Hassan
ಕಳೆದ ೨೦ ವರ್ಷಗಳಿಂದ ಲಾಭದತ್ತ ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜು ಹೇಳಿಕೆ
ಹಾಸನ : ಕಳೆದ ೨೦ ವರ್ಷಗಳಿಂದ ಲಾಭಗಳಿಸುತ್ತಿರುವ ದಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಳೆದ ವರ್ಷದ ಸಾಲಿನಲ್ಲಿ ೧೩ ಕೋಟಿ ೪೮ ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜು ಸೋಮನಹಳ್ಳಿ ತಿಳಿಸಿದರು.
ನಗರದ ಬಿ.ಎಂ. ರಸ್ತೆ ಬಳಿ ಇರುವ ದಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ದಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ರೂ. ೮.೫೩ ಲಕ್ಷ ದುಡಿಯುವ ಬಂಡವಾಳದೊಂದಿಗೆ ದಿನಾಂಕ ೨೮-೧೦-೧೯೫೩ ರಲ್ಲಿ ಪ್ರಾರಂಭವಾಗಿದ್ದು, ಇದೀಗ ಜಿಲ್ಲೆಯಲ್ಲಿ ಪ್ರಧಾನ ಕಛೇರಿ ಹಾಗೂ ೩೪ ಶಾಖೆಗಳನ್ನು ಹೊಂದಿದ್ದು, ೨೦೨೩ ಮಾರ್ಚ್ ೩೧ರ ಅಂತ್ಯಕ್ಕೆ ರೂ. ೧೬೩೮.೯೮ ಕೋಟಿ ಠೇವಣಿ, ರೂ. ೮೩.೬೯ ಕೋಟಿ ಷೇರು ಬಂಡವಾಳ ಹಾಗೂ ರೂ. ೨೨೦೭.೬೭ ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಒಟ್ಟು ರೂ. ೧೮೩೬.೧೪ ಕೋಟಿ ಸಾಲ ವಿತರಿಸಲಾಗಿರುತ್ತದೆ. ನಮ್ಮ ಬ್ಯಾಂಕು ಜಿಲ್ಲೆಯ ಒಟ್ಟು ೪,೫೮,೨೮೯ ಗ್ರಾಹಕರನ್ನು ಹೊಂದಿದ್ದು. ರೈತರಿಗೆ ಹಾಗೂ ಗ್ರಾಹಕರಿಗೆ ನಿರಂತರವಾಗಿ ಸೇವೆ ಸಲ್ಲಿಸಲಾಗುತ್ತಿರುತ್ತದೆ. ಬ್ಯಾಂಕ್ ಸತತವಾಗಿ ೨೦ ವರ್ಷಗಳಿಂದ ಲಾಭಗಳಿಸುತ್ತಿದ್ದು, ೨೦೨೨- ೨೦೨೩ ನೇ ಸಾಲಿಗೆ ರೂ ೧೩.೪೮ ಕೋಟಿ ನಿವ್ವಳ ಲಾಭವನ್ನು ಗಳಿಸಿರುತ್ತದೆ ಎಂದರು. ಬ್ಯಾಂಕು ಬಹುಮುಖ್ಯವಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ಸೌಲಭ್ಯ ನೀಡುತ್ತಿದ್ದು, ಜಿಲ್ಲೆಯಲ್ಲಿರುವ ೨೧೧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ೧೭೩೬೧೭ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲವಾಗಿ ರೂ. ೧೦೭೯.೨೩ ಕೋಟಿ ಮತ್ತು ೧೪೮೪ ರೈತರಿಗೆ ಮಧ್ಯಮಾವಧಿ ಸಾಲವಾಗಿ ರೂ. ೮೭.೪೩ ಕೋಟಿ, ಕೃಷಿ ವಲಯಕ್ಕೆ ಒಟ್ಟು ರೂ. ೧೧೪೬.೬೬ ಕೋಟಿ ಸಾಲ ನೀಡಲಾಗಿರುತ್ತದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಉಪಯೋಗಿ ಸೇವಾ ಸಹಕಾರ ಸಂಘಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರವು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಗೋದಾಮು ನಿರ್ಮಾಣ, ಕೃಷಿ ಯಂತ್ರೋಪಕರಣಗಳ ಖರೀದಿ ಹಾಗೂ ಇತರೆ ಉದ್ದೇಶಕ್ಕಾಗಿ ಡಿಸೆಂಬರ್-೨೦೨೦ ರ ಅಂತ್ಯಕ್ಕೆ ರೂ. ೧೩.