Hassan
ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಅಲೂರು : ಜಿಲ್ಲಾ ಕೇಂದ್ರ ಹಾಸನಾಂಬೆ ದೇವಿಯ ಜಾತ್ರಾ ಉತ್ಸವ ಮುಗಿದ ನಂತರ ಆಕೆಯ ಹಿರಿಯ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕಜಾತ್ರೆ ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಹಾಸನಾಂಬೆ ದೇವಸ್ಥಾನದ ಬಾಗಿಲು ಹಾಕಿದ ಮರುದಿನ ಕೆಂಚಾಂಬಿಕೆ ದೇವಿ ಜಾತ್ರೆ ಉತ್ಸವಾದಿಗಳು ಪ್ರಾರಂಭವಾಗುತ್ತವೆ. ಶನಿವಾರ ಕೆಂಚಾಂಬ ದೇವಿಯ ಒಡವೆ ಹಾಗೂ ವಿಗ್ರಹಗಳನ್ನು ಮೂಲ ದೇವಸ್ಥಾನದಿಂದ ಜನಪದ ಕಲಾ ತಂಡಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಕೆರೆ ತಂದು ಪ್ರಧಾನ ಅರ್ಚಕ ಎಚ್.ಎನ್.ರಾಮಸ್ವಾಮಿ ಮತ್ತು ಸತ್ಯನಾರಾಯಣ್ ಸೇರಿದಂತೆ ಹಲವು ವ್ಯವಸ್ಥಾಪನ ಮಂಡಳಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಸುತ್ತಮುತ್ತಲಿನ 48 ಹಳ್ಳಿಗಳ ಅಧಿದೇವತೆಯಾಗಿರುವ. ಕೆಂಚಾಂಬ ದೇವಿಯವರ ಉತ್ಸವವು ಜಾತ್ರಾ ಮಹೋತ್ಸವದ ಮೊದಲ ದಿನವಾದ ಶನಿವಾರ ರಾತ್ರಿ ಮೂಲ ದೇವಾಸ್ಥಾನದಲ್ಲಿ ದೇವಿಯ ಏಳು ಮುಖಗಳುಳ್ಳ ಮೂರ್ತಿಗಳಾದ ಬ್ರಾಹ್ಮಿದೇವಿ, ಮಹೇಶ್ವರಿ ದೇವಿ, ವೈಷ್ಣವಿ ದೇವಿ, ಕೌಮಾರಿ ದೇವಿ, ವರಾಹಿದೇವಿ ಮತ್ತು ಇಂದ್ರಾಣಿ ದೇವಿ ಎಂಬ ಸಪ್ತ ಮಾತೃಕಾ ಅಲಂಕಾರ ಮಾಡಿ ಮಹಾ ಮಂಗಳಾರತಿ ಬೆಳಗುವ ಮೂಲಕ ಜಾತ್ರಾ ಕೈಂಕರ್ಯಗಳನ್ನು ವಿದ್ಯುಕ್ತವಾಗಿ ಆರಂಭಿಸಲಾಯಿತು. ಈ ಸಂದರ್ಭ ಚಾಮುಂಡೇಶ್ವರಿ ದೇವಿಯ ಸಮಾಗಮನವನ್ನು ಇಲ್ಲಿ ನೋಡಬಹುದಾಗಿದ್ದು ನಂತರ ದೇವಾಲಯ ಆವರಣದಲ್ಲಿರುವ ಸುಗ್ಗಿ ಕಟ್ಟೆ ಮುಂದೆ ವಿಶೇಷ ಪೂಜೆ ನಡೆದು ಜನರು ಸುಗ್ಗಿ ಕಟ್ಟೆ ಮುಂದೆ ಕುಣಿದು ಸಂಭ್ರಮಿಸಿದರು.
ಭಾನುವಾರ ಬೆಳಗ್ಗೆ ಮಡಿವಾಳ ವಂಶಸ್ಥರಿಂದ ದೇವಿಯ ಸೀರೆ ಮುಂತಾದ ಉಡುಗೆ ತೊಡುಗೆಗಳನ್ನು ಶುದ್ದಗೊಳಿಸಿ ನಡೆಮುಡಿಯನ್ನು ಸಲ್ಲಿಸಲಾಯಿತು ಪ್ರಧಾನ ಆರ್ಚಕ ರಾಮಸ್ವಾಮಿ ನೇತೃತ್ವದಲ್ಲಿ ಬೆಳಿಗ್ಗೆ 8.30 ರಿಂದ ಶ್ರೀ ಕೆಂಚಾಂಬ ದೇವಿಯ ಮೂಲ ದೇವಾಸ್ಥಾನದಿಂದ ದೇವಿಯ ಮೆರವಣಿಗೆ ನಡೆಯಿತು. 12.30ರಿಂದ 1 ಗಂಟೆವರೆಗೆ ಬಲಿ ಪ್ರಧಾನ ಮಾಡಲಾಯಿತು ಮಧ್ಯಾಹ್ನ 2.30 ರಿಂದ 3. ಗಂಟೆವರೆಗೆ ಕೆಂಡ ಹಾಯುವ ಕಾರ್ಯಕ್ರಮ ಜರುಗಿದವು 3.30ರಿಂದ ರಾತ್ರಿ 10.30ರವರೆಗೆ ದೇವಿ ಪಾದಮುಟ್ಟಿ ನಮಸ್ಕರಿಸುವ ಶ್ರೀ ಕೆ ಅವಕಾಶವನ್ನು ಕಲ್ಪಿಸಲಾಗಿತ್ತು ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ಪಾದಮುಟ್ಟಿ ನಮಸ್ಕರಿಸಿದರು.
