Hassan
ಕರ್ತವ್ಯ ಲೋಪ ಸಾಬೀತು ಹಿನ್ನಲೆ – ತಾಲ್ಲೂಕು ಆರೋಗ್ಯಾಧಿಕಾರಿ ಸಸ್ಪೆಂಡ್
ಹಾಸನ : ಕರ್ತವ್ಯ ಲೋಪ ಸಾಬೀತು ಹಿನ್ನಲೆ – ತಾಲ್ಲೂಕು ಆರೋಗ್ಯಾಧಿಕಾರಿ ಸಸ್ಪೆಂಡ್
ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ.ಎಲ್ ಅಮಾನತಾದ ಅಧಿಕಾರಿ
ಅರಕಲಗೂಡು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಷ್ಪಲತಾ
ರೋಗಿಗಳಿಗೆ ಚಿಕಿತ್ಸೆ ನೀಡಲು ವೈಫಲ್ಯ ಹಾಗೂ ಹಣ ಪಡೆದಿರುವ ಆರೋಪ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದ ಶಶಿಕುಮಾರ್
ದೂರಿನ್ವಯ ತನಿಖೆ ನಡೆಸಿದ ಡಿಹೆಚ್‌ಒ
2009 ರಿಂದ ಅರಕಲಗೂಡಿನಲ್ಲೇ
ಮಹಿಳಾ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುಷ್ಪಲತಾ
ಈ ಬಗ್ಗೆ ಪರಿಶೀಲನೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್
ಮಹಿಳಾ ವೈದ್ಯರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತು ಹಿನ್ನೆಲೆ
ಸೇವೆಯಿಂದ ಅಮಾನತುಗೊಳಿಸಿ ಆದೇಶ
ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಯಿಂದ ಅಮಾನತು
ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯುವ ಸಲುವಾಗಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳಾಂತರ
ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಎಂದು ಆದೇಶ
Hassan
HSRP Number Plate: HSRP ನಂಬರ್ ಪ್ಲೇಟ್ ಬುಕಿಂಗ್ ಮಾಡುವವರಿಗೆ ಹೊಸ ಪ್ರಾಬ್ಲಮ್!
HSRP Number Plate: HSRP ನಂಬರ್ ಪ್ಲೇಟ್ ಬುಕಿಂಗ್ ಮಾಡುವವರಿಗೆ ಹೊಸ ಪ್ರಾಬ್ಲಮ್!
HSRP number plate: ರಾಜ್ಯದಲ್ಲಿ ಇನ್ನೂ ಶೇ.55ಕ್ಕಿಂತ ಹೆಚ್ಚಿನ ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯುವ ಅವಧಿಯನ್ನು ಈಗಾಗಲೇ 3 ಬಾರಿ ವಿಸ್ತರಣೆ ಮಾಡಲಾಗಿದೆ. ಆದ್ರೆ ರಾಜ್ಯದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (HSRP number plate) ಬುಕಿಂಗ್ ಮಾಡುವವರಿಗೆ ಸಂಕಷ್ಟ ಆರಂಭವಾಗಿದೆ. ಈಗಾಗಲೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡಿದ ಬೆಂಗಳೂರು ವ್ಯಕ್ತಿಯೊಬ್ಬ ಬರೋಬ್ಬರಿ 95 ಸಾವಿರ ರೂ. ಕಳೆದುಕೊಂಡಿದ್ದಾರೆ.
ಹೌದು, ಕೇಂದ್ರ ಸರ್ಕಾರದ ಹೆಚ್‌ಎಸ್‌ಆರ್‌ಪಿ ನಂನರ್ ಪ್ಲೇಟ್ ಬುಂಕಿಂಗ್ ಮಾಡುವ ವೆಬ್‌ಸೈಟ್ ಅನ್ನು ನಕಲಿ ಮಾಡಿ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಸೈಬರ್ ಕಳ್ಳರ ಜಾಲದ ಬಗ್ಗೆ ಬೆಳಕಿಗೆ ಬಂದಿದೆ. ಜನರು ತಮ್ಮ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಆದರೆ, ಅರ್ಜಿ ಸಲ್ಲಿಕೆ ವೇಳೆ ಸಾರಿಗೆ ಇಲಾಖೆಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್‌ಗಳನ್ನು ಸರಿಯಾಗಿ ಗುರುತಿಸಿ ಅಪ್ಲೈ ಮಾಡಬೇಕು. ಇಲ್ಲವಾದರೆ ಖಾಸಗಿ ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಕೆಗೆ ಮುಂದಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ.
