Connect with us

Mysore

ಕಳಪೆ ಭತ್ತ ಹಿನ್ನಲೆಯಲ್ಲಿ ಉಗ್ರಾಣ ನಿಗಮಕ್ಕೆ ವಾಪಸ್ ಕಳಿಸಿರುವುದು  

Published

on

 ಸಾಲಿಗ್ರಾಮ ಸಮೀಪದ  ಶಾಂತಿನಾಥ ರೈಸ್ ಮಿಲ್‌ಗೆ ಕಳುಹಿಸಿದ್ದ ಭತ್ತ ಕಳಪೆಯಾಗಿದೆ ಎಂದು ಮಾಲೀಕರು ದೂರಿದ ಹಿನ್ನೆಲೆಯಲ್ಲಿ ಉಗ್ರಾಣ ನಿಗಮದ ಗೋದಾಮಿಗೆ ವಾಪಸ್ ಕಳುಹಿಸಿರುವುದು.
 ಕಳೆದ ವರ್ಷ ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ಭತ್ತವನ್ನು ಖರೀದಿ ಮಾಡದೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು ಇದರಿಂದ ಸರ್ಕಾರಕ್ಕೆ ಅಪಾರ ನಷ್ಟ ಉಂಟಾಗಿದೆ.
ತಾಲೂಕಿನ ಹಂಪಾಪುರ    ಶಾಂತಿನಾಥ ರೈಸ್ ಮಿ ಲ್ ಮಾಲೀಕರೂ ಆದ ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಪಿ.ಪ್ರಶಾಂತ್ ಅವರಿಗೆ ಎರಡು ಲೋಡ್ ಭತ್ತವನ್ನು ಅಕ್ಕಿ ಮಾಡಲು ಕಳುಹಿಸಿದಾಗ ಕಳಪೆ ಕಂಡು ಬಂದ ಹಿನ್ನಲೆಯಲ್ಲಿ ಅವರು ವಾಪಸ್ ಕಳುಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಪಿ.ಪ್ರಶಾಂತ್ ಅಧಿಕಾರಿಗಳ ಅಸಡ್ಡೆಯಿಂದ ಇಂತಹ ಲೋಪವಾಗಿದ್ದು ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ  ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದರ ಜತೆಗೆ ನಮ್ಮ ರೈಸ್ ಮಿಲ್‌ಗೆ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿರುವ ಭತ್ತವನ್ನು ಅಕ್ಕಿ ಮಾಡಲು ಕಳುಹಿಸುವಂತೆ ಸೂಚನೆ ಇದ್ದರು ಅಧಿಕಾರಿಗಳು ತಮ್ಮ ಬೇಜವಬ್ದಾರಿಯಿಂದ ಎಪಿಎಂಸಿ ಉಗ್ರಾಣದಿಂದ ಕಳುಹಿಸಿ ಬೇರೆ ರೈಸ್ ಮಿಲ್ ನವರು ಕಳಪೆ ಎಂದು ತಿರಸ್ಕರಿಸುವ ಭತ್ತವನ್ನು ನನಗೆ ಕಳುಹಿಸಿದ್ದು ಪರಿಶೀಲನೆ ನಂತರ ಇದು ಸಾಬೀತಾಗಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ತೆರೆಯುವ ಭತ್ತ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ಭತ್ತ ಖರೀದಿಸಲು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಿ ಇಂತಹ  ಅಕ್ರಮ ಮತ್ತು ಅವ್ಯವಹಾರಗಳನ್ನು ತಡೆಗಟ್ಟಬೇಕು ಎಂದು ಟಿಎಪಿಸಿಎಂಎಸ್ ನಿರ್ದೇಶಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮತ್ತೋರ್ವ ನಿರ್ದೇಶಕ ರಾಮಕೃಷ್ಣೇಗೌಡ ಮಾತನಾಡಿ ಖರೀದಿ ಕೇಂದ್ರ ತೆರೆದ ನಂತರ ಗೋದಾಮಿನಲ್ಲಿ ಸಂಗ್ರಹವಾಗುವ ಭತ್ತವನ್ನು ರೈಸ್ ಮಿಲ್‌ಗಳಿಗೆ ಅಕ್ಕಿ ಮಾಡಲು ಕಳುಹಿಸುವಾಗ ಯಾವುದೇ ನಿಯಮ ಪಾಲಿಸುವುದಿಲ್ಲ ಮತ್ತು ಇಲ್ಲಿನ ಏಜೆನ್ಸಿ ಮತ್ತು ಅಧಿಕಾರಿಗಳನ್ನು ಕೇಳುವವರೆ ಇಲ್ಲದಂತಾಗಿದ್ದು ಜಿಲ್ಲಾಧಿಕಾರಿಗಳು ಗೋದಾಮಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪಟ್ಟಣದ ಎಪಿಎಂಸಿ ಮತ್ತು ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಶೇಖರಿಸಿರುವ ಭತ್ತ ಕಳಪೆಯಾಗಿದೆ ಎಂದು ಟಿಎಪಿಸಿಎಂಎಸ್ ನಿರ್ದೇಶಕರು ದೂರಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ  ಕನಿಷ್ಠ ಯೋಜನಾ ಬೆಂಬಲ ಬೆಲೆ ಇಲಾಖೆ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿದ್ದು ಅವರು ಮತ್ತು ನಾನು ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ.
ವಾಣಿಶ್ರೀ, ಜಿಲ್ಲಾ ವ್ಯವಸ್ಥಾಪಕರು, ಕನಿಷ್ಠ ಯೋಜನಾ ಬೆಂಬಲ ಬೆಲೆ ಇಲಾಖೆ
ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ 
Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ವಾಂತಿ-ಬೇದಿಯಿಂದ ತತ್ತರಿಸಿದ ಗ್ರಾಮಸ್ಥರು ..! ತಬ್ಬಿಬ್ಬಾದ ಅಧಿಕಾರಿಗಳು..!*

