Kodagu
ಎದೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಎದೆಗೆ ಗುಂಡು ಹೊಡೆದುಕೊಂಡು ವಿದ್ಯಾರ್ಥೀಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾವನ್ನಪ್ಪಿರುವ ವಿದ್ಯಾರ್ಥಿಯನ್ನು ವಿಷು ಉತ್ತಪ್ಪ (19) ಎಂದು ಗುರುತಿಸಲಾಗಿದೆ.
ಕೊಡಗು ಮೂಲದ ಮೃತ ವಿಷು ಉತ್ತಪ್ಪನ ತಂದೆ ತಮ್ಮಯ್ಯ ರೇಷನ್ ತರಲು ಹೋದಾಗ ಪುತ್ರ ವಿಷು ಉತ್ತಪ್ಪ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಎದೆಗೆ ಶೂಟ್ ಮಾಡಿಕೊಂಡು ತಂದೆಗೆ ಕರೆ ಮಾಡಿ ಇನ್ಮುಂದೆ ತಪ್ಪು ಮಾಡುವುದಿಲ್ಲ ಅಂತ ಹೇಳಿದ್ದಾನೆ ಎನ್ನಲಾಗಿದೆ.

ಈ ನಡುವೆ ಕೂಡಲೇ ಮನೆಗೆ ಬಂದ ತಮ್ಮಯ್ಯ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯವೇ ವಿಷು ಉತ್ತಪ್ಪ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ನಡುವೆ ಘಟನೆ ಸಂಬಂಧ ಮಾಧನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Kodagu
ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ : ಡಿವೈಎಸ್ಪಿ ಮಹೇಶ್ ಕುಮಾರ್
ವಿರಾಜಪೇಟೆ: ಮಕ್ಕಳಿಗೆ ಮಹನೀಯರ ಆದರ್ಶವನ್ನು ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ವಿರಾಜಪೇಟೆ ಡಿವೈಎಸ್ ಪಿ ಮಹೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು .
ವಿರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಆಯೋಜಿಸಲಾದ ಸ್ಪೋರ್ಟ್ಸ್ ಸ್ಪೆಕ್ಟ್ರಾ 2026 ಕಾರ್ಯಕ್ರಮವು ನಾಂಗಾಲ ಗ್ರಾಮದಲ್ಲಿರುವ ಎಲ್. ಎಸ್. ಎ. ಯ ನೂತನ ಕ್ಯಾಂಪಸ್ ನಲ್ಲಿ ಜರುಗಿತು. ಕ್ರೀಡಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್‌ಪಿ ಮಹೇಶ್ ಕುಮಾರ್ ಪ್ರಸ್ತುತ ನಾವು ಪ್ರತಿಷ್ಠೆಯ ಶಿಕ್ಷಣ ವ್ಯವಸ್ಥೆಯಲ್ಲಿದ್ದೇವೆ.
ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣವನ್ನು ನೀಡಿದರೆ ಸಾಲದು. ಅದರೊಂದಿಗೆ ಸಾತ್ವಿಕ ಶಿಕ್ಷಣವನ್ನು ನೀಡುವಂತಹ ಜವಾಬ್ದಾರಿಯು ಪೋಷಕರ ಮೇಲಿದೆ. ನಮ್ಮ ಸಮಾಜದ ಮೂಲ, ಸಂಪ್ರದಾಯ, ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ ,ಇತರರಿಗೆ ತೊಂದರೆಯನ್ನು ನೀಡದಿರುವಂತಹ ರೀತಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಗಣನೀಯವಾಗಿ ಹೆಚ್ಚುತಿದ್ದು ಇದರಿಂದಾಗುವ ದುಷ್ಪರಿಣಾಮಗಳನ್ನು ಅರಿತಿರುವ ಪೋಷಕರು ಆದಷ್ಟು ಮಕ್ಕಳನ್ನು ಮೊಬೈಲ್ ಚಟದಿಂದ ದೂರ ಮಾಡಲು ಪ್ರಯತ್ನಿಸುವುದರೊಂದಿಗೆ ಭಾರತದ ಮಹಾನ್ ನಾಯಕರನ್ನು ಆದರ್ಶ ಪ್ರಾಯವಾಗಿ ತೆಗೆದುಕೊಂಡು ತಾವು ಕೂಡ ಮಹನೀಯರಾಗುವ ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬಬೇಕು ಎಂದರು .
