Connect with us

Education

ಎಸ್‌ಎಸ್‌ಎಲ್‌ಸಿ. PUC ವಿದ್ಯಾರ್ಥಿಗಳ ʼMarks Card’ ನಲ್ಲಿ ಮಹತ್ವದ ಬದಲಾವಣೆ

Published

on

SSLC Marks Card: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರು ಸಿಹಿ ಸುದ್ದಿಯೊಂದನ್ನು ನೀಡಿದ್ದು, ಮಾರ್ಕ್ಸ್‌ ಕಾರ್ಡ್‌ ನಲ್ಲಿ ಮಹತ್ವದ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪರೀಕ್ಷೆಯನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರ್‌ ಪರೀಕ್ಷೆ ಇರಲಿದೆ. ಆದರೆ ಮಾರ್ಕ್ಸ್‌ ನೀಡುವಾಗ ಸಪ್ಲಿಮೆಂಟರ್‌ ಎಂದು ನಮೂದಿಸುವುದಿಲ್ಲ ಎಂದು ಹೇಳಿದ್ದಾರೆ.

ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಚಿಕ್ಕಿ ನೀಡಲಾಗುವುದು. ವಾರದಲ್ಲಿ ಆರು ದಿನ ಕ್ಷೀರ ಭಾಗ್ಯದ ಹಾಲು ನೀಡುವ ಕ್ರಮ ಕೈಗೊಂಡಿರುವುದಾಗಿಯೂ, ಮೂರು ದಿನ ಹಾಲಿಗೆ ರಾಗಿ ಮಾಲ್ಟ್‌ ಮಿಕ್ಸ್‌ ಮಾಡಿ ಕೊಡಲಾಗುತ್ತದೆ. ಜೊತೆಗೆ ಶಾಲಾ ಬ್ಯಾಗ್‌ ಹೊರೆ ಕೂಡಾ ಕಡಿಮೆ ಮಾಡಲಾಗುತ್ತದೆ. ಸರಕಾರಿ ಶಾಲೆಗಳನ್ನು ಉನ್ನತೀರಕರಣ ಮಾಡುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದ ಎಂದು ಅವರು ಮಾಧ್ಯಮದವರಿಗೆ ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Education

11,894 ಶಿಕ್ಷಕರ ನೇಮಕಾತಿ; ರಾಜ್ಯಸರಕಾರದಿಂದ ಮಹತ್ವದ ಘೋಷಣೆ

Published

on

ಬೆಂಗಳೂರು: 2022 ಹಾಗೂ 2023 ನೇ ಸಾಲಿನಲ್ಲಿ ನಡೆಸಿದ 11,894 ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

11,894 ಶಿಕ್ಷಕರ ನೇಮಕಾತಿ ಗೆ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ. ಈ ನೇಮಕಾತಿಯ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪಿಗೆ ಒಳಪಟ್ಟಿದೆ.

ಈ ವಿಚಾರವಾಗಿ ತಂದೆ ಅಥವಾ ಗಂಡನ ಆದಾಯ ಪ್ರಮಾಣ ಪತ್ರವನ್ನು ಪರಿಶೀಲಿಸಬೇಕಾ ಎಂಬುದರ ಕುರಿತ ತೀರ್ಪು ಸುಪ್ರೀಂ ಕೋರ್ಟ್ ನಿಂದ ಹೊರ ಬರಲಿದ್ದು. ಅಲ್ಲಿಯವರೆಗೆ ನೇಮಕಾತಿಗೆ ತಡೆ ನೀಡಿದೆ.

ರಾಜ್ಯ ಸರ್ಕಾರದ ಕೋರಿಕೆಯನ್ನು ಕೇಳಿರುವ ಸುಪ್ರೀಂಕೋರ್ಟ್‌ ತನ್ನ ತೀರ್ಪಿಗೆ ಬದ್ಧವಾಗಿ ನೇಮಕಗೊಂಡ ಶಿಕ್ಷಕರು ಪಠ್ಯ ಚಟುವಟಿಕೆ ಮುಂದುವರೆಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿದೆ.

Continue Reading

Education

ಪದವೀಧರರಿಗೆ ಗುಡ್ ನ್ಯೂಸ್ : 8283 ಹುದ್ದೆಗಳ ನೇಮಕಾತಿಗೆ SBI ಅರ್ಜಿ ಆಹ್ವಾನ.

Published

on

ನವಂಬರ್ 17 2023 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ನೇಮಕಾತಿ 2023 ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.

ಕ್ಲರಿಕಲ್ ಕೆಡರ್ ನಲ್ಲಿ ಜೂನಿಯರ್ ಅಸೋಸಿಯೇಟ್ (ಗ್ರಾಹಕರ ಬೆಂಬಲ ಮತ್ತು ಮಾರಾಟ) ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ sbi.co ಗಮನಿಸಬಹುದು.