೩೫ ಕೋಟಿ ಸಾಲ ನೀಡಲಾಗಿರುತ್ತದೆ. ಗೃಹ/ವಾಣಿಜ್ಯ ಕಟ್ಟಡ ನಿರ್ಮಾಣ, ಗೃಹ/ವಾಣಿಜ್ಯ ಕಟ್ಟಡ ಖರೀದಿ. ನಿವೇಶನ ಖರೀದಿ/ಅಡಮಾನ ಹಾಗೂ ಇತರೆ ಕೃಷಿಯೇತರ ಉದ್ದೇಶಗಳಿಗೆ ರೂ. ೫೨೦.೫೦ ಕೋಟಿ ಸಾಲ ನೀಡಿದೆ. ನಬಾರ್ಡ್ ಹಾಗೂ ರಾಜ್ಯ ಸರ್ಕಾರ ರೂಪಿಸಿದ ಸ್ವ ಸಹಾಯ ಗುಂಪುಗಳ ರಚನೆ ಹಾಗೂ ಬ್ಯಾಂಕ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬ್ಯಾಂಕಿನಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಬ್ಯಾಂಕಿನ ಶಾಖೆಗಳು ಹಾಗೂ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಡಿಸೆಂಬರ್-೨೦೨೩ ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ೧೮೫೭೩ ಸ್ವ ಸಹಾಯ ಗುಂಪುಗಳನ್ನು ರಚಿಸಿದ್ದು ಈ ಪೈಕಿ ಬಹುತೇಕ ಗುಂಪುಗಳು ಸಾಲ ಸೌಲಭ್ಯ ಪಡೆದಿದ್ದು, ಪ್ರಸ್ತುತ ೪೨೨೧ ಗುಂಪುಗಳಿಗೆ ಬ್ಯಾಂಕ್ ಅಂಕೇಜ್ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ ರೂ. ೧೦೪.೯೬ ಕೋಟಿ ಸಾಲ ನೀಡಲಾಗಿರುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸುಮಾರು ೧೩೦೦ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾರ್ಯಚಟುವಟಿಕೆ ನಡೆಸುತ್ತಿದ್ದು, ೩೬೦೮ ರೈತ ಸದಸ್ಯರುಗಳಿಗೆ ಹೈನುಗಾರಿಕೆ ಉತ್ತೇಜನಕ್ಕಾಗಿ ಮಿಶ್ರತಳಿ ಹಸು, ಎಮ್ಮೆ ಖರೀದಿಗೆ, ಗರಿಷ್ಠ ರೂ ೧,೦೦,೦೦೦/- ಗಳ ವರೆಗೆ ಶೇ. ೧೦.೫೦ ರ ಬಡ್ಡಿ ದರದಲ್ಲಿ ಒಟ್ಟು ರೂ. ೩೦.೩೬ ಕೋಟಿ ನೀಡಲಾಗಿರುತ್ತದೆ. ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಕಿರು ಸಾಲ ನೀಡುವ ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಗರಿಷ್ಟ ರೂ. ೫೦,೦೦೦-೦೦ ಗಳವರೆಗೆ ಸಾಲ ನೀಡಲಾಗುತ್ತಿದ್ದು. ಇದುವರೆಗೂ ೯೬ ಜನರಿಗೆ ರೂ. ೧೧.೬೬ ಲಕ್ಷ ಸಾಲ ನೀಡಲಾಗಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕು, ಬ್ಯಾಂಕುಗಳಿಗೆ ನಿಗದಿಪಡಿಸಿರುವ ಆರ್ಥಿಕ ಮಾನದಂಡಗಳನ್ವಯ ಸಿ.ಆರ್.ಎ.ಆರ್. ಅನುಪಾತವನ್ನು ಕನಿಷ್ಟ ಶೇ. ೯ ಕ್ಕೆ ನಿಗದಿಪಡಿಸಿದ್ದು, ಡಿಸೆಂಬರ್-೨೦೨೩ ರ ಅಂತ್ಯಕ್ಕೆ ಬ್ಯಾಂಕು ಶೇ. ೧೧.೧೦ ಸಿ.ಆರ್.ಎ.ಆರ್. ಹೊಂದಿರುತ್ತದೆ ಎಂದರು. ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣವಾಗಿ ಕೋರ್ ತಂತ್ರಜ್ಞಾನದಡಿ ಗಣಕೀಕರಣಗೊಂಡಿದ್ದು, ಗ್ರಾಹಕರು ತಮ್ಮ ವ್ಯವಹಾರವನ್ನು ಯಾವುದೇ ಶಾಖೆಗಳಲ್ಲಿ (ಂಟಿಥಿತಿheಡಿe bಚಿಟಿಞiಟಿg) ವ್ಯವಹಾರ ನಡೆಸಬಹುದಾಗಿದೆ. ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವ ದೇಶಾದ್ಯಂತ ಹಣ ವರ್ಗಾವಣೆ ಮಾಡುವ ೧೫ ಎಟಿಎಂ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ಗ್ರಾಹಕರು ಈ ಸೌಲಭ್ಯ ಉಪಯೋಗಿಸಿಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ವ್ಯವಹಾರಗಳ/ಸೌಲಭ್ಯಗಳ ಅರಿವು ಮೂಡಿಸಲು ಹಾಗೂ ತ್ವರಿತ ನಗದು ಸೌಲಭ್ಯ ಕಲ್ಪಿಸಲು ಬ್ಯಾಂಕಿನ ವತಿಯಿಂದ ನಬಾರ್ಡ್ ಸಹಾಯಧನದೊಂದಿಗೆ ಬ್ಯಾಂಕಿನಲ್ಲಿ ಮೊಬೈಲ್ ಎಟಿಎಂ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬ್ಯಾಂಕಿನ ಬಗ್ಗೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ಡಿ.ಸಿ.ಸಿ. ಬ್ಯಾಂಕ್ ಮುಖ್ಯ ಕಾರ‍್ಯನಿವಹಣಾಧಿಕಾರಿ ಆರ್.ಜೆ. ಕಾಂತರಾಜು, ಮಾಜಿ ಅಧ್ಯಕ್ಷರಾದ ಕೆ. ಸತೀಶ್, ನಿರ್ದೇಶಕರಾದ ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಮ್, ಜಗದೀಶ್ ಇತರರು ಉಪಸ್ಥಿತರಿದ್ದರು.
Hassan
ಟಿಕೆಟ್ ಪರಿಶೀಲನೆ ವೇಳೆ ಭೀಕರ ಅಪಘಾತ: ಲಾರಿ ಗುದ್ದಿ KSRTC ಟಿಕೆಟ್ ತನಿಖಾಧಿಕಾರಿ ಸ್ಥಳದಲ್ಲೇ ಸಾ*ವು
ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ KSRTC ಟಿಕೆಟ್ ತಪಾಸಣಾ ಇನ್ಸ್‌ಪೆಕ್ಟರ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾಸನ ವಿಭಾಗೀಯ ತನಿಖಾ ಸಂಚಾರ ನಿಯಂತ್ರಕ ದಳದ ತಪಾಸಣಾ ಇನ್ಸ್‌ಪೆಕ್ಟರ್ ಶಕುನಿಗೌಡ (57) ಮೃತ ಅಧಿಕಾರಿ. ನಲ್ಲೂರು-ಮಗ್ಗೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ರಾಜ್ಯ ಸಾರಿಗೆ ಬಸ್ ಅನ್ನು ತಡೆದು, ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸುವ ಉದ್ದೇಶದಿಂದ ಅವರು ರಸ್ತೆ ದಾಟುತ್ತಿದ್ದ ವೇಳೆ, ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಶಕುನಿಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಕ್ಯಾಂಟರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಚಾಲಕನ ಪತ್ತೆಗೆ ತನಿಖೆ ಮುಂದುವರಿದಿದೆ.