Published

on

ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಕಂಡು ಬಂತು ಭೀಕರ ಕಾಲರಾ..! ಆರೋಗ್ಯ ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ

 

ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿರುವ ವರುಣ ವಿಧಾನಸಭಾ ಕ್ಷೇತ್ರದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಭೀಕರ ಕಾಲರ ಕಾಯಿಲೆ ಕಂಡುಬಂದು ತಗಡೂರು ಗ್ರಾಮಸ್ಥರು ತತ್ತರಿಸಿದ್ದಾರೆ.

ಈಗಾಗಲೇ ತಗಡೂರು ಗ್ರಾಮದಲ್ಲಿ 25 ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 114 ಕಾಲರ ರೋಗಿಗಳು ಕಂಡು ಬಂದಿದ್ದಾರೆ. ಇದರಲ್ಲಿ 5 ರೋಗಿಗಳನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ತಗಡೂರು ಗ್ರಾಮ ಪಂಚಾಯಿತಿಯ 1,2,3,ನೇಯ ವಾರ್ಡಿನಲ್ಲಿ ವಾಸಿಸುತ್ತಿರುವ ಜನರಿಗೆ ಕಾಲರ ಕಾಯಿಲೆ ವಾಂತಿ ಬೇದಿ ಕಂಡು ಬಂದಿದೆ. ಗ್ರಾಮದಲ್ಲಿ ಬರೋಬರಿ 12 ಕೈ ಪಂಪುಗಳಿದ್ದು ನಾಲ್ಕು ಕೈ ಪಂಪುಗಳ ನೀರನ್ನು ಕುಡಿಯಲು ಯೋಗ್ಯವಿಲ್ಲ ಎಂಬ ಆತಂಕಕಾರಿ ವರದಿ ಮಾಹಿತಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡಿಲ್ಲ. ಗ್ರಾಮಕ್ಕೆ ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹಾಗೂ ಜಿಲ್ಲಾ ಕಾಲಾರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ ತಾಲ್ಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೀಕರ ವಾಂತಿ ಭೇದಿ ಹಿಂದ 114 ರೋಗಿಗಳು ತಗಡೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ಪ್ರತಿ ಮನೆ ಮನೆಗೆ ಒರಸ್ ಪೌಡರ್ ಕಡ್ಡಾಯವಾಗಿ ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗಿದೆ. ತಗಡೂರು ಗ್ರಾಮದಲ್ಲಿ ಕಾಲರ ಕಾಯಿಲೆ ಕಂಡುಬಂದಿರುವುದು ಕೈ ಪಂಪಿನಲ್ಲಿರುವ ಕಲುಷಿತ ನೀರು ಸೇವನೆ ಎಂದು ಬೆಳಕಿಗೆ ಬಂದಿದೆ. ಹತ್ತಕ್ಕೂ ಹೆಚ್ಚು ವೈದ್ಯಾಧಿಕಾರಿಗಳನ್ನು ಗ್ರಾಮದಲ್ಲಿ ಬಿಡು ಬಿಟ್ಟಿದ್ದಾರೆ. ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯ ಜೊತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕಾಲರ ಕಾಯಿಲೆ ತಡೆಗಟ್ಟಲು ಮುಂದಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ

ಸಿದ್ದರಾಮಯ್ಯನವರ ತವರು ಕ್ಷೇತ್ರದ ತಗಡೂರು ಗ್ರಾಮದಲ್ಲಿ ಭೀಕರ ಕಾಲರ ಕಾಯಿಲೆ ಕಂಡು ಬಂದಿರುವುದು ಜಡ್ಡು ಗಟ್ಟಿದ ಅಧಿಕಾರಿಗಳ ನಿರ್ಲಕ್ಷ್ಯ ಕಾರ್ಯವೈಕರಿ ಎಂದು ಸಾರ್ವಜನಿಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ.

ಪಿಡಿಒ ದಿವಾಕರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿರುವ ದೆಸೆಯಿಂದ ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.

