Mysore
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ – ಕ್ಷೇತ್ರ ಶಿಕ್ಷಣಾಧಿಕಾರಿ ಎ.ಟಿ ಶಿವಲಿಂಗಯ್ಯ ಕರೆ
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ತಯಾರಿ ಕಾರ್ಯಾಗಾರವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಈಗಾಗಲೇ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಸಮಸ್ಯೆ ಬಗೆಹರಿಸಲು ನಾನು ಮುಂದಾಗಿದ್ದೇನೆ. ಮುಂಬರುವ ದಿನಗಳಲ್ಲಿ ಪರೀಕ್ಷೆ ಇರುವುದರಿಂದ ಮನೆಯಲ್ಲಿ ನಿರಂತರವಾಗಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ವರ್ಷದ ಪ್ರಾರಂಭದಿಂದಲೇ ಅಭ್ಯಾಸ ಮಾಡಿದ್ರೆ ಭಯ ಪಡುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು. ಬಿ. ಪ್ಲಸ್ ನಲ್ಲಿ ಇರುವ ವಿದ್ಯಾರ್ಥಿಗಳು ಎ ಮತ್ತು ಎ ಪ್ಲಸ್ ಗೆ ಹೋಗಬೇಕು. ತಮ್ಮ ಶಾಲೆಗಳಿಗೆ ಉತ್ತಮ ಫಲಿತಾಂಶ ನೀಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಸಾಧ್ಯವಾದಷ್ಟು ಶೇ. 95 ರಷ್ಟು ಫಲಿತಾಂಶ ನೀಡಬೇಕು. ಗ್ರಾಮಾಂತರ ಪ್ರದೇಶದ ಮಕ್ಕಳು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಮಹದೇವಮೂರ್ತಿ, ಕಂದಾಯ ಇಲಾಖೆಯ ನಿರೀಕ್ಷಕರಾದ ಡಿಸೋಜಾ, ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ತಾಲ್ಲೂಕು ಸಂಚಾಲಕ ಶಂಕರಪುರ ಸುರೇಶ್, ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ನೋಡಲ್ ಅಧಿಕಾರಿ ರಮೇಶ್, ಉಪ ಪ್ರಾಂಶುಪಾಲರಾದ ಆಸಿನ್ ತಾಜ್, ಸಹ ಶಿಕ್ಷಕ ರಘು ಸೇರಿದಂತೆ ಹಲವರು ಭಾಗವಹಿಸಿದ್ದರು.
ನಂಜನಗೂಡು ಮಹದೇವಸ್ವಾಮಿ ಪಟೇಲ್
Mysore
ನಮ್ಮ ಸಂಸ್ಕೃತಿ, ಆಚರಣೆಗಳೆಲ್ಲ ಮನೆಗೆ ಸೀಮಿತವಾಗಲಿ, ಸರ್ಕಾರಕ್ಕೆ ಬ್ರಾಹ್ಮಣ ಎನ್ನುವ ಮಾಹಿತಿ ಕೊಟ್ಟರೆ ಸಾಕು: ಎಚ್.ವಿ.ರಾಜೀವ್ ಸಲಹೆ
ಮೈಸೂರು: ನಮ್ಮ ಆಚರಣೆ, ಸಂಸ್ಕೃತಿಗಳೆಲ್ಲವೂ ನಮ್ಮ ಮನೆಗಳಿಗೆ ಸೀಮಿತವಾಗಲಿ. ಸರ್ಕಾರಕ್ಕೆ ನಮ್ಮ ಉಪಪಂಗಡಗಳ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಎಚ್.ವಿ.ರಾಜೀವ್ ಸಲಹೆ ನೀಡಿದರು.
ನಗರದ ಚಾಮುಂಡಿಪುರಂನಲ್ಲಿರುವ ಶ್ರೀ ಶಾರದಾ ನಿಕೇತನ ವಿದ್ಯಾರ್ಥಿ ನಿಲಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಸೆ.22 ರಿಂದ ಆರಂಭವಾಗಿಲಿರುವ ಜಾತಿ ಜನಗಣತಿಯಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಯೊಬ್ಬರು ಜವಾಬ್ದಾರಿಯಿಂದ ಭಾಗವಹಿಸಬೇಕೆಂದು ಮನವಿ ಮಾಡಿದರು.