ಸತೀಶ್ ಚಿಕ್ಕಕಣಗಾಲು
Crime
ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ – ಕಿಡ್ನಾಪರ್ಸ್‌ನ್ನು ಪತ್ತೆ ಹಚ್ಚಿದ ಪೊಲೀಸರು

ಹಾಸನ : ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ
ಕಿಡ್ನಾಪರ್ಸ್‌ನ್ನು ಪತ್ತೆ ಹಚ್ಚಿದ ಪೊಲೀಸರು
ನೆಲ್ಯಾಡಿ ಬಳಿ ತೆರಳುತ್ತಿದ್ದ ವೇಳೆ ಎಲ್ಲರೂ ಪೊಲೀಸರ ವಶಕ್ಕೆ
ಅರ್ಪಿತಳನ್ನು ರಕ್ಷಿಸಿ ಕಿಡ್ನಾಪ್ ಮಾಡಿದವರನ್ನು ವಶಕ್ಕೆ ಪಡೆದ ಪೊಲೀಸರು
ಹಾಸನ ನಗರ ಪೊಲೀಸ್ ಠಾಣೆಗೆ ಕರೆತರುತ್ತಿರುವ ಪೊಲೀಸರು
ಯುವತಿ ಅಪಹರಿಸಿ ಸೋಮವಾರಪೇಟೆ ಕಡೆ ಕರೆದೊಯ್ದಿದ್ದ ಖತರ್ನಾಕ್ ಕಿಡ್ನಾಪರ್ಸ್
ಪೊಲೀಸರಿಗೆ ಸಿಗದ ರೀತಿ ಪ್ಲಾನ್ ಮಾಡಿ ಅರ್ಪಿತಾಳನ್ನು ಕರೆದೊಯ್ಯಲು ಯತ್ನಿಸುತ್ತಿದ್ದ ರಾಮು ಮತ್ತು ತಂಡ
ಅಪರಹರಣಕ್ಕೊಳಗಾಗಿದ್ದ ಅರ್ಪಿತಾಳನ್ನು ರಕ್ಷಿಸಿ ರಾಮು ಮತ್ತು ತಂಡವನ್ನು ವಶಕ್ಕೆ ಪಡೆದು ಹಾಸನಕ್ಕೆ ಕರೆತರುತ್ತಿರುವ ಪೊಲೀಸರು
Hassan
ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ – ತವರು ಜಿಲ್ಲೆಯಿಂದಲೇ ಅಖಾಡಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡರು

ಹಾಸನ: ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ
ತವರು ಜಿಲ್ಲೆಯಿಂದಲೇ ಅಖಾಡಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡರು
ಡಿ.1 ರಂದು ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆಯಲ್ಲಿ ಮಹತ್ವದ ಸಭೆ
ಸಂಸದರು, ಶಾಸಕರು, ಜಿಪ-ತಾಪಂ ಮಾಜಿ ಸದಸ್ಯರು, ಮುಖಂಡರ ಸಭೆ ಕರೆದ ದೊಡ್ಡಗೌಡರು
ನಗರಸಭೆ,ಪುರಸಭೆ,ಪಟ್ಟಣ ಪಂಚಾಯ್ತಿ, ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೂ ಆಹ್ವಾನ
ತಮ್ಮ ಅಧ್ಯಕ್ಷತೆಯಲ್ಲೇ ನಡೆಯುವ ಸಭೆಗೆ ಪ್ರಮುಖರ ಆಹ್ವಾನ
ತಪ್ಪದೇ ಸಭೆಗೆ ಹಾಜರಾಗಿ ಪೂರಕ ಸಲಹೆ ಸೂಚನೆ ನೀಡುವಂತೆ ಸೂಚನೆ
ತವರು ಜಿಲ್ಲೆಯಿಂದಲೇ ಚುನಾವಣಾ ಪ್ರಕ್ರಿಯೆ ಆರಂಭಿಸುತ್ತಿರುವ ಹೆಚ್ಡಿಡಿ
Hassan
ಜ್ಞಾನ ಮನುಷ್ಯನನ್ನು ಮುಕ್ತಿಯ ಕಡೆಗೆ ಕೊಂಡೊಯ್ಯುತ್ತದೆ – ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಚನ್ನರಾಯಪಟ್ಟಣ: ಜ್ಞಾನ ಮನುಷ್ಯನನ್ನು ಮುಕ್ತಿಯ ಕಡೆಗೆ ಕೊಂಡೊಯ್ಯುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪುರಾಣ ಪ್ರಸಿದ್ದ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿಯ 92 ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದೇಹ ಮಣ್ಣು ಸೇರಿದರು ಕೂಡ ಮನಸ್ಸು ಮನುಷ್ಯನನ್ನು ಹಿಂಬಾಲಿಸುತ್ತದೆ.
