Health
ಒಂದೇ ರಾತ್ರಿ 9 ಹೆರಿಗೆ ಮಾಡಿಸುವ ಮೂಲಕ ಇತಿಹಾಸ ನಿರ್ಮಿಸಿದ ವೈದ್ಯೆ ಡಾ.ಭವಾನಿ ಗೆ ತವರೂರು ಸಾಲಿಗ್ರಾಮದಲ್ಲಿ ಹರ್ಷ ಸಂಭ್ರಮ
ಸಾಲಿಗ್ರಾಮ :ಒಂದೇ ರಾತ್ರಿಯಲ್ಲಿಯೇ ಒಂದಲ್ಲ- ಎರಡಲ್ಲ ಬರೋಬ್ಬರಿ 9 ಹೆರಿಗೆ ಮಾಡಿಸುವ ಮೂಲಕ ವೈದ್ಯರೊಬ್ಬರು ಅವಳಿ ತಾಲೂಕಿನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
. ಕೆ ಆರ್.ನಗರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಡಾ.ಭವಾನಿ ಅವರೇ 9 ಹೆರಿಗೆ ಮಾಡಿಸಿ ವೈದ್ಯ ವೃತ್ತಿಯಲ್ಲಿ ಕೀರ್ತಿಗೆ ಪಾತ್ರರಾಗಿದ್ದಾರೆ.
ಇವರ ತವರೂರು ಸಾಲಿಗ್ರಾಮ, ಈ ಭಾಗದ ಸುತ್ತ ಮುತ್ತಲಿನ ಜನತೆಯಲ್ಲಿ ಹರ್ಷ ಉಂಟಾಗಿದೆ. ಪ್ರತಿ ಮನೆಯಲ್ಲೂ ಮನೆ ಮಾತಾಗಿ ಸಂತೋಷ ಪಡುತ್ತಿದ್ದಾರೆ. ಇಂತಹ ಮಹಿಳೆ ನಮ್ಮ ಗ್ರಾಮದವರು ಎಂದು ಹೆಮ್ಮೆಯ ವಿಷಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್ ಸಂತಸದಿಂದ ಹೇಳಿದರು.
ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಆಸ್ವತ್ರೆ ಯಲ್ಲಿ ದಾಖಲಾಗಿದ್ದ ಸುಮಾರು 9 ಮಂದಿಗೆ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ ತಮ್ಮ ವೃತ್ತಿಪರವನ್ನು ಮೆರೆದಿದ್ದಾರೆ.
ಅದರಲ್ಲು ಶಸ್ತ್ರಚಿಕಿತ್ಸೆಯ ಮೂಲಕ 9 ಮಂದಿ ಮಹಿಳೆಯರಿಗೆ ಹೆರಿಗೆ ಮಾಡಿಸಿರುವುದು ಒಂದು ವಿಶೇಷವಾಗಿದ್ದರೆ , ಇದರಲ್ಲಿ 3 ಗಂಡು ಮತ್ತು 6 ಹೆಣ್ಣು ಮಕ್ಕಳು ಜನ್ಮ ತಾಳಿವೆ.
