Deficiency
ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ಸಂದರ್ಭ ವ್ಯಕ್ತಿಗೆ ಗಾಯ

ಸಿದ್ದಾಪುರ : ಕಾಡಾನೆ ದಾಳಿಯಿಂದ ಓಡಿ ತಪ್ಪಿಸಿಕೊಳ್ಳುವ ಸಂದರ್ಭ ವ್ಯಕ್ತಿಯೋರ್ವ ಬಿದ್ದು ಗಂಭೀರವಾಗಿ
ಗಾಯಗೊAಡಿರುವ ಘಟನೆ ಸಿದ್ದಾಪುರ ಸಮೀಪದ ಅವರೆಗುಂದ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದಿದೆ.
ಅವರೆಗುಂದ ಗ್ರಾಮ ನಿವಾಸಿ ರಘು (೩೫) ಮತ್ತು ಗಣೇಶ್ ಸಮೀಪದ ಅರಣ್ಯ ಪ್ರದೇಶದೊಳಗೆ ಸೌದೆ ತರಲೆಂದು
ಹೋದ ಸಂದರ್ಭ ಕಾಡಾನೆ ದಿಡೀರನೆ ಎದುರಾಗಿದ್ದು, ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ಸಂದರ್ಭ ರಘು
ನೆಲಕ್ಕೆ ಬಿದ್ದ ಪರಿಣಾಮ ಕುತ್ತಿಗೆಯ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಣೇಶ ಎಂಬವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ, ಗಾಯಗೊಂಡಿರುವ ರಘು ಅವರನು ಮಡಿಕೇರಿಯ
ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ
ವೆಚ್ಚವನ್ನು ಅರಣ್ಯ ಇಲಾಖೆ ಭರಿಸಲಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಂ ಮಾಹಿತಿ ನೀಡಿದ್ದಾರೆ.
Deficiency
ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಮತ್ತು ಪ್ರತ್ಯಕ್ಷಿತೆ ಕಾರ್ಯಕ್ರಮ

ಸಾಲಿಗ್ರಾಮ : ತೆಂಗಿನ ಬೆಳೆ ಕೀಟ ನಿಯಂತ್ರಣ ತರಬೇತಿ ತೋಟಗಾರಿಕೆ ಇಲಾಖೆ ಹಾಗು ತೋಟಗಾರಿಕೆ ಮಹಾವಿದ್ಯಾಲಯ ಇವರ ಸಹ ಬಾಗಿತ್ವದಲ್ಲಿ ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಮತ್ತು ಪ್ರತ್ಯಕ್ಷಿತೆ ಕಾರ್ಯಕ್ರಮ ವನ್ನು ಮಿರ್ಲೆ ಹೋಬಳಿಯ ಎಲೆಮುದ್ದನಹಳ್ಳಿ ಕೊಪ್ಪಲು ಗ್ರಾಮದ ರೈತ ಪುಟ್ಟಸ್ವಾಮಿಗೌಡ ಅವರ ತೆಂಗಿನತೋಟದಲ್ಲಿ ಅಕ್ಟೋಬರ್ 31 ರ ಮಂಗಳವಾರ ಬೆಳ್ಳಿಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಟಿ. ಎಸ್. ಭಾರತಿ ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಿ. ರವಿಶಂಕರ್ ನೆರವೇರಿಸಳಲಿದ್ದು, ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಉಪ ನಿರ್ದೇಶಕ ಡಾ: ಮಂಜುನಾಥ್ ಅಂಗಡಿ,ಡಾ : ಸುದರ್ಶನ್, ಡಾ : ಮುತ್ತು ರಾಜ್, ಭಾಗವಹಿಸಲಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೆಂಗಿನ ಬೆಲೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಪಡೆದುಕೊಳ್ಳುವಂತೆ ಕೊರಿದ್ದಾರೆ.
ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
Deficiency
ಅಧಿಕಾರಿಗಳು ಹಣ ಮಾಡೋದು ಒಂದೇ ದಾರಿಯಲ್ಲ ರೈತರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು

ಹುಣಸೂರು : ಅಧಿಕಾರಿಗಳು ಹಣ ಮಾಡೋದು ಒಂದೇ ದಾರಿಯಲ್ಲ ರೈತರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು ಎಂದು ಕೆಲವರು ಆರೋಪಿಸಿದರೆ, ಕೆಲವರು ಸಣ್ಣ ಪುಟ್ಟ ರೈತರ ಮೇಲೆ ನಡೆಯುವ ತೊಂದರೆಗಳನ್ನು ಪ್ರಶ್ನೆಸಿದರೆ ಆ ರೈತರಿಗೆ ಅಧಿಕಾರಿಗಳು ಮಾನಸಿಕವಾಗಿ ತೊಂದರೆ ನೀಡುತ್ತಾರೆ ಆದರೆ ಈಗ ರೈತನಿಗೆ ಶೂ ನಲ್ಲಿ ಹೊಡೆಯಲು ಮುಂದಾಗಿರೋ ಅಧಿಕಾರಿಗೆ ಏನು ಕ್ರಮ ಕೈಗೊಳ್ಳಬೇಕು ಎಂದು ರೈತರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸಭೆಯಲ್ಲಿ ಹೊರಹಾಕಿದ್ದು ಹೀಗೆ.
ಅವರು ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದ ತಂಬಾಕು ಮಂಡಳಿಯ ರೈತ ಭವನದಲ್ಲಿ ಪ್ಲಾಟ್ ಫಾರಂ ನಂಬರ್ 62ರ ಹರಾಜು ಅಧೀಕ್ಷಕ ಬ್ರಿಜ್ ಭೂಷಣ್ ವಿರುದ್ಧ ರೈತರು ಸೋಮವಾರ ಸಭೆ ಸೇರಿ ಚರ್ಚಿಸಿ ನಿರ್ಣಯ ಕೈಗೊಂಡು ತಂಬಾಕು ಮಂಡಳಿಯ ಅಧಿಕಾರಿ ಒಬ್ಬ ತಂಬಾಕು ರೈತನಿಗೆ ಶೂ ನಿಂದ ಹೊಡೆಯಲು ಮುಂದಾಗಿರುವುದು ರೈತ ಕುಲಕ್ಕೆ ಅವಮಾನ ಆ ಅಧಿಕಾರಿಯನ್ನು ಕರ್ನಾಟಕ ರಾಜ್ಯದಿಂದ ವರ್ಗಾವಣೆ ಮಾಡಬೇಕು, ಹಾಗೂ ಆತ ಸಭೆಯಲ್ಲಿ ಕ್ಷಮೆ ಕೇಳಬೇಕು ಜೊತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ವಿಚಾರಣೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಂಡು ಈ ನಿರ್ಣಯವನ್ನು ಸಭೆಯಲ್ಲಿ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆದ ಗೊಬ್ಬರ ಕಮಿಟಿಯ ಅಧ್ಯಕ್ಷ ಅಣ್ಣೂರು ಕಾಳೇಗೌಡ ಈ ನಿರ್ಣಯವನ್ನು ಓದಿ ತಿಳಿಸಿದರು.
ಈ ನಿರ್ಣಯದ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲು ಆರ್.ಎಂ. ಓ ಲಕ್ಷ್ಮಣ್ ರಾವ್ ರವರಿಗೆ ನೀಡಿದರು. ಕಾರ್ಯಕ್ರಮದಲ್ಲಿ ತಂಬಾಕು ಮಂಡಳಿಯ ಉಪಾಧ್ಯಕ್ಷ ಬಸವರಾಜಪ್ಪ, ಸದಸ್ಯರಾದ ವಿಕ್ರಂ ಗೌಡ ,ದಿನೇಶ್ , ಗೊಬ್ಬರ ಕಮಿಟಿಯ ಉಪಾಧ್ಯಕ್ಷ ಮಂಜುನಾಥ್ ಕೆರೆಗೋಡು, ಕಾರ್ಯದರ್ಶಿ ಮರಿಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಡಿಎಸ್ಎಸ್ ಸಂಚಾಲಕ ರಾಮಕೃಷ್ಣ ಅತ್ತಿಕುಪ್ಪೆ, ಪ್ರಭಾಕರ್, ಮೋದೂರು ಶಿವಣ್ಣ, ದೇವರಾಜ್, ಉಂಡವಾಡಿ ಚಂದ್ರೇಗೌಡ, ರವಿಕುಮಾರ್, ನವೀನ್, ಅಗ್ರಹಾರ ರಾಮೇಗೌಡ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.
