Connect with us

State

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

Published

on

ಬೆಂಗಳೂರು : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ:

1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ) ಸಣ್ಣವಂಡ ಕಿಶೋರ್ ನಾಚಪ್ಪ, ಮಡಿಕೇರಿ
ಸಂಶುದ್ದೀನ್ ಕೆ.ಎಣ್ಣೂರು, ವಾರ್ತಾಭಾರತಿ, ಮಂಗಳೂರು

2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ) ಸಿ.ಎನ್.ಶಿವಶಂಕರ, ದೂರದರ್ಶನ ವರದಿಗಾರ, ಕೋಲಾರ ಎಂ.ಎನ್.ಯೋಗೇಶ್, ಪ್ರಜಾವಾಣಿ, ಮಂಡ್ಯ

3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿಗೆ) ಡಿ.ಉಮೇಶ್ ನಾಯ್ಕ, ವಿಜಯವಾಣಿ, ತರೀಕೆರೆ ಎಲ್.ದೇವರಾಜ್, ವಿಜಯ ಕರ್ನಾಟಕ,

4. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ) ಚಂದ್ರಹಾಸ ಹಿರೇಮಳಲಿ, ಪ್ರಜಾವಾಣಿ, ಬೆಂಗಳೂರು ಎಸ್.ಶ್ರೀಧರ, ವಿಜಯ ಕರ್ನಾಟಕ, ರಾಮನಗರ

5. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ) ಮಂಜುನಾಥ, ಜಾದಗೆರೆ, ವಿಜಯ ಕರ್ನಾಟಕ, ಬೆಂಗಳೂರು ಇಬ್ರಾಹೀಂ ಖಲೀಲ್ ಬನ್ನೂರು, ವಾರ್ತಾಭಾರತಿ

6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ) ಶಶಿಧರ ಹೆಗಡೆ, ನಂದಿಕಲ್, ವಿಜಯ ಕರ್ನಾಟಕ ಡಿ.ಎಚ್.ಸುಖೇಶ್, ಪಬ್ಲಿಕ್ ಟಿವಿ

7. ಮಂಗಳ ಎಂ.ಸಿ.ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆ ವಿಭಾಗ) ಕಾರಂತ ಪೆರಾಜೆ, ಅಡಿಕೆ ಪತ್ರಿಕೆ, ಪುತ್ತೂರು ರಾಘವೇಂದ್ರ ತೊಗರ್ಸಿ, ಸುಧಾ

8. ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ) ಕೆ.ಆರ್. ಯೋಗೀಶ, ಜನಮಿತ್ರ, ಕಡೂರು ತಾಜುದ್ದೀನ್ ಅಜಾದ್, ಡೆಕ್ಕನ್ ಹೆರಾಲ್ಡ್, ಕಲಬುರುಗಿ

9. ಅತ್ಯುತ್ತಮ ಪೋಟೋಗ್ರಫಿ: ಪಿ.ಕೆ.ಬಡಿಗೇರ, ಬೆಳಗಾವಿ. ನಟರಾಜ್, ಹಾಸನ. ಅನುರಾಗ್ ಬಸವರಾಜು, ಮೈಸೂರು

10.ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ)


ಪ್ರಕಾಶ್ ಎಸ್.ಶೇಟ್, ವಿಜಯವಾಣಿ, ಹುಬ್ಬಳ್ಳಿ, ಅಮರೇಶ ದೇವದುರ್ಗ, ರಾಯಚೂರು.

11.ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ) ಅಖಿಲೇಶ್ ಚಿಪ್ಪಲಿ, ಪ್ರಜಾವಾಣಿ, ಶಿವಮೊಗ್ಗ

12.ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗೆ) ಶಶಿಕಾಂತ್ ಎಸ್.ಶಂಬಳ್ಳಿ, ಪ್ರಜಾವಾಣಿ, ಬೀದರ್ ಪ್ರಕಾಶ್ ಬಾಳಕ್ಕನವರ್, ಪ್ರಜಾವಾಣಿ, ಬಾಗಲಕೋಟೆ

13. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ) ಪಿ.ಶಾಂತಕುಮಾರ್, ಕನ್ನಡ ಪ್ರಭ, ಅರಸೀಕೆರೆ. ಹೆಚ್.ಕೆ.ರಾಘವೇಂದ್ರ, ಕೋಲಾರ ಪತ್ರಿಕೆ, ಕೋಲಾರ

14. ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ:
ನಂಜುಂಡಪ್ಪ, ದೂರದರ್ಶನ ಮತ್ತು ಆಕಾಶವಾಣಿ,
ತೃಪ್ತಿ ಕುಂಬ್ರಗೋಡು, ಉದಯವಾಣಿ ಎಚ್.ಆರ್.ಅಶ್ವಿನಿ, ವಿಜಯವಾಣಿ, ಬೆಂಗಳೂರು.

15. ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ ( ಅತ್ಯುತ್ತಮ ಕೃಷಿ ವರದಿ) ಬರಗೂರು ವಿರೂಪಾಕ್ಷಪ್ಪ, ಪ್ರಜಾಪ್ರಗತಿ, ಶಿರಾ, ತುಮಕೂರು ಜಿಲ್ಲೆ ಮಾಳಿಂಗರಾಯ ಪೂಜಾರ, ಲಕ್ಷ್ಮೀಶ್ವರ, ಗದಗ

16.ನಾಡಿಗೇರ ಕೃಷ್ಣರಾಯರ ಪ್ರಶಸ್ತಿ:
ರಂಜಿತ್ ಅಶ್ವತ್, ವಿಶ್ವವಾಣಿ, ಎನ್. ರಾಘವೇಂದ್ರ, ಸಂಪಾದಕರು, ವಿನೋದ ಪತ್ರಿಕೆ

17.ಅತ್ಯುತ್ತಮ ಪುಟ ವಿನ್ಯಾಸ (ಡೆಸ್ಕ್) ಜಿ.ಎಂ.ಕೊಟ್ರೇಶ್, ಕನ್ನಡ ಪ್ರಭ ಹೆಚ್.ಕೆ.ರವೀಂದ್ರನಾಥ ಹೊನ್ನೂರು

18.ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿ:
ಎಸ್.ಶ್ಯಾಮ್ ಪ್ರಸಾದ್, ಪಿಟಿಐ, ಬೆಂಗಳೂರು

19.ಸುಣ್ಣವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿಗೆ) ಅನುಕಾರ್ಯಪ್ಪ, ರಿಪಬ್ಲಿಕ್ ಕನ್ನಡ ಟಿವಿ, ಕೊಡಗು ಜಿಲ್ಲೆ

20.ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ)
ಪವನ್ ಕುಮಾರ್ ಹೆಚ್, ಡೆಕ್ಕನ್ ಹೆರಾಲ್ಡ್, ಉತ್ತರ ಕನ್ನಡ ಅಕ್ಷಯ ಪಿ.ವಿ., ಸ್ಟಾರ್ ಆಫ್ ಮೈಸೂರು, ಕೊಡಗು

21.ಟಿ.ಕೆ.ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ) ಸಿದ್ದು ಆರ್.ಜಿ.ಹಳ್ಳಿ, ಹಾವೇರಿ, ಪ್ರಜಾವಾಣಿ
ಶಶಿಕಾಂತ್ ಮೆಂಡೇಗಾರ, ಬಿಜಾಪುರ.

22.ಅಪ್ಪಾಜಿಗೌಡ (ಸಿನಿಮಾ ಪ್ರಶಸ್ತಿ-ಚಲನಚಿತ್ರ ವರದಿಗೆ) ಅರುಣ್ ಕುಮಾರ, ಬೆಂಗಳೂರು ಬಬಿತಾ ಎಸ್. ವಿಜಯ ಕರ್ನಾಟಕ

23.ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ: ಬಿ.ಸಿ.ಚನ್ನೇಗೌಡ, ಚನ್ನರಾಯಪಟ್ಟಣ ಗುರುರಾಜ್ ಕುಲಕರ್ಣಿ, ಸಂಯುಕ್ತ ಕರ್ನಾಟಕ, ಬೀದರ್