ಡಾ.ಭವಾನಿ ಅವರು ಸಾಲಿಗ್ರಾಮದ ಎಸ್.ಕೆ ಯೋಗಣ್ಣ ಅವರ ಪುತ್ರಿ ಆಗಿರುವ ಇವರು ಈ ಆಸ್ವತ್ರೆಯಲ್ಲಿ 7 ವರ್ಷಗಳಿಂದ ಪ್ರಸುತಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಇವರು ಕೆ.ಆರ್.ನಗರ ಕ್ಷೇತ್ರದಲ್ಲದೇ ಇಲ್ಲಿಗೆ ಬರುವ ಹುಣಸೂರು,ಪಿರಿಯಾಪಟ್ಟಣ, ಹೊಳೆನರಸೀಪುರ, ಕೆ.ಆರ್.ಪೇಟೆ, ಮೈಸೂರು ತಾಲೂಕುಗಳ ಗರ್ಭಿಣಿ ಮಹಿಳೆಯರ ಆಪತ್ಬಾಂಧವರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾತ್ರಿವೇಳೆಯಲ್ಲಿ ಸಿಬ್ಬಂದಿಗಳ ಕೊರತೆಯ ನಡುವೆಯು ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸುವುದು ಸವಾಲಿನ ಕೆಲಸ ಅದರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ ತೃಪ್ತಿ ನನಗೆ ಇದೆ ಎಂದು ಹೇಳಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಆರೋಗ್ಯಧಿಕಾರಿ ನಟರಾಜು ಅವರು, ಡಾ.ಭವಾನಿ ಅವರನ್ನು ಅಭಿನಂದಿಸಿದ ಅವರು ಭವಾನಿ ಅವರು ಮುಂದಿನ ದಿನಗಳಲ್ಲಿ ತಮ್ಮ ಕಾರ್ಯದಕ್ಷತೆಯಿಂದ ಈ ಆಸ್ಪತ್ರೆಗೆ ಇನ್ನಷ್ಟು ಹೆಸರು ಬರಲಿ ಇದಕ್ಕೆ ನನ್ನ ಸಹಕಾರ ಇರಲಿದೆ ಎಂದು ಶುಭ ಹಾರೈಸಿದರು
ಈ ಹಿಂದೆ ಶಾಸಕರಾಗಿದ್ಧ ಸಾ.ರಾ.ಮಹೇಶ್ ಅವರು ಈ ಆಸ್ವತ್ರೆಯನ್ನು ಮಂಜೂರು ಮಾಡಿಸಿದ್ದು, ಉದ್ಘಾಟನೆ ಗೊಂಡ ನಂತರ ಸಿಬ್ಬಂದಿಗಳ ಕೊರತೆಯ ನಡುವೆಯು ಉತ್ತಮ ಸೇವೆಯಿಂದ ಈ ಆಸ್ವತ್ರೆಯು ರಾಜ್ಯದಲ್ಲಿಯೇ ನಂ -1ಅತ್ಯುತ್ತಮ ಆಸ್ವತ್ರೆ ಎಂದು ಆರೋಗ್ಯ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹೆಸರು ಪಡೆದಿದೆ.
ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
Hassan
ತಾಲೂಕಿನಾದ್ಯಂತ ಈವರೆಗೂ 8 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ
ಆಲೂರು: ತಾಲೂಕಿನಾದ್ಯಂತ ಈವರೆಗೂ 8 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಸಾರ್ವಜನಿಕರು ಬಹಳಷ್ಟು ಎಚ್ಚರ ವಹಿಸುವುದು ಅಗತ್ಯವಾಗಿದ್ದು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಕೆಲವೊಂದು ಉಪಕ್ರಮಗಳನ್ನು ನೀಡಿದೆ. ಇವುಗಳನ್ನು ಪಾಲಿಸಿದರೆ ಡೆಂಗ್ಯೂವನ್ನು ತಡೆಗಟ್ಟಲು ಸಾಧ್ಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತೀಮಾ ಹೇಳಿದರು.
\
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ಜ್ವರ ಡೆಂಗ್ಯೂ ವೈರಸ್‌ನಿಂದ ಉಂಟಾಗುತ್ತದೆ. ಈಡೀಸ್ ಈಜಿಪ್ಟ್ ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಹಗಲಿನಲ್ಲಿ ಕಚ್ಚುವ ಈ ಸೊಳ್ಳೆಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ
ಕಂಡುಬರುತ್ತದೆ. ಡೆಂಗ್ಯೂ ಜ್ವರ, ಡೆಂಗ್ಯೂ ರಕ್ತಸ್ರಾವ ಜ್ವರ, ಡೆಂಗ್ಯೂ ಶಾಕ್ ಸಿಂಡೋಮ್ ಇದರ ಮೂರು ವಿಧಗಳಾಗಿವೆ ಸ್ವಲ್ಪ ಕಾಣಿಸಿದಾಗಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದ ಅವರು, ಸಾರ್ವಜನಿಕರು ತಪ್ಪದೇ ತಮ್ಮ ಮನೆಯೊಳಗೆ ಮತ್ತು ಮೇಲ್ಬಾವಣೆಯ ನೀರಿನ ತೊಟ್ಟಿಗಳನ್ನ ತಪ್ಪದೆ ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ಸ್ವಚ್ಛ ಗೊಳಿಸಿ ನಂತರ ಭರ್ತಿ ಮಾಡಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು ಎಂದರು.
