Connect with us

State

ಕರ್ನಾಟಕ ರಾಜ್ಯ ಕೊರೊನಾ ಮಾಹಿತಿ 20/12/2023

Published

on

ಬಾಗಲಕೋಟೆ – 00
ಬಳ್ಳಾರಿ – 02
ಬೆಳಗಾವಿ – 00
ಬೆಂಗಳೂರು ಗ್ರಾಮಾಂತರ – 00
ಬೆಂಗಳೂರು – 19
ಬೀದರ್ – 00
ಚಾಮರಾಜ ನಗರ – 00
ಚಿಕ್ಕಬಳ್ಳಾಪುರ – 00
ಚಿಕ್ಕಮಗಳೂರು – 00
ಚಿತ್ರದುರ್ಗ – 00
ದಕ್ಷಿಣ ಕನ್ನಡ – 01
ದಾವಣಗೆರೆ – 00
ಧಾರವಾಡ – 00
ಗದಗ – 00
ಹಾಸನ – 00
ಹಾವೇರಿ – 00
ಕಲಬುರಗಿ – 00
ಕೊಡಗು – 00
ಕೋಲಾರ – 00
ಕೊಪ್ಪಳ – 00
ಮಂಡ್ಯ – 00
ಮೈಸೂರು – 00
ರಾಯಚೂರು – 00
ರಾಮನಗರ – 00
ಶಿವಮೊಗ್ಗ – 00
ತುಮಕೂರು – 00
ಉಡುಪಿ – 00
ಉತ್ತರ ಕನ್ನಡ – 00
ವಿಜಯನಗರ – 00
ವಿಜಯಪುರ – 00
ಯಾದಗಿರಿ – 00

ವಿಶೇಷ ಸೂಚನೆ : ಕೊರೊನಾ ಬಗ್ಗೆ ಆತಂಕ ಬೇಡ, ಎಚ್ಚರಿಕೆಯಿರಲಿ. ಕೊರೊನಾ ಬಾರದಂತೆ ತಡೆಗಟ್ಟುವ ಎಲ್ಲಾ ಕ್ರಮ ನಿಮಗೆ ಗೊತ್ತಿದೆ. ನೀವು ಸುರಕ್ಷಿತವಾಗಿರಿ. ನಿಮ್ಮ ಮನೆಯವರು, ಆತ್ಮೀಯರು, ಸ್ನೇಹಿತರು, ಅಕ್ಕ ಪಕ್ಕದವರು, ವಿಶೇಷವಾಗಿ ಹಿರಿಯರು, ಮಕ್ಕಳು ಸುರಕ್ಷಿತವಾಗಿರುವಂತೆ‌ ನೋಡಿಕೊಳ್ಳಿ.

