Connect with us

Uncategorized

ಕಟ್ಟಡ ಕಲ್ಲುಗಣಿ ಗುತ್ತಿಗೆ ಮಂಜೂರಾತಿ ಶಾಸಕ‌ ಸ್ವರೂಪ್ ಪ್ರಕಾಶ್ ಪ್ರಶ್ನೆಗೆ 2024 ಮಾ.16 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ: ಸಚಿವ ಮಲ್ಲಿಕಾರ್ಜುನ್ ಹೇಳಿಕೆ

Published

on

ಬೆಳಗಾವಿ: ನದಿ ಮರಳಿನ ಕೊರತೆ,ಸರ್ಕಾರ ಹಾಗೂ ಸಾರ್ವಜನಿಕರ ಅಭಿವೃದ್ಧಿ ಕಾಮಗಾರಿ ಕುಂಠಿತಗೊಳ್ಳುವುದನ್ನು ತಡೆಗಟ್ಟಲು ನದಿ ಮರಳಿಗೆ ಪರ‍್ಯಾಯವಾಗಿ ಎಂ-ಸ್ಯಾಂಡ್ ತಯಾರಿಕೆ ಮತ್ತು ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಲ್ಲುಪುಡಿ ಮಾಡುವ ಘಟಕಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಸುಗಮ ಪೂರೈಕೆಗೆ ಅವಕಾಶ ಕಲ್ಪಿಸಲು ಹಾಗೂ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾದ ಕಟ್ಟಡ ಕಲ್ಲಿನ ಉತ್ಪನ್ನಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸಲು ಹರಾಜು ರಹಿತವಾಗಿ ಕಟ್ಟಡ ಕಲ್ಲುಗಣಿ ಗುತ್ತಿಗೆ ಮಂಜೂರಾತಿಗೆ ಅರ್ಜಿ ಸಲ್ಲಿಸಲು 2024 ಮಾರ್ಚ್ 16 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಸಾವಿರಾರು ಎಕರೆ ಸರ್ಕಾರಿ ಜಮೀನುಗಳಲ್ಲಿ ಎಂ-ಸ್ಯಾಂಡ್ ಕ್ರಷರ್ ಮಾಲೀಕರಿಗೆ ತಲಾ ೫೦ ಎಕರೆಗಳಂತೆ 31-ಝಡ್‌ಸಿ, sಚಿveಜ ಚಿಟಿಜ uಟಿsಚಿveಜ ಅಡಿಯಲ್ಲಿ ಮಂಜೂರು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಇದರಿಂದಾಗಿ ಮುಂದಿನ ದಿನಗಳಲ್ಲಿ ಯಾವ ಹಳ್ಳಿಯಲ್ಲೂ ಸರ್ಕಾರಿ ಜಮೀನು ಇಲ್ಲದಂತಾಗಲಿದೆ. ಎಂ-ಸ್ಯಾಂಡ್ ಕ್ರಷರ್ ಮಾಲೀಕರಿಗೆ ಮಾತ್ರ ಹೆಚ್ಚಿನ ಅನುಕೂಲ ಆಗುವುದರಿಂದ ಕೂಡಲೇ ಇದನ್ನು ರದ್ದುಪಡಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ ಎಂಬ ಹಾಸನ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ.
ಸರ್ಕಾರಿ ಗೋಮಾಳ ಮುಳುಗಡೆ ಜಮೀನು, ಬಂಜರು ಭೂಮಿ ಮತ್ತಿತರ ಸರ್ಕಾರಿ ಜಮೀನುಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಸೇರುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಸದರಿ ಜಮೀನುಗಳನ್ನು ಎಂ-ಸ್ಯಾಂಡ್ ಕ್ರಷರ್ ಮಾಲೀಕರುಗಳಿಗೆ ಮಂಜೂರು ಮಾಡುತ್ತಿರುವುದು ಸರಿಯೇ ಎಂಬ ಪ್ರಶ್ನೆಗೆ, ಅರಣ್ಯ ಇಲಾಖೆ ನಿರಾಪೇಕ್ಷಣಾ ಪತ್ರಗಳನ್ನು ಪಡೆದು ಗುತ್ತಿಗೆ ಮಂಜೂರಾತಿ ನೀಡಲಾಗುತ್ತಿದೆ ಎಂದು ಸಚಿವರ ತಿಳಿಸಿದ್ದಾರೆ.
ಸ್ಥೂಲ ಹಾಗೂ ಕಲ್ಲುಬಂಡೆಗಳಿಂದ ಆವೃತವಾಗಿರುವ ಹಾಗೂ ಜಾನುವಾರು ಮೇಯಲು ಯೋಗ್ಯವಲ್ಲದ ಸರ್ಕಾರಿ ಒಡೆತನ ಜಮೀನುಗಳಲ್ಲಿ ಕಲ್ಲುಗಣಿ ಗುತ್ತಿಗೆ ನಡೆಸಲು ಮಂಜೂರಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕಂದಾಯ ಮತ್ತು ಅರಣ್ಯ ಇಲಾಖೆ ಎನ್‌ಒಸಿ ಪಡೆದು ಕಲ್ಲುಗಣಿ ಗುತ್ತಿಗೆಗೆ ನಿಯಮಾನುಸಾರ ಮಂಜೂರಾತಿ ನೀಡಲಾಗುತ್ತಿದೆ. ಸರ್ಕಾರಿ ಮುಳುಗಡೆ ಜಮೀನುಗಳಲ್ಲಿ ಕಲ್ಲುಗಣಿ ಗುತ್ತಿಗೆಗಳನ್ನು ಮಂಜೂರಾತಿಗೆ ಪರಿಗಣಿಸುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Uncategorized

