Connect with us

Mysore

ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡದಿರಿ – ಶಾಸಕ ಡಿ‌.ರವಿಶಂಕರ್

Published

on

ಸಾಲಿಗ್ರಾಮ :  ಕುಲ ಕುಲ ಕುಲವೆಂದು ಹೊಡೆದಾಡದಿರಿ  ಎಂದು ಕೀರ್ತನೆಗಳ ಮೂಲಕ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಉಳಿದ ಕನಕದಾಸರನ್ನು  ಕೇವಲ ಒಂದು ಜಾತಿಗೆ ಸೀಮಿತವಾಗಿ ಮಾಡದೇ ಮನುಕುಲದ ಉದ್ಧಾರಕ ಎಂದು ಭಾವಿಸಬೇಕು ಎಂದು ಶಾಸಕ ಡಿ‌.ರವಿಶಂಕರ್ ಹೇಳಿದರು
ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ- ಸಂತ ಕವಿ ಕನಕದಾಸರ ಜಯಂತ್ಯೋತ್ಸವ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಏರ್ಪಡಿಸಿದ್ದ   ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತಿ ವ್ಯವಸ್ಥೆಯನ್ನು‌500 ವರ್ಷಗಳ ಹಿಂದೆಯೇ ಹೋಗಲಾಡಿಸಲು ಶ್ರಮಿಸಿದ ಕನಕದಾಸರ ಆದರ್ಶಗಳನ್ನು ಅಳವಡಿಸಿ ಕೊಳ್ಳಬೇಕೆಂದರು
ಕರ್ನಾಟಕ ಏಕೀಕರಣಗೊಂಡು ೫೦ ವರ್ಷ ಪೂರ್ಣಗೊಂಡಿರುವುದರಿಂದ ರಾಜ್ಯ ಸರ್ಕಾರ ಇಡೀ ವರ್ಷ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದ್ದು ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಕನ್ನಡ ಪ್ರೇಮವನ್ನು ಬೆಳಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಎಲ್ಲಾ ಗ್ರಾಮಗಳಲ್ಲು ಸಾಕಷ್ಟು ಓದಿ ಉನ್ನತ ಹುದ್ದೆಯಲ್ಲಿದ್ದರು, ಹುಟ್ಟೂರು ಮರೆಯುತ್ತಿರುವ ಈ ದಿನಗಳಲ್ಲಿ ಮೈಸೂರು ಸಂಜೆ ವಿವಿ ಕಾಲೇಜಿನ ಪ್ರಾಧ್ಯಾಪಕ ಪ್ರೋ.ಸಿ.ಡಿ.ಪರುಶುರಾಮ್ ಅವರು ಹುಟ್ಟೂರಿನಲ್ಲಿ ವಾಚನಾಲಯ ತೆರೆದು ವಿದ್ಯಾರ್ಥಿಗಳಿಗೆ ಬೇಕಾಗುವ ಶಿಕ್ಷಣ ಪುಸ್ತಕಗಳನ್ನು ಒದಗಿಸಿ ಅವರಿಗೆ ಶಿಕ್ಷಣ ಕಲಿಸಿ ಕೊಡುವ ಪ್ರಯತ್ನವನ್ನು ಯಾವುದೇ ಪ್ರಚಾರ ಇಲ್ಲದೇ ಮಾಡಿ ಮತ್ತು ವಿವಿಧ ಕ್ಷೇತ್ರದಲ್ಲಿ  ಎಲೆ ಮರದ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ  ಹತ್ತಾರು ಮಂದಿಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಮಾದರಿಯಾಗಿದ್ದು ಇವರ ಸೇವೆ ಬೇರೆಯವರಿಗೆ ಮಾರ್ಗದರ್ಶನವಾಗಲಿ ಎಂದು ಅಭಿಪ್ರಾಯ ಪಟ್ಟರು.’

