Hassan
ಉದ್ಯಮ ಸ್ನೇಹಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸದಿದ್ರೆ ಜಿಲ್ಲಾಡಳಿತದ ವಿರುದ್ದ ಹೋರಾಟ: ಪ್ರಸನ್ನ ಎಚ್ಚರಿಕೆ

ಹಾಸನ: ಮಂಜೂರಾಗಿರುವ ಜಾಗದಲ್ಲಿ ಉದ್ದಿಮೆ ಕೆಲಸ ಮಾಡಲು ಹೋದಾಗ ಕೌಶಿಕ ಗ್ರಾಮದವರು ನಮಗೆ ಗಲಾಟೆ ಮಾಡಿ ಹಲ್ಲೆ ಮಾಡಲು ಯತ್ನಿಸುತ್ತಾರೆ. ಕೌಶಿಕ ಗ್ರಾಮಸ್ಥರು ಕೆಐಎಡಿಬಿಗೆ ಸೇರಿದ ನಿವೇಶನಗಳಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹಾಸನ ಜಿಲ್ಲಾ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಪ್ರಸನ್ನ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮೊದಲ ಅವಧಿಯಿಂದ ಇಂದಿನ ಅವಧಿಯವರೆಗೆ ಬಡವರ ಶ್ರೇಯೋಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರಿಗೆ ದಾರಿದೀಪವಾಗಿದ್ದಾರೆ. ಅದರಲ್ಲಿ ಉದ್ಯಮಿಯಾಗಿ ಉದ್ಯೋಗ ಕೊಡಿ ಎಂಬ ಧೈಯೋವಾಕ್ಯದಡಿ ’ಉದ್ಯಮ ಸ್ನೇಹಿ ಯೋಜನೆ ಕೂಡ ಒಂದು. ಇದೊಂದು ಮಹತ್ತರ ಯೋಜನೆಯಾಗಿದೆ.
ಆದರೆ ಜಿಲ್ಲಾಡಳಿತದ ನಿರ್ಲಕ್ಷ್ಯವೋ ಅಥವಾ ರಾಜಕಾರಣಿಗಳ ಪ್ರಭಾವೋ ಒಟ್ಟಿನಲ್ಲಿ ಈ ಯೋಜನೆ ಹಾಸನ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುದೆ ಹಳ್ಳ ಹಿಡಿದಿದೆ ಎಂಬುವುದು ದಲಿತ ಉದ್ಯಮಿಗಳ ದೂರು ಎಂದರು. ಹಾಸನ ಕೈಗಾರಿಕ ಪ್ರದೇಶ ಸಬ್ ಲೇಔಟ್-೪ರಲ್ಲಿ ನಮಗೆ ಉದ್ದೇಶಿತ ಉದ್ಯಮಿ ಸ್ಥಾಪಿಸಲು ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಕೌಶಿಕ ಗ್ರಾಮಕ್ಕೆ ಸೇರಿದ ಸರ್ವೆ ನಂ.೩೨೮ರಲ್ಲಿ ಕೈಗಾರಿಕ ನಿವೇಶನಗಳನ್ನು ಮಂಜೂರು ಮಾಡಿರುವುದು ಸರಿಯಷ್ಟೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸುಮಾರು ೨೪ ಉದ್ಯಮಿಗಳು ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಸುಮಾರು ೧೨ ಜನರು ಸೇರಿ ೩೬ ಜನರಿಗೆ ಉದ್ದೇಶಿತ ಉದ್ದಿಮೆ ಸ್ಥಾಪಿಸಲು ಕಾನೂನು ವಿಧಿವಿಧಾನಗಳೊಂದಿಗೆ ನಿವೇಶನ ಮಂಜೂರು ಮಾಡಲಾಗಿದೆ. ಈ ನಿವೇಶನ ಪಡೆಯಲು ಈಗಾಗಲೇ ಕೋಟಿ ಕೋಟಿ ಹಣ ಹೂಡಿಕೆ ಮಾಡಲಾಗಿದೆ. ಹೂಡಿಕೆ ಮಾಡಿ ಐದು ವರ್ಷಗಳು ಕಳೆದರೂ ನಿವೇಶನ ಭಾಗ್ಯವಿಲ್ಲದಾಗಿದೆ ಎಂದು ಹೇಳಿದರು.