State

ಪತ್ರಿಕೋದ್ಯಮ ಜನಪರ ಕೆಲಸ ಮಾಡುವುದು ಮುಖ್ಯ: ಬಸವರಾಜ ಬೊಮ್ಮಾಯಿ

Published

on

ಬೆಂಗಳೂರು: ಪತ್ರಿಕೋದ್ಯಮ ಬಹಳ ಪ್ರಭಾವಶಾಲಿ ಉದ್ಯಮ, ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿ ಇರುವುದು ಎಷ್ಟು ಮುಖ್ಯವೋ ಜನ ಸಮುದಾಯದ ಪರ ಕೆಲಸ ಮಾಡುವುದು ಅಷ್ಟೇ ಮುಖ್ಯ. ಅದನ್ನು ಪತ್ರಿಕೋದ್ಯಮ ಮಾಡುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಶೇಷಾದ್ರಿಪುರಂ ಕಾಲೇಜಿನಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಏರ್ಪಡಿಸಿದ್ದ ಡಾ. ಕೂಡ್ಲಿ ಗುರುರಾಜ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನನ್ನ ಆತ್ಮೀಯ ಸ್ನೇಹಿತನಿಗೆ ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ನಾನು ಖಾದ್ರಿ ಶಾಮಣ್ಣ ಅವರನ್ನು 1978 ರಲ್ಲಿ ನೋಡಿದ್ದೆ ಆಗ ತುರ್ತುಪರಿಸ್ಥಿತಿ ಮುಗಿದಿತ್ತು. ಇಡಿ ವಿಶ್ವದಲ್ಲಿ ವೈಎನ್ ಕೆ ಅವರ ಹೆಸರಿತ್ತು. ಕರ್ನಾಟಕದಲ್ಲಿ ಎಮರ್ಜೆನ್ಸಿ ವಿರುದ್ದ ಸಿಡಿದೆದ್ದ ವ್ಯಕ್ತಿ ಖಾದ್ರಿ ಶಾಮಣ್ಣ ಅವರು, ಪತ್ರಿಕೋದ್ಯಮ ಬಹಳ ಪ್ರಭಾವಶಾಲಿ ಉದ್ಯಮ, ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿ ಇರುವುದು ಎಷ್ಟು ಮುಖ್ಯವೋ ಜನ ಸಮುದಾಯದ ಪರ ಇರುವ ಕೆಲಸ ಮಾಡುವುದು ಅಷ್ಟೇ ಮುಖ್ಯ. ಅದನ್ನು ಪತ್ರಿಕೋದ್ಯಮ ಮಾಡುತ್ತದೆ ಎನ್ನುವ ವಿಶ್ವಾಸ ಎಂದು ಹೇಳಿದರು.
ಖಾದ್ರಿ ಶಾಮಣ್ಣ ಅವರು ಬಹಳ ಪ್ರಭಾವಶಾಲಿ ಆಗಿದ್ದರು. ಅವರು ಬದುಕಿದ್ದಾಗ ಮುಂದೆ ಬರುವ ಸರ್ಕಾರಗಳು ಅವರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಿದ್ದರು.
ಪತ್ರಿಕೋದ್ಯಮ ಬಹಳ ಕ್ಲೀಷ್ಟವಾಗಿರುತ್ತದೆ ಕೆಲವು ಸಾರಿ ಪರ ಮತ್ತು ವಿರೋಧ ಅಭಿಪ್ರಾಯಗಳು ಬಂದಾಗ ಸತ್ಯದ ಮೇಲೆ ನಿಲುವು ತೆಗೆದುಕೊಂಡಾಗ ಅದಕ್ಕೆ ಮಹತ್ವ ಬರುತ್ತದೆ. ಕೆಲವು ಸಾರಿ ತಾವು ತೆಗೆದುಕೊಂಡ ನಿಲುವಿನ ವಿರುದ್ಸ ತೆಗೆದುಕೊಳ್ಳುವ ಸಂದರ್ಭ ಬರಬಹುದು ಆಗ ಸ್ಪಷ್ಟವಾಗಿ ಗಟ್ಟಿಯಾಗಿ ನಿಲುವು ತೆಗೆದುಕೊಳ್ಳಬೇಕು. ಖಾದ್ರಿ ಶಾಮಣ್ಣ ಅಂತಹ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿದ್ದರು. ಅಂತಹವರ ಗರಡಿಯಲ್ಲಿ ಕೂಡ್ಲಿ ಗುರುರಾಜ್ ಬೆಳೆದಿದ್ದಾರೆ. ಹುಬ್ಬಳ್ಳಿಯಲ್ಲಿ ಕನ್ನಡ ಪ್ರಭದಲ್ಲಿ ಇವರು ಇದ್ದಾಗ ಅವರ ಲೇಖನಗಳನ್ನು ಓದಿದ್ದೆ. 1998 ರಲ್ಲಿ ನಾನು ಸ್ಥಳಿಯ ಸಂಸ್ಥೆಯಿಂದ ಚುನಾವಣೆ ನಿಂತಿದ್ದೆ, ನಮ್ಮ ಪಕ್ಷದಲ್ಲಿ ಬಂಡಾಯ ಅಭ್ಯರ್ಥಿ ನಿಂತಿದ್ದರು. ಆಗ ಎಲ್ಲ ಪತ್ರಿಕೆಯವರು 24 ದಿನ ನನ್ನ ವಿರುದ್ದ ಬರೆದಿದ್ದರು. ಒಬ್ಬರು ಪತ್ರಕರ್ತೆ ಸನ್ ಆಸ್ ಗೋಯಿಂಗ್ ಟು ಸೆಟ್ ಅಂತ ಬರೆದಿದ್ದರು. ಆದರೆ, ನಾನು ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೆ‌ ಎಂದು ನೆನಪಿಸಿಕೊಂಡರು.
ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧ. ರಾಜಕೀಯ ಸುದ್ದಿ ಇಲ್ಲದೆ ಇದ್ದರೆ ಪತ್ರಿಕೆ ಆಕರ್ಷಣೆ ಇರುವುದಿಲ್ಲ. ಅದೇ ರೀತಿ ರಾಜಕಾರಣಿಯ ಸುದ್ದಿಗಳು ಪತ್ರಿಕೆಯಲ್ಲಿ ಬರದಿದ್ದರೇ ಆ ರಾಜಕಾರಣಿಗೆ ಅಸ್ತಿತ್ವವೇ ಇಲ್ಲ. ನನಗೆ ಮದನ ಮೋಹನ್ ಅವರು ಮಾರ್ಗದರ್ಶನ ಮಾಡಿದ್ದರು. ಅವರ ಮಾರ್ಗದರ್ಶನದಿಂದ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಚರ್ಚೆ ಮಾಡಿದ್ದೆ. ರಾಮಕೃಷ್ಣ ಹೆಗಡೆ ಅವರು ಮದನ ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದಾರಾ ಅಂತ ಕೇಳುತ್ತಿದ್ದರು. ಅವರ ಬಗ್ಗೆ ರಾಜಕಾರಣಿಗಳಿಗೆ ಭಯ ಇತ್ತು ಎಂದರು.
ರಾಜಕಾರಣಿಗಳನ್ನು ಹುರುದುಂಬಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ. ನಮ್ಮ ಸರ್ಕಾರ ಬದಲಾಗುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ನಾನು ದೆಹಲಿಯಲ್ಲಿ ಕೇಂದ್ರದಿಂದ ಏಳು ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿದ್ದೆ, ಅದನ್ನು ಉಮಾಪತಿಯವರು ಸರ್ಕಾರ ಬೀಳುವ ಸಂದರ್ಭದಲ್ಲಿಯೂ ಈ ಸಚಿವರು ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿದ್ದಾರೆ ಎಂದು ವಿಶ್ಲೇಷಣಾತ್ಮಕ ಲೇಖನ ಬರೆದಿದ್ದರು. ಒಳ್ಳೆಯ ಕೆಲಸ ಮಾಡಿದರೆ ಪತ್ರಿಕೆಯವರು ಗುರುತಿಸುತ್ತಾರೆ ಎಂದು ಅನಿಸಿತು. ತುಂಗಭದ್ರ ಯೋಜನೆ ಕುರಿತು ವಿಜಯ ಕರ್ನಾಟಕ ಒಂದು ಲೇಖನ ಬರೆದಿತ್ತು. ಅದು ನನಗೆ ಸ್ಪೂರ್ತಿಯಾಯಿತು.‌ ಅದರಿಂದ ತುಂಗಭದ್ರಾ ಕಾಲುವೆ ಯೋಜನೆ ಜಾರಿಗೊಳಿಸಲು ಅನುಕೂಲವಾಯಿತು ಎಂದು ಹೇಳಿದರು.