ಹೌದು, HSRP ನಂಬರ್ ಪ್ಲೇಟ್ ಹೆಸರಲ್ಲಿ ಸೈಬರ್ ವಂಚಕ ಜಾಲ ಸಕ್ರಿಯವಾಗಿದೆ. ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡ್ತಿದ್ದಂತೆ ನಿಮ್ಮ ಅಕೌಂಟ್‌ನಲ್ಲಿರೊ ಹಣ ಖಾಲಿ ಆಗೋದು ಖಚಿತ. HSRP ನಂಬರ್ ಪ್ಲೇಟ್ ಬುಕ್ ಮಾಡಿದ್ದ ವಿಜಿತ್ ಕುಮಾರ್ ಗೆ 95 ಸಾವಿರ ವಂಚನೆ ಮಾಡಲಾಗಿದೆ. ತನಗೆ ವಂಚನೆಯಾಗಿರುವ ಬಗ್ಗೆ ವಿಜಿತ್ ಕುಮಾರ್ ಅವರು ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ವಿಜಿತ್ ಕುಮಾರ್ ತಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಬುಕ್ ಮಾಡಲು bookmyhsrp.net ಲಿಂಕ್‌ನಲ್ಲಿ ನಲ್ಲಿ ರಿಜಿಸ್ಟರ್ ಮಾಡಿದ್ದರು.
ಆದರೆ, ಒಂದು ವಾರದ ನಂತರ ನಿಮ್ಮ ದಾಖಲೆ ಸರಿ ಇಲ್ಲ, ಕೆಳಗೆ ಕೊಟ್ಟ ಲಿಂಕ್ ಕ್ಲಿಕ್ ಮಾಡಿ ಅಪ್ಡೇಟ್ ಮಾಡಿ ಎಂದು ಮೇಲ್ ಬಂದಿತ್ತು. ಈ ಲಿಂಕ್ ಕ್ಲಿಕ್ ಮಾಡಿ ದಾಖಲೆ ಅಪ್ಲೋಡ್ ಮಾಡಿದ್ದನು. ಇದಾದ ನಾಲ್ಕು ದಿನಗಳಲ್ಲಿ ಹಂತ ಹಂತವಾಗಿ ವಿಜಿತ್‌ಕುಮಾರ್ ಕ್ರೆಡಿಟ್ ಕಾರ್ಡ್‌ನಿಂದ 95 ಸಾವಿರ ರೂ. ಕಟ್ ಆಗಿದೆ. ಈ ಸಂಬಂಧಪಟ್ಟಂತೆ ಬಾಗಲೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ವಿಜಿತ್‌ಕುಮಾರ್‌ನ ಇಮೇಲ್ ಐಡಿ ಮತ್ತು ಬ್ಯಾಂಕ್ ಖಾತೆಯ ವಿವರನ್ನು ಪೊಲೀಸರು ಪಡೆದು, ಹಣ ಕಡಿತವಾಗಿರುವ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
Hassan
ಕಾಂಗ್ರೆಸ್ ಸರಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಪ್ರವೀಣ್ ಗೌಡ
ಹಾಸನ: ಮೂಡ ಹಗರಣ ಮುಂದಿಟ್ಟುಕೊಂಡು ವಿಪಕ್ಷಗಳು ತಮ್ಮ ಕುತಂತ್ರದಿಂದ ಅಧಿಕಾರ ಹಿಡಿಯಲು ಮುಂದಾಗಿದ್ದು, ಆದರೇ ಕಾಂಗ್ರೆಸ್ ಸರಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರವೀಣ್ ಗೌಡ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನಾತ್ಮಕವಾಗಿ ಬಹುಮತದಿಂದ ಅತಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಬಿಜೆಪಿ, ಜೆಡಿಎಸ್ ನಾಯಕರು ಇನ್ನಿಲ್ಲದ ಕಸರತ್ತು