24. ಬದರೀನಾಥ್ ಹೊಂಬಾಳೆ ಪ್ರಶಸ್ತಿ:
ಕೆ.ಎನ್.ಪುಟ್ಟಲಿಂಗಯ್ಯ, ಸಂಪಾದಕರು, ಉದಯಕಾಲ ವೆಂಕಟೇಶ್ ಬಿ. ಇಮ್ರಾಪುರ, ಹೊಸ ದಿಗಂತ, ಗದಗ

25. ಅಭಿಮಾನಿ ಪ್ರಕಾಶನ ಪ್ರಶಸ್ತಿ:
ವಿರೂಪಾಕ್ಷ ಕೆ. ಕವಟಗಿ, ವಿಜಯ ಕರ್ನಾಟಕ, ಚಿಕ್ಕೋಡಿ ಶಿವರಾಜ್ ಕೆಂಭಾವಿ, ಉದಯವಾಣಿ, ಲಿಂಗಸೂಗೂರು

26. ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ: ಎಂ.ಎನ್.ಅಹೋಬಳಪತಿ, ವಿಜಯ ಕರ್ನಾಟಕ, ಚಿತ್ರದುರ್ಗ ಶ್ರೀಧರ್ ನಾಯಕ್, ಹಿರಿಯ ಪತ್ರಕರ್ತರು

27. ರವಿ ಬೆಳಗೆರೆ ಪ್ರಶಸ್ತಿ:
ಟಿ. ಗುರುರಾಜ್, ಸಂಪಾದಕರು, ಹಲೋ ಮೈಸೂರು ಜಗದೀಶ್ ಬೆಳ್ಳಿಯಪ್ಪ, ಟಿವಿ-9

27.ಅತ್ಯುತ್ತಮ ತನಿಖಾ ವರದಿ: ನ್ಯೂಸ್ ಫಸ್ಟ್, ಬೆಂಗಳೂರು (ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಹಗರಣ)

28.ವಿದ್ಯುನ್ಮಾನ ಟಿ.ವಿ ವಿಭಾಗ: ಹರೀಶ್ ನಾಗರಾಜ್, ವಿಸ್ತಾರ ಟಿವಿ,
ನವಿತಾ ಜೈನ್, ನ್ಯೂಸ್ 18, ರಾಚಪ್ಪ ಜೀ ಟಿವಿ
ದಶರಥ, ಟಿವಿ-5
ಮನೋಜ್ ಕುಮಾರ್, ಪವರ್ ಟಿವಿ
ಮೋಹನ್ ರಾಜ್, ಕ್ಯಾಮರಾಮೆನ್, ಸುವರ್ಣ ಟಿವಿ

29.ಕೆಯುಡಬ್ಲೂಜೆ ವಿಶೇಷ ಪ್ರಶಸ್ತಿ:
ನಿರ್ಮಲ ಎಲಿಗಾರ್, ಬೆಂಗಳೂರು.
ಪಿ.ಬಿ.ಹರೀಶ್ ರೈ, ಮಂಗಳೂರು ಪ್ರಕಾಶ್ ಮಸ್ಕಿ, ರಾಯಚೂರು ಕೆ.ಎಸ್.ಭಾಸ್ಕರ ಶೆಟ್ಟಿ, ಬೆಂಗಳೂರು
ರಾಧಾಕೃಷ್ಣ ಭಟ್ ಭಟ್ಕಳ, ಉತ್ತರ ಕನ್ನಡ.
ವೆಂಕಟೇಶ್ ಮೂರ್ತಿ, ಕಲಬುರ್ಗಿ
ಅರವಿಂದ ನಾವಡ, ಉಡುಪಿ
ರಾಜಶೇಖರ ಜೋಗಿನ್ಮನೆ
ರಮೇಶ್ ಪಾಳ್ಯ

ವಂದನೆಗಳೊಂದಿಗೆ

ಶಿವಾನಂದ ತಗಡೂರು
ರಾಜ್ಯಾಧ್ಯಕ್ಷರು, ಕೆಯುಡಬ್ಲ್ಯುಜೆ

ಜಿ.ಸಿ.ಲೋಕೇಶ
ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಬೆಂಗಳೂರು.

Continue Reading
Click to comment

Leave a Reply

Your email address will not be published. Required fields are marked *

State

INDvsENG 1st t20: ಟೀಂ ಇಂಡಿಯಾ ಅಲ್‌ರೌಂಡರ್‌ ಪ್ರದರ್ಶನ; ಸೂರ್ಯ ಬಳಕ್ಕೆ ಮೊದಲ ಜಯ

Published

on

ಕೊಲ್ಕತ್ತಾ: ಭಾರತ ತಂಡದ ಸಂಘಟಿತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ದಾಳಿಗೆ ನಲುಗಿದ ಇಂಗ್ಲೆಂಡ್‌ ತಂಡ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

ಇಲ್ಲಿನ ಈಡೆನ್‌ ಗಾರ್ಡೆನ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡ ನಿಗದಿತ 20 ಓವರ್‌ಗಳಲ್ಲಿ ಆಲ್‌ಔಟ್‌ ಆಗಿ 132 ರನ್‌ ಗಳಿಸಿ ಟೀಂ ಇಂಡಿಯಾಗೆ 133 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿ ಭಾರತ ತಂಡ 12.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 133 ರನ್‌ ಗಳಿಸಿ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.

ಇಂಗ್ಲೆಂಡ್‌ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಪರವಾಗಿ ಬೆನ್‌ ಡಕೆಟ್‌ ಹಾಗೂ ಫಿಲ್‌ ಸಾಲ್ಟ್‌ ಇನ್ನಿಂಗ್ಸ್‌ ಆರಂಭಿಸಿದರು. ಸಾಲ್ಟ್‌ ಶೂನ್ಯ ಸುತ್ತಿ ಹೊರನಡೆದರೇ, ಡಕೆಟ್‌ 4(4) ರನ್‌ ಗಳಿಸಿ ಇನ್ನಿಂಗ್ಸ್‌ ಮುಗಿಸಿದರು.

ನಾಯಕ ಜೋಸ್‌ ಬಟ್ಲರ್‌ 44 ಎಸೆತ 8 ಬೌಂಡರಿ, 2 ಸಿಕ್ಸರ್‌ ಸಹಿತ 68 ರನ್‌ ಗಳಿಸಿದ್ದೇ ತಂಡದ ಪರವಾಗಿ ಗಳಿಸಿದ ಅಧಿಕ ರನ್‌. ಬಟ್ಲರ್‌ ಏಕಾಂಕಿ ಹೋರಾಟದ ಫಲವಾಗಿ ಇಂಗ್ಲೆಂಡ್‌ ನೂರರ ಗಡಿ ದಾಟಿತು.

ಉಳಿದಂತೆ ಹ್ಯಾರಿ ಬ್ರೂಕ್‌ 17(14), ಲಿವಿಂಗ್‌ಸ್ಟೋನ್‌ ಡಕ್‌ಔಟ್‌, ಬೆಥೆಲ್‌ 7(14), ಓವರ್‌ಟನ್‌ 2(4), ಆಟ್ಕಿನ್ಸನ್‌ 2(13), ಜೋಫ್ರಾ ಆರ್ಚರ್‌ 12(10), ಮಾರ್ಕ್‌ವುಡ್‌ 1(1) ಹಾಗೂ ಆದಿಲ್‌ ರಶೀದ್‌ ಔಟಾಗದೇ 8(11) ರನ್‌ ಗಳಿಸಿದರು.

ಟೀಂ ಇಂಡಿಯಾ ಪರ ವರುಣ್‌ ಚಕ್ರವರ್ತಿ 3, ಅರ್ಶದೀಪ್‌ ಸಿಂಗ್‌, ಹಾರ್ದಿಕ್‌ ಪಾಂಡ್ಯ ಹಾಗೂ ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಬಳಿಸಿ ಮಿಂಚಿದರು.