ಮನೆಯ ಒಳಗೆ ಹಾಗೂ ಹೊರಭಾಗದಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಒಡೆದ ಬಾಟಲಿ, ಟಿನ್, ಟೈರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಮೈ ತುಂಬಾ ಬಟ್ಟೆ ಧರಿಸಬೇಕು. ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.
Health
ಬೈಕ್ ಅಪಘಾತದಲ್ಲಿ ಶಿಕ್ಷಕ ಅಂಕಪುರ ಕೃಷ್ಣೇಗೌಡ ನಿಧನ, ಸಂತಾಪ
ಹಾಸನ : ನಗರದ ಚನ್ನಪಟ್ಟಣ ನಿವಾಸಿ ಶಿಕ್ಷಕ ಕೃಷ್ಣೇಗೌಡ ಅವರು ಅಂಕಪುರದಿಂದ ಹಾಸನಕ್ಕೆ ಬುಲೆಟ್ ಬೈಕಿನಲ್ಲಿ ಬರುವಾಗ ಹೊಳೆನರಸೀಪುರ ರಸ್ತೆಯ ಚನ್ನಪಟ್ಟಣ ಬಳಿ ಹಾಸನ ಹಾಲು ಒಕ್ಕೂಟದ ಪಶು ಆಹಾರ ಘಟಕದ ಹತ್ತಿರ ಶನಿವಾರ ಸಂಜೆ ಲಾರಿಗೆ ಡಿಕ್ಕಿಯಾಗಿ ಅಪಘಾತದಲ್ಲಿ ನಿಧನರಾದರು. ಅವರಿಗೆ ೫೭ ವರ್ಷ ವಯಸ್ಸಾಗಿತ್ತು. ಇವರು ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚನ್ನಪಟ್ಟಣ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಪತ್ನಿ ಜಯಲಕ್ಷ್ಮಿ ರವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಾಯ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಪತ್ನಿ, ಒಬ್ಬ ಮಗ, ಮಗಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಅಪಘಾತ ನಂತರ ನಗರದ ಮಂಗಳ ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು ಪರೀಕ್ಷಿಸಿ ಅಪಘಾತ ನಡೆದ ಸ್ಥಳದಲ್ಲೇ ನಿಧನರಾಗಿದ್ದಾರೆ ಎಂದು ತಿಳಿಸಿದ ನಂತರ ಶ್ರೀ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಇಡಲಾಯಿತು. ಹೋಗಿ ಇಡಲಾಗಿದೆ. ಬೆಳಗ್ಗೆ ಮರಣೋತ್ತರ ಪರೀಕ್ಷೆ ನಂತರ ಪಾರ್ಥಿವ ಶರೀರವನ್ನು ಚನ್ನಪಟ್ಟಣದ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಭಾನವಾರ ಬೆಳಿಗ್ಗೆ ೧೧ ಗಂಟೆಗೆ ಇಡಲಾಗಿ ೧೨ ಗಂಟೆ ನಂತರ ಅವರ ಹುಟ್ಟೂರಾದ ಅಂಕಪುರದಲ್ಲಿ ಸಂಜೆಯ ವೇಳೆಗೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇವರ ನಿಧನಕ್ಕೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ. ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷರಾದ ರವಿನಾಕಲಗೂಡು, ಕಲ್ಲಹಳ್ಳಿ ಹರೀಶ, ಕತ್ತಿಮಲ್ಲೇನಹಳ್ಳಿ ಪರಮೇಶ, ಹರಳಹಳ್ಳಿ ರಂಗಸ್ವಾಮಿ, ಕಸಾಪ ನಿಕಟಪೂರ್ವ ಆಲೂರು ತಾಲ್ಲೂಕು ಅಧ್ಯಕ್ಷರಾದ ಗಂಗರ ಶ್ರೀಕಾಂತ, ನಂದಕುಮಾರ.ಪಿ, ಸೋಮನಾಯಕ, ದಿಬ್ಬೂರು ರಮೇಶ ಮತ್ತು ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.