ಮನಸ್ಸಿಗೆ ಸರಿಯಾದ ಸಂಸ್ಕಾರವನ್ನು ನೀಡಬೇಕು ಭಕ್ತಿ ಮತ್ತು ಶ್ರದ್ದೆಯನ್ನು ಇಟ್ಟುಕೊಂಡು ಬದುಕಬೇಕು.
ಅಶಿಸ್ತಿನ ಬದುಕನ್ನು ತೊರೆದು ನಿಸ್ವಾರ್ಥದೊಂದಿಗೆ ಸನ್ಮಾರ್ಗದಲ್ಲಿ ನಡೆದರೆ ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ. ಒಬ್ಬರಿಗೊಬ್ಬರು ಸಹಾಯ ಮಾಡುವುದೇ ಮಾನವೀಯ ಧರ್ಮ. ಆದರೆ ನಾವು ಮಾಡುವ ದಾನ ಪಡೆದವರಿಗೆ ಸಾರ್ಥಕವಾಗಬೇಕೆ ಹೊರತು ಹೊರೆಯಾಗಬಾರದು. ಬದುಕು ಕಟ್ಟಿಕೊಳ್ಳಲು ದಾರಿಯಾಗಿರಬೇಕು ಎಂದರು.
ನಮ್ಮ ಬದುಕಿನ ಶೈಲಿ, ಆಚರಣೆ ಹಾಗೂ ಅಳವಡಿಸಿಕೊಳ್ಳುವ ಮೌಲ್ಯಯುತ ಜೀವನ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಇರಬೇಕು ಎಂದು ತಿಳಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ನಾವು ಎಷ್ಟೆಲ್ಲ ದುಡಿದಿದ್ದೇವೆ, ಏನೆಲ್ಲ ಸಂಪಾದಿಸಿದ್ದೇವೆ ಎಂದು ಎಣಿಸುವ ಬದಲು ದುಡಿದ ಹಣವನ್ನು ಯಾವ ಧರ್ಮ ಕಾರ್ಯಕ್ಕೆ ಎಷ್ಟು ವಿನಿಯೋಗಿಸಿದ್ದೇವೆ ಎಂಬುದನ್ನು ಅರಿಯಬೇಕು. ಕುಡಿಕೆ ತುಂಬುವಷ್ಟು ಕೂಡಿಟ್ಟು ಸ್ವಾರ್ಥ ಬದುಕು ನಡೆಸುವುದಕ್ಕಿಂತ ಧರ್ಮ ಕಾರ್ಯಗಳಿಗೆ ನಿಸ್ವಾರ್ಥದಿಂದ ಬಳಸುವುದು ಒಳಿತು ಎಂದರು.
ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಬಸವೇಶ್ವರಸ್ವಾಮಿಯ ದೇಗುಲ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಾಗಿದ್ದು ಈಗಾಗಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಗರ್ಭಗುಡಿ ನಿರ್ಮಾಣಕ್ಕೆ 10 ಲಕ್ಷ ರೂ. ಸಮರ್ಪಿಸುತ್ತೇನೆ ಎಂದು ತಿಳಿಸಿದರು.
ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 2023 ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ 4 ಸರ್ಕಾರಿ ಫ್ರೌಢಶಾಲೆಯ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಇದೇ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪುಷ್ವವೃಷ್ಟಿ ನೆರವೇರಿಸಿ ಗುರುವಂದನೆ ಸಲ್ಲಿಸಲಾಯಿತು. ಆದಿಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಸದಸ್ಯೆ ಸುಮಾ, ದಿಡಗ ಗ್ರಾಪಂ ಅಧ್ಯಕ್ಷ ಎನ್.ಆರ್.ರತ್ನರಾಜ್, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಗುಡಿಗೌಡ ಪ್ರಕಾಶ್, ಗಣೇಶ್‌ಗೌಡ ಇತರರು ಇದ್ದರು.
ದಯಾನಂದ್ ಶೆಟ್ಟಿಹಳ್ಳಿ.
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime2 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan6 days ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Crime1 month ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
-
State1 month ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