Connect with us

Chamarajanagar

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಗಡಿನಾಡು ಉತ್ಸವ ಕಾರ್ಯಕ್ರಮ……

Published

on

ಹನೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರಿಂದ ಮಲೈ ಮಹದೇಶ್ವರ ಬೆಟ್ಟದಲ್ಲಿ ಗಡಿನಾಡು ಉತ್ಸವ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸರಸ್ವತಿ ಮೇಡಂ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ಚರ್ಚಿಸಿದರು.

ಬಹಳ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.. ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆ ತಾಲ್ಲೂಕುಗಳಿಂದ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸರ್ಕಾರಿ ನೌಕರರು ಆಗಮಿಸುವುದರಿಂದ ಅಗತ್ಯವಾದ ವಸತಿ ಊಟ ಇನ್ನಿತರೆ ವ್ಯವಸ್ಥೆಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸರಸ್ವತಿ ಮೇಡಂ ಅವರು ಅಗತ್ಯ ಸಲಹೆ ಸೂಚನೆ ನೀಡಿದರಲ್ಲದೆ, ದೇವಸ್ಥಾನದಲ್ಲಿ ಜನಸಂದಣಿ ಇಲ್ಲದ ದಿನವನ್ನು ಆಯ್ಕೆ ಮಾಡಿಕೊಂಡು ಆ ದಿನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿದರು.. ಮಾನ್ಯ ಸಚಿವರು ಮತ್ತು ಶಾಸಕರ ಸಲಹೆ ಸೂಚನೆ ಮಾರ್ಗದರ್ಶನ ಪಡೆಯಲು ಕೂಡ ಇದೆ ವೇಳೆ ತಿಳಿಸಿದರು.


ಈ ಸಂದರ್ಭದಲ್ಲಿ ಮಾತಾಡಿದ ಜಿಲ್ಲಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ರವರು ರಾಜ್ಯ ಸಂಘದ ವತಿಯಿಂದ ಕಳೆದ ಬಾರಿ ರಾಯಚೂರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಬಾರಿ ನಮ್ಮ ಜಿಲ್ಲೆಗೆ ಈ ಭಾಗ್ಯ ದೊರೆತಿದ್ದು ಮಹದೇಶ್ವರ ಸನ್ನಿಧಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಮಾನ್ಯ ರಾಜ್ಯ ಅಧ್ಯಕ್ಷರಾದ ಷಡಾಕ್ಷರಿ ರವರು ಸೂಚಿಸಿದ್ದು ನಮಗೂ ಕೂಡ ಅದೊಂದು ಸೌಭಾಗ್ಯ ಎಂದು ಭಾವಿಸಿದ್ದು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಡೆಸಲು ಪ್ರಾಧಿಕಾರದ ಕಾರ್ಯದರ್ಶಿಗಳ ಸಹಕಾರ ಮಾರ್ಗದರ್ಶನವನ್ನು ಕೋರಿದರು.

ತಾಲೂಕು ಘಟಕದ ಅಧ್ಯಕ್ಷರಾದ ಗುರುಸ್ವಾಮಿ ಮಾತನಾಡಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬರಲು ಅಗತ್ಯ ಸಹಕಾರ ಮತ್ತು ಜವಾಬ್ದಾರಿಯನ್ನು ಹನೂರು ತಾಲೂಕು ಘಟಕ ನಿರ್ವಹಿಸಬಲ್ಲದು ಎಂಬ ಭರವಸೆಯನ್ನು ನೀಡಿದರಲ್ಲದೇ, ಬಹುತೇಕ ಕಾಡಂಚಿನಿಂದ ಕೂಡಿದ ಹನೂರು ತಾಲೂಕನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಮಾನ್ಯ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಅಧ್ಯಕ್ಷರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು..

ಕಾರ್ಯಕ್ರಮ ಆಯೋಜನೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಭೆಗೆ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮಹದೇವಸ್ವಾಮಿ ರವರು ಸವಿವರವಾಗಿ ನೀಡಿದರು .

ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ , ಕ್ರೀಡಾ ಕಾರ್ಯದರ್ಶಿಗಳಾದ ರಕ್ಷಿತ್ ,ತಾಲೂಕು ಘಟಕದ ನಿಯೋಜಿತ ಕಾರ್ಯದರ್ಶಿಗಳು ಹಾಗೂ ಖಜಾಂಚಿಗಳಾದ ಚಂದ್ರಶೇಖರ್ , ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ್ , ಸಂಘಟನಾ ಕಾರ್ಯದರ್ಶಿಯಾದ ಪ್ರೀತಂ ಹಾಗೂ ನಾಮ ನಿರ್ದೇಶಿತ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ವೆಂಕಟೇಶ್, ನಿಕಟ ಪೂರ್ವ ಹನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ನಾಯ್ಡು , ಇನ್ನಿತರರುಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಹುಲಿಗಳ ಸೆರೆಗೆ ಬೃಹದಾಕಾರದ ಬೋನ್ ಅಳವಡಿಕೆ

Published

on

ಚಾಮರಾಜನಗರ: ತಾಲೂಕಿನ ನಂಜದೇವನಪುರ ಗ್ರಾಮದ ಜಮೀನಿನಲ್ಲಿ ಐದು ಹುಲಿಗಳು ಪ್ರತ್ಯಕ್ಷವಾಗಿರುವ ಹಿನ್ನೆಲೆ ಹುಲಿಗಳನ್ನು ಸೆರೆಹಿಡಿಯಲು ಬೃಹದಾಕಾರದ ತುಮಕೂರು ಬೋನ್ ಅಳವಡಿಸಲಾಗಿದೆ.