ನಮ್ಮೂರಿಗೆ ಸೇರಿದ ಗೋಮಾಳ ಜಾಗವಾಗಿದೆ. ಇದಕ್ಕೆ ಹಕ್ಕುಪತ್ರ ನೀಡಿ ಎಂದು ಕೆಐಎಡಿಬಿಗೆ ಒತ್ತಾಯ ಮಾಡುತ್ತಿರುವ ಪರಿಣಾಮ ಉದ್ಯಮಿಗಳಿಗೆ ಹಾಗೂ ಗ್ರಾಮಸ್ಥರ ನಡುವಿನ ವ್ಯಾಜ್ಯ ಬಗೆಹರಿಯದ ಕಾರಣ ಉದ್ಯಮಿಗಳು ಅಲ್ಲಿ ಉದ್ಯಮ ಸ್ಥಾಪನೆ ಮಾಡಲು ಇಂದಿಗೂ ? ಸಾಧ್ಯವಾಗಿಲ್ಲ ಎಂಬುವುದು ಹಾಸನ ಜಿಲ್ಲಾ ದಲಿತ ಉದ್ದಿಮೆದಾರರ ಸಂಘದ ಆರೋಪವಾಗಿದೆ. ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಈಗಾಗಲೇ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೂ ಪ್ರಯೋಜವಾಗಿಲ್ಲ. ಉದ್ಯಮಿಯಾಗುತ್ತೇನೆ ಎಂಬ ಆಸೆಯಿಂದ ಈಗಾಗಲೇ ಬಡ್ಡಿಗೆ ಹಣದ ತಂದು ನಿವೇಶನಕ್ಕೆ ವಿನಿಯೋಗ ಮಾಡಲಾಗಿದೆ. ಐದು ವರ್ಷಗಳು ಕಳೆದರೂ ಇತ್ತ ಹಣನೂ ಇಲ್ಲ ಇತ್ತ ನಿವೇಶನವೂ ಇಲ್ಲ ಎನ್ನುವಂತಾಗಿದೆ. ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಇದರಿಂದ ನಮ್ಮಗಳ ಪಾಡು ಬೀದಿಗೆ ಬಂದಿದೆ. ಜನತಾದರ್ಶನ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಗಮಕ್ಕೆ ತಂದರೂ ಸಮಸ್ಯೆ ಇಂದಿಗೂ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಕೂಡಲೇ ಸರ್ಕಾರವು ಮಧ್ಯೆ ಪ್ರವೇಶ ಮಾಡಿ ಜನಪ್ರಿಯ ಯೋಜನೆಯಾದ ಉದ್ಯಮ ಸ್ನೇಹಿ ಯೋಜನೆಯನ್ನು ನಮ್ಮಗಳಿಗೆ ಶೀಘ್ರದಲ್ಲೇ ನಿವೇಶನ ನೀಡುವ ಮೂಲಕ ಅನುಷ್ಟಾನಗೊಳಿಸಬೇಕು ಎಂದು ಸರ್ಕಾರಕ್ಕೆ ಸಂಘದ ಮನವಿ. ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಡಳಿತದ ವಿರುದ್ದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ದಲಿತ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ಎನ್.ಟಿ. ಶ್ರೀನಿವಾಸ್, ಕಾರ್ಯಾಧ್ಯಕ್ಷ ಎನ್.ಆರ್. ಸಂತೋಷ್, ಖಜಾಂಚಿ ರಾಜಣ್ಣ, ಉದ್ದಿಮೆದಾರರಾದ ಅಭಿಷೇಕ್, ಕಾಂತರಾಜು ಇತರರು ಉಪಸ್ಥಿತರಿದ್ದರು.
