Mandya
ಕಾರು ಅಪಘಾತ: ಬಿಹಾರದ ಇಬ್ಬರು ಯುವಕರು ಮೃತ

ಶ್ರೀರಂಗಪಟ್ಟಣ: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟರುವ ಘಟನೆ ಸೋಮವಾರ ಮುಂಜಾನೆ ತಾಲ್ಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ, ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿನಡೆದಿದೆ.
ಬಿಹಾರ ರಾಜ್ಯದ ಪಾಟ್ನಾ ಮಾಹಿಸಿಂಗ್ (19) ಮತ್ತು ಅದೇ ರಾಜ್ಯದ ಅರ್ನವ್ (20) ಮೃತಪಟ್ಟಿದ್ದಾರೆ.
ಮಾಹಿಸಿಂಗ್ ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿ. ಅರ್ನವ್ ಬೆಂಗಳೂರಿನ ಬಿಇಎಂಎಸ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದರು.
ಅರ್ನವ್ ಸ್ಥಳದಲ್ಲೇ ಮೃತಪಟ್ಟಿದ್ದು, ಮಾಹಿಸಿಂಗ್ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.
ಅರ್ನವ್, ಮಾಹಿಸಿಂಗ್ ಸೇರಿ 6 ಮಂದಿ ಕಿಯಾ ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದರು. ಮುಂದೆ ಚಲಿಸುತ್ತಿದ್ದ ಪಿಯಟ್ ಫೋರ್ಡ್ ಕಾರಿಗೆ ಈ ಕಾರು ಡಿಕ್ಕಿ ಹೊಡೆದಿದೆ. ಎರಡೂ ಕಾರಿನಲ್ಲಿದ್ದವರಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯಲ್ಲಿ ಎರಡೂ ಕಾರುಗಳು ಜಖಂಗೊಂಡಿವೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mandya
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ

ಮಂಡ್ಯ: ಪೂರ್ವಿಕರ ಕಾಲದಿಂದಲೂ ಗ್ರಾಮದ ಸ್ಮಶಾನ, ಧನ ಕರುಗಳು ಕುಡಿಯಲು ಕೆರೆಕಟ್ಟೆ ಹಾಗೂ ಜಮೀನುಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗೆ ಅಡ್ಡಲಾಗಿ ರೈತನೋರ್ವ ತಂತಿ ಬೇಲಿ ಹಾಕಿಕೊಂಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮದ್ಯೆದಲ್ಲಿಯ ಮೃತನ ಶವ ಸುಟ್ಟ ಘಟನೆಗೆ ಸಂವಂಧಿಸಿದಂತೆ ಜನಮಿತ್ರ ಪತ್ರಿಕೆ ಹಾಗೂ ಡಿಜಿಟಲ್ ವರದಿಗೆ ಫಲಶೃತಿ ದೊರೆತಿದೆ.
ಜನಮಿತ್ರ ವರದಿಯಿಂದ ಎಚ್ಚತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡಾಯಿಸಿ, ರಸ್ತೆಯ ಇಕ್ಕೆಲಗಳ ಇಬ್ಬರೂ ರೈತರಿಂದ ಹತ್ತು, ಹತ್ತು ಅಡಿ ಜಾಗವನ್ನು ಸ್ಮಶಾಬದ ರಸ್ತೆಗೆ ಬಿಡಿಸಿ ಸಫಲತೆ ಕಂಡಿದೆ.
ಜನಮಿತ್ರ ವರದಿಯಿಂದ ಎಚ್ಚೆತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ್ದ ಅಧಿಕಾರಿಗಳ ತಂಡ, ಸ್ಮಶಾನ ಹಾಗೂ ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ತೆರಳುವ ರಸ್ತೆಯ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದಾರೆ.
ರಸ್ತೆಯ ಎರಡೂ ಬದಿಯಲ್ಲಿನ ರೈತರಾದ ಅಂಧಾನಿಗೌಡ ಹಾಗೂ ಯಶೋಧಮ್ಮ ರವರಿಂದ ತಲಾ ಹತ್ತು ಹತ್ತು ಅಡಿ ಜಾಗವನ್ನು ಸ್ಮಶಾನದ ರಸ್ತೆಗೆ ಬಿಟ್ಟುಕೊಡುವಂತೆ ಮನವಲೈಸಿದ್ದಾರೆ.
ತಾಲ್ಲೂಕು ಆಡಳಿತದ ಮದ್ಯಸ್ಥಿಕೆಯಿಂದಾಗಿ ಇದೀಗ ಹೆಬ್ಬಾಡಿಹುಂಡಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಜನಮಿತ್ರ ಪತ್ರಿಕೆ ಹಾಗೂ ಜನಮಿತ್ರ ಡಿಜಿಜಿಟಲ್ ನ್ಯೂಸ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Mandya
ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಸಚಿವ ಚೆಲುವರಾಯಸ್ವಾಮಿ