ಯೋಗ್ಯರಿಗೆ ಪ್ರಶಸ್ತಿ
ಗುರುರಾಜ್ ಅವರು ಉತ್ತರ ಕರ್ನಾಟಕದ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಯೋಗ್ಯ ಪ್ರಶಸ್ತಿ ದೊರೆತಿದೆ. ಅವರಿಗೆ ಅಭಿನಂದನೆ. ಅವರು ನನ್ನಿಂದ ಪ್ರಶಸ್ತಿ ಸ್ವೀಕರಿಸುವ ಆಸೆ ವ್ಯಕ್ತಪಡಿಸಿರುವುದು ನನ್ನ ಮನದಲ್ಲಿ ಯಾವಾಗಲೂ ಉಳಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಾಂಧಿ ಭವನದ ಅಧ್ಯಕ್ಷರಾದ ವೂಡೇ ಪಿ. ಕೃಷ್ಣ, ಆಸ್ಸಾಂ ಕೇಂದ್ರಿಯ ವಿವಿ ನಿವೃತ್ತ ಸಮ ಕುಲಪತಿ ಪ್ರೊ. ಕೆ.ವಿ. ನಾಗರಾಜ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ, ಕೂಡ್ಲಿ ಗುರುರಾಜ್ ಹಾಗೂ ಖಾದ್ತಿ ಶಾಮಣ್ಣ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಎಚ್. ಆರ್. ಶ್ರೀಶ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಹಾಜರಿದ್ದರು.