Hassan
ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದಂದು ಮುಸ್ಲಿಂ ಕಾಜಿಯವರಿಂದ ಕುರಾನ್ ಪಟಿಸದಂತೆ ಮನವಿ

ಬೇಲೂರು : ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಅಂಗವಾಗಿ ಯಾವುದೇ ರೀತಿಯ ಹಿಂದು ಧರ್ಮಿಯರಿಗೆ ಅವರ ಭಾವನೆಗೆ ದಕ್ಕೆ ಬಾರದಂತೆ ಮುಸ್ಲಿಂ ಕಾಜಿಯವರಿಂದ ಕುರಾನ್ ಪಟ್ಟಣವನ್ನು ನಡೆಸದಂತೆ ಹಿಂದೂ ಸಮಾಜದ ಮುಖಂಡರು ತಾಲೂಕು ದಂಡಾಧಿಕಾರಿಗಳಿಗೆ ಪೊಲೀಸ್ ಇಲಾಖೆಗೆ ಮತ್ತು ದೇಗುಲದ ಕಾರ್ಯನಿರ್ವಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಮುಸ್ಲಿಂ ಕಾಜಿಯವರಿಗೆ ದೇವಾಲಯದ ವತಿಯಿಂದ ಸಂಪ್ರದಾಯದಂತೆ ನೀಡುವ ಕಾಣಿಕೆಯನ್ನು ನೀಡಲಿ ಮತ್ತು ಅವರು ಹಿಂದೆ ನಡೆಯುತ್ತಿದ್ದ ಸಂಪ್ರದಾಯದಂತೆ ದೇವರಿಗೆ ಒಂದನೇ ತಿಳಿಸಿ ಹೋಗಲಿ ಅದನ್ನು ಬಿಟ್ಟು ಕುರಾನ್ ಪಟ್ಟಣವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಹಿಂದೂ ಮುಖಂಡರಾದ ರಘು ಸಕಲೇಶಪುರ ಒತ್ತಾಯಿಸಿದ್ದಾರೆ ಕುರಾನ್ ಪಟ್ಟಣಕ್ಕೆ ಅವಕಾಶ ನೀಡಿದ್ದಾರೆ ಇದಕ್ಕೆ ಸಂಪೂರ್ಣ ಹೊಣೆಯನ್ನ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ
Hassan
ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು 12ಜನ ನೂತನ ನಿರ್ದೇಶಕರುಗಳು ಆಯ್ಕೆಯಾದರು.
ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12ಜನ ನಿರ್ದೇಶಕ ಸದಸ್ಯ ಬಲ ಹೊಂದಿದ್ದು ನೂತನ ನಿರ್ದೇಶಕ 23 ಜನ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಚುನಾವಣೆ ಮೂಲಕ ನೂತನ ನಿರ್ದೇಶಕರನ್ನ ಆಯ್ಕೆ ಮಾಡಲಾಯಿತು.
ಸಾಮಾನ್ಯ ಕ್ಷೇತ್ರದಿಂದ ಅವಿನಾಶ್, ವಿ.ಎಸ್ ಆನಂದ್, ಚಂದ್ರು, ಕುಬೇರಪ್ಪ, ಯೋಗೇಶ್, ಮಹಿಳಾ ಕ್ಷೇತ್ರದಿಂದ ಮಂಜುಳಾ, ಗಿರಿಜಾ, ಹಿಂದುಳಿದ ವರ್ಗ ‘ಎ’ ನಿಂದ ರವಿ ಕುಮಾರ್, ಹಿಂದುಳಿದ ವರ್ಗ ‘ಬಿ’ ನಿಂದ ಮೋಹನ್ ಕುಮಾರ್, ಪರಿಶಿಷ್ಟ ಜಾತಿಯಿಂದ ಪುಟ್ಟಸ್ವಾಮಿ ಆಯ್ಕೆಯಾದರೆ ಪರಿಶಿಷ್ಟ ಪಂಗಡದಿಂದ ಶಾಂತಪ್ಪ ನಾಯಕ ಅವಿರೋಧವಾಗಿ ಆಯ್ಕೆಯಾದರು, ಇನ್ನೂ ಸಾಲಗಾರರಲ್ಲದ ಕ್ಷೇತ್ರದಿಂದ ಕಿಶೋರ್ ಕುಮಾರ್ ಆಯ್ಕೆಯಾದರು 2030ರವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾರ್ ತಿಳಿಸಿದರು.
