Connect with us

Mysore

ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಕೊರೊನಾ ಮತ್ತು ಜಾನುವಾರು ಗಳ  ಗಂಟು ರೋಗದ  ನಡುವೆ ಭರದ ಸಿದ್ಧತೆ 

Published

on

ಸಾಲಿಗ್ರಾಮ : –ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಜಾನುವಾರು ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ಕೊರೊನಾ ಮತ್ತು ಜಾನುವಾರುಗಳ ಗಂಟುರೋಗದ ನಡುವೆ ಸಿದ್ದತೆಗಳು ಆರಂಭವಾಗಿವೆ.

ಗoಡು ದನಗಳ ಜಾತ್ರೆಯೆಂದೇ ರಾಜ್ಯಾದ್ಯಂತ ಪ್ರಸಿದ್ದವಾಗಿರುವ ಮೈಸೂರು ಜಿಲ್ಲೆಯ

ಚುಂಚನಕಟ್ಟೆ ಧನಗಳ ಜಾತ್ರೆಗೆ ಈಗಾಗಲೇ ಜಾನುವಾರುಗಳನ್ನು ಕಟ್ಟುವ ಧವಣಿ(ಜಾಗ) ಸಿದ್ದಪಡಿಸುತ್ತಿದ್ದು,ಈ ಜಾತ್ರೆಗೆ ಜಿಲ್ಲೆ ಮಾತ್ರವಲ್ಲದೇ

ಹಾಸನ,ಮಂಡ್ಯ,ಚಾಮರಾಜನಗರ,ಕೊಡಗು,ಚಿಕ್ಕಬಳ್ಳಾಪುರ, ಚಿಕ್ಕ ಮಂಗಳೂರು  ಮುಂತಾದ ಕಡೆಗಳಿಂದ

ಜಾನುವಾರುಗಳು ಆಗಮಿಸಲಿದ್ದು ಜಾತ್ರಾಮಾಳ ದನಗಳ ಬರುವಿಕೆಗೆ ಕಾದು ಕುಳಿತಿದೆ.

ಸುಗ್ಗಿ ಮುಗಿದ ತಕ್ಷಣ ತಮ್ಮ ಜಾನುವಾರುಗಳನ್ನು ವಿಶ್ರಾಂತಿಗಾಗಿ ಹಾಗೂ ಇನ್ನು ಹಲವರು ಪ್ರತಿಷ್ಠೆಯಿಂದ ತಾವು ಸಲಹಿದ ದನಗಳನ್ನು ಇಲ್ಲಿಗೆ ತರಲಿದ್ದು ಮುಖ್ಯವಾಗಿ ಗಂಡು ದನಗಳೇ ಹೆಚ್ಚಾಗಿ ಕಟ್ಟುವುದು ಜೊತೆಗೆ ಹಳ್ಳಿಕಾರ್ ತಳಿಯ ದನಗಳೇ

ಹೆಚ್ಚಾಗಿ ಆಗಮಿಸುವುದು, ಈ ದನಗಳ ಜಾತ್ರೆಯ ವಿಶೇಷವಾಗಿದ್ದು ಕಳೆದ ೨ವರ್ಷ ಕೊರೊನಾ,೧ವರ್ಷ ಚರ್ಮಗಂಟು ರೋಗದಿಂದ ಕಳೆಗುಂದಿದ್ದ ಜಾತ್ರೆ ಈ ಬಾರಿಯಾದರೂ ತನ್ನ ಹಳೆಯ ಅದ್ದೂರಿತನದಿಂದ ನಡೆಯಬೇಕೆನ್ನುವುದು ರೈತರ ಒತ್ತಾಯವಾಗಿದೆ.