ಪ್ರಧಾನ ಭಾಷಣ ಮಾಡಿದ ಚಿತ್ರದುರ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ಮಾತನಾಡಿ ಕನಕದಾಸರ ಜಯಂತಿ ಆಚರಣೆ ಮಾಡಿದರೆ  ಸಾಲದು ಅವರ ಕೀರ್ತನೆಗಳ ಬಗ್ಗೆ ಅಧ್ಯಯನ ಮಾಡಿ ಅದನ್ನು ಮುಂದಿನ ದಿನಗಳಲ್ಲೂ  ಉಳಿಸಿ ಕೊಂಡು ಹೋಗುವ ಜವಬ್ದಾರಿ ಎಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಸಾಲಿಗ್ರಾಮ ತಾಲೂಕು ಕಸಾಪ ಅಧ್ಯಕ್ಷ ಎಸ್.ಕೆ.ಮಧುಚಂದ್ರ ಸಿ.ಎಚ್.ದೇವೇಗೌಡ ಉಚಿತ ವಾಚನಾಲಯದ ಕೇಂದ್ರದ 2024 ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಮಣ್ಯ,ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಕೆ.ಆರ್.ನಗರ ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು, ಸಾಹಿತಿ ಕಲ್ಕುಣಿಕೆ ಮಹದೇವ್, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಗೀತಾ ದಿನೇಶ್, ಉಪಾಧ್ಯಕ್ಷೆ ಗೀತಾಕಾಂತರಾಜು, ಮಾಜಿ ಅಧ್ಯಕ್ಷರಾದ ತಿಮ್ಮೇಗೌಡ, ಗೌರಮ್ಮ,ಸದಸ್ಯೆ ರೇಖಾ ಉಮೇಶ್, ಮಾಜಿ ಸದಸ್ಯ ಚಂದ್ರಯ್ಯ, ಮಾಯಿಗೌಡನಹಳ್ಳಿ ಗ್ರಾ.ಪಂ‌.ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ಕುಪ್ಪೆ ಸಹಕಾರ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್, ಮಾಜಿ ಅಧ್ಯಕ್ಷರಾದ ಸಿ.ಟಿ.ಪಾರ್ಥ,ಕೆ.ಆರ್.ಮಂಜುನಾಥ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದಾಶಿವಕೀರ್ತಿ,  ಚಿಮುಕ ಬಳಗದ ಅಧ್ಯಕ್ಷ ಮುದ್ದನಹಳ್ಳಿ ಸೋಮಪ್ಪ ಮುಖಂಡರಾದ ಮನುರಾಜಣ್ಣ ಡಿ.ರಾಮಕೃಷ್ಣೇಗೌಡ, ನಿವೃತ್ತರಾದ ಶಿಕ್ಷಕ ಕುಪ್ಪೆ ಜವರೇಗೌಡ,ಹಿರಣ್ಣಯ್ಯ, ಚಂದ್ರಶೇಖರಯ್ಯ,ನಾಗರಾಜೇಗೌಡ, ಬೆಣಗನಹಳ್ಳಿ ಪಾರ್ಥ, ಕುಪ್ಪೆ‌ಮಹೇಂದ್ರ, ಸಾಲೇಕೊಪ್ಪಲು ರಂಗಸ್ವಾಮಿ, ಗಾರೇಗೌರ, ಸ್ವಾಮೀಗೌಡ, ದೊಡ್ಡಜವರನಾಯಕ, ಗುಡುಗನಹಳ್ಳಿ ಕರಿಯಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ 

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ವಾಂತಿ-ಬೇದಿಯಿಂದ ತತ್ತರಿಸಿದ ಗ್ರಾಮಸ್ಥರು ..! ತಬ್ಬಿಬ್ಬಾದ ಅಧಿಕಾರಿಗಳು..!*

Published

on

ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಕಂಡು ಬಂತು ಭೀಕರ ಕಾಲರಾ..! ಆರೋಗ್ಯ ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ

 

ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿರುವ ವರುಣ ವಿಧಾನಸಭಾ ಕ್ಷೇತ್ರದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಭೀಕರ ಕಾಲರ ಕಾಯಿಲೆ ಕಂಡುಬಂದು ತಗಡೂರು ಗ್ರಾಮಸ್ಥರು ತತ್ತರಿಸಿದ್ದಾರೆ.