Health
ಶುಗರ್ ರೋಗಿಗಳಿಗೆ ಗುಡ್ ನ್ಯೂಸ್! ಇದನ್ನು ಟ್ರೈ ಮಾಡಿ, ಬದಲಾವಣೆ ಗ್ಯಾರಂಟಿ!
ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಬಾಯಿಯನ್ನು ಸ್ವಚ್ಛವಾಗಿಟ್ಟಷ್ಟೂ ನಿಮ್ಮ ವಸಡುಗಳು ಆರೋಗ್ಯಕರವಾಗಿರುತ್ತವೆ. ಬಾಯಿಯ ದುರ್ವಾಸನೆಯ ಸಮಸ್ಯೆಗಳು ದೂರವಾಗುವುದಿಲ್ಲ. ಟೈಪ್ 2 ಡಯಾಬಿಟಿಸ್ ಸೇರಿದಂತೆ ವಿವಿಧ ರೋಗಗಳನ್ನು ಸಹ ಸುಧಾರಿತ ಮೌಖಿಕ ನೈರ್ಮಲ್ಯದಿಂದ ನಿಯಂತ್ರಿಸಬಹುದು. ಒಸಾಕಾ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚಿನ ಅಧ್ಯಯನದಲ್ಲಿ ಮತ್ತೊಮ್ಮೆ ಈ ಅಂಶವನ್ನು ಎತ್ತಿ ತೋರಿಸಿದ್ದಾರೆ. ಆಂಟಿಸೆಪ್ಟಿಕ್ ಮೌತ್ ವಾಶ್ ಬಳಸುವುದರಿಂದ ಮಧುಮೇಹಿಗಳ ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಈ ಮೌತ್‌ವಾಶ್ ಆ ರೋಗಿಗಳಲ್ಲಿ ಪಿರಿಯಾಂಟೈಟಿಸ್‌ಗೆ ಕಾರಣವಾಗುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅಧ್ಯಯನ ಸಂಶೋಧಕರು ಕಂಡುಕೊಂಡಿದ್ದಾರೆ.
ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ವಸಡು ಕಾಯಿಲೆಯಂತಹ ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಆಲ್ಝೈಮರ್ನ ಕಾಯಿಲೆ ಮತ್ತು ಟೈಪ್ 2 ಮಧುಮೇಹದಂತಹ ಗಂಭೀರ ಆರೋಗ್ಯ ಪರಿಸ್ಥಿತಿಗಳ ನಡುವಿನ ಸಂಬಂಧವನ್ನು ತೋರಿಸಿದೆ. ಸಯಾ ಮತಯೋಶಿ ನೇತೃತ್ವದ ಸಂಶೋಧನಾ ತಂಡವು ಕ್ಲೋರ್‌ಹೆಕ್ಸಿಡೈನ್ ಗ್ಲುಕೋನೇಟ್ ಅನ್ನು ಹೊಂದಿರುವ ಆಂಟಿಸೆಪ್ಟಿಕ್ ಮೌತ್‌ವಾಶ್ ಮೂರು ನಿರ್ದಿಷ್ಟ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತನಿಖೆ ಮಾಡಿದೆ, ಇದು ಪಿರಿಯಾಂಟೈಟಿಸ್ ಅಥವಾ ಗಮ್ ಉರಿಯೂತವನ್ನು ಉಂಟುಮಾಡುತ್ತದೆ.