ರಾಜ್ಯದಲ್ಲಿ ಈಗಾಗಲೇ ಕೊರೊನಾ ಮತ್ತೆ ದಾಂಗುಡಿಯಿಟ್ಟಿದ್ದು ಸಾವಿರಾರು ಜನರು ಜಾತ್ರೆಗಾಗಿ

ದೂರದ ಊರುಗಳಿಂದ ಆಗಮಿಸಲಿದ್ದು ಮಾರ್ಗಸೂಚಿಗಳನ್ನು ಪಾಲಿಸುವುದು

ಕಷ್ಟಸಾಧ್ಯವೇ ಆಗಿದ್ದು, ಅಲ್ಲದೇ ಜಾನುವಾರುಗಳಿಗೆ ಮಾರಾಣಾಂತಿಕ ಚರ್ಮಗಂಟುರೋಗ ನಿಯಂತ್ರಣಕ್ಕೆ ಬಾರದೇ ಇರುವುದು, ದನಗಳ ಜಾತ್ರೆಯ ಮೇಲೆ

ಕರಿನೆರಳು ಬೀಳುವಂತೆ ಮಾಡಿದ್ದು,ತಾಲ್ಲೋಕು ಆಡಳಿತ ಮಾತ್ರ ಜಾತ್ರೆಗೆ ಈಗಾಗಲೇ

ಸಿದ್ದತೆ ಆರಂಭಿಸಿದ್ದು ಕಳೆದ ಬಾರಿ ಜಾತ್ರಾ ಮಾಳದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೇ ದನಗಳು ಸೇರದಂತೆ ನಿರ್ಬಂಧ ವಿಧಿಸಿದ್ದರೂ ಜಾನುವಾರು ಜಾತ್ರೆಯನ್ನು ರೈತರು ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೊರೊನಾ ಒಂದೆಡೆ ನಿಯಂತ್ರಣದಲ್ಲಿದ್ದರೂ ಚರ್ಮಗಂಟು ರೋಗ ದನಕರುಗಳಿಗೆ

ಮಾರಣಾಂತಿಕವಾಗಿದ್ದು,ಹೊರಜಿಲ್ಲೆಗಳಿಂದ ಬರುವ ರಾಸುಗಳಿಂದಲೂ ಹರಡಬಹುದಾಗಿದ್ದು

ಈ ವಿಚಾರದಲ್ಲಿ ನಿರ್ಲಕ್ಷ ತರವಲ್ಲವಾಗಿದೆ.

ಒಟ್ಟಾರೆ ವರ್ಷಪೂರ್ತಿ ತನ್ನ ಸಾಕಿದವನಿಗಾಗಿ ದುಡಿಯುವ ದನಕರುಗಳು, ಜಾನುವಾರು

ಜಾತ್ರೆಯ ನೆಪದಲ್ಲಿ ತಾವು ಒಂದು ಪಿಕ್‌ನಿಕ್ ತೆರಳಿದಂತೆ ನಡೆಯುವ ಮೇಳವು

ದನಗಳ ಜಾತ್ರೆಯಾಗಿದ್ದು,ತಾಲ್ಲೋಕು ಆಡಳಿತ ಮೂಲಭೂತ ಸೌಕರ್ಯ ಕಲ್ಪಿಸಿ ಜಾತ್ರೆ

ಯಶಸ್ಸಿಗೆ ಸಹಕರಿಸಲಿ ಎಂಬುದು ಜನತೆಯ ಅಭಿಪ್ರಾಯವಾಗಿದೆ.

 

ಜಾತ್ರೆ,ಸಂತೆ ಹೀಗೆ ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ೬೫ವರ್ಷ ಮೇಲ್ಪಟ್ಟ , ವೃದ್ದರು,ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ ನಾಗರೀಕರು ಕೊರೊನಾ ಕಾರಣದಿಂದ, ಅನವಶ್ಯಕವಾಗಿ ಭಾಗವಹಿಸಬಾರದು, ನಮ್ಮ ಭಾಗದಲ್ಲಿ ಇದುವರೆವಿಗೂ ಯಾವುದೇ

ಪ್ರಕರಣಗಳು ಕಂಡುಬoದಿಲ್ಲ ಆದ್ದರಿಂದ ಸಾಕಷ್ಟು ಮುಂಜಾಗ್ರತೆ ವಹಿಸುವುದು , ಸಾರ್ವಜನಿಕರಿಗೂ ಒಳ್ಳೆಯದು.