ಮಾಡುತ್ತಿರುವುದು ಖಂಡನೀಯ. ಮೂಡ ಹಗರಣ ತನಿಖಾ ಹಂತದಲ್ಲಿ ಇದ್ದರೂ ಇದೆ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ, ಜೆಡಿಎಸ್ ನಾಯಕರು ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಈ ಪ್ರಕರಣಕ್ಕೆ ಎಳೆತಂದು ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಈ ಹಿಂದಿನಿಂದಲೂ ಹಿಂಬಾಗಿಲ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅದರಲ್ಲೂ ಮೈತ್ರಿ ಕೇಂದ್ರ ಸಚಿವರಾಗಿರುವ ಎಚ್. ಕುಮಾರಸ್ವಾಮಿ ಅವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರನ್ನು ಸಭೆಯಲ್ಲಿ ಕೂರಲು ಅವನ್ಯಾರು ಎಂಬ ಮಾತನ್ನು ಆಡುವ ಮೂಲಕ ತಮ್ಮ ಮೈತ್ರಿಯ ಒಡಕನ್ನು ಪ್ರದರ್ಶನ ಮಾಡಿದ್ದಾರೆ. ಒಂದು ಪಕ್ಷದ ರಾಜ್ಯ ಪ್ರಧಾನ
ಕಾರ್ಯದರ್ಶಿ ಯಾಗಿರುವ ಪ್ರೀತಂ ಗೌಡ ಅವರಿಗೆ ಗೌರವ ಕೊಡದೆ ಮಾತನಾಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು. ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ಬದಲು ಜೆಡಿಎಸ್, ಬಿಜೆಪಿ ನಾಯಕರು ತಮ್ಮನ್ನೇ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಇದೆ, ಅವರ ತಟ್ಟೆಯಲ್ಲೇ ಹೆಗ್ಗಣ ಸತ್ತು ಬಿದ್ದಿರುವಾಗ ಮತ್ತೊಬ್ಬರ ತಟ್ಟೆ ನೀಡುವ ರೀತಿ ಬದಲಾಯಿಸಿಕೊಳ್ಳಬೇಕು. ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ಈ ರೀತಿಯ ಕುತಂತ್ರ ನಡೆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Hassan
ಅಕ್ರಮ ಗಣಿಗಾರಿಕೆ, ಜಾಗ ಒತ್ತುವರಿ, ಮಾಡು ನಾಶ ನಿಲ್ಲಿಸದಿದ್ರೆ ಅರಣ್ಯ ಉಳಿಸಲು ನ್ಯಾಯಾಲಯದ ಮೊರೆ : ವಕೀಲರಾದ ಎನ್.ಪಿ. ಅಮೃತೇಶ್
ಹಾಸನ : ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೇರಳವಾದ ಅರಣ್ಯ ಸಂಪತ್ತಿದ್ದು, ಹಲವಾರು ಪ್ರಭಾವೀ ರಾಜಕಾರಣಿಗಳ ಬೆಂಬಲದಿಂದ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಅಕ್ರಮ ಕಾಡು ಒತ್ತುವರಿ, ಕಾಡು ನಾಶ ನಿರಂತರವಾಗಿ ನಡೆದಿದ್ದು, ತಕ್ಷಣ ಕಾನೂನು ಕ್ರಮ ಕೈಗೊಳ್ಳದಿದ್ದರೇ ಅರಣ್ಯ ಉಳಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯದ ಕದ ತಟ್ಟುವ ಕಾರ್ಯಕ್ಕೆ ಚಾಲನೆ ಕೊಡಲಾಗುವುದು ಎಂದು ವಾಯ್ಸ್ ಆಫ್ ಪಬ್ಲಿಕ್ ನ ಸಂಸ್ಥಾಪಕ ಮತ್ತು ವಕೀಲರಾದ ಎನ್.