸಿ, ಸೆರೆಹಿಡಿದು ಆಗ್ಲಿಂದಾಗ್ಗೆ ಆನೆ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನಿಡಿದ್ದಾರೆ.
Kodagu
ಮಾ.16 ಹಾಗೂ 17ರಂದು ಕೊಳಕೇರಿ ಬೊಮ್ಮಂಜಿ ಭದ್ರಕಾಳಿ ಉತ್ಸವ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು: ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿಯಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಶ್ರೀ ಭದ್ರಕಾಳಿ ದೇವರ ಉತ್ಸವವು ಮಾ.16ಮತ್ತು17ರಂದು ನಡೆಯಲಿದೆ.
ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
-
State21 hours ago
ಬೆಂಗಳೂರು ನಮ್ಮ ಮೆಟ್ರೋ ನೇಮಕಾತಿ : ಟ್ರೈನ್ ಆಪರೇಟರ್ ಹುದ್ದೆಗಳ ಭರ್ತಿ
-
Kodagu20 hours ago
ಬಲ್ಲಮಾವಟಿ ಪೇರೂರು ಗ್ರಾಮದ ಲೈನ್ ಮನೆಯಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆ – 112ಪೊಲೀಸರಿಂದ ಮಗುವಿನ ರಕ್ಷಣೆ
-
National - International21 hours ago
ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ಸ್ವೀಕಾರ
-
Kodagu22 hours ago
ಮಾನವ-ವನ್ಯಜೀವಿ ಸಂಘರ್ಷ ತಡೆಯಿರಿ: ಡಾ.ಮಂತರ್ ಗೌಡ
-
State23 hours ago
ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ: ಬಸವರಾಜ ಬೊಮ್ಮಾಯಿ
-
Chikmagalur7 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
Hassan24 hours ago
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು
-
Chamarajanagar6 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