Hassan
ವರ್ತಕರು ಕಾಫಿ, ಏಲಕ್ಕಿ, ಮೆಣಸು ಕಳ್ಳತನ ಪ್ರಕರಣಗಳು ನಡೆಯದಂತೆ ಮುಂಜಾಗ್ರತಾಕ್ರಮವನ್ನು ಅನುಸರಿಸಿ: ಡಿವೈಎಸ್‌ಪಿ ಎಸ್ .ಕೆ.ಮಾಲತೀಶ
ಸಕಲೇಶಪುರ : ಇತ್ತೀಚಿನ ದಿನಗಳಲ್ಲಿ ಕಾಫಿ ಬೆಲೆಯಲ್ಲಿ ಏರಿಕೆ ಇರುವುದರಿಂದ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳೆಗಾರರು ಹಾಗೂ ವರ್ತಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕಳ್ಳತನ ಪ್ರಕರಣಗಳನ್ನು ಕಡಿಮೆ ಮಾಡಬೇಕು ಎಂದು ಸಕಲೇಶಪುರ ಪೊಲೀಸ್ ಉಪ ಆಧೀಕ್ಷಕ ಎಸ್ .ಕೆ. ಮಾಲತೀಶ ಹೇಳಿದರು

ಗ್ರಾಮಾಂತರ ಠಾಣೆ ಸಕಲೇಶಪುರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಸಕಲೇಶಪುರ ಪೊಲೀಸ್ ಉಪಾಧೀಕ್ಷಕ ಸಂಯೋಗದಲ್ಲಿ ಕಾಫಿ ವರ್ತಕರ ಸಭೆ 2025 ಯನ್ನು ಹಮ್ಮಿಕೊಳ್ಳಯಾಗಿತ್ತು. ಸಭೆಯಲ್ಲಿ ಬೆಳೆಗಾರರಿಗೆ ಮತ್ತು ವರ್ತಕರಿಗೆ ಕಾಫಿ,ಏಲಕ್ಕಿ,ಮೆಣಸು ಕಳ್ಳತನ ಪ್ರಕರಣಗಳು ನಡೆಯದಂತೆ ಮುಂಜಾಗೃತಕ್ರಮದ ಬಗ್ಗೆ ಸೂಚನೆ ನೀಡಿದರು.