ಮೀಸಲಾತಿ ವಿಷಯದಲ್ಲಿ ಜಾತಿ ಗಣತಿ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಪ್ರತಿಯೊಬ್ಬರೂ ಈ ಜಾತಿ ಗಣತಿಯಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಗೊಂದಲಕ್ಕೆ ಒಳಗಾಗದೆ ನೈಜ ಮಾಹಿತಿಯನ್ನು ನೀಡಬೇಕು. ಹಿಂದೂ ಬ್ರಾಹ್ಮಣ ಎಂದಷ್ಟೇ ನಮೋದಿಸಬೇಕು. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.
ಹಲವಾರು ಸಮೀಕ್ಷೆ ಬಗೆಗಿದ್ದ ಗೊಂದಲಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಗೊತ್ತದ ಪರಿಹರಿಸುವ ಕೆಲಸ ಮಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಹಿಂದು ಬ್ರಾಹ್ಮಣ ಎಂದು ವಿಪ್ರ ಸಮುದಾಯದ ಎಲ್ಲಾ ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಸಮುದಾಯದವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಬ್ರಾಹ್ಮಣ ಸಮುದಾಯದಲ್ಲೂ ಬಡವರಿದ್ದಾರೆ. ಅವರಿಗೆ ಸರ್ಕಾರದಿಂದ ಸೂಕ್ತ ಮೀಸಲು ಜೊತೆಗೆ ಸೌಲಭ್ಯ ಸಿಗಬೇಕಾದರೆ ಪ್ರತಿಯೊಬ್ಬರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನಂ. ಶ್ರೀಕಂಠಕುಮಾರ್, ಪಿಪಿಟಿ ಮೂಲಕ ಸಮೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರಲಿವೆ ಅದಕ್ಕೆ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಬ್ರಾಹ್ಮಣ ಸಮುದಾಯದ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.
ಮಹಾಸಭಾ ರಾಜ್ಯ ಉಪಾಧ್ಯಕ್ಷ ವಿಶ್ವನಾಥಯ್ಯ, ಜಿಲ್ಲಾ ಪ್ರತಿನಿಧಿ ಡಾ.ಲಕ್ಷ್ಮಿ ದೇವಿ ಮುಂತಾದವರಿದ್ದರು.
Mysore
ಜಾತಿ ಗಣತಿ ಸಮೀಕ್ಷೆ: ಧರ್ಮದ ಕಲಂನಲ್ಲಿ ಭೌದ್ದ ಧರ್ಮ ನಮೂದಿಸುವಂತೆ ಮನವಿ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಜಾತಿ ಗಣತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದವರು, ಜಾತಿ ಸಮೀಕ್ಷೆ ಧರ್ಮದ ಕಾಲಂನಲ್ಲಿ ಭೌದ್ದ ಧರ್ಮ ಎಂದು ಬರೆಸುವಂತೆ ತಥಾಗತ ಬುದ್ದ ವಿಹಾರ ಹಾಗೂ ದಲಿತ ಸಂಘಟನೆ ಒಕ್ಕೂಟ ಪದಾಧಿಕಾರಿಗಳು ಕರೆ ಕೊಟ್ಟರು.
ಇಂದು ನಗರದ ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಡಿಎಸ್‌ಎಸ್ ಹಾಗೂ , ತತಾಗತ ಬುದ್ದ ವಿಹಾರದ ಮುಖಂಡರು ಮಾತನಾಡಿ, ಸರ್ಕಾರದ ಜಾತಿ ಗಣತಿ ಸಮೀಕ್ಷೆ ಸ್ವಾಗತಾರ್ಹ. ಪರಿಶಿಷ್ಟ ಜಾತಿ ಬಲಗೈ ಸಮುದಾಯ ಶತ ಶತ ಮಾನಗಳಿಂದ ಶೋಷಣೆಗೆ ಒಳ ಪಟ್ಟಿದೆ. ಇಲ್ಲಿನ ಮೂಲ ನಿವಾಸಿಗಳು ಹಾಗೂ ಶತಮಾನಗಳಿಂದ ಶೋಷಿತರಾದ ನಾವು, ದಲಿತ ವರ್ಗದ 101 ಜಾತಿಗಳು ಒಳಗೊಂಡ ಮೀಸಲಾತಿ ವಿಷಯದ ಜಾತಿ ಸಮೀಕ್ಷೆಯಲ್ಲಿ, ಹತ್ತಾರು ಗೊಂದಲಗಳಿಂದ ಸ್ಪಷ್ಟ ಮತ್ತು ನಿಖರ ಮಾಹಿತಿ ಗುರುತಿಸುವಿಕೆಯಲ್ಲಿ ಸೋತಿದ್ದೇವೆ ಎಂದರು.