ಸಿಎನ್‌ಸಿಯಿಂದ ಸೆ.9 ನಾಪೋಕ್ಲು, ಸೆ.10ರಂದು ಚೇರಂಬಾಣೆಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ

Published

on

ಮಡಿಕೇರಿ : ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಸೆ.9 ನಾಪೋಕ್ಲು ಮತ್ತು ಸೆ.10ರಂದು ಚೇರಂಬಾಣೆಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಾಪೋಕ್ಲು ಮತ್ತು ಚೇರಂಬಾಣೆಯಲ್ಲಿ ಬೆಳಿಗ್ಗೆ 10.30 ಗಂಟೆಗೆ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಂಡಿಸಲಾಗುವುದು. ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಸರ್ವ ಕೊಡವರು ಪಾಲ್ಗೊಳ್ಳುವ ಮೂಲಕ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ವಿರುದ್ಧ ಸಿಎನ್‌ಸಿ ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
ಆದಿಮಸಂಜಾತ ಕೊಡವರ ಭೂಮಿಯ ಹಕ್ಕನ್ನು ರಕ್ಷಿಸಲು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಬೃಹತ್ ಮಾನವ ಸರಪಳಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೊಡವ ಲ್ಯಾಂಡ್ ಗೆ ಮಾರಕವಾಗಿರುವ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಫಿಯಾಗಳಂತಹ ಬಂಡವಾಳಶಾಹಿಗಳಿಗೆ ನೆರವಾಗಬಲ್ಲ ಕಾನೂನುಗಳನ್ನು ರೂಪಿಸಿ ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದ್ದಾರೆ.