ಆರು ತಿಂಗಳ ಅಧ್ಯಯನದಲ್ಲಿ ಭಾಗವಹಿಸುವವರು ಮೊದಲು ನೀರಿನಿಂದ ತೊಳೆಯುತ್ತಾರೆ ಮತ್ತು ನಂತರ ನಂಜುನಿರೋಧಕ ಮೌತ್ವಾಶ್ಗೆ ಬದಲಾಯಿಸಿದರು. ಆದರೆ ದಿನಕ್ಕೆರಡು ಬಾರಿ ಮೌತ್ ವಾಶ್ ಬಳಸುವವರಲ್ಲಿ ಆ ಮೂರು ಬ್ಯಾಕ್ಟೀರಿಯಾಗಳು ಕಡಿಮೆಯಾಗಿವೆ. ಇದಕ್ಕೆ ವಿರುದ್ಧವಾಗಿ, ನೀರಿನಿಂದ ತೊಳೆಯುವುದು ಬ್ಯಾಕ್ಟೀರಿಯಾದ ಮಟ್ಟಗಳು ಅಥವಾ HbA1c ಮಟ್ಟಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ನೀರಿನೊಂದಿಗೆ ಗಾರ್ಗ್ಲಿಂಗ್ ಮಾಡುವುದರಿಂದ ಬ್ಯಾಕ್ಟೀರಿಯಾ ಅಥವಾ ಎಚ್‌ಬಿಎ1ಸಿ ಮಟ್ಟಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ದಿನಕ್ಕೆ ಎರಡು ಬಾರಿ ಮೌತ್‌ವಾಶ್ ಬಳಸಿದ ನಂತರ ಬ್ಯಾಕ್ಟೀರಿಯಾ ಕಡಿಮೆಯಾಗಿದೆ ಎಂದು ಸಂಶೋಧನಾ ತಂಡದ ಸದಸ್ಯ ಕಝುಹಿಕೊ ನಕಾನೊ ಹೇಳಿದ್ದಾರೆ.
ಮೌತ್‌ವಾಶ್‌ನ ಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ ಎಂದು ಅಧ್ಯಯನವು ಕಂಡುಹಿಡಿದಿದೆ. ವಯಸ್ಸಾದ ರೋಗಿಗಳಿಗೆ ಹೋಲಿಸಿದರೆ ಕಿರಿಯ ರೋಗಿಗಳಲ್ಲಿ ಬ್ಯಾಕ್ಟೀರಿಯಾದ ಕಡಿತವು ಹೆಚ್ಚಾಗಿರುತ್ತದೆ. ರಕ್ತದ ಸಕ್ಕರೆ ನಿಯಂತ್ರಣದಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ. ಒಟ್ಟು HbA1c ಅಥವಾ ಸರಾಸರಿ ರಕ್ತದ ಸಕ್ಕರೆಯ ಮಟ್ಟದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲವಾದರೂ, ಭವಿಷ್ಯದ ಕ್ಲಿನಿಕಲ್ ಚಿಕಿತ್ಸೆಗಳಲ್ಲಿ ವೈಯಕ್ತಿಕಗೊಳಿಸಿದ ಪ್ರಯೋಜನಗಳಿಗಾಗಿ ಈ ಮೌತ್‌ವಾಶ್ ಅನ್ನು ಬಳಸಬಹುದು.
ಈ ಸಂಶೋಧನಾ ಆವಿಷ್ಕಾರಗಳು ದೂರದ ತಲುಪುತ್ತವೆ ಮತ್ತು ಮಧುಮೇಹ ಆರೈಕೆಯನ್ನು ಮೀರಿ ವಿಸ್ತರಿಸುತ್ತವೆ. ಇವು ಆರೋಗ್ಯ ರಕ್ಷಣೆ ಮತ್ತು ಅದರಾಚೆಗಿನ ವಿವಿಧ ಅಂಶಗಳಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಕಳಪೆ ಮೌಖಿಕ ಆರೋಗ್ಯವು ಬುದ್ಧಿಮಾಂದ್ಯತೆ, ಹೃದ್ರೋಗ ಮತ್ತು ಉಸಿರಾಟದ ಸೋಂಕುಗಳು ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳ ಅಪಾಯವನ್ನು ಉಂಟುಮಾಡಬಹುದು. ಆಂಟಿಸೆಪ್ಟಿಕ್ ಮೌತ್‌ವಾಶ್‌ನೊಂದಿಗೆ ನಿಯಮಿತವಾಗಿ ಗಾರ್ಗ್ಲಿಂಗ್ ಮಾಡುವುದರಿಂದ ವ್ಯಾಪಕವಾದ ಆರೋಗ್ಯ ಪ್ರಯೋಜನಗಳನ್ನು ಒದಗಿಸಬಹುದು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.