Continue Reading

Kodagu

ಬೆಂಗಳೂರು ಕೊಡವ ಸಮಾಜಕ್ಕೆ ಏಳು ಏಕರೆ ಜಾಗ: ಎಪ್ಪತ್ತು ವರ್ಷಗಳ ಬಳಿಕ ಮರುಕಳಿಸಿದ ಇತಿಹಾಸ

Published

on

ಬರಹ : ತೆನ್ನೀರ ಮೈನಾ, ಕಾಂಗ್ರೆಸ್ ಮುಖಂಡರು

ಬೆಂಗಳೂರು: ಕೊಡವ ಸಮಾಜ, ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಸಂಸ್ಥೆ. ವಿಶ್ವದಲ್ಲಿಯೇ ಅಪರೂಪದ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಕೊಡವ ಜನಾಂಗದ ಆಚರಣೆಗಳನ್ನು ನಗರೀಕರಣದ ನಡುವೆಯೂ ನಾಶವಾಗದ ಹಾಗೆ ಕಾಪಾಡಿಕೊಂಡು ಬರುತ್ತಿರುವ ಸಂಸ್ಥೆಯಾಗಿದೆ.

1911 ರಲ್ಲಿ ಕೂರ್ಗ್ ಅಸೋಸಿಯೇಷನ್ ಎಂಬ ಹೆಸರಿನಲ್ಲಿ ಕೇವಲ 30 ಸದಸ್ಯರಿಂದ ಸ್ಥಾಪಿತವಾಗಿ ನಂತರ ಬೆಂಗಳೂರು ಕೊಡವ ಸಮಾಜ ಎಂದು ನಾಮಕರಣಗೊಂಡು ಕೊಡವ ಸಾಹಿತ್ಯ, ಸಂಸ್ಕೃತಿ,ಭಾಷೆ,ಉಡುಗೆ ತೊಡುಗೆ ,ಪದ್ದತಿ ಪರಂಪರೆಯ ಬೆಳವಣಿಗೆಗೆ ತನ್ನದೇ ಆದ ಅಪರಿಮಿತ ಕೊಡುಗೆ ನೀಡುವ ಮೂಲಕ ಬೃಹತ್ತಾಗಿ ಬೆಳೆದಿದೆ. ಸ್ಥಾಪಕ ಅಧ್ಯಕ್ಷ ಕುಪ್ಪಂಡ ಮುದ್ದಪ್ಪರವರಿಂದ ಪ್ರಸ್ತುತ ಅಧ್ಯಕ್ಷ ಕರೋಟಿರ ಪೆಮ್ಮಯ್ಯನವರ ವರೆಗೆ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರು ಮತ್ತು ಅವರ ಪಧಾಧಿಕಾರಿಗಳ ಪರಿಶ್ರಮದಿಂದ ಉಚ್ಛ್ರಾಯ ಸ್ಥಿತಿಯಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.20 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಸುಮಾರು 40 ಸಾವಿರದಷ್ಟಿರುವ ಕೊಡವರಿಗೆ ಬೆಂಗಳೂರು ಕೊಡವ ಸಮಾಜ ಗುರುಮನೆಯಂತಿದೆ.

ಆರಂಭದಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ಸ್ವಂತ ಕಟ್ಟಡವಾಗಲಿ ನಿವೇಶನವಾಗಲಿ ಇರಲಿಲ್ಲ. ಬಸವನಗುಡಿ ಬಳಿಯ ಖಾಸಗಿ ಜಾಗದಲ್ಲಿ ತಮ್ಮ ಕಾರ್ಯಕ್ರಮಗಳನ್ನು( ಪುತ್ತರಿ ನಮ್ಮೆ,ಕೈಲ್ ಪೊಳ್ದ್ ನಮ್ಮೆ,ಊರೊರ್ಮೆ ಮುಂತಾದವು) ನಡೆಸುತ್ತಿದ್ದರು. ಭಾರತದ ಮಹಾನ್ ಸೇನಾ ದಂಡನಾಯಕರಾಗಿ ಸೇವೆ ಸಲ್ಲಿಸಿದ್ದ,ಶಿಸ್ತು ಮತ್ತು ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡಿದ್ದ ಜನರಲ್ ಕೊಡಂದೇರ.ಎಂ.ಕಾರ್ಯಪ್ಪ ( ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ) ನವರು ಭಾರತೀಯ ಸೈನ್ಯಕ್ಕೆ ಹಾಗೂ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸ್ವತಂತ್ರ ಭಾರತದ ಅಂದಿನ ವಿಶಾಲ ಮೈಸೂರು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಬೆಂಗಳೂರಿನ ಹೃದಯ ಭಾಗದಲ್ಲಿರುವ ವಸಂತ ನಗರದಲ್ಲಿ ಒಂದು ಏಕರೆ ಜಾಗವನ್ನು ಉಡುಗೊರೆಯಾಗಿ ನೀಡಿದ್ದರು.ಆ ಜಾಗವನ್ನು 1956 ರಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ದಾನವಾಗಿ ನೀಡಿದರು.ನಂತರದಲ್ಲಿ ಬೆಂಗಳೂರು ಕೊಡವ ಸಮಾಜ ಆ ಜಾಗದಲ್ಲಿ ಬೃಹತ್ ಬಹುಮಹಡಿ ಕಟ್ಟಡಗಳನ್ನು ಹಂತ ಹಂತವಾಗಿ ಕಟ್ಟಿ ದೊಡ್ಡ ಸಂಸ್ಥೆಯಾಗಿ ಬೆಳೆಸಿತು.ಸಂಸ್ಕೃತಿಯ ಬೆಳವಣಿಗೆಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಮೇಲ್ಪಂಕ್ತಿಯನ್ನು ಸಂಸ್ಥೆ ತಲುಪಿತು.

ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಮಾಡಿದ ಕಾರ್ಯ ಇತಿಹಾಸ ನಿರ್ಮಿಸಿದರೆ ಆ ರೀತಿಯ ಇತಿಹಾಸ ಮತ್ತೊಮ್ಮೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ ನವರಿಂದ ಮತ್ತೊಮ್ಮೆ ಮರುಕಳಿಸಿದೆ.ಅದಕ್ಕೆ ಕಾರಣ ಬೆಂಗಳೂರು ಕೊಡವ ಸಮಾಜದ ಹೆಸರಿಗೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಹೊಸಹಳ್ಳಿ ಯ ಸರ್ವೆ ನಂ 21 ರಲ್ಲಿ ವರ್ಗಾವಣೆಗೊಂಡ ಏಳು ಏಕರೆ ಅತ್ಯಮೂಲ್ಯ ಜಾಗ.

2011 ರಲ್ಲಿ ಬೆಂಗಳೂರು ಕೊಡವ ಸಮಾಜದ ಶತಮಾನೋತ್ಸವ ಕಾರ್ಯಕ್ರಮದ ಸಂಧರ್ಭದಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಅಂದಿನ ಕರ್ನಾಟಕ ರಾಜ್ಯ ವಿಧಾನ ಸಭಾ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ರವರಿಗೆ ಸಮಾಜದ ಪ್ರಮುಖರು ಏಳು ಏಕರೆ ಜಾಗದ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ಸದಾನಂದ ಗೌಡರು ಒಪ್ಪಿಗೆ ಸೂಚಿಸುತ್ತಾರೆ. ನಂತರ ಆಡಳಿತಾತ್ಮಕ ಪ್ರಕ್ರಿಯೆ ಗಳು ನಡೆದು ದಿನಾಂಕ 8-3-2023 ರಂದು ಸರ್ಕಾರ ಸದರಿ ಜಾಗವನ್ನು ಕೃಷಿಯೇತರ ಜಮೀನಿನ ಪ್ರಸ್ತುತ ಮಾರುಕಟ್ಟೆ ದರ ಪಾವತಿಸಲು ಒಪ್ಪಿಗೆ ನೀಡುತ್ತದೆ. ಕೊಡವ ಸಮಾಜದ ಪಾಲಿಗೆ ಇದೊಂದು ನಿಲುಕದ ದ್ರಾಕ್ಷಿ. ಮಾರುಕಟ್ಟೆ ದರ ವೆಂದರೆ 40 ಕೋಟಿಯಿಂದ 50 ಕೋಟಿ ವೆಚ್ಚವಾಗುತ್ತದೆ.ಇದು ಆ ಸಂಸ್ಥೆಗೆ ಅಸಾಧ್ಯವಾದ ಕಾರ್ಯ. ಆದರೂ ಬೆಂಗಳೂರು ಕೊಡವ ಸಮಾಜ ಸುಮ್ಮನಾಗುವುದಿಲ್ಲ. ಭಗೀರಥ ಪ್ರಯತ್ನ ಮುಂದುವರಿಸುತ್ತದೆ.