Continue Reading

Hassan

ಮೊದಲನೇ ಹಂತದ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಸಿಎಂ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆ

Published

on

ಹಾಸನ

ಮೊದಲನೇ ಹಂತದ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ

ಸಿಎಂ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆ

ಮಧ್ಯಾಹ್ನ 12 ಗಂಟೆಗೆ ಸಕಲೇಶಪುರಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ

ಸಕಲೇಶಪುರ ತಾಲೂಕಿನ ದೊಡ್ಡನಾಗರದಲ್ಲಿ ಚಾಲನೆ

ದೊಡ್ಡನಾಗರದ ವಿತರಣಾ ತೊಟ್ಟಿ 3 ರಲ್ಲಿ ಚಾಲನೆ ನೀಡಲಿರೋ ಸಿದ್ದರಾಮಯ್ಯ

ನೀರೆತ್ತುವ ಪಂಪ್ ಹಾಗೂ ಮೋಟಾರ್ ಗಳಿಗೆ ಚಾಲನೆ

ನೀರನ್ನೆತ್ತುವ ಏಳು ವಿಯರ್ ಗಳಿಗೆ ಇದೇ ಸ್ಥಳದಲ್ಲಿ ಚಾಲನೆ

ಏಳು ಸಚಿವರಿಂದ ಏಳು ವಿಯರ್ ಗಳಿಗೆ ಚಾಲನೆ ನೀಡೋದಕ್ಕೆ ಸಿದ್ಧತೆ

ಬೆಳಗ್ಗೆಯಿಂದಲೂ ಸ್ಥಳದಲ್ಲಿ ಹೋಮ ಹವನ

ಇಡೀ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರೋ ಡಿಸಿಎಂ ಡಿಕೆ ಶಿವಕುಮಾರ್

ನಿನ್ನೆಯೇ ಸಕಲೇಶಪುರದಲ್ಲಿ ವಾಸ್ತವ್ಯ ಹೂಡಿರೋ ಡಿಕೆ ಶಿವಕುಮಾರ್

ಹೋಮಹವನದಲ್ಲಿ ಭಾಗಿಯಾಗಲಿರೋ ಡಿಸಿಎಂ

ನಿನ್ನೆ ಸಂಜೆಯೇ ಪೂಜೆಯಲ್ಲಿ ಭಾಗಿಯಾಗಿ ಸಂಕಲ್ಪವನ್ನ ಮಾಡಿರೋ ಡಿಕೆಶಿ

ಬಳಿಕ ದೊಡ್ಡನಾಗರದಿಂದ ಹೆಬ್ಬನಹಳ್ಳಿಗೆ ಬರಲಿರೋ ಸಿಎಂ, ಡಿಸಿಎಂ, ಸಚಿವರು

ಹೆಬ್ಬನಹಳ್ಳಿಯಲ್ಲಿ ಗಂಗೆಗೆ ಬಾಗಿನ ಅರ್ಪಣೆ

ಏಳು ವಿಯರ್ ಗಳ ಮೂಲಕ ಪಂಪ್‌ ಮಾಡಿದ್ದ ನೀರಿಗೆ ಬಾಗಿನ ಅರ್ಪಣೆ

ಹೆಬ್ಬನಹಳ್ಳಿಯ ವಿತರಣಾ ತೊಟ್ಟಿ 4 ರಲ್ಲಿ ಬಾಗಿನ ಅರ್ಪಣೆ

ಬಾಗಿನ ಅರ್ಪಣೆ ಬಳಿಕ ಪಕ್ಕದಲ್ಲಿಯೇ ಬೃಹತ್ ಬಹಿರಂಗ ಸಭೆ

ಸಭೆಯ ಮೂಲಕ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಮೊದಲನೇ ಹಂತದ ಕಾಮಗಾರಿಯ ಲೋಕಾರ್ಪಣೆ

ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿರುವ ಬಹಿರಂಗ ಸಭೆ

ಇದೇ ಜಾಗದಲ್ಲಿ ಸಿದ್ದಗೊಂಡಿರುವ ಬೃಹತ್ ವೇದಿಕೆ

ಸಭೆಯಲ್ಲಿ ಸಚಿವರಾದ ಕೆ.ಎನ್. ರಾಜಣ್ಣ, ಕೆ.ಜೆ.ಜಾರ್ಜ್, ಎನ್.ಎಸ್.ಬೋಸರಾಜ್ ಸೇರಿದಂತೆ ಹಲವರು ಭಾಗಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಸ್ಥಳಿಯ ಬಿಜೆಪಿ ಶಾಸಕ ಸಿಮೆಂಟ್ ಮಂಜು