ಟೀಂ ಇಂಡಿಯಾ ಇನ್ನಿಂಗ್ಸ್‌: ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕರಾದ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಸಂಜು ಸ್ಯಾಮ್ಸನ್‌ 26(20) ರನ್‌ ಗಳಿಸಿದರೇ, ನಾಯಕ ಸೂರ್ಯಕುಮಾರ್‌ ಯಾದವ್‌ ಡಕ್‌ಔಟ್‌ ಆಗಿ ಹೊರನಡೆದರು.

ಇತ್ತ ಆರಂಭದಿಂದಲೇ ಭರ್ಜರಿಯಾಗಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ ಭರ್ಜರಿ 8 ಸಿಕ್ಸರ್‌ಗಳ ಸಹಾಯದಿಂದ 79 ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ಜೊತೆಯಾದ ತಿಲಕ್‌ ವರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ ಕ್ರಮವಾಗಿ 19 ಹಾಗೂ 3 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್‌ ಎರಡು, ಆದಿಲ್‌ ರಶೀದ್‌ ಒಂದು ವಿಕೆಟ್‌ ಕಬಳಿಸಿದರು.

Continue Reading

State

ಯಲ್ಲಾಪುರ, ಸಿಂಧನೂರಿನಲ್ಲಿ ಭೀಕರ ಅಪಘಾತ: ಮೃತರ ಕುಟುಂಬಕ್ಕೆ 3ಲಕ್ಷ ಪರಿಹಾರ ಘೋಷಿಸಿದ ಸಿಎಂ

Published

on

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಎರಡು ಪ್ರತ್ಯೇಕ ಅಪಘಾತದಲ್ಲಿ ಮೃತರಾದವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 3ಲಕ್ಷ ಪರಿಹಾರ ಘೋಷಿಸಲಾಗಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು.

ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ ರೂ.3 ಲಕ್ಷ ಪರಿಹಾರ ನೀಡಲಾಗುವುದು.

ಜೊತೆಗೆ ಅಪಘಾತದಲ್ಲಿ ಗಾಯಗೊಂಡವರ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಅವಸರ, ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆ ಅಪಘಾತಕ್ಕೆ ಕಾರಣ. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷಿತರಾಗಿರಿ ಎಂದು ಮನವಿ ಮಾಡುತ್ತೇನೆ ಎಂದು ಸಿಎಂ ಆಫ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿ ಪರಿಹಾರ ಘೋಷಿಸಿದ್ದಾರೆ.

Continue Reading

State

ಮುಡಾ ಸೈಟು ಮುಟ್ಟುಗೋಲು: ಸಿಎಂ ಸಿದ್ದರಾಮಯ್ಯ ಏನಂದ್ರು?

Published

on

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) 50:50 ಅನುಪಾತದಲ್ಲಿ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಮುಡಾ ಸೈಟುಗಳನ್ನು ಮುಟ್ಟುಗೋಲು ಹಾಕಿಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಈ ಸಂಬಂಧ ಮೊದಲ ಬಾರಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇಡಿ ಅಧಿಕಾರಿಗಳ ಮಾಧ್ಯಮ ಪ್ರಕಟಣೆಗೂ ನನಗೂ ಯಾವುದೇ ಸಂಬಂಧವಿಲ್ಲ. 50:50 ಸೈಟುಗಳನ್ನು ಮುಟ್ಟುಗೋಲು ಹಾಕಿದ್ದೇವೆ ಎನ್ನುತ್ತಾರೆ. ಕೇವಲ ರಾಜಕೀಯ ಉದ್ದೇಶದಿಂದ ತನಿಖೆ ಮಾಡುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಟಾಂಗ್‌ ಕೊಟ್ಟರು.

ಇಡಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿರುವುದು ಬಿಜೆಪಿ. ಇದೊಂದು ರಾಜಕೀಯ ಉದ್ದೇಶಪೂರಿತವಾದ ಪಿತೂರಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Continue Reading

Trending

error: Content is protected !!