ನಾಗಮಂಗಲ : ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಆ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂಬಾಗದಲ್ಲಿ ಅಂಗವಿಕಲರಿಗೆ 2024 -25 ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ತ್ರಿಚಕ್ರ ವಾಹನ ಸಮಾರಂಭದಲ್ಲಿ ಭಾಗವಹಿಸಿ ಸುಮಾರು 25 ಫಲಾನುಭವಿಗಳಿಗೆ ವಾಹನ ವಿತರಣೆ ಮಾಡುತ್ತ ಮಾತನಾಡಿದರು.
ಅಂಗವಿಕಲರು ದಿನನಿತ್ಯದ ತಮ್ಮ ವ್ಯವಹಾರಿಕ ಕಾರ್ಯನಿಮಿತ್ತ ಕೆಲಸಗಳಿಗೆ ತ್ರಿಚಕ್ರ ವಾಹನ ಬಳಸುವ ಮುಖಾಂತರ ಸರ್ಕಾರದ ಇಂತಹ ಸೌವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಇತರೆ ಚಟುವಟಿಕೆಗಳಲ್ಲಿ ಈ ವಾಹನಗಳನ್ನು ಬಳಸದಂತೆ ತಮ್ಮ ಸ್ವಂತ ವಾಹನಗಳಾಗಿ ಬಳಸಿಕೊಳ್ಳುವ ಮುಖಾಂತರ ಸರ್ಕಾರದ ಯೋಜನೆಗಳನ್ನು ಪಡೆದು ಅನುಕೂಲ ಮಾಡಿಕೊಳ್ಳುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕರಾದ ದಿನೇಶ್. ಎಚ್ ಟಿ ಕೃಷ್ಣೆ ಗೌಡ. ಪುರಸಭಾ ಅಧ್ಯಕ್ಷರು ಗಣ್ಯರು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
Mandya
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ

ಮಂಡ್ಯ : ಈ ಚಿತ್ರದಲ್ಲಿರುವ ವ್ಯಕ್ತಿ ಇಂದು (ಮಾ.14) ರಂದು ಮಂಡ್ಯ ರೈಲು ನಿಲ್ದಾಣದಲ್ಲಿ ರೈಲುಗಾಡಿಯಿಂದ ಬಿದ್ದು ಗಾಯಗೊಂಡಿರುತ್ತಾರೆ.
ಸದರಿಯವರ ಹೆಸರು ಮತ್ತು ವಿಳಾಸ ಪತ್ತೆಯಾಗಿರುವುದಿಲ್ಲ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ, ಅಥವ ಇವರ ಬಗ್ಗೆ ಮಾಹಿತಿ ಗೊತ್ತಿದ್ದಲ್ಲಿ ಮಾಹಿತಿ ನೀಡಲು
ರೈಲ್ವೆ ಹೊರ ಉಪ ಠಾಣೆ ಮಂಡ್ಯ ಕೋರಿದೆ.
-
Mandya8 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan15 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya11 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Kodagu8 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ
-
Mandya10 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Kodagu11 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ
-
Hassan14 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