ಪಿ. ಅಮೃತೇಶ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯದಲ್ಲಿ ಹೇರಳವಾದ ಅರಣ್ಯ ಸಂಪತ್ತು ಇದ್ದು, ಇಡೀ ಭಾರತ ದೇಶದಲ್ಲಿ ನಾವು ೧೫-೧೬ನೇ ಸ್ಥಾನದಲ್ಲಿ ಇದ್ದೇವೆ. ಪ್ರತಿಶತ ೩೩% ಅರಣ್ಯ ಪ್ರದೇಶ ಇರಬೇಕೆಂಬುದು ಸಾಮಾನ್ಯ ನೀತಿಯಾಗಿದೆ. ಆದರೆ, ಹಲವಾರು ಪ್ರಭಾವೀ ರಾಜಕಾರಣಿಗಳ ಬೆಂಬಲದಿಂದ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಅಕ್ರಮ ಒತ್ತುವರಿ, ಅಕ್ರಮ ಕಾಡು ನಾಶ ನಿರಂತರವಾಗಿ ನಡೆದಿದ್ದು, ಕರ್ನಾಟಕದಲ್ಲಿ ಕೇವಲ ೨೧.೦೧% ಅರಣ್ಯವಿದೆ. ಈ ಹಿಂದೆ ನಡೆದ ಘಟನೆಗಳನ್ನು ನೆನಪಿಸಿಕೊಂಡರೆ ಬಳ್ಳಾರಿ, ತುಮಕೂರು, ಚಿತ್ರದುರ್ಗ, ಕನಕಪುರಗಳಲ್ಲಿ ನಡೆದಂತಹ ಅಕ್ರಮ ಗಣಿಗಾರಿಕೆಯ ಚಿತ್ರಣ ನಮ್ಮ ಕಣ್ಣು ಮುಂದೆ ಬಂದು ಅಪಾರವಾದ ಅರಣ್ಯ ನಾಶವಾಗಿರುವುದು ಕಂಡು ಬರುತ್ತದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಹೆಚ್ಚಿನ ಅರಣ್ಯ ನಾಶ, ಅಕ್ರಮ ಗಣಿಗಾರಿಕೆ ತಪ್ಪಿರುತ್ತದೆ ಎಂದರು. ೧೦ – ೧೫ ವರ್ಷಗಳ ಹಿಂದೆ ನಿಂತಿದ್ದಂತಹ ಅಕ್ರಮ ಗಣಿಗಾರಿಕೆಯು ಮತ್ತೊಂದು ಸ್ವರೂಪದಲ್ಲಿ ರಾಜ್ಯದಲ್ಲಿ ತಲೆಯೆತ್ತುತ್ತಿದೆ. ಇದಕ್ಕೆ ರಾಜ್ಯ, ಜಿಲ್ಲೆ, ತಾಲ್ಲೂಕಿನ ಪ್ರಭಾವಿ ರಾಜಕಾರಣಿಗಳು, ನೇರವಾಗಿ ಅರಣ್ಯ ಮಂತ್ರಿಗಳು, ಉಸ್ತುವಾರಿ ಮಂತ್ರಿಗಳು ಪ್ರಭಾವಿ ಮಠದ ಸ್ವಾಮಿಗಳ ಮತ್ತು ಅರಣ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕು ಬೆಂಬಲದಿಂದ ಹಾಸನ ಜಿಲ್ಲೆಯ ಅರಕಲಗೂಡು,