Continue Reading

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

Published

on

ನಂಜನಗೂಡು ಮೇ.19

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಮಹಾಗಣಪತಿ, ನವಗ್ರಹ,ನಾಗದೇವತೆ ಮತ್ತು ಶಿಖರ ಕಳಶ ಪ್ರತಿಷ್ಠಾಪನೆ ಮಾಡಲಾಯಿತು.


ಗೋ ದೇವತೆ ಗಂಗಾ ಪೂಜೆಯೊಂದಿಗೆ ಅಗ್ರೋದಕ ಸಹಿತ ಯಾಗ ಶಾಲೆ ಪ್ರವೇಶ ಮಾಡಿ ಗಣಪತಿ ಪೂಜೆ ಮಾಡಿ ಸ್ವಸ್ತಿ ಪುಣ್ಯಹ ವಾಹನ, ಪಂಚಗವ್ಯ ಸಾಧನ, ವಾಸ್ತು ಪೂಜೆ ಮತ್ತು ರಾಕ್ಸೊಘ್ನ ಹೋಮ, ಪರ್ಯಾಗ್ನಿ ಕರಣ ಶಿಖರ ಕಲಶ ಹಾಗೂ ನೂತನ ಶಿಲಾಮೂರ್ತಿಗೆ ಜಲಾದಿ ವಾಸ, ಧಾನ್ಯ ದಿವಾಸ, ಮೂರ್ತಿ ಸಂಸ್ಕಾರ ನ್ಯಾಸ ವಿಧಿ ಶಯನಾದಿ ವಾಸ ಮಾಡಲಾಯಿತು . ಬೆಳಿಗ್ಗೆ 4.50 ರಿಂದ 5.50ರ ವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತ ಶುಭ ಲಗ್ನದಲ್ಲಿ ಅಷ್ಟ ಬಂದ ಪ್ರತಿಷ್ಠಾಪನೆ

ನೆರವೇರಿಸಿದರು. ಅಯೋಧ್ಯೆ ಶ್ರೀಬಾಲ ರಾಯನ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ರವರ ಕೈಚಳಕದಲ್ಲಿ ಮೂಡಿ ಬಂದಿರುವ ಶ್ರೀ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಮಹಾ ಮಂಗಳಾರತಿ

ಮಾಡಲಾಯಿತು. ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

Published

on

ಪಿರಿಯಾಪಟ್ಟಣ: ದಂಪತಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಗೊಲ್ಲರ ಬೀದಿಯಲ್ಲಿ ನಡೆದಿದೆ.

ಪಟ್ಟಣದ ಬಿ.ಎಂ ರಸ್ತೆಯ ಪ್ರವಾಸಿ ಮಂದಿರ ಬಳಿ ಕ್ಯಾಂಟೀನ್ ವ್ಯಾಪಾರ ನಡೆಸುತ್ತಿದ್ದ ಪ್ರಕಾಶ್ (51) ಹಾಗೂ ಚಿಲ್ಲರೆ ಅಂಗಡಿ ಮತ್ತು ಹಲ್ಲರ್ ಮಿಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಪ್ರಕಾಶ್ ಅವರ ಪತ್ನಿ ಯಶೋದ (48) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದಂಪತಿಗಳು,

ಗುರುವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದ ದಂಪತಿಗಳು

ಶುಕ್ರವಾರ ಬೆಳಗ್ಗೆ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳು ತನುಶ್ರೀ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ ರಾತ್ರಿವರೆಗೂ ಹಲವಾರು ಬಾರಿ ಕರೆ ಮಾಡಿ ಕರೆ ಸ್ವೀಕರಿಸದ ಕಾರಣ ಸಂಬಂಧಿಕರಿಗೆ ಫೋನ್ ಮೂಲಕ ಮನೆಯ ಬಳಿ ತೆರಳಿ ನೋಡುವಂತೆ ಕೋರಿದಾಗ ಸಂಬಂಧಿಕರು ಮನೆಯ ಬಳಿ ತೆರಳಿ ಕಿಟಕಿ ತೆರೆದು ನೋಡಿದಾಗ  ಅನುಮಾನ ರೀತಿಯಲ್ಲಿ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ, ತಕ್ಷಣ ಪೊಲೀಸರಿಗೆ ಕರೆ ಮಾಡಿ ಪೊಲೀಸರು ಬಾಗಿಲು ಮುರಿದು ಮನೆ ಒಳಗಡೆ ಪ್ರವೇಶಿಸಿ ಶವಗಳನ್ನು ಪಟ್ಟಣದ  ಶವಗಾರಕ್ಕೆ ಸಾಗಿಸಿದ್ದಾರೆ.


ಘಟನೆ ಸಂಭಂದ ಅನುಮಾನ ವ್ಯಕ್ತಪಡಿಸಿ ಮೃತ ದಂಪತಿ ಪುತ್ರಿ ತನುಶ್ರೀ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

Trending

error: Content is protected !!