Connect with us

Chikmagalur

ಕಾಫಿನಾಡ ಕಾಂಗ್ರೆಸ್ ಶಾಸಕನ ಬ್ಯಾನರ್ ಪ್ರೇಮ…!

Published

on

ಚಿಕ್ಕಮಗಳೂರು : ಕಾಫಿನಾಡ ಕಾಂಗ್ರೆಸ್ ಶಾಸಕನ ಬ್ಯಾನರ್ ಪ್ರೇಮ…!

ರಸ್ತೆ ಗುಂಡಿ ಮುಚ್ಚಿಸಿ ಬ್ಯಾನರ್ ಹಾಕಿಸಿಕೊಂಡ ಶಾಸಕ…!

ಹೊಸ ರಸ್ತೆ ಮಾಡಿಸಿ ಬ್ಯಾನರ್ ಹಾಕಿಸಿಕೊಂಡ್ರಾ ಓಕೆ… ಒಪ್ಪೋಣ… ಒಳ್ಳೆದು… ಸಂತೋಷ…

ರಸ್ತೆಗೆ ಬಿದ್ದ ಗುಂಡಿ ಮುಚ್ಚಿಸಿ ಬ್ಯಾನರ್ ಹಾಕಿಸಿಕೊಳ್ಳೋದು…? ಪ್ರಚಾರದ ಘೀಳಾ…?

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರ ಬ್ಯಾನರ್ ಪ್ರೇಮಕ್ಕೆ ಜನರ ನಗು

ರಸ್ತೆ ಗುಂಡಿ ಮುಚ್ಚಿಸಿದ್ದು ಪಟ್ಟಣ ಪಂಚಾಯಿತಿಯ ಹಣದಲ್ಲಿ

ಬ್ಯಾನರ್ ಹಾಕಿಸಿಕೊಂಡಿದ್ದು ಮಾತ್ರ ಶಾಸಕ ಟಿ.ಡಿ. ರಾಜೇಗೌಡ

6 ವರ್ಷದಿಂದ ಕೊಪ್ಪ ಪ.ಪಂ.ಗೆ ಒಂದು ರೂಪಾಯಿ ಅನುದಾನ ನೀಡದ ಶಾಸಕರು

ಶಾಸಕರ ಬ್ಯಾನರ್ ಪ್ರೇಮಕ್ಕೆ ನಗುತ್ತಿರೋ ಕೊಪ್ಪ ಜನತೆ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು

Continue Reading
Click to comment

Leave a Reply

Your email address will not be published. Required fields are marked *

Chikmagalur

ಸ್ಮಶಾನ ಜಾಗದಲ್ಲಿ ರಸ್ತೆ ನಿರ್ಮಾಣ-ತೆರವುಗೊಳಿಸಲು ಗ್ರಾಮಸ್ಥರ ಮನವಿ

Published

on

ಚಿಕ್ಕಮಗಳೂರು: ತಾಲ್ಲೂಕು ವಸ್ತಾರೆ ಹೋಬಳಿ ಬಾಚಿಗನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಜಮೀನಿನ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಹರ್ಷವರ್ಧನ್ ಅವರಿಗೆ ಗ್ರಾಮಸ್ಥರು ಮನವಿ ನೀಡಿದರು.
ಬಾಚಿಗನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಸರ್ವೆ ನಂಬರ್ ೪೫ ರಲ್ಲಿ ೩೮ ಗುಂಟೆ ಜಾಗವನ್ನು ಸುಮಾರು ೭೫ ವರ್ಷಗಳ ಹಿಂದೆ ಸ್ಮಶಾನಕ್ಕೆ ಸರ್ಕಾರ ಮಂಜೂರು ಮಾಡಿದ್ದು, ಈ ಜಾಗಕ್ಕೆ ಗ್ರಾ.ಪಂ ನಿಂದ ಬೇಲಿ ನಿರ್ಮಿಸಲಾಗಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈಗ ಸ್ಮಶಾನ ಜಾಗದಲ್ಲಿ ಲಕ್ಷ್ಮಣ್‌ಗೌಡ ಕುಟುಂಬದವರು ಜೆಸಿಬಿ ಮೂಲಕ ಸಮಾಧಿಗಳ ಮೇಲೆ ಮಣ್ಣುಹಾಕಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇವರಿಗೆ ಬೇರೆ ಕಡೆ ರಸ್ತೆ ನಿರ್ಮಾಣ ಮಾಡಲು ಜಾಗವಿದ್ದರೂ ಇದೇ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆಂದು ಮನವಿಯಲ್ಲಿ ದೂರಿದ್ದಾರೆ.