Chikmagalur
ಧಾರಾಕಾರ ಮಳೆಗೆ ಎರಡು ಮನೆಗಳಿಗೆ ಹಾನಿ

ಚಿಕ್ಕಮಗಳೂರು : ಮಲೆನಾಡಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಪಶ್ಚಿಮ ಘಟಕ್ಕೆ ಹೊಂದಿಕೊಂಡಂತೆ ಇರುವ ಮಲೆನಾಡಿನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮೂಡಿಗೆರೆ ತಾಲೂಕಿನಲ್ಲಿ ಎರಡು ಮನೆಗಳು ಕುಸಿದಿವೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಜೂರು ಗ್ರಾಮದಲ್ಲಿ ದಿನೇಶ್ ಎಂಬುವವರು ಮನೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಸಿದಿದೆ. ಹಾಗೆಯೇ ಬಾಳೂರು ಹೋಬಳಿ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮದಲ್ಲಿ ಮನೆಯೊಂದು ಕುಸಿದಿದೆ.
ಮೇಗೂರು ಗ್ರಾಮದ ರಾಮಯ್ಯ ಎಂಬುವವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಮನೆಯ ಗೋಡೆ ಮತ್ತು ಮೇಲ್ಚಾವಣಿ ಬಹುತೇಕ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಮನೆಯವರು ಒಳಗಡೆಯೇ ಇದ್ದರು ಎಂದು ತಿಳಿದುಬಂದಿದ್ದು. ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಕಂದಾಯ ಮತ್ತು ಗ್ರಾಮ
ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರ ಮನೆಗೆ ತಾತ್ಕಾಲಿಕ ರಕ್ಷಣೆಗಾಗಿ ಟಾರ್ಪಲ್ ಹೊದಿಸಲು ವ್ಯವಸ್ಥೆ ಮಾಡಿದ್ದು. ಕುಟುಂಬದವರನ್ನು ಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ.
-
Kodagu20 hours ago
ಬೇಳೂರು ಬಾಣೆಯಲ್ಲಿ ಸ್ಟೇರಿಂಗ್ ಲಾಕ್ : ಕಾರು ಪಲ್ಟಿ
-
Kodagu17 hours ago
ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ: ಕೃತಾರ್ಥ ಮಂಡೆಕುಟ್ಟಂಡ
-
State13 hours ago
ಬಿಜೆಪಿ ಶೋಕಾಸ್ ನೋಟಿಸ್ ಕುರಿತು ಶಾಸಕ ಎಸ್ಟಿಎಸ್ ಫಸ್ಟ್ ರಿಯಾಕ್ಷನ್
-
Mysore16 hours ago
ಎಲ್ಲಾ ಪಕ್ಷದವರ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಯತೀಂದ್ರ ಸಿದ್ದರಾಮಯ್ಯ
-
Mandya15 hours ago
ಭೂ ದಾಖಲೆ ಹೊಂದಿರುವವರನ್ನು ಓಕ್ಕಲೆಬ್ಬಿಸಬೇಡಿ : ಎನ್ ಚೆಲುವರಾಯಸ್ವಾಮಿ
-
Mandya11 hours ago
ಎಂ.ಕೆ.ಸೋಮಶೇಖರ್ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ
-
State10 hours ago
ಬಿಜೆಪಿಯಿಂದ ಆರು ವರ್ಷಗಳ ಕಾಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ
-
Hassan14 hours ago
1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ಸ್ವರೂಪ್ ಪ್ರಕಾಶ್