ಬೆಂಗಳೂರು ಕೊಡವ ಸಮಾಜದ ಪ್ರಸ್ತುತ ಅಧ್ಯಕ್ಷರಾದ ಕರೋಟಿರ ಪೆಮ್ಮಯ್ಯ ನವರ ನೇತೃತ್ವದಲ್ಲಿ ಮತ್ತೊಂದು ಸಾಹಸಕ್ಕೆ ಮುನ್ನುಡಿ ಹಾಕುತ್ತಾರೆ.ಸರ್ಕಾರ ಬದಲಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಅಪಾರ ಅನುಭವ ಹೊಂದಿರುವ ಎ.ಎಸ್.ಪೊನ್ನಣ್ಣ ನವರು ಆಯ್ಕೆಯಾಗುತ್ತಾರೆ.

ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನದೊಂದಿಗೆ ನೇಮಕಗೊಳ್ಳುತ್ತಾರೆ
ಸ್ವತಃ ವಕೀಲರಾದ ಕರೋಟಿರ ಪೆಮ್ಮಯ್ಯ ಮತ್ತು ಅವರ ತಂಡ ಪೊನ್ನಣ್ಣ ನವರಿಗೆ ಮನವಿ ಸಲ್ಲಿಸುತ್ತಾರೆ. ಹಲವು ಸುತ್ತಿನ ಮಾತುಕತೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತದೆ.ದಿನಾಂಕ 4-3-2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಎ.ಎಸ್.ಪೊನ್ನಣ್ಣ ನವರಿಂದ ನಡಾವಳಿ ಪತ್ರ ಸಲ್ಲಿಕೆಯಾಗುತ್ತದೆ. ಮಾನ್ಯ ಮುಖ್ಯಮಂತ್ರಿ ಗಳು ಸಂಪುಟ ಸಭೆಯಲ್ಲಿ ಪ್ರಸ್ತಾವನೆಯನ್ನು ಚರ್ಚೆಗೆ ತರುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪೊನ್ನಣ್ಣ ನವರ ಕೋರಿಕೆಯನ್ನು ಒಪ್ಪುತ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರ ಸಹಮತದೊಂದಿಗೆ ಸಚಿವ ಸಂಪುಟವೇ ಪೊನ್ನಣ್ಣನವರ ನಡಾವಳಿಗೆ ಮನ್ನಣೆ ನೀಡುತ್ತದೆ.ವಿಶೇಷ ವಿನಾಯತಿಯಡಿ ಜಮೀನು ನೀಡಲು ( ಮಾರುಕಟ್ಟೆ ದರಕ್ಕಿಂತ ಶೇ 90 ರಷ್ಟು ರಿಯಾಯಿತಿ) ಒಪ್ಪಿಗೆ ನೀಡುತ್ತದೆ.ಭೂ ಮಂಜೂರಾತಿ ನಿಯಮಗಳು 1969 ರ ನಿಯಮ 22-ಎ(1)(i)(2) ರನ್ವಯ ಆದೇಶ ಸಂಖ್ಯೆ ನಂ.ಎಲ್.ಎನ್.ಡಿ (ಎನ್.ಎ)/203/2009-10 ದಿನಾಂಕ 2-6-2025 ರಂದು ಆದೇಶ ಹೊರಡಿಸುತ್ತದೆ. ಕೇವಲ ಒಂದು ಕೋಟಿ 7 ಲಕ್ಷ ರೂ.ಗಳನ್ನು ಪಾವತಿಸಿ ಕೊಡವ ಸಮಾಜ ಜಾಗವನ್ನು ಪಡೆಯುತ್ತದೆ.ದಶಕಗಳ ಕೊಡವ ಸಮಾಜದ ಕನಸು ನನಸಾಗುತ್ತದೆ.

ಈ ಭಾನುವಾರ ಅಂದರೆ ದಿನಾಂಕ 15-6-2025 ರಂದು ಬೆಂಗಳೂರು ಕೊಡವ ಸಮಾಜದವತಿಯಿಂದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾನಯ್ಯನವರು, ಸನ್ಮಾನ್ಯ ಡಿ.ಸಿ.ಎಂ.ಡಿ.ಕೆ ಶಿವಕುಮಾರ್, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಮುಖ ರುವಾರಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಸೇರಿದಂತೆ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆ ಸಮಾರಂಭ ಏರ್ಪಡಿಸಿದ್ದು ಬೆಂಗಳೂರು ಕೊಡವ ಸಮಾಜದ ಪಾಲಿಗೆ ಐತಿಹಾಸಿಕ ಕಾರ್ಯಕ್ರಮವಾಗಿದೆ.