ವರ್ತಕರು ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ಬಳಿ ಜಮೀನಿನ ಆರ್‌ಟಿಸಿ ಪಡೆದುಕೊಳ್ಳಬೇಕು,ಹಾಗೂ ತಮ್ಮ ಅಂಗಡಿಗಳಲ್ಲಿ ಅಂಗಡಿಯ ಒಳ ಬಾಗ ಮತ್ತು ಅಂಗಡಿ ಮುಂಬಾಗ ಹಾದುಹೋಗಿರುವ ರಸ್ತೆಯ ದೃಶ್ಯಗಳು ಕಾಣುವ ಹಾಗೆ ಸಿಸಿ ಕ್ಯಾಮೆರಗಳನ್ನು ಕಡ್ಡಾಯವಾಗಿ ಆಳವಡಿಸಿ ಕನಿಷ್ಟ 3 ತಿಂಗಳ ಬ್ಯಾಕ್ ಅಪ್ ಇಟ್ಟುಕೊಳ್ಳುಬೇಕು ಮತ್ತು ಅಂಗಡಿಗಳಲ್ಲಿ ಒಂದು ರಿಜಿಸ್ಟರ್ ಇಟ್ಟು ಅದರಲ್ಲಿ ಪ್ರತಿ ದಿನ ಅವರ ಬಳಿಗೆ ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ವಿಳಾಸ, ಮೊಬೈಲ್ ನಂಬರ್ ಹಾಗೂ ಅವರಿಂದ ಖರೀದಿಸಿದ ಕಾಫಿಯ ವಿವರವನ್ನು ನಮೂದು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಅನುಮಾನಸ್ಪದ ವ್ಯಕ್ತಿಗಳು ಕಾಫಿ,ಏಲಕ್ಕಿ,ಮೆಣಸು ಮಾರಲು ಬಂದಾಗ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು, ವರ್ತಕರು ಹಾಗೂ ಬೆಳೆಗಾರರು ಮುಂಜಾಗ್ರತಾಕ್ರಮವನ್ನು ವಹಿಸುವ ಮೂಲಕ ಕಳ್ಳತನ ಕಡಿಮೆ ಮಾಡಬಹುದು.ಇದಕ್ಕೆ ತಮ್ಮೆಲ್ಲರ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ರಾತ್ರಿ ಗಸ್ತಿನ ವೇಳೆ ಅನುಮಾನಸ್ಪದವಾಗಿ ಓಡಾಡುವ ಮಾರುತಿ 800 ಕಾರು,ಓಮಿನಿ ಕಾರು. ಗೂಡ್ಸ್ ಆಟೋಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಬೀಟ್ ಸಿಬ್ಬಂದಿ ಮತ್ತು ರಾತ್ರಿ ರೌಂಡ್ಸ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಯಸಳೂರು ಠಾಣೆ ಪಿ.ಎಸ್.ಐ ಸಲ್ಮಾನ್ ಖಾನ್ ತಂಬುಳ್ಳಿ, ನಗರ ಠಾಣೆ ಇನ್ಸ್‌ಪೆಕ್ಟರ್ ವನರಾಜ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ವರ್ತಕರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು .
Hassan
ಡಿ. 16ಕ್ಕೆ ಖಾಸಗಿ ವಿದ್ಯಾಸಂಸ್ಥೆ ವಿರುದ್ಧ ಪ್ರತಿಭಟನೆ : ಎಂ.ಡಿ.ಬಾಲರಾಜು ಆಗ್ರಹ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ತಾಲೂಕಿನ ಹುಣಸನಾಳು ಗ್ರಾಮದ ಬಳಿ ಇರುವ ಖಾಸಗಿ ವಿದ್ಯಾ ಸಂಸ್ಥೆಯೂ ಕಾನೂನು ಬಾಹಿರವಾಗಿ ಶಾಲೆಯನ್ನು ನಡೆಸುತ್ತಿದ್ದು, ಇದೇ ತಿಂಗಳ ಡಿ. 16ರಂದು ಶಾಲೆ ಮುಂಭಾಗ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಯುವ ಮುಖಂಡ ಎಂ.ಡಿ ಬಾಲರಾಜು ತಿಳಿಸಿದರು.