ಅದರಲ್ಲೂ ಹೊಲೆಯ ಸಂಬಂಧಿತ ಜಾತಿಗಳು ತೀರ ಅನ್ಯಾಯಕ್ಕೋಳಗಾಗಿದೆ. ಹೀಗಾಗಿ ಈ ಬಾರಿಯ ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸುವಂತೆ ಕರೆ ಕೊಟ್ಟರು.
ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಬೌದ್ದ ಅನುಯಾಯಿಗಳಾಗಿ, ಭೌದ್ದ ಧರ್ಮವನ್ನು ಸ್ವೀಕರಿಸಿದ್ದರು. ಅವರ ಅನುಯಾಯಿಗಳಾದ ನಾವು ಜಾತಿ ಗಣತಿ ಸಮೀಕ್ಷೆಯಲ್ಲಿ ಭೌದ್ದ ಧರ್ಮ ಅಂತ ಜಾತಿ ಕಾಲಮ್ ನಲ್ಲಿ ಹೊಲೆಯ ಎಂದು ನಮೂದಿಸಿ, ಹಿಂದೂ ಧರ್ಮದಲ್ಲಿರುವ ಜಾತಿ ಎಂಬ ಅಸಮಾನತೆಯನ್ನು ದೂರಸರಿಸುವಂತೆ ಮನವಿ ಮಾಡಿದರು.
ತಥಾಗತ ಬುದ್ದ ವಿಹಾರದ ಅಧ್ಯಕ್ಷ ಸಿ ಆರ್ ಮಹದೇವ, ಉಫಾಧ್ಯಕ್ಷ ಕೂಡ್ಲಪುರ ವಾಸುದೇವಮೂರ್ತಿ, ಕಾರ್ಯದರ್ಶಿ ಸಿ.ಎಂ. ಅಂಕಯ್ಯ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ವಿಜಯಕುಮಾರ್,ತಾಲೂಕು ಸಂಚಾಲಕ ಶಂಕರಪುರ ಸುರೇಶ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮಲ್ಲೇಶ್, ಕಾರ್ಯ ಬಸವಣ್ಣ, ಸೇರಿದಂತೆ ಇನ್ನಿತರರು ಇದ್ದರು.
Mysore
ಜ್ಞಾನ, ಕೌಶಲ್ಯ ಇದ್ದವರಿಗಷ್ಟೇ ಅವಕಾಶ: ವಿಟಿಯು ಕುಲಪತಿ ವಿದ್ಯಾಶಂಕರ್
ಮೈಸೂರು: ಪಾಠ, ಪುಸ್ತಕಗಳ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳು ಹೆಚ್ಚುವರಿ ಕೌಶಲ್ಯ ಮತ್ತು ಅನುಭವಗಳನ್ನು ಸಂಪಾದಿಸಿದಾಗ ಮಾತ್ರ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ. ಪದವಿ ಮುಗಿದ ತಕ್ಷಣ ಕೆಲಸ ಸಿಗುವುದಿಲ್ಲ, ಅದರಿಗಾಗಿ ತರಗತಿಗಳ ಹೊರಗೂ ಕಲಿಯುವ ಮನೋಭಾವ ಇರಬೇಕು” ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಕುಲಪತಿ ಎಸ್. ವಿದ್ಯಾಶಂಕರ್ ಹೇಳಿದರು.
ಮೈಸೂರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ದಶಮಾನೋತ್ಸವ ಹಾಗೂ ಮೊದಲನೇ ವರ್ಷದ ಬಿಇ ವಿದ್ಯಾರ್ಥಿಗಳ ಪ್ರವೇಶೋತ್ಸವದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನೇರ ಅನುಭವ ಪಡೆಯಲು ಬೆಂಗಳೂರಿನ ನಮ್ಮ ಕ್ಯಾಂಪಸ್‌ನಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಅದಕ್ಕೆ ಹೊಂದಿಕೊಳ್ಳದೇ ಇದ್ದರೆ ಉದ್ಯೋಗ ಕ್ಷೇತ್ರದಲ್ಲಿ ಉಳಿಯುವುದು ಕಷ್ಟ. ಮರುಕೌಶಲ್ಯ, ಜಾಗತಿಕ ಸ್ಪರ್ಧಾತ್ಮಕತೆ ಹಾಗೂ ಹೊಸ ಆವಿಷ್ಕಾರಗಳ ಅರಿವು ಅತ್ಯಂತ ಮುಖ್ಯ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯದ ಇತ್ತೀಚಿನ ಸಾಧನೆಗಳನ್ನು ಹಂಚಿಕೊಂಡ ಅವರು, 2024–25ರಲ್ಲಿ ವಿಟಿಯು 