Continue Reading

State

ಹಾಸನ ಏರ್‌ಪೋರ್ಟ್ 2026ಕ್ಕೆ ಪೂರ್ಣ:  ಚಿಕ್ಕಮಗಳೂರು-ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವರದಿ ಸಿದ್ಧ

Published

on

ಬೆಂಗಳೂರು: ರಾಜ್ಯ 2 ಜಿಲ್ಲೆಗಳಲ್ಲಿ ಶೀಘ್ರದಲ್ಲಿಯೇ ವಿಮಾನ ನಿಲ್ದಾಣ ಆರಂಭಿಸಲು ಸರ್ಕಾರ ಮುಂದಾಗಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ ವಿಜಯಪುರ, ಹಾಸನ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರ ಉದ್ಘಾಟನೆಗೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ.

ರಾಜ್ಯ ಸರಕಾರವು ಕರ್ನಾಟಕದ ಎಲ್ಲ ದಿಕ್ಕುಗಳಲ್ಲೂ ವಿಮಾನ ನಿಲ್ದಾಣ ನಿರ್ಮಿಸಲು ಆದ್ಯತೆ ನೀಡಿದೆ. ಇದರಿಂದ ಪ್ರವಾಸೋದ್ಯಮ, ಶೈಕ್ಷಣಿಕ ಚಟುವಟಿಕೆಗಳು, ವಾಣಿಜ್ಯ ವಹಿವಾಟು, ಕೃಷಿ ಉತ್ಪನ್ನಗಳ ಸಾಗಾಟ ಇವೆಲ್ಲವೂ ಸುಗಮವಾಗಲಿದೆ.
ಅಂತಿಮವಾಗಿ ಈ ಉಪಕ್ರಮವು ರಾಜ್ಯದ ಆರ್ಥಿಕತೆಗೆ ಬಲ ತುಂಬಲಿದೆ. ಕೆಎಸ್‌ಐಐಡಿಸಿ ಮೂಲಕವೇ ರಾಜ್ಯದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡುವ ಚಾರಿತ್ರಿಕ ನಿರ್ಧಾರ ದೊಂದಿಗೆ ಬೊಕ್ಕಸಕ್ಕೆ ಹೊಸ ಸಂಪನ್ಮೂಲ ಸೃಷ್ಟಿಸುವ ಉದ್ದೇಶವನ್ನೂ ಇರಿಸಿಕೊಳ್ಳಲಾಗಿದೆ.

ಹೊಸ ವಿಮಾನ ನಿಲ್ದಾಣ ಆರಂಭದ ಬಗ್ಗೆ ಬೃಹತ್ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.

ವಿಜಯಪುರ ನಿಲ್ದಾಣ ಯಾವಾಗ:

ವಿಜಯಪುರದಲ್ಲಿ ಒಟ್ಟು 727 ಎಕರೆ ವಿಸ್ತೀರ್ಣದಲ್ಲಿ 347.92 ಕೋಟಿ ರೂ. ವೆಚ್ಚದಲ್ಲಿ ಏರ್‌ಪೋರ್ಟ್ ನಿರ್ಮಾಣವಾಗುತ್ತಿದ್ದು, ಏರ್‌ಬಸ್ – 320 ಮಾದರಿಯ ವಿಮಾನ ನಿಲ್ದಾಣದಲ್ಲಿ ಖುದ್ದು ಮುತುವರ್ಜಿಯಿಂದಾಗಿ ರಾತ್ರಿ ವೇಳೆ ವಿಮಾನಗಳ ಲ್ಯಾಂಡಿಂಗ್ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾರ್ಯಾಚರಣೆಗೆ ಕೇಂದ್ರ ಪರಿಸರ ಇಲಾಖೆ ಸೇರಿದಂತೆ ಅಗತ್ಯವಿರುವ ಪರವಾನಗಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ವರ್ಷಾಂತ್ಯದಲ್ಲಿ ಉದ್ಘಾಟನೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಹಾಸನ ವಿಮಾನ ನಿಲ್ದಾಣ ಮುಂದಿನ ವರ್ಷ:

ಎಟಿಆರ್ – 72 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ, ಜಿಲ್ಲಾ ಕೇಂದ್ರದಿಂದ 6 ಕಿ.ಮೀ. ದೂರದಲ್ಲಿರುವ ಬೂವನಹಳ್ಳಿಯಲ್ಲಿ ನಿರ್ಮಾಣವಾಗಲಿರುವ 193.65 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಇಲ್ಲಿಯವರೆಗೆ 164.70 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ಯಾಕೇಜ್ – 1 ರಲ್ಲಿ 117.67 ಕೋಟಿ ರೂ. ಹಾಗೂ ಪ್ಯಾಕೇಜ್-2 ರಲ್ಲಿ 67.77 ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದು, 2026ರಲ್ಲಿ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ.