ಚುನಾವಣೆ ಮೂಲಕ ನೂತನ ನಿರ್ದೇಶಕರುಗಳ ಆಯ್ಕೆ ಘೋಷಣೆ ಹೊರಬಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ಎಸ್ ನಟರಾಜ್, ಪಾಳ್ಯ ಸೊಸೈಟಿ ನಿರ್ದೇಶಕ ಕಟ್ಟೆಗದ್ದೆ ನಾಗರಾಜ್, ಬಿಜೆಪಿ ಮುಖಂಡ ಕೆ.ಕೆ ಪ್ರಸಾದ್, ರುದ್ರೇಶ್ ಕಾಡ್ಲೂರು, ನಂದನ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿವೇಕ್ ವೈದ್ಯನಾಥ್ ಸೇರಿದಂತೆ ಮುಂತಾದವರು ನೂತನ ನಿರ್ದೇಶಕರುಗಳನ್ನು ಅಭಿನಂದಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪೋಟೋ ಕ್ಯಾಪ್ಶನ್: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುನಾಯಿತನಾದ ನೂತನ ನಿರ್ದೇಶಕರನ್ನ ಹಾಸನ ಜಿಲ್ಲಾ ಹೆಚ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಲ್ಲಿ ಜಗದೀಶ್, ಆರ್.ಎಸ್ ನಟರಾಜ್ ಕೆ.ಕೆ ಪ್ರಸಾದ್ ಸೇರಿದಂತೆ ಇತರರು ಅಭಿನಂದಿಸಿದರು.
Hassan
ಅಟಲ್ ವಿರಸತ್ ಕಾರ್ಯಕ್ರಮ: ಒಡನಾಟ ಉಳ್ಳ ಹಿರಿಯರಿಗೆ ಬಿಜೆಪಿಯಿಂದ ಸನ್ಮಾನ

ಹಾಸನ: ನಗರದ ಆರ್.ಸಿ.ರಸ್ತೆ, ಶ್ರೀಗಂಧದ ಕೋಠಿ ಆವರಣದಲ್ಲಿರುವ ಖಾಸಗೀ ಹೋಟೆಲೊಂದರಲ್ಲಿ ಗುರುವಾರ ನಡೆದ ಅಟಲ್ ವಿರಸತ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಅಟಾಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ವರ್ಷದ ಅಂಗವಾಗಿ ಹಿರಿಯರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಇದೆ ವೇಳೆ ಅಟಾಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ ಸಹ ಸಂಚಾಲಕ ಪಣೀಶ್ ಮಾತನಾಡಿ, ಅಟಾಲ್ ಜೀ ಅವರು ಎಲ್ಲೆಲ್ಲಿ ಬಂದಿದ್ದರೂ, ಅವರ ಒಡಾಟ, ಹೋರಾಟಗಳು, ಸಂಘಟನೆಗಳು, ಅವರ ವ್ಯಕ್ತಿತ್ವ, ಒಡನಾಟ, ಅವರ ಸಂಪರ್ಕಕ್ಕೆ ಬಂದಂತಹ ವ್ಯಕ್ತಿಗಳು, ಅವರ ನೆನಪಿನ ಸ್ಪೂರ್ತಿಯನ್ನು ಸಂಗ್ರಹ ಮಾಡುವಂತಹ ಪೋಟೊ ಸಂಗ್ರಹಿಸುವ ಜೊತೆಗೆ ಯಾರು ಅಟಾಲ್ ಬಿಹಾರಿ ಜೊತೆ ಒಡನಾಟವಿತ್ತು ಅವರನ್ನು ಗುರುತಿಸಿ ಗೌರವಿಸುವ ಕೆಲಸ ನಾವು ಕಳೆದ ಒಂದು ತಿಂಗಳಿನಿಂದ ಮಾಡಿಕೊಂಡು ಈ ಹಿಂದೆಯೇ ಬಂದಿದ್ದೇವೆ ಎಂದರು.