ಡಾ|| ನಟರಾಜ್, ತಾಲ್ಲೋಕು ಆರೋಗ್ಯಾಧಿಕಾರಿಗಳು, ಕೆ.ಆರ್ ನಗರ

ಕಾಲುಬಾಯಿ ಜ್ವರ ಹಾಗೂ ಚರ್ಮಗಂಟುರೋಗ ಸಾಕಷ್ಟು ತಗ್ಗಿದೆ ಆದರೂ ಕಡ್ಡಾಯವಾಗಿ , ಲಸಿಕೆ ಹಾಕಿಸಿದ ಜಾನುವಾರುಗಳನ್ನು ಕರೆತರುವುದು ರೈತರ ದೃಷ್ಠಿಯಿಂದ ಹಾಗೂ ಜಾನುವಾರುಗಳಿಗೆ ಒಳ್ಳೆಯ ಕೆಲಸವಾಗಲಿದೆ ಈ ಬಗ್ಗೆ ಇಲಾಖೆ ವತಿಯಿಂದ ತಪಾಸಣೆ ಮಾಡಲು ಬಂದಾಗ ಲಸಿಕೆ ಧೃಢೀಕರಣ ಪತ್ರ ತೋರಿಸಬೇಕು ಹಾಗೂ ರೋಗಗ್ರಸ್ಥ, ರಾಸುಗಳನ್ನು ಯಾವುದೇ ಕಾರಣಕ್ಕೂ ಜಾತ್ರಾ ಮಾಳಕ್ಕೆ ಕರೆತರಬಾರದು.

ಡಾ|| ಡಿ.ಮಂಜುನಾಥ್, ಮುಖ್ಯ ಪಶುವೈಧ್ಯಾಧಿಕಾರಿಗಳು(ಆಡಳಿತ) ಪಶು ಆಸ್ಪತ್ರೆ ಕೆ.ಆರ್ ನಗರ.

 

 

ವರದಿ :ಎಸ್ ಬಿ ಹರೀಶ್  ಸಾಲಿಗ್ರಾಮ 

 

Continue Reading
Click to comment

Leave a Reply

Your email address will not be published. Required fields are marked *

Mysore

ಹಿರಿಯ ರಂಗಕರ್ಮಿ ನ.ರತ್ನ ಇನ್ನಿಲ್ಲ

Published

on

ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದ ನ.ರತ್ನ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.


ಅವರಿಗೆ 89 ವರ್ಷ ವಯಸ್ಸಾಗಿತ್ತು.
ಅವರಿಗೆ ಪುತ್ರ ಅಜಿತ್,‌ ಪುತ್ರಿ ಕವಿತಾರತ್ನ ಇದ್ದಾರೆ.


ಅವರು ರಚಿಸಿದ ‘ಶಾಂತಿ ಕುಟೀರ’ ನಾಟಕ ಈಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದರು. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಇಂದು ನಡೆಯಲಿದೆ.

Continue Reading

Mysore

ಕೆ ಆರ್ ನಗರ ಕಾಂಗ್ರೆಸ್ ಕಚೇರಿಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ನೆನಪು ಕಾರ್ಯಕ್ರಮ