ಈಗಾಗಲೇ ತಗಡೂರು ಗ್ರಾಮದಲ್ಲಿ 25 ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 114 ಕಾಲರ ರೋಗಿಗಳು ಕಂಡು ಬಂದಿದ್ದಾರೆ. ಇದರಲ್ಲಿ 5 ರೋಗಿಗಳನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ತಗಡೂರು ಗ್ರಾಮ ಪಂಚಾಯಿತಿಯ 1,2,3,ನೇಯ ವಾರ್ಡಿನಲ್ಲಿ ವಾಸಿಸುತ್ತಿರುವ ಜನರಿಗೆ ಕಾಲರ ಕಾಯಿಲೆ ವಾಂತಿ ಬೇದಿ ಕಂಡು ಬಂದಿದೆ. ಗ್ರಾಮದಲ್ಲಿ ಬರೋಬರಿ 12 ಕೈ ಪಂಪುಗಳಿದ್ದು ನಾಲ್ಕು ಕೈ ಪಂಪುಗಳ ನೀರನ್ನು ಕುಡಿಯಲು ಯೋಗ್ಯವಿಲ್ಲ ಎಂಬ ಆತಂಕಕಾರಿ ವರದಿ ಮಾಹಿತಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡಿಲ್ಲ. ಗ್ರಾಮಕ್ಕೆ ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹಾಗೂ ಜಿಲ್ಲಾ ಕಾಲಾರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ ತಾಲ್ಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೀಕರ ವಾಂತಿ ಭೇದಿ ಹಿಂದ 114 ರೋಗಿಗಳು ತಗಡೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ಪ್ರತಿ ಮನೆ ಮನೆಗೆ ಒರಸ್ ಪೌಡರ್ ಕಡ್ಡಾಯವಾಗಿ ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗಿದೆ. ತಗಡೂರು ಗ್ರಾಮದಲ್ಲಿ ಕಾಲರ ಕಾಯಿಲೆ ಕಂಡುಬಂದಿರುವುದು ಕೈ ಪಂಪಿನಲ್ಲಿರುವ ಕಲುಷಿತ ನೀರು ಸೇವನೆ ಎಂದು ಬೆಳಕಿಗೆ ಬಂದಿದೆ. ಹತ್ತಕ್ಕೂ ಹೆಚ್ಚು ವೈದ್ಯಾಧಿಕಾರಿಗಳನ್ನು ಗ್ರಾಮದಲ್ಲಿ ಬಿಡು ಬಿಟ್ಟಿದ್ದಾರೆ. ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯ ಜೊತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕಾಲರ ಕಾಯಿಲೆ ತಡೆಗಟ್ಟಲು ಮುಂದಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ

ಸಿದ್ದರಾಮಯ್ಯನವರ ತವರು ಕ್ಷೇತ್ರದ ತಗಡೂರು ಗ್ರಾಮದಲ್ಲಿ ಭೀಕರ ಕಾಲರ ಕಾಯಿಲೆ ಕಂಡು ಬಂದಿರುವುದು ಜಡ್ಡು ಗಟ್ಟಿದ ಅಧಿಕಾರಿಗಳ ನಿರ್ಲಕ್ಷ್ಯ ಕಾರ್ಯವೈಕರಿ ಎಂದು ಸಾರ್ವಜನಿಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ.

ಪಿಡಿಒ ದಿವಾಕರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿರುವ ದೆಸೆಯಿಂದ ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.

Continue Reading

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

Published

on

ನಂಜನಗೂಡು ಮೇ.19

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಮಹಾಗಣಪತಿ, ನವಗ್ರಹ,ನಾಗದೇವತೆ ಮತ್ತು ಶಿಖರ ಕಳಶ ಪ್ರತಿಷ್ಠಾಪನೆ ಮಾಡಲಾಯಿತು.