ಅಟಲ್ ಜೀ ಪ್ರೇರಣೆಯನ್ನು ಕಾರ್ಯಕರ್ತರು ಪಡೆದಿದ್ದಾರೆ. ನಾವು ಯಾವ ದಿಕ್ಕಿನಲ್ಲಿ ರಾಜಕಾರಣ ಮಾಡಬೇಕು ಎನ್ನುವ ದಿಕ್ಸೂಜಿ ನಮಗೆ ತೊರಿಸುತ್ತದೆ ಎಂದು ಕಿವಿಮಾತು ಹೇಳಿದರು. ರಾಜಕಾರಣದಲ್ಲಿ ಕೆಲಸ ಮಾಡುವ ನಾವು ಯಾವುದು ಆದರ್ಶ ಎಂಬುದನ್ನು ತಿಳಿದಿರಬೇಕು. ಯಾವ ಮಾರ್ಗದರ್ಶನ ತಿಳಿದಿರಬೇಕು ಬಗ್ಗೆ ಜಾಗೃತಿ ಅಗತ್ಯ ಎಂದು ಸಲಹೆ ನೀಡಿದರು.
ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ವಾಜಪೇಯಿ ಕಾಲದಿಂದಲೂ ಹೋರಾಟ ಮಾಡಿದವರು ನಮ್ಮ ಸಕಲೇಶಪುರದಲ್ಲಿ ಮತ್ತು ಈ ಜಿಲ್ಲೆಯಲ್ಲಿ ಹಲವಾರು ಜನರು ಇದ್ದಾರೆ. ಬಿಜೆಪಿಯಲ್ಲಿ ಹಾಸನಕ್ಕೆ ಉತ್ತಮವಾದ ಸ್ಥಾನಮಾನವಿದೆ. ಹಿಂದಿನ ದಿನಗಳಲ್ಲಿ ಎಮರ್ಜನ್ಸಿ ಕಾಲದಲ್ಲಿ ಜೈಲಿಗೆ ಹೋಗಿದಾಗಿನಿಂದ ಹಿಡಿದು ವಾಜಪೇಯಿ ಜೊತೆ ಪಾರ್ಟಿ ಕಟ್ಟಿರುವ ಹಲವಾರು ಜನರು ನಮ್ಮ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆ ಎಂದರು.
ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿಜೆಪಿ ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ರಾಜಕುಮಾರ್ ಇತರರು ಉಪಸ್ಥಿತರಿದ್ದರು.
-
State23 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan21 hours ago
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು
-
Chamarajanagar19 hours ago
ಗುಂಡ್ಲುಪೇಟೆ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ
-
Kodagu20 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ
-
Hassan20 hours ago
ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ
-
Hassan24 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
Mysore19 hours ago
ಜಿಡಿ ಹರೀಶ್ಗೌಡ ಸಹಕಾರ ಸಂಘದ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ: ಎಚ್.ಪಿ.ಮಂಜುನಾಥ್
-
State16 hours ago
ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಜಸ್ಟ್ 4ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ : ಹೇಗೆ ಅರ್ಜಿ ಸಲ್ಲಿಸುವುದು?