Crime
ಕಾರ್ಮಿಕರನ್ನು ಜೀತದಾಳನ್ನಾಗಿ ಇರಿಸಿದ ಆರೋಪ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರ ಮೇಲೆ ಪ್ರಕರಣ ದಾಖಲು

ಸಿದ್ದಾಪುರ : ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕರನ್ನು ಜೀತದಾಳನ್ನಾಗಿ ಇರಿಸಿದ ಆರೋಪದ ಮೇಲೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರ ಮೇಲೆ ಪ್ರಕರಣ ದಾಖಲಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೋಬಳಿಗೆ ಸೇರಿದ ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿ ಹಾಗೂ ಮಾಜಿ ಜಿ .ಪಂ ಸದಸ್ಯರೊಬ್ಬರ ತೋಟದ ಲೈನ್ ಮನೆಯಲ್ಲಿ ಪಣಿಯರ ಕೃಂದ (55) ಹಾಗೂ ಮುತ್ತಿ (50) ಎಂಬುವವರು ಕುಟ್ಟ ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ತೆರಳಿ ನಮ್ಮನ್ನು ಜೀತದಾಳನ್ನಾಗಿ ಬಳಸುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿಗಳ ಬಳಿ ಮೌಖಿಕವಾಗಿ ದೂರನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳ ಆದೇಶದಂತೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಉಪವಿಭಾಗಾಧಿಕಾರಿಯವರ ಆದೇಶದಂತೆ ದೂರು ನೀಡಿದ ಕಾರ್ಮಿಕರನ್ನು ಪೊನ್ನಂಪೇಟೆ ತಾಲ್ಲೂಕಿನ ಕುಟ್ಟಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ವಿಚಾರಣೆ ನಡೆಸಿದ ಸಂಧರ್ಭದಲ್ಲಿ ಪರಿಶಿಷ್ಟ ಪಂಗಡದ ಕಾರ್ಮಿಕರನ್ನು ಜೀತದಾಳಾಗಿ ಇರಿಸಿಕೊಂಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 1976 ರ ಕರ್ನಾಟಕ ಕಾರ್ಮಿಕ ಪದ್ದತಿ ವಿಮುಕ್ತಿ ಕಾಯ್ದೆ ಹಾಗೂ ಇನ್ನಿತರ ಕಾಯ್ದೆಯ ಅಡಿಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Crime
ಕಟ್ಟಡದ ಸಜ್ಜಾ ಕುಸಿತ ಪ್ರಕರಣ: ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ (45) ಚಿಕಿತ್ಸೆ ಫಲಕಾರಿಯಾಗದೆ ಸಾ*ವು

ಬೇಲೂರು: ಹಳೇಯ ಕಟ್ಟಡದ ಸಜ್ಜಾ ಕುಸಿತ ಪ್ರಕರಣ
ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ (45) ಸಾವು
ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ
ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ ಜ್ಯೋತಿ
ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಬೇಲೂರು ಪಟ್ಟಣದ ಹೊಸನಗರ ನಿವಾಸಿ ಜ್ಯೋತಿ
ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಜ್ಯೋತಿ
ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ ಜ್ಯೋತಿ ಪತಿ ಗೋಪಿ
ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಜ್ಯೋತಿ
ಅನಾಥವಾದ ಇಬ್ಬರು ಹೆಣ್ಣುಮಕ್ಕಳು
ಮಾ.9 ರಂದು ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ನಡೆದಿದ್ದ ದುರಂತ
ಕಳೆದ ಭಾನುವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ
Crime
Hassan: ಕೈಗಾರಿಕಾ ಘಟಕದಲ್ಲಿ ಕಳ್ಳತನ

HASSAN-BREAKING
ಹಾಸನ : ಕೈಗಾರಿಕಾ ಘಟಕದಲ್ಲಿ ಕಳ್ಳತನ
1.25 ಲಕ್ಷ ರೂ ಮೌಲ್ಯದ ಕಾಪರ್ ವೈರ್ ಮತ್ತು ಟೈರ್‌ಗಳನ್ನು ಕದ್ದು ಕಳ್ಳ ಎಸ್ಕೇಪ್
ಹಾಸನ ಜಿಲ್ಲೆ, ಹೋಳೆನರಸಿಪುರ ತಾಲ್ಲೂಕಿನ, ಮೈಸೂರು ರಸ್ತೆಯಲ್ಲಿ
ಘಟನೆ
ನಾಸಿರ್ ಅಹಮದ್ ಎಂಬುವವರಿಗೆ ಸೇರಿದ ಉಮರ್ ಅಗ್ರೋ ಇಂಡಸ್ಟ್ರೀಸ್
ಸಿಸಿಟಿವಿಯಲ್ಲಿ ಮುಖ ಕಾಣಬಾರದೆಂದು ಬಟ್ಟೆ ಮುಚ್ಚಲು ಯತ್ನಿಸಿರುವ ಕಳ್ಳ
ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Crime
ಹೋಳಿ ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ: ಹಲ್ಲೆ ನಡೆಸಿದ ಮೂವರು ಯುವಕರ ಬಂಧನ

HASSAN-BREAKING
ಹಾಸನ : ಹೋಳಿ ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ ಪ್ರಕರಣ
ಹಲ್ಲೆ ನಡೆಸಿದ ಮೂವರು ಯುವಕರ ಬಂಧನ
ಲೋಹಿತ್, ಋತ್ವಿಕ್, ಆಕಾಶ್ ಬಂಧಿತ ಆರೋಪಿಗಳು
ಹಲ್ಲೆಗೊಳಗಾದ ಯುವಕನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಯುವಕರು
ಚಂದನ್ ಹಲ್ಲೆಗೊಳಗಾದ ಯುವಕ
ಹಾಸನ ನಗರದ ಜಿಲ್ಲಾಸ್ಪತ್ರೆ ಬಳಿ ಮಾರ್ಚ್ 8 ರಂದು ನಡೆದಿದ್ದ ಘಟನೆ
ಪೊಲೀಸ್ ಠಾಣೆಗೆ ದೂರು ನೀಡಿದ್ದ ಚಂದನ್
ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಮೂವರು ಹಾಸನ ಹೊರವಲಯದ ಚಿಕ್ಕಹೊನ್ನೇನಹಳ್ಳಿ ಗ್ರಾಮದವರು
ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ
-
Chamarajanagar21 hours ago
ಕಾಂಗ್ರೆಸ್ ಗೆ ಭರ್ಜರಿ ಗೆಲುವು
-
Uncategorized20 hours ago
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್
-
Chamarajanagar22 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ
-
Chikmagalur23 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
National - International13 hours ago
ಪಾಕ್ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್ ಲಿಬರೇಶನ್ ಆರ್ಮಿ
-
Chamarajanagar15 hours ago
ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ
-
Kodagu14 hours ago
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ
-
Mandya18 hours ago
ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್ಡಿಕೆ ಕಳವಳ