ಉದ್ದೇಶಿತ ಕಾಮಗಾರಿ ಫಲಾನುಭವಿ ಜಿಲ್ಲೆಗಳ ಎಲ್ಲಾ ಶಾಸಕರು ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ

ಬೃಹತ್ ಸಭೆಗಾಗಿ ಅದ್ದೂರಿಯಾದ ವೇದಿಕೆ ಸಿದ್ದ ಮಾಡಿರೋ ಸರ್ಕಾರ

 

Continue Reading

Uncategorized

ಜಿಲ್ಲಾ ಕ್ರೀಡಾಂಗಣದ ಸ್ವಚ್ಛತೆಗೆ ಮುಂದಾದ ವಿವಿಧ ಸಂಘ-ಸಂಸ್ಥೆಗಳು

Published

on

ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಹಸಿರುಭೂಮಿ ಪ್ರತಿಷ್ಠಾನ ಮತ್ತು ಮುಂಜಾನೆಮಿತ್ರ ಹಾಸನ ಲಯನ್ಸ್ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಫ್ ಗೋಲ್ಡ್, ರೋಟರಿ ಮಿಡ್ ಟೌನ್, ಭಾರತೀಯ ವಿಜ್ಞಾನ ಜ್ಞಾನ ಸಮಿತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸೀನಿಯರ್ ಇಂಟರ್ ನ್ಯಾಷನಲ್ ಛೇಂಬರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಂಡು ಕೆಲ ಗಂಟೆಗಳ ಕಾಲ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತರರಿಗೆ ಜಾಗೃತಿ ಮೂಡಿಸಿ ಗಮನ ಸೆಳೆದರು.

ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಹಸಿರುಭೂಮಿ ಪ್ರತಿಷ್ಠಾನ ಮತ್ತು ಮುಂಜಾನೆಮಿತ್ರ ತಂಡ ಕರೆ ನೀಡಿದಂತೆ ವಿವಿಧ ಸಂಘ ಸಂಸ್ಥೆಗಳಾದ ಹಾಸನ ಲಯನ್ಸ್ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್, ರೋಟರಿ ಮಿಡ್ ಟೌನ್, ಭಾರತೀಯ ವಿಜ್ಞಾನ ಜ್ಞಾನ ಸಮಿತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸೀನಿಯರ್ ಇಂಟರ್ ನ್ಯಾಷನಲ್ ಛೇಂಬರ್ ಸೇರಿದಂತೆ ನಾನಾ ಸಂಘ ಸಂಸ್ಥೆಗಳು ಸೇರಿ ಸ್ವಚ್ಛತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಯಾವುದೇ ಸಂಘ ಸಂಸ್ಥೆಗಳು ಕರೆ ಕೊಟ್ಟರೂ ಮುಂದಿನ ದಿನಗಳಲ್ಲಿ ಎಲ್ಲಾರು ಈ ರೀತಿ ಸ್ಪಂದಿಸಬೇಕು ಎಂದರು. ಈ ಸ್ವಚ್ಛತೆ ಕಾರ್ಯಕ್ರಮವು ಯಶಸ್ವಿಯಾಗಿದ್ದು, ಪ್ರತಿನಿತ್ಯ ವಾಯು ವಿಹಾರ ಮಾಡುವವರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಲುಗಳು ಹಾಗೂ ತ್ಯಾಜ್ಯಗಳಿಂದ ತೊಂದರೆ ಆಗುತಿತ್ತು. ಇದನ್ನು ಮನಗಂಡ ವಿವಿಧ ಸಂಘ ಸಂಸ್ಥೆಗಳು ಇಂತಹ ಸ್ವಚ್ಛತೆಗೆ ಮುಂದಾಗಿ ಜಿಲ್ಲಾ ಕ್ರೀಡಾಂಗಣದ ಒಳಗೆ ಇದ್ದ ಕಲ್ಲು, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯವನ್ನು ತೆರವು ಮಾಡುವ ಕಾರ್ಯ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಕೂಡ ಇಂತಹ ಸ್ವಚ್ಛತೆ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಚ್.ಪಿ. ಮೋಹನ್ ಮಾತನಾಡಿ, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಸೇರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳಿಗ್ಗೆ ೬ ರಿಂದಲೇ ಜಿಲ್ಲಾ ಕ್ರೀಡಾಂಗಣದ ಸ್ವಚ್ಛತಾ ಮಾಡಿದ್ದಾರೆ. ಇನ್ನು ಮುಂದೆ ಕೂಡ ಈ ಸ್ವಚ್ಛತೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ನಮ್ಮ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೂಡ ಈ ಕಾರ್ಯಕ್ರಮಗಳಿಗೆ ಬಾಗಿಯಾಗುವುದಾಗಿ ಹೇಳಿದರು.

ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್ ಮಾಧ್ಯಮದೊಂದಿಗೆ ಮಾತನಾಡಿ, ಸರ್ವಪಲ್ಲಿ ರಾಧಕೃಷ್ಣ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತಿದ್ದು, ಎಲ್ಲಾರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇವೆ ಎಂದರು. ಕಳೆದ ವಾರದಲ್ಲೂ ಕೂಡ ಈ ಸ್ವಚ್ಛತೆ ಮಾಡಲಾಗಿದ್ದು, ಊರಿನಲ್ಲಿ ವಾರ್ಡ್ ಕೆಲಸ ಮಾಡಿದಂತೆ ಜಿಲ್ಲಾ ಕ್ರೀಡಾಂಗಣದ ಸ್ವಚ್ಛತೆಗೆ ಮುಂದಾಗಿದ್ದು, ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಂತಹ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದೇವೆ. ನಾವು ಸ್ವಚ್ಛತೆ ಮಾಡುವುದಕ್ಕಿಂತ ಜನರಲ್ಲಿ ಜಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ನೂರಕ್ಕೆ ನೂರರಷ್ಟು ನಾವೆ ಎಲ್ಲಾ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಜನರಲ್ಲಿ ಅರಿವು ಮೂಡಲಿ ಎಂದು ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಕಿವಿಮಾತು ಹೇಳಿದರು. ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಲ್ಲೆದಂರಲ್ಲಿ ಕಸ ಹಾಕಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಗಿರಿಜಾಂಬಿಕ, ಖಜಾಂಚಿ ಭವಾನಿ, ಹಿರಿಯರಾದ ಶಿವಶಂಕರಪ್ಪ, ಮುಂಜಾನೆ ಮಿತ್ರ ತಂಡದ ರಾಮೇಗೌಡ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್, ಖಜಾಂಚಿ ಚಿಲ್ಕೂರ್ ನಾಗರಾಜು, ಕಾರ್ಯದರ್ಶಿ ಬಲ್ಲೇನಹಳ್ಳಿ ರವಿಕುಮಾರ್, ಹೆಚ್.ಪಿ. ಅಶೋಕ್ ಕುಮಾರ್, ಬಿ.ಎಸ್. ಸೋಮಶೇಖರ್, ಹೆಚ್.ಕೆ. ನಾಗೇಶ್, ಹೆಚ್.ಆರ್. ಚಂದ್ರೇಗೌಡ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಬೀರ್ ಅಹಮದ್, ಇನ್ನರ್ ವೀಲ್ ಕ್ಲಬ್ ಆಫ್ ಗೋಲ್ಡ್ ಅಧ್ಯಕ್ಷೆ ಡಾ. ತನುಜಾ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!