ಕಾರ್ಯಕ್ರಮಕ್ಕೆ ಆಗಮಿಸಿದ ಮತ್ತೋರ್ವ ಅತಿಥಿಗಳಾದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ವಿದ್ಯಾರ್ಥಿ ಗಳಿಗೆ ಕೇವಲ ಶಿಕ್ಷಣ ವನ್ನು ಮಾತ್ರ ನೀಡುತ್ತಿಲ್ಲ .ಅದರೊಂದಿಗೆ ಜೀವನ ಕೌಶಲ್ಯಗಳನ್ನು ಕಲಿಸುವತ್ತ ಗಮನ ಹರಿಸುತ್ತಿರುವುದು ಪ್ರಸಂಶನೀಯ ಶಿಕ್ಷಣ ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಮಕ್ಕಳಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು .
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಪಟ್ಟಡ ಸತೀಶ್ , ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ , ಸಜೇಶ್ ಭರತನ್ , ಕಾರ್ಯದರ್ಶಿ ಪ್ರತಿಮಾ , ಮುಖ್ಯ ಶಿಕ್ಷಕರಾದ ಮೀರ ಪೂಣಚ್ಚ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ತರಗತಿವಾರು ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಕ್ರೀಡಾ ಸ್ಪರ್ಧೆಗಳ ಫೈನಲ್ ಪಂದ್ಯಾವಳಿಯನ್ನು ನಡೆಸಲಾಯಿತು. ಪೋಷಕರು ಹಾಗೂ ಶಿಕ್ಷಕರ ತಂಡಗಳ ನಡುವೆ ಥ್ರೋ ಬಾಲ್ ಸೌಹಾರ್ದ ಪಂದ್ಯ ನಡೆಯಿತು. ಕರಾಟೆ ವಿದ್ಯಾರ್ಥಿಗಳು ಕೆಲವು ಸಾಹಸ ಜಲಕ್ ಪ್ರದರ್ಶಿಸಿದರು.
ಕ್ರೀಡಾ ದಿನಾಚರಣೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ರವರು ಕ್ರೀಡಾ ಪಟುಗಳಿಗೆ ಶುಭಕೋರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾ ಸಂಸ್ಥೆಗಳನ್ನು ಆರಂಭಿಸಲು ವಿಶೇಷವಾದ ಆಸಕ್ತಿ ಇರಬೇಕು.
ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುವುದು ಪುಣ್ಯದ ಕೆಲಸ .ವಿದ್ಯಾರ್ಥಿಗಳಲ್ಲಿ ಕ್ರೀಡೆ ಮತ್ತು ಶಿಸ್ತು ಬಹಳ ಅವಶ್ಯಕವಾಗಿದ್ದು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರೊಂದಿಗೆ ದೇಶದ ಭವಿಷ್ಯವನ್ನು ರೂಪಿಸಲು ಕ್ರೀಡೆ, ಶಿಸ್ತು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗುವುದರಿಂದ ಒಳ್ಳೆಯ ನಾಗರಿಕರನ್ನು ಸೃಷ್ಟಿಸುವಂತಹ ಮಹತ್ತರ ಜವಾಬ್ದಾರಿ ಶಾಲೆಯಿಂದಲೇ ಆರಂಭವಾಗಬೇಕೆಂದರು .

ಮೈಸೂರಿನ ಸೂರಜ್ ಪವರ್ ಬ್ಯಾಂಡ್ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸ್ಪೋರ್ಟ್ಸ್ ಸ್ಪೆಕ್ಟ್ರಾದ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ದಕ್ಷಿಣ ಭಾರತದ ಚಲನ ಚಿತ್ರ ನಟಿ ಶ್ವೇತಾ ಶ್ರೀವಾತ್ಸವ್ ಮಾತನಾಡಿ ಪೋಷಕರು ತಮ್ಮ ಮಕ್ಕಳ ಆಸಕ್ತ ಕ್ಷೇತ್ರವನ್ನು ತಿಳಿದುಕೊಂಡು ಆ ಕ್ಷೇತ್ರದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು.
ಕ್ರೀಡೆ, ಸಾಂಸ್ಕೃತಿಕ, ಕಲೆ, ಸಮಾಜ ಸೇವೆ ಯಾವುದರಲ್ಲಿ ಮಕ್ಕಳಿಗೆ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ನಿರ್ಧರಿಸುವ ಹಾದಿಯನ್ನು ಕಂಡುಕೊಳ್ಳಲು ಸದಾ ಪೋಷಕರು ಹಾಗೂ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಯಾವುದೇ ಸ್ಪರ್ಧೆ ಆದರು ಸಹ ಬಹುಮಾನ ದೊರೆಯದಿದ್ದರೂ ಅದರಲ್ಲಿ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಇದರೊಂದಿಗೆ ಬೇರೆಯವರ ಯಶಸ್ಸನ್ನು ಕಂಡು ಸಂಭ್ರಮಿಸುವ ಉತ್ತಮ ಗುಣವನ್ನು ಬಾಲ್ಯದಿಂದಲೇ ಮಕ್ಕಳು ರೂಢಿಸಿಕೊಳ್ಳಬೇಕೆಂದರು.

ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿ ಗಳಿಗೆ ತರಗತಿವಾರು ನಡೆಸಲಾದ ವಿವಿಧ ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು .ಈ ಸಂದರ್ಭದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ , ಸಜೇಶ್ ಭರತನ್ , ಕಾರ್ಯದರ್ಶಿ ಪ್ರತಿಮಾ , ಮುಖ್ಯ ಶಿಕ್ಷಕರಾದ ಮೀರ ಪೂಣಚ್ಚ, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
Kodagu
ಮಾಜಿ ಸೈನಿಕರಿಂದ ಡಾ ಮಂತರ್ ಗೌಡ ರವರಿಗೆ ಮನವಿ ಸಲ್ಲಿಕೆ
ಕಾಲೂರು : ಕಾಲೂರು ಗ್ರಾಮದ( ಮುತ್ತ್ ನಾಡ್) ಮಾಜಿ ಸೈನಿಕರ ನಿಯೋಗ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ಸಲ್ಲಿಸಿದರು.
ಬೇಡಿಕೆ ಸಮಂಜಸವಾಗಿದ್ದು ಈಡೇರಿಸುವುದಾಗಿ ಮಂತರ್ ಗೌಡ ರವರು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷರಾದ ಚುಮ್ಮಿ ದೇವಯ್ಯ ನವರು ಶಾಸಕರೊಂದಿಗೆ ಉಪಸ್ಥಿತರಿದ್ದರು.
Kodagu
ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಟಿಪ್ಪರ್ ಗಳ ಒಡಾಟ!
ಸೋಮವಾರಪೇಟೆ : ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಟಿಪ್ಪರ್ ಗಳ ಒಡಾಟ! ಇಲ್ಲಿ ಕಲ್ಲು ಕೋರೆ ಮಾಲೀಕರದೇ ದರ್ಬಾರ್ ಶಾಸಕರೇ ಇತ್ತ ಗಮನಿಸಿ, ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದ ಜನರು ಇದೀಗ ಬವಣೆ ಪಡುವಂತಾಗಿದೆ.
ರಸ್ತೆ ಬದಿ ಇರುವ ರೈತರ ಜಮೀನಿನ ಬೇಲಿಯನ್ನು ಕಿತ್ತು ಬಲವಂತವಾಗಿ ರಸ್ತೆ ಅಗಲೀಕರಣ ಮಾಡಿಕೊಂಡಿರುವ ಕೋರೆ ಮಾಲೀಕರು ರಾಜ ರೋಷವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರ್ಕಾರಿ ಜಾಗದಿಂದಲೂ ಕೂಡ ಈ ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರ ಜಾಣ ಮೌನದಿಂದ ಇದೀಗ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ರಸ್ತೆಯಲ್ಲಿ ಓಡಾಡುವ ಟಿಪ್ಪರ್ಗಳಿಂದ ಧೂಳು, ಶಬ್ದ ಮಾಲಿನ್ಯ, ಮತ್ತೊಂದೆಡೆ ತಮ್ಮ ಹೊಲದ ಅತಿಕ್ರಮಣದಿಂದ ಹಲವರು ಬೇಸತ್ತಿದ್ದಾರೆ. ಈ ಬಲಿಷ್ಠ ಗುಂಪನ್ನು ಎದುರಿಸುವ ಶಕ್ತಿ ಇಲ್ಲದೆ ಮೌನಕ್ಕೆ ಶರಣಾಗುವ ಪರಿಸ್ಥಿತಿ ಇಲ್ಲಿನವರಿಗೆ ಒದಗಿ ಬಂದಿದೆ. ಶಾಸಕರೇ ಇತ್ತ ಗಮನಿಸಿ ಎನ್ನುತ್ತಾರೆ ಸ್ಥಳೀಯರು.
-
Chikmagalur22 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan18 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Hassan19 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Kodagu18 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
State22 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
State24 hours agoಜಿಬಿಎ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ: ಬಿ.ವೈ.ವಿಜಯೇಂದ್ರ
-
Hassan49 minutes agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Mandya19 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