ಈ ನೇಮಕಾತಿ ಡ್ರೈವ್ ಕ್ಲೆರಿಕಲ್ ಕೇಡರ್ ನಲ್ಲಿ ಜೂನಿಯರ್ ಅಸೋಸಿಯೇಟ್ 8283 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ನೋಂದಣಿ ಪ್ರಕ್ರಿಯೆ ನವೆಂಬರ್ 17ರಂದು ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 7.2023 ರಂದು ಕೊನೆಗೊಳ್ಳುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿಯ ಆರಂಭಿಕ ದಿನಾಂಕ ನವೆಂಬರ್ 17-2023
ಅಪ್ಲಿಕೇಶನ್ ಕೊನೆಯ ದಿನಾಂಕ ಡಿಸೆಂಬರ್ 07-2023
ಪೂರ್ವಭಾವಿ ಪರೀಕ್ಷೆ ಜನವರಿ 23
ಮುಖ್ಯ ಪರೀಕ್ಷೆ ಫೆಬ್ರವರಿ 2024

ಅರ್ಹತೆಯ ಮಾನದಂಡ
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ ಇಂಟಿಗ್ರೇಟೆಡ್ ಡಿಗ್ರಿ (IDD) ಪ್ರಮಾಣ ಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಐಡಿಡಿ ಪಾಸ್ ಮಾಡುವ ದಿನಾಂಕ ಡಿಸೆಂಬರ್ 31-2023 ರಂದು ಅಥವಾ ಅದಕ್ಕಿಂತ ಮೊದಲು ಎಂದು ಖಚಿತ ಪಡಿಸಿಕೊಳ್ಳಬೇಕು ವಯಸ್ಸಿನ ಮಿತಿ 20 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು.

ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆ ಆನ್ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ) ಮತ್ತು ನಿರ್ದಿಷ್ಟ ಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ನೂರು ಅಂಕಗಳಿಗೆ ಆಬ್ಜೆಕ್ಟಿವ್ ಪರೀಕ್ಷೆಗಳನ್ನು ಒಳಗೊಂಡಿರುವ ಆನ್ಲೈನ್ ಪೂರ್ವಭಾವಿ ಪರೀಕ್ಷೆಯನ್ನು ಆನ್ಲೈನ್ ನಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯು ಒಂದು ಗಂಟೆ ಅವಧಿಯ ಮೂರು ವಿಭಾಗಗಳನ್ನು ಒಳಗೊಂಡಿರುತ್ತದೆ, ಇಂಗ್ಲಿಷ್ ಭಾಷೆ ಸಂಖ್ಯಾತ್ಮಕ ಸಾಮರ್ಥ್ಯ ಮತ್ತು ತಾರ್ಕಿಕ ಸಾಮರ್ಥ್ಯ.

ಅರ್ಜಿ ಶುಲ್ಕ
ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ 750ರೂ. OBC/EWS ವರ್ಗಕ್ಕೆ, SC/ ST / PwBD / ESM / DESM ಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ

Continue Reading

Education

ಬೆಂಗಳೂರು BEML ನಲ್ಲಿ ಗ್ರೂಪ್ ಸಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 23,910 ರಿಂದ 85ಸಾವಿರವರೆಗೆ ವೇತನ. ಸಂಪೂರ್ಣ ವಿವರ ಇಲ್ಲಿದೆ.

Published

on

BEML Jobs : ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ರಕ್ಷಣಾ ಸಚಿವಾಲಯದ ಅಡಿಯಲ್ಲಿ ‘ಶೆಡ್ಯೂಲ್ ‘ಎ’ ಕಂಪನಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ರಕ್ಷಣೆ, ರೈಲು, ವಿದ್ಯುತ್, ಗಣಿಗಾರಿಕೆ ಮತ್ತು ಬ್ಯಾಂಕ್ ಆಫ್ ಬರೋಡ ಮೂಲಸೌಕರ್ಯಗಳಂತಹ ಭಾರತದ ಪ್ರಮುಖ ಕ್ಷೇತ್ರಗಳಿಗೆ ಸೇವೆ ಸಲ್ಲಿಸುತ್ತದೆ. ತನ್ನ ಉತ್ಪಾದನಾ ಸಂಪನ್ನೇನರ್ ಹುದ್ದೆಗಳಿಗೆ ಘಟಕಗಳು, ಮಾರ್ಕೆಟಿಂಗ್ ವಿಭಾಗಗಳಿಗೆ ಅಗತ್ಯ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಹೊರಡಿಸಿದೆ ಒಟ್ಟು 119 ಟೆಕ್ನಿಕಲ್, ನಾನ್ ಟೆಕ್ನಿಕಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ, ಇತರೆ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ ಈ ರೀತಿ ಇದೆ :-
1) ಡಿಪ್ಲೊಮ ಟ್ರೈನಿ ( ಮೆಕ್ಯಾನಿಕಲ್, ಇಲೆಕ್ನಿಕಲ್, ಸಿವಿಲ್)
2) ಐಟಿಐ ಟ್ರೈನಿ (ಟರ್ನರ್, ಮಷಿನಿಸ್ಟ್)
3) ಸ್ಟಾಫ್ ನರ್ಸ್

ವಯೋಮಿತಿ ವಿವರ ಈ ರೀತಿ ಇದೆ:-

ಡಿಪ್ಲೊಮ ಟ್ರೈನಿ ಮತ್ತು ಐಟಿಐ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 29 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು.
ಸ್ಟಾಫ್ ನರ್ಸ್ ಹುದ್ದೆಗೆ 30 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು, ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:- ಸ್ಪರ್ಧಾತ್ಮಕ ಆನ್‌ಲೈನ್ ಲಿಖಿತ ಪರೀಕ್ಷೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18.10.2023 (ಸಂಜೆ 06 ಗಂಟೆವರೆಗೆ)

ಅರ್ಜಿ ಶುಲ್ಕ ವಿವರ:-

ಅರ್ಜಿ ಶುಲ್ಕ ರೂ.200. ಅನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.

Advt_KP_S_06_2023.pdf

https://www.bemlindia.in/

https://exmegov.com/

ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ, ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.

 

Continue Reading

Trending

error: Content is protected !!