11 ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು, ಇದರಲ್ಲಿ ಇಕಾನಾಮಿಕ್ ಟೈಮ್ಸ್ ಎಡ್ಯೂಟೆಕ್ ಹಾಗೂ ಐಐಟಿ ಬೊಂಬೆಯಿಂದ ಬಂದ ಗೌರವಗಳು ಸೇರಿವೆ ಎಂದರು. ಅಲ್ಲದೆ, ಸಿಮೆನ್ಸ್ ಕಂಪನಿಯೊಂದಿಗೆ ಕೈಗಾರಿಕಾ ಸಹಕಾರ ಬಲಪಡಿಸಲು ಸಮಜೋತಾ ಒಪ್ಪಂದ (MoU) ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಸ್ತಾಪ ಮಾಡಿ, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ರೆಡಿಟ್ ಹಾಗೂ ಆನ್‌ಲೈನ್ ಕೋರ್ಸ್‌ಗಳ ಮೂಲಕ ಅನರ್ ಮತ್ತು ಮೈನರ್ ಡಿಗ್ರಿಗಳನ್ನು ಪಡೆಯುವ ಅವಕಾಶವಿದೆ ಎಂದರು. ಇಂಟರ್ನ್‌ಶಿಪ್‌ಗಳು, ಮಿಶ್ರ ಕಲಿಕೆ (Blended Learning), ಕೃತಕ ಬುದ್ಧಿಮತ್ತೆ (AI) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಹೀಗಿನ ಹೊಸ ಕ್ಷೇತ್ರಗಳಲ್ಲಿ ಅನುಭವ ಅಗತ್ಯ ಎಂದು ಒತ್ತಿ ಹೇಳಿದರು.
ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಬುದ್ಧಿಮತ್ತೆ ಮತ್ತು ಹಠಮಾರಿತನವೇ ಯಶಸ್ಸಿನ ದಾರಿ. ನವೀಕರಿಸಿದ ಕೌಶಲ್ಯಗಳನ್ನು ಹೊಂದಿದವರಿಗೆ ಅಪಾರ ಉದ್ಯೋಗಾವಕಾಶಗಳಿವೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಚಂದನಾ ವಿದ್ಯಾಶಂಕರ್, ಉಪಾಧ್ಯಕ್ಷ ಆರ್.ಎಂ. ಮಹಾಲಿಂಗೇಗೌಡ, ಖಜಾಂಚಿ ರಾಮಲಿಂಗಯ್ಯ, ಕಾರ್ಯದರ್ಶಿ ನಂದಿನಿ ಎನ್. ಮೂರ್ತಿ, ಸಂಯುಕ್ತ ಕಾರ್ಯದರ್ಶಿ ಹೇಮಾವತಿ ಬಿ, ಪ್ರಾಂಶುಪಾಲ ಅಭಿನಂದನ್ ಕೆ.ಎಸ್ ಹಾಗೂ ಉಪಪ್ರಾಂಶುಪಾಲ ನಕುಲ್ ಎನ್. ಉಪಸ್ಥಿತರಿದ್ದರು.
-
Chikmagalur11 hours agoಸಮೀಕ್ಷೆಯಲ್ಲಿ “ಹಳ್ಳಿಕಾರ” ಎಂದು ನಮೂದಿಸಿ : ಕೋಟೆ ಸೋಮಣ್ಣ
-
Hassan13 hours agoರಸ್ತೆ ಅಪಘಾತ ಚಾಲಕ ಸಾ*ವು
-
Hassan4 hours agoಹಾಸನ : ಮಾನಸ ಪದವಿ ಪೂರ್ವ ಕಾಲೆೇಜಿಗೆ ಹ್ಯಾಟ್ರಿಕ್ ಸಮಗ್ರ ಪಶಸ್ತಿ
-
Hassan2 hours agoರಾಷ್ಟ್ರೀಯ ಕರಾಟೆ: ಪಿ. ಅಭಿರಾಮ್ಗೆ ಚಿನ್ನದ ಪದಕ
-
Hassan4 hours agoಹಾಸನ: ತೆಂಗು ಕಾಯಕಲ್ಪ ರಥ ಯಾತ್ರೆಗೆ ಸಂಸದ ಶ್ರೇಯಸ್ ಚಾಲನೆ
-
Kodagu6 hours agoಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಸಾಧ್ಯ -ಶೀಲಾ ಅಶೋಕ್ ಸಲಹೆ
-
Chamarajanagar5 hours agoಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ ರೈತರಿಂದ ಮನವಿ
-
Hassan2 hours agoವಿದ್ಯಾಸೌಧ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ, ಸ್ವಾಗತ ಕಾರ್ಯಕ್ರಮ
