Connect with us

Health

ಕೆಆರ್ ಆಸ್ಪತ್ರೆಗೆ 35 ವ್ಯಾಟ್ ಲೇಸರ್ ಯಂತ್ರದ ಕೊಡುಗೆ – ರಾಜ್ಯದಲ್ಲೇ ಎರಡನೇ ಸರ್ಕಾರಿ ಯಂತ್ರ ಮೈಸೂರಲ್ಲಿ ಪ್ರಾರಂಭ

Published

on

ಮೈಸೂರು: ಬಡ ರೋಗಿಗಳಿಗೆ ಹೆಚ್ಚಿನ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡುವ ಸಲುವಾಗಿ ನೆಪ್ರೋ ಯುರಾಲಜಿ ಸಂಸ್ಥೆಯು ಮೈಸೂರಿನ ಶಾಖೆಗೆ ನೂತನ ಹೊಸ‌ 35 ವ್ಯಾಟ್ ಹೊಲ್ಯುಮ್ ಲೇಸರ್ ಯಂತ್ರವನ್ನು ಕೊಡುಗೆಯಾಗಿ ನೀಡಿದರು.
ಕೆಆರ್ ಆಸ್ಪತ್ರೆಯಲ್ಲಿರುವ ಶಾಖೆಗೆ ನೆಪ್ರೋ ಯುರಾಲಜಿ ಸಂಸ್ಥೆಯ ನಿರ್ದೇಶಕ ಆರ್.ಕೇಶವಮೂರ್ತಿ  ಮೈಸೂರು ಶಾಖೆಗೆ ನೂತನವಾಗಿ ಹೊಸ 35 ವ್ಯಾಟ್ ಹೊಲ್ಯುಮ್ ಲೇಸರ್ ಯಂತ್ರವನ್ನು ಶಾಖೆ ವಿತರಿಸಿದರು.
ಬಳಿಕ ಮಾತನಾಡಿ,  ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ 2007 ರಿಂದ ಸಾರ್ವಜನಿಕರಿಗೆ ಸಮರ್ಪಣೇಯಾಗಿದ್ದು, ಸದರಿ ಸಂಸ್ಥೆಯು ಮೂತ್ರಪಿಂಡ ಹಾಗೂ ಮೂತ್ರಕೋಶ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚುಣಿಯಲ್ಲಿದೆ. ಕರ್ನಾಟಕ ಸರ್ಕಾರದ ಏಕೈಕ
ಆಸ್ಪತ್ರೆಯಾಗಿದ್ದು, ಸದರಿ ಆಸ್ಪತ್ರೆಗೆ ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಸದರಿ ಆಸ್ಪತ್ರೆಯನ್ನು 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಘಟಕಕ್ಕೆ ಬೇಟಿ ನೀಡಿದ ವೇಳೆಯಲ್ಲಿ ಸದರಿ ರೋಗಿಗಳ ಒತ್ತಡ ಗಮನಿಸಿ ಮೈಸೂರಿನಲ್ಲಿ 2 ನೇ ಘಟಕವನ್ನು ಸೂಚಿಸಿದ್ದರು.
2016 ರಲ್ಲಿ ಘಟಕವನ್ನು ಪ್ರಾರಂಭೀಸಲು ಸೂಚಿಸಲಾಗಿ ಅದರಂತೆ 2018 ರಲ್ಲಿ ಮೈಸೂರು ಹಾಗೂ ಸುತ್ತಾ ಮುತ್ತ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಕೆ.ಆರ್. ಆಸ್ಪತ್ರೆಯ ಆವರಣದಲ್ಲಿ ಐಪಿಡಿ/ಓಪಿಡಿ ಕಟ್ಟಡದ 4ನೇ ಮಹಡಿಯಲ್ಲಿ 60 ಹಾಸಿಗೆಯ ಸಾಮರ್ಥ್ಯವುಳ್ಳ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡಂತೆ ಘಟಕವನ್ನು 2018 ರಲ್ಲಿ ಪ್ರಾರಂಭಿಸಲಾಗಿತ್ತು. ಈ ಘಟಕಕ್ಕೆ ಈಗ ಅತ್ಯಾಧುನಿಕ ಲೇಸರ್ ಯಂತ್ರದ ಕೊಡುಗೆ ನೀಡಲಾಗಿದೆ. ಇದು ಶರೀರದಲ್ಲಿ ಯಾವುದೇ ರಂಧ್ರ
ಮಾಡದೇ ಲೇಸರ್ ಕಿರಣಗಳ ಮುಖಾಂತರ ಕಿಡ್ನಿಕಲ್ಲುಗಳನ್ನು ಸಂಪೂರ್ಣವಾಗಿ ಚಿಕಿತ್ಸೆ ನೀಡಿ ತೆಗೆದು ಹಾಕಬಹುದು. ಇದರಿಂದ ಶರೀರದಲ್ಲಿ ಯಾವುದೇ ರಂಧ್ರವಾಗದ ಕಾರಣ ಹೋಲಿಗೆ
ಕೂಡ ಅವಶ್ಯಕತೆ ಇರುವುದಿಲ್ಲ. ಈ ಯಂತ್ರವು
ಸರ್ಕಾರಿ ಸೂಪರ್ ಸ್ಟೇಷಲಿಟಿ ಆಸ್ಪತ್ರೆಯಾದ ನೆಷ್ಟೋ ಯುರಾಲಜಿ ಸಂಸ್ಥೆಯಲ್ಲಿ ಹಾಗೂ ಮೈಸೂರು ಜಿಲ್ಲೆಯಲ್ಲೇ ಪ್ರಥಮವಾಗಿದ್ದು ಇದು ಸಂಸ್ಥೆಯ ಹೆಮ್ಮೆಯ ವಿಷಯವೆಂದರು.
ಇದರಿಂದ ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡಲು ಅನುಕೂಲವಾಗಲಿದೆ. ಸದರಿ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಸುಮಾರು 60,000 ರಿಂದ 70,000 ರೂ ವೆಚ್ಚ ಮಾಡಲಾಗುತ್ತಿದೆ. ಬಿ ಪಿ ಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ
ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಹಾಗೂ ಬಿ ಪಿ ಎಲ್ ಕಾರ್ಡ್ ಹೊಂದದೆ ಇರುವ
ರೋಗಿಗಳಿಗೆ ಶೇ.70 ಮೊತ್ತವನ್ನು ಪಾವತಿಸಿ ಉಳಿದ ಶೇಕಡ ಶೇ.30 ಸರ್ಕಾರದಿಂದ ಭರಿಸಲಾಗುತ್ತಿದೆ‌. SCST ಯೋಜನೆಯಡಿಯಲ್ಲಿ ಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಸರ್ಕಾರಿ ನೌಕರಿಗೆ ಜ್ಯೋತಿ ಸಂಜೀವಿನಿ ಸಹ ಲಭ್ಯವಿರುತ್ತದೆ ಎಂದು ಹೇಳಿದರು.
ಮೈಸೂರು ಶಾಖೆ ಮುಖ್ಯಸ್ಥ ನರೇಂದ್ರ, ಶಶಿ ಕಿರಣ್ ಇನ್ನಿತರರು ಉಪಸ್ಥಿತರಿದ್ದರು.
Continue Reading
Click to comment

Leave a Reply

Your email address will not be published. Required fields are marked *

Trending