2 ನಿಲ್ದಾಣ ಮೇಲ್ದರ್ಜೆಗೆ: ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಮೇಲ್ದರ್ಜೆಗೇರಿಸುವ ಉದ್ದೇಶ ಇದೆ. ಇದಕ್ಕೆ ಕೇಂದ್ರಕ್ಕೆ ಸದ್ಯದಲ್ಲೇ ಪತ್ರ ಬರೆಯಲು ನಿರ್ಧರಿಸಲಾಗಿದೆ. ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ಪಡೆದುಕೊಂಡಿದೆ. ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿ ನಿರ್ಮಾಣವಾಗಲಿರುವ 219 ಕೋಟಿ ರೂ.ವೆಚ್ಚದ ಯೋಜನೆ ಇದಾಗಿದೆ. ಇಲ್ಲಿಯವರೆಗೆ 164.70 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಾರವಾರ ಸಿವಿಲ್ ಎನ್ಕ್ಲೇವ್: ಭಾರತೀಯ ನೌಕಾಪಡೆಯ ಸೀಬರ್ಡ್ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ರಕ್ಷಣಾ ವಿಮಾನ ನಿಲ್ದಾಣವನ್ನು ನಾಗರಿಕ ವಾಯುಯಾನಕ್ಕೂ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಸರ್ಕಾರದ ಕ್ರಮ ಕೈಗೊಂಡಿದೆ.

ನೌಕಾಪಡೆ ಸಹಯೋಗದಲ್ಲಿ ಸಿವಿಲ್ ಎನ್ಕ್ಲೇವ್ ನಿರ್ಮಿಸಲು ಅಂಕೋಲಾ ದಿಂದ 5 ಕಿ.ಮೀ ದೂರದಲ್ಲಿ 27.84 ಕೋಟಿ ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿ 2025-26ನೇ ಸಾಲಿನಲ್ಲಿ ಮುಗಿಯುವ ನಿರೀಕ್ಷೆ ಇದೆ. ಇದಕ್ಕೆ ಬೇಕಾಗುವ 82 ಕೋಟಿ ಹಣವನ್ನು ರಾಜ್ಯವೇ ಭರಿಸಲಿದೆ.

3 ಹೆಲಿಪೋರ್ಟ್ ನಿರ್ಮಾಣ

ಚಿಕ್ಕಮಗಳೂರು, ಮಡಿಕೇರಿ ಮತ್ತು ಹಂಪಿಯಲ್ಲಿ ಹೆಲಿಪೋರ್ಟ್ ನಿರ್ಮಾಣ ಸಂಬಂಧ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಕಾರ್ಯಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಭೂಮಿ ಗುರುತಿಸಲಾಗಿದೆ. ಇಲ್ಲಿ ಭೂಸ್ವಾಧೀನಕ್ಕಾಗಿ ಹಣ ಬಿಡುಗಡೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಕರ್ನಾಟಕ ವೈಮಾನಿಕ ವಲಯದಲ್ಲಿ ಈಗ ದಕ್ಷಿಣ ಏಷ್ಯಾದ ಎಂ.ಆರ್.ಒ. ರಾಜಧಾನಿಯಾಗಿದೆ. ಇದಕ್ಕೆ ತಕ್ಕಂತೆ ಏರ್ ಇಂಡಿಯಾ, ಇಂಡಿಗೋ ಮತ್ತು ಲಾಕಿನ್ ಮಾರ್ಟಿನ್ ಕಂಪನಿಗಳು ರಾಜ್ಯದಲ್ಲಿ ತಮ್ಮ ಎಂಆರ್‌ಒ ಘಟಕಗಳನ್ನು ಸ್ಥಾಪಿಸುತ್ತಿವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.

Continue Reading

Trending

error: Content is protected !!