ಭಾನುವಾರ ಡ್ರೋನ್ ಮೂಲಕ ಹುಲಿಗಳನ್ನು ಪತ್ತೆ ಮಾಡಲಾಗಿದ್ದು, ಅರಣ್ಯ ಇಲಾಖೆಯು ಹುಲಿ ಸೆರೆಹಿಡಿಯುವ ಕಾರ್ಯಕ್ಕೆ ಮುಂದಾಗಿದೆ.

ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೃಹದಾಕಾರದ ಬೋನ್ ಅನ್ನು ಅಳವಡಿಸಿದ್ದಾರೆ. ಆನೆಗಳಿಂದ ಕೂಂಬಿಂಗ್ ಕಾರ್ಯ ನಡೆಯುತ್ತಿದೆ.

Continue Reading

Chamarajanagar

ನಂಜೇದೇವನಪುರ: ಹುಲಿಗಳ ಪತ್ತೆಗೆ ಇನ್ನೆರಡು ಆನೆ

Published

on

ಚಾಮರಾಜನಗರ: ನಂಜೇದೇವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಹುಲಿ ಕಾರ್ಯಾಚರಣೆಯ ಹಿನ್ನೆಲೆ ಇಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಕಾರ ದುಬಾರೆ ಆನೆ ಶಿಬಿರದಿಂದ 2 ಆನೆಗಳನ್ನು ತಂದು ಕಾರ್ಯಾಚರಣೆಗೆ ಬಳಸಿಕೊಡಲಾಗಿದೆ.

ವಿಭಾಗದ ಬೇರೆ ಬೇರೆ ವಲಯಗಳಿಂದ ಅರಣ್ಯ ಸಿಬ್ಬಂದಿಗಳನ್ನು ಕರೆಸಿಕೊಂಡು ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ. ಒಂದು ತುಮಕೂರು ಕೇಜ್ ಮತ್ತು ಹುಲಿ ಬೋನುಗಳನ್ನಿಟ್ಟು ಸಿಬ್ಬಂದಿಗಳ ನಾಲ್ಕು ತಂಡಗಳನ್ನು ರಚಿಸಿ ಪ್ರತೀ ತಂಡಕ್ಕೆ, ಒಂದು ಡ್ರೋನ್ ವಿತರಿಸಿ ಹುಲಿ ಕಂಡುಬಂದ ಪ್ರದೇಶದ ಸುತ್ತಮುತ್ತಲೂ ನಿಗಾವಹಿಸಲಾಗುತ್ತಿದೆ.

ರಾತ್ರಿ ವೇಳೆಯಲ್ಲಿ ಥರ್ಮಲ್ ಡ್ರೋನ್ ಮೂಲಕ ಹುಲಿಗಳ ಚಲನವಲನಗಳ ಮೇಲೆ ನಿಗಾವಹಿಸಿ ಸದರಿ ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

Continue Reading

Chamarajanagar

ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿಗೆ ಸಿಲುಕಿದ ವ್ಯಕ್ತಿ

Published

on

ಚಾಮರಾಜನಗರ: ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿಗೆ  ಓರ್ವ ವ್ಯಕ್ತಿ ಸಿಲುಕಿರುವ ಘಟನೆ ನಡೆದಿದೆ.

ಬೋನಿನೊಳಗೆ ಸಿಲುಕಿದ ವ್ಯಕ್ತಿಯೂ ಗಂಗವಾಡಿ  ಗ್ರಾಮದ ನಿವಾಸಿ ಕಿಟ್ಟಿ ಎಂಬುವವರಾಗಿದ್ದಾರೆ. ಇವರು ಕುತೂಹಲಕ್ಕೆಂದು ಇಣುಕಿ ನೋಡಿದ ವ್ಯಕ್ತಿ ಮೂರು ಗಂಟೆಗೂ ಹೆಚ್ಚು ಕಾಲ ಬೋನಿನೊಳಗೆ ಲಾಕ್ ಆಗಿದ್ದಾರೆ.

ಅರಣ್ಯ ಇಲಾಖೆಯೂ, ಇತ್ತೀಚಿಗೆ ಗಂಗವಾಡಿ ಗ್ರಾಮದಲ್ಲಿ 4 ಹಸುವನ್ನು ಕೊಂದು ಹಾಕಿದ್ದ ಚಿರತೆ ಸೆರೆಗಾಗಿ ಜಮೀನಿನಲ್ಲಿ ಬೋನು ಇಟ್ಟಿದ್ಧರು.

ಕುತೂಹಲದಿಂದ ಬೋನಿನ ಒಳಗೆ ಹೋಗಿ ಬಂಧಿಯಾಗಿದ್ದರು.  ಕಿಟ್ಟಿ ಬೋನಿನ ಬಾಗಿಲು ತೆರೆಯಲು ಹರಸಾಹಸ ಪಟ್ಟಿದ್ದು, ಅಲ್ಲದೇ ನನ್ನನ್ನು ಕಾಪಾಡಿ ಎಂದು ಕೂಗಿ ಬೋನಿನೊಳಗೆ ಕೂಗಾಡಿದ್ದಾರೆ.

ಬಳಿಕ ಅಕ್ಕಪಕ್ಕ ಇದ್ದ ರೈತರು ತಳಕ್ಕೆ ಬಂದು ಕಿಟ್ಟಿಯನ್ನು ಬೋನಿನಿಂದ ಹೊರಗೆ ಕರೆ ತಂದಿದ್ದಾರೆ.

Continue Reading

Trending

error: Content is protected !!