ಚನ್ನರಾಯಪಟ್ಟಣಗಳಲ್ಲಿ ಅಕ್ರಮ ಕಲ್ಲುಗಣಿಗಾರಿಕೆ / ಕ್ರಷರ್ ಮಾನ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿ ಸ್ಥಗಿತಗೊಂಡಿಂದ ಕಲ್ಲುಗಣಿ ಮತ್ತು ಕ್ರಷರ್ ಚಟುವಟಿಕೆಯನ್ನು ನಿರಾಂತಕವಾಗಿ ಪರೋಕ್ಷವಾಗಿ ನಡೆಸುತ್ತಿದ್ದಾರೆ ಎಂದು ದೂರಿದರು. ಅರಕಲಗೂಡು ತಾಲ್ಲೂಕು, ಮುದಗನೂರು ಕಾವಲು, ಅರಸೀಕಟ್ಟೆ ಕಾವಲಿಗೆ ಸೇರಿದ ಸರ್ಕಾರದ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ, ಕ್ರಷರ್ ಚಟುವಟಿಕೆಯು ಸರಿ ಸುಮಾರು ೨೦ – ೨೫ ಎಕರೆ ಪ್ರದೇಶದಲ್ಲಿ ನಡೆದಿದ್ದು, ಈ ಅರಣ್ಯ ಪ್ರದೇಶವನ್ನು ತಮ್ಮ ಇಚ್ಛೆಗೆ ಬಂದಂತೆ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಪ್ರದೇಶವು ಅರಣ್ಯ ಇಲಾಖೆಗೆ ಸೇರಿರುತ್ತದೆ ಎಂದು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ೧೫೮.೩೨ ಎಕರೆ ಇರುವ ಅರಣ್ಯ ಎಂದು ಪ್ರಮಾಣ ಪತ್ರವನ್ನು ಸಲ್ಲಿಸಿದ್ದರೂ ಸಹ, ಸಾಮಾನ್ಯ ವ್ಯಕ್ತಿಯಿಂದ ಒಂದು ಅರ್ಜಿಯನ್ನು ಪಡೆದು, ೯೬.೧೮ ಎಕರೆಗೆ ಅರಣ್ಯ ಪ್ರದೇಶ ಎಂದು ಕಡಿಮೆ ಮಾಡಿ, ಕಂದಾಯ ಇಲಾಖೆಯ ಅಧಿಕಾರಿಗಳೊಡನೆ ಶಾಮೀಲಾಗಿ, ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಅನುವು ಮಾಡಿ ಕೊಟ್ಟಿರುತ್ತಾರೆ ಎಂದರು.
ದಿನಾಂಕ ೧೫-೦೨-೨೦೨೪ ರಲ್ಲಿ ನಡೆದ ಹಾಸನ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ಟಾಸ್ಕ್‌ಫೋರ್ಸ್ (ಗಣಿ) ಸಮಿತಿಯಲ್ಲಿ ನಡೆದ ೨೦೨೪ ಜನವರಿ ೨೪ರ ಸಭೆಯ ನಡವಳಿಯಂತೆ, ಮಾನ್ಯ ಉಚ್ಚ ನ್ಯಾಯಾಲಯದ ಆದೇಶಗಳ ಅಡಿಪಾಯದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಮುದಗನೂರು ಕಾವಲು ಗ್ರಾಮ ಸರ್ವೆ ನಂ. ೦೧, ಅರಸೀಕಟ್ಟೆ ಕಾವಲು ಗ್ರಾಮದ ಸ.ನಂ. ೧೧೬ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲುಗಣಿ ಗುತ್ತಿಗೆ ಹಾಗೂ ಕ್ರಷರ್ ಘಟಕಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಿದೆ ಎಂದು ಹೇಳಿದರು. ಕಲ್ಲುಗಣಿ ಮತ್ತು ಕ್ರಷರ್ ಚಟುವಟಿಕೆಗಳಿಗಾಗಿ, ಬೃಹತ್ ಯಂತ್ರೋಪಕರಣಗಳನ್ನು ಕಾನೂನು ಬಾಹಿರವಾಗಿ ಸ್ಥಾಪಿಸಿ, ಅದರಲ್ಲೂ ಈ ಯಂತ್ರಗಳನ್ನು ಯಾವುದೇ ರೀತಿಯ ಪರವಾನಗಿಗಳನ್ನು ಪಡೆಯದೆ, ಸ್ಥಾಪಿಸಿರುವಂತಹ ಸ್ಥಳಗಳೂ ಸಹ ಬೇರೊಬ್ಬರ