ಈ ಸಂಬಂಧ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಈ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಬಾರದೆಂದು ಹೇಳಿದಾಗ ಉಡಾಫೆ ಉತ್ತರ ನೀಡಿದ್ದಾರೆಂದು ಆರೋಪಿಸಿದರು.
ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯಬಾರದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸ್ಮಶಾನ ಜಾಗದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯವನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ.


ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ಮರ್ಲೆ ಅಣ್ಣಯ್ಯ, ವಸಂತ ಕುಮಾರ್, ರುದ್ರಯ್ಯ ಗ್ರಾಮಸ್ಥರುಗಳಾದ ಗೋಪಾಲ್‌ಕೃಷ್ಣ, ಕೋಮಲ್, ಸುರೇಶ್, ಲಕ್ಷ್ಮಯ್ಯ, ಉದಯ, ಕೃಷ್ಣಮೂರ್ತಿ, ರಾಜೇಶ್, ತಿಮ್ಮಯ್ಯ, ಚಂದ್ರಯ್ಯ, ದಿನೇಶ, ಮೋಹನ, ಮಹೇಶ್, ರಂಗಪ್ಪ, ಮಂಜುನಾಥ, ಸುನೀಲ್, ನಾಗರಾಜು, ರವಿ, ದಸಂಸ ಮುಖಂಡರುಗಳಾದ ಭಾಗವಹಿಸಿದ್ದರು.

Continue Reading

Chikmagalur

ಬಂದೂಕನಿಂದ ಮಿಸ್ ಫೈರ್ ಆಗಿ ರೈತ ಸ್ಥಳದಲ್ಲೇ ಸಾವು

Published

on

ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ಘಟನೆ

ಕಳವಾಸೆ ಗ್ರಾಮದ ಆನಂದ್ (47 )ಸ್ಥಳದಲ್ಲೇ ‌ಸಾವು

ಬಂದೂಕಿನ ಪರವಾನಿಗೆ ಹೊಂದಿದ್ದ ಆನಂದ್

ಮನೆಯ ಕೋಣೆಯಲ್ಲಿ ಇರಿಸಿದ್ದ
ಬಂದೂಕು ತೆಗೆಯಲು ಹೋದಾಗ ಏಕಾಏಕಿ ಫೈರ್

ಎದೆಗೆ ಗುಂಡು ತಗುಲಿದ ಪರಿಣಾಮ ಸ್ಥಳದಲ್ಲೇ ಸಾವು

ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಆನಂದ್ ‌ಮೃತ ದೇಹ ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನೆ

ಮರಣೋತ್ತರ ಪರೀಕ್ಷೆಗಾಗಿ ಹಾಸನದ ಆಸ್ಪತ್ರೆಗೆ ರವಾನೆ

Continue Reading

Chikmagalur

ರೇಸ್‌ನಲ್ಲಿ ಬೈಕ್ ಪಲ್ಟಿ – ರೇಸರ್ ಬೀಳುತ್ತಿರುವ ಭಯಾನಕ ವೀಡಿಯೋ ವೈರಲ್

Published

on

ಬೆಳ್ತಂಗಡಿ: ಬೈಕ್ ರೇಸ್‌ನಲ್ಲಿ ಬೈಕೊಂದು ಪಲ್ಟಿಯಾಗಿ ರೇಸರ್ ಬೈಕ್‌ ಮೇಲೆಯೇ ಬೀಳುವ ವೀಡಿಯೋವೊಂದು ವೈರಲ್ ಆಗಿದೆ.

ಕಾವಳಕಟ್ಟೆ ನಿವಾಸಿ ನೌಶಾದ್ (23) ಗಾಯಗೊಂಡ ರೇಸರ್.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದಲ್ಲಿ ಸೋಮವಾರ ಬೈಕ್ ರೇಸ್ ನಡೆದಿತ್ತು. ಫಿಟ್ಟರ್ ಆಗಿರುವ ನೌಶಾದ್ ಈ ರೇಸ್‌ನಲ್ಲಿ ಬೈಕ್ ರೇಸರ್ ಆಗಿ ಪಾಲ್ಗೊಂಡಿದ್ದರು. ರೇಸ್‌ನಲ್ಲಿ ವೇಗವಾಗಿ ಬಂದ ಬೈಕ್ ಜಂಪಿಂಗ್ ಮಾಡುತ್ತಿದ್ದಾಗ ನೇರವಾಗಿ ನಿಲ್ಲುವ ಬದಲು ಕುಸಿದು ಬಿದ್ದಿದೆ‌. ಈ ವೇಳೆ ನೌಶಾದ್ ಕೂಡಾ ಬೈಕ್ ಮೇಲೆಯೇ ಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ‌. ಅವರು ಬೀಳುತ್ತಿರುವ ವೀಡಿಯೋ ವೈರಲ್ ಆಗಿದೆ.

Continue Reading

Trending

error: Content is protected !!