ನಗರದ ಪತ್ರಕರ್ತ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿ ವಿದ್ಯಾ ಸಂಸ್ಥೆಯೂ ಒಂದರಿಂದ ಐದನೇ ತರಗತಿವರೆಗೆ ಮಾತ್ರ ರಾಜ್ಯ ಪಠ್ಯಕ್ರಮಕ್ಕೆ ಪರವಾನಾಗಿ ಪಡೆದು, ಐಸಿಎಸ್‌ಸಿ ಕೇಂದ್ರ ಪಠ್ಯಕ್ರಮ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಇತ್ತೀಚಿಗೆ 6ನೇ ತರಗತಿಗೆ ಪಾಠ ಮಾಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ. ಶಿಕ್ಷಣ ಇಲಾಖೆಗೆ ಒಂದು ಶುಲ್ಕದ ಮಾಹಿತಿ ನೀಡಿ, ಪೋಷಕರಿಗೆ ಮತ್ತೊಂದು ಶುಲ್ಕದ ಪಟ್ಟಿ ನೀಡಿ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಇಲಾಖೆಯ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅಂಚೆ ಇಲಾಖೆ ಕೆಲಸದ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದ ತಿಂಗಳು ಪೋಷಕರು ಪ್ರತಿಭಟನೆ ಮಾಡಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸು ದಾಖಲು ಮಾಡುವಂತೆ, ಹಾಗೂ ಹೆಚ್ಚುವರಿ ಶುಲ್ಕ ವಾಪಸ್ ನೀಡುವಂತೆ ಡಿಡಿಪಿಐ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆದರೆ ಅದು ಕೂಡ ಶಾಲಾ ಆಡಳಿತ ಮಂಡಳಿಗೆ ಸಾಧ್ಯವಾಗಿಲ್ಲ. ಬಲವಂತವಾಗಿ ಆರನೇ ತರಗತಿ ವಿದ್ಯಾರ್ಥಿಗಳಿಗೆ ಟಿಸಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಖಾಸಗಿ ವಿದ್ಯಾಸಂಸ್ಥೆ ಜೊತೆ ಶಾಮೀಲಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಬೇಕು. ಇನ್ನು ಮೂರು ದಿನಗಳ ಒಳಗೆ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಡಿ.16ರಂದು ಶಾಲೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪೋಷಕರಾದ ರುದ್ರೇಶ್, ಪವಿತ್ರ ಕುಮಾರ್, ಅಮರನಾಥ್, ಪ್ರಶಾಂತ್, ದೇವಪ್ಪ, ಗಣೇಶ್ ಗಿರೀಶ್ ಅಶೋಕ್ ಹಾಗೂ ಪ್ರಭು ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.
-
Hassan19 hours agoಸರ್ಕಾರಿ ಆದೇಶ ಉಲ್ಲಂಘಿಸಿ ಕ್ರಿಸ್ಮಸ್ ರಜೆ ದುರುಪಯೋಗ : ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ
-
Hassan17 hours agoಡಿ.14 ರಿಂದ ಜ.4 ರವರೆಗೂ ಬಾಳ್ಳುಪೇಟೆಯಲ್ಲಿ ಯೋಗ, ಧ್ಯಾನ ಶಿಬಿರ
-
Kodagu18 hours agoಏ.24 ರಿಂದ 28ರ ವರೆಗೆ ಮೇಕೇರಿ ಮಸೀದಿಯ ಮಖಾಂ ಉರೂಸ್
-
Chamarajanagar16 hours agoರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ
-
Hassan15 hours agoಡಿ. 16ಕ್ಕೆ ಖಾಸಗಿ ವಿದ್ಯಾಸಂಸ್ಥೆ ವಿರುದ್ಧ ಪ್ರತಿಭಟನೆ : ಎಂ.ಡಿ.ಬಾಲರಾಜು ಆಗ್ರಹ
-
Hassan17 hours agoನೂತನ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ ಸಿಮೆಂಟ್ ಮಂಜು
-
Mysore18 hours agoಗ್ರಾ.ಪಂ.ಸಾರ್ವಜನಿಕರ ಮೊದಲ ಸಂಪರ್ಕ ಕೇಂದ್ರವಾಗಿದೆ: ಡಾ.ಮಲ್ಲಿಕಾರ್ಜುನಸ್ವಾಮಿ
-
Mandya18 hours agoಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ: ಎಸಿ ಚೇತನಾ ಯಾದವ್ ಕರೆ