ಜಮೀನಿನಲ್ಲಿ ಕಾರ್ಯ ನಿರ್ವಹಿಸಿರುತ್ತದೆ. ಈ ಗಣಿಗಾರಿಕೆಯಿಂದ ಪರಿಸರ ಮಾಲಿನ್ಯ ಮತ್ತು ಗಣಿಗಾರಿಕೆಯಿಂದ ಆದಂತಹ ದೊಡ್ಡ ದೊಡ್ಡ ಕಂದಕ ಹಳ್ಳಗಳು ನಿರ್ಮಾಣವಾಗಿದ್ದು, ಆ ಹಳ್ಳಗಳಲ್ಲಿ ಹಲವಾರು ಅರಣ್ಯ ಪ್ರಾಣಿಗಳು, ದನಕರುಗಳು ಬಿದ್ದು ಸಾಯುತ್ತಿರುವುದು ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿರುವುದಿಲ್ಲವೇ? ಇದಲ್ಲದೆ, ಅರಣ್ಯ ಸುತ್ತ ಮುತ್ತಲೂ ಇರುವ ವ್ಯವಸಾಯ ಮಾಡುವ ಜಮೀನಿನ ಮೇಲೆ ಕ್ರಷರ್‌ನಿಂದ ಹೊರಸೂಸುವ ಧೂಳು ಶಬ್ದ ದಿಂದ ಸಾರ್ವಜನಿಕರ ಮೇಲೆ ಆಗುವ ಪರಿಣಾಮದ ಬಗ್ಗೆ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಏಕೆ? ಎಂದು ಪ್ರಶ್ನಿಸಿದರು. ಪುನರ್ ಪ್ರಾರಂಭಿಸಿರುವ ಕಲ್ಲುಗಣಿ, ಕ್ರಷರ್ ಚಟುವಟಿಕೆಗಳಿಗೆ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪ್ರಭಾವಿ ರಾಜಕಾರಣಿಗಳು ಬೆಂಬಲಕ್ಕೆ
ನಿಂತಿರುತ್ತಾರೆ. ವಿಶೇಶವಾಗಿ ಈ ಮೇಲಿನ ಅಕ್ರಮ ಗಣಿಗಾರಿಕೆಯ ವಿಷಯದಲ್ಲಿ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಚರ್ಚೆ ಆಗಿದ್ದು, ವಿಷಯವನ್ನು ಸದನ ಸಮಿತಿಗೆ ವಿಚಾರಣೆಗೆ ವಹಿಸಲಾಗಿರುತ್ತದೆ. ಹೀಗಿದ್ದೂ, ಅಕ್ರಮ ಕಲ್ಲುಗಣಿ, ಕ್ರಷರ್ ಚಟುವಟಿಕೆ ಮುಂದುವರೆಯುತ್ತಿರುವುದನ್ನು ನಮ್ಮ ವೇದಿಕೆ ಬಲವಾಗಿ ಖಂಡಿಸುತ್ತದೆ. ತಕ್ಷಣ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು. ತಕ್ಷಣ ಕಾನೂನು ಕ್ರಮಗಳನ್ನು ಸಂಬಂಧಪಟ್ಟವರು ತೆಗೆದುಕೊಳ್ಳದೇ ಇದ್ದ ಪಕ್ಷದಲ್ಲಿ, ಅರಣ್ಯ ಉಳಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ಮಾನ್ಯ ನ್ಯಾಯಾಲಯದ ಕದ ತಟ್ಟುವ ಕಾರ್ಯಕ್ಕೆ ಚಾಲನೆ ಕೊಡಬೇಕೆಂದು ತೀರ್ಮಾನಿಸಿರುತ್ತೇವೆ ಎಂದು ತಮ್ಮ ಉದ್ದೇಶ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಾಯ್ಸ್ ಆಫ್ ಪಬ್ಲಿಕ್ ನ ಸಂಚಾಲಕಿ ದೀಕ್ಷಾ ಅಮೃತೇಶ್, ಹೀನಾ ಕೌಶರ್, ವಕೀಲರಾದ ಗಿರೀಶ್ ಗೌಡ, ಆನಂದ್ ಇತರರು ಉಪಸ್ಥಿತರಿದ್ದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.