ಗೋ ದೇವತೆ ಗಂಗಾ ಪೂಜೆಯೊಂದಿಗೆ ಅಗ್ರೋದಕ ಸಹಿತ ಯಾಗ ಶಾಲೆ ಪ್ರವೇಶ ಮಾಡಿ ಗಣಪತಿ ಪೂಜೆ ಮಾಡಿ ಸ್ವಸ್ತಿ ಪುಣ್ಯಹ ವಾಹನ, ಪಂಚಗವ್ಯ ಸಾಧನ, ವಾಸ್ತು ಪೂಜೆ ಮತ್ತು ರಾಕ್ಸೊಘ್ನ ಹೋಮ, ಪರ್ಯಾಗ್ನಿ ಕರಣ ಶಿಖರ ಕಲಶ ಹಾಗೂ ನೂತನ ಶಿಲಾಮೂರ್ತಿಗೆ ಜಲಾದಿ ವಾಸ, ಧಾನ್ಯ ದಿವಾಸ, ಮೂರ್ತಿ ಸಂಸ್ಕಾರ ನ್ಯಾಸ ವಿಧಿ ಶಯನಾದಿ ವಾಸ ಮಾಡಲಾಯಿತು . ಬೆಳಿಗ್ಗೆ 4.50 ರಿಂದ 5.50ರ ವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತ ಶುಭ ಲಗ್ನದಲ್ಲಿ ಅಷ್ಟ ಬಂದ ಪ್ರತಿಷ್ಠಾಪನೆ

ನೆರವೇರಿಸಿದರು. ಅಯೋಧ್ಯೆ ಶ್ರೀಬಾಲ ರಾಯನ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ರವರ ಕೈಚಳಕದಲ್ಲಿ ಮೂಡಿ ಬಂದಿರುವ ಶ್ರೀ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಮಹಾ ಮಂಗಳಾರತಿ

ಮಾಡಲಾಯಿತು. ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

Published

on

ಪಿರಿಯಾಪಟ್ಟಣ: ದಂಪತಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಗೊಲ್ಲರ ಬೀದಿಯಲ್ಲಿ ನಡೆದಿದೆ.

ಪಟ್ಟಣದ ಬಿ.ಎಂ ರಸ್ತೆಯ ಪ್ರವಾಸಿ ಮಂದಿರ ಬಳಿ ಕ್ಯಾಂಟೀನ್ ವ್ಯಾಪಾರ ನಡೆಸುತ್ತಿದ್ದ ಪ್ರಕಾಶ್ (51) ಹಾಗೂ ಚಿಲ್ಲರೆ ಅಂಗಡಿ ಮತ್ತು ಹಲ್ಲರ್ ಮಿಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಪ್ರಕಾಶ್ ಅವರ ಪತ್ನಿ ಯಶೋದ (48) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದಂಪತಿಗಳು,

ಗುರುವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದ ದಂಪತಿಗಳು

ಶುಕ್ರವಾರ ಬೆಳಗ್ಗೆ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳು ತನುಶ್ರೀ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ ರಾತ್ರಿವರೆಗೂ ಹಲವಾರು ಬಾರಿ ಕರೆ ಮಾಡಿ ಕರೆ ಸ್ವೀಕರಿಸದ ಕಾರಣ ಸಂಬಂಧಿಕರಿಗೆ ಫೋನ್ ಮೂಲಕ ಮನೆಯ ಬಳಿ ತೆರಳಿ ನೋಡುವಂತೆ ಕೋರಿದಾಗ ಸಂಬಂಧಿಕರು ಮನೆಯ ಬಳಿ ತೆರಳಿ ಕಿಟಕಿ ತೆರೆದು ನೋಡಿದಾಗ  ಅನುಮಾನ ರೀತಿಯಲ್ಲಿ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ, ತಕ್ಷಣ ಪೊಲೀಸರಿಗೆ ಕರೆ ಮಾಡಿ ಪೊಲೀಸರು ಬಾಗಿಲು ಮುರಿದು ಮನೆ ಒಳಗಡೆ ಪ್ರವೇಶಿಸಿ ಶವಗಳನ್ನು ಪಟ್ಟಣದ  ಶವಗಾರಕ್ಕೆ ಸಾಗಿಸಿದ್ದಾರೆ.


ಘಟನೆ ಸಂಭಂದ ಅನುಮಾನ ವ್ಯಕ್ತಪಡಿಸಿ ಮೃತ ದಂಪತಿ ಪುತ್ರಿ ತನುಶ್ರೀ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

Trending

error: Content is protected !!