Published

on

ಮಹದೇವ್ ಸಿಸಿ ಭೇರ್ಯ,
ಕೆ ಆರ್ ನಗರ – ಶ್ರೀನಿವಾಸ್ ಪ್ರಸಾದ್ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಕೂಡ ಅಳವಡಿಸಿಕೊಳ್ಳಿ ಎಂದು ಶಾಸಕ ಡಿ ರವಿಶಂಕರ್ ತಿಳಿಸಿದರು.
ಕೆ ಆರ್ ನಗರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶ್ರೀನಿವಾಸ್ ಪ್ರಸಾದ್ ಅವರ ಒಂದು ನೆನಪು ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕೆಪಿಸಿಸಿ ಸದಸ್ಯ ದೊಡ್ಡ ಸ್ವಾಮಿಗೌಡ ಮಾತನಾಡಿ ಶ್ರೀನಿವಾಸ್ ಪ್ರಸಾದ್ ರವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಸುಧೀರ್ಘಕಾಲ ಸಂಸದರಾಗಿ ಶಾಸಕರಾಗಿ ಕೆಲಸ ಮಾಡಿದಂತಹ ಅಭಿವೃದ್ಧಿ ಹರಿಕಾರರು ಅವರ ನೆನಪು ಸದಾ ಎಲ್ಲರಲ್ಲಿ ಇರಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಎಸ್ ಮಹದೇವ್ ಉದಯ್ ಶಂಕರ್, ನಗರ ಅಧ್ಯಕ್ಷ ಎಂ ಜೆ ರಮೇಶ್, ಕಾಂಗ್ರೆಸ್ ಎಷ್ಟಿ ಘಟಕದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ತೋಟಪ್ಪ ನಾಯಕ ಕಂಠಿಕುಮಾರ್ ನಂದೀಶ್, ಗೀತಾಮಹೇಶ್, ಶಾಂತಿರಾಜ್, ಅರ್ಜುನಳ್ಳಿ ರಾಜಯ್ಯ, ಡಿಕೆ ಕೊಪ್ಪಲ್ ರಾಜಯ್ಯ, ಹೆಬ್ಬಾಳು ವೇಣು, ಸಿ ಪಿ ರಮೇಶ್, ಡಿ. ದೇವರಾಜ್, ಹೆಬ್ಬಾಳ್ ಸೋಮಣ್ಣ, ಕಾಂತರಾಜ್ ಮಾರ್ಚಳ್ಳಿ ಶಿವರಾಮ್, ನಂಜುಂಡ, ಸ್ವಾಮಿ , ಹರಂಬಳ್ಳಿ ನವೀನ್, ಕಾಂತರಾಜ್, ಬಿ.ಟಿ ಮೋಹನ್, ಸಿದ್ದರಾಜ್, ಮಧುವನಹಳ್ಳಿ ಮಂಜು,ಇತರರು

Continue Reading

Mysore

ಯೋಗ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅಮೂಲ್ಯ ಕೊಡುಗೆ – ಶ್ರೀ ಥಾವರ್ ಚಂದ್ ಗೆಹ್ಲೋಟ್

Published

on

ಮೈಸೂರು.ಜೂನ್.18: ಯೋಗವನ್ನು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಸೇರಿಸಲಾಗಿದೆ. ಇಂದು ಇಡೀ ಪ್ರಪಂಚದ ಭಾಗವಾಗಿರುವ ನಮ್ಮ ಗ್ರಂಥಗಳಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸಲಾಗಿದೆ, ಅದಕ್ಕಾಗಿಯೇ ಭಾರತವನ್ನು ಯೋಗ ಗುರು ಎಂದು ಪರಿಗಣಿಸಲಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಎನ್ ಸಿ ಇ ಆರ್ ಟಿ, ಮೈಸೂರು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯೋಗ ಒಲಂಪಿಯಾಡ್-2024 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯೋಗ ಮಾಡುವಾಗ, ನಾವು ದೈಹಿಕವಾಗಿ ಆರೋಗ್ಯಕರ, ಮಾನಸಿಕವಾಗಿ ಶಾಂತ ಮತ್ತು ಭಾವನಾತ್ಮಕವಾಗಿ ತೃಪ್ತಿ ಹೊಂದುತ್ತೇವೆ. ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಯೋಗವು ಉತ್ತಮ ಮಾರ್ಗವಾಗಿದೆ. “ಯೋಗ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದೆ.” ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿನ ಧರ್ಮಗಳ ಸಂಸತ್ತಿನಲ್ಲಿ ಯೋಗದ ವೈಶಿಷ್ಟ್ಯಗಳನ್ನು ಪ್ರಸ್ತಾಪಿಸಿದರು ಮತ್ತು ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದರು ಎಂದು ತಿಳಿಸಿದರು.

 

27 ಸೆಪ್ಟೆಂಬರ್ 2014 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಗವನ್ನು ಅಳವಡಿಸಿಕೊಳ್ಳುವಂತೆ ವಿಶ್ವದ ಎಲ್ಲಾ ದೇಶಗಳಿಗೆ ಕರೆ ನೀಡಿದರು ಮತ್ತು ಯೋಗ ದಿನವನ್ನು ಪ್ರತಿ ವರ್ಷ ಆಚರಿಸಬೇಕು ಎಂದು ಪ್ರಸ್ತಾಪಿಸಿದರು.ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಕೇವಲ 90 ದಿನಗಳಲ್ಲಿ ಅಂಗೀಕರಿಸಿತು ಮತ್ತು ಜಾರಿಗೊಳಿಸಿತು. ಅಂದಿನಿಂದ, ದೇಶ ಮತ್ತು ಪ್ರಪಂಚದಲ್ಲಿ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 

ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಥೀಮ್ “ಮಹಿಳಾ ಸಬಲೀಕರಣಕ್ಕಾಗಿ ಯೋಗ”. ಯೋಗವು ಅವರ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಒಳಗೊಂಡ ಮಹಿಳೆಯರನ್ನು ಸಬಲೀಕರಣಗೊಳಿಸುವ ಒಂದು ಸಮಗ್ರ ಸಾಧನವಾಗಿದೆ. ಯೋಗವು ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಾಗಿಡುವ ಶಕ್ತಿಯನ್ನು ಹೊಂದಿದೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಯೋಗವು ಸಹಾಯಕವಾಗಿರುವುದು ಸಾಬೀತುಪಡಿಸಿದೆ ಎಂದು ಹೇಳಿದರು.

ಯೋಗಕ್ಕಾಗಿ ಪ್ರಧಾನಮಂತ್ರಿಯವರು ಕೈಗೊಂಡ ಅರ್ಥಪೂರ್ಣ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆದು, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ 2016 ರಲ್ಲಿ ರಾಷ್ಟ್ರೀಯ ಯೋಗ ಒಲಿಂಪಿಯಾಡ್ ಅನ್ನು ಆಯೋಜಿಸಿತು. ಈ ಪ್ರಯಾಣವು 2016 ರಿಂದ ಇಲ್ಲಿಯವರೆಗೆ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ತಿಳಿಸಿದರು.

 

ಮಕ್ಕಳಲ್ಲಿ ಯೋಗದ ಆಸಕ್ತಿಯನ್ನು ಜಾಗೃತಗೊಳಿಸುವುದು, ಯೋಗದ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡುವುದು ಮತ್ತು ಅವರ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಯೋಗದ ಮಹತ್ವವನ್ನು ವಿವರಿಸುವುದು ಇವರ ಉದ್ದೇಶವಾಗಿದೆ. ಯೋಗ ಒಲಿಂಪಿಯಾಡ್ ನಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಸಂತಸದ ವಿಷಯ. ಯೋಗದ ಮೂಲಕ ಮಕ್ಕಳಲ್ಲಿ ವಿವಿಧ ಪಂಚಕೋಶ, ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳನ್ನು ಅಭಿವೃದ್ಧಿಪಡಿಸುವುದು ಭಾರತ ಸರ್ಕಾರದ ಗುರಿಯಾಗಿದೆ ಎಂದರು.

ದೇಶದ ದಕ್ಷಿಣ ಭಾಗದಲ್ಲಿರುವ ಕರ್ನಾಟಕದ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಯೋಗ ಒಲಂಪಿಯಾಡ್ ಆಯೋಜಿಸುತ್ತಿರುವುದು ಸಂತಸದ ವಿಷಯ. 26 ನೇ ರಾಷ್ಟ್ರೀಯ ಯುವ ಉತ್ಸವವನ್ನು ಆಯೋಜಿಸುವ ಸಂದರ್ಭದಲ್ಲಿ, ಜನವರಿ 15, 2023 ರಂದು, ಕರ್ನಾಟಕ ರಾಜ್ಯದಲ್ಲಿ ಯೋಗದ ಬೃಹತ್ ಕಾರ್ಯಕ್ರಮವನ್ನು ಆಚರಿಸಲಾಯಿತು, ಯೋಗಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ರಚಿಸಲಾಯಿತು. ಕರ್ನಾಟಕ ಸರ್ಕಾರವು “ಹರ್ ಘರ್ ಯೋಗ” ದ ಮೂಲಕ ಕರ್ನಾಟಕ ರಾಜ್ಯವನ್ನು ಭಾರತದ ಪ್ರಮುಖ ಯೋಗ ಸಾಕ್ಷರ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತಿದೆ ಎಂದು ಪ್ರಶಂಸಿದರು.

ಭಾರತದ ಪುಣ್ಯಭೂಮಿಯಿಂದ ಹುಟ್ಟಿಕೊಂಡ ಯೋಗವು ‘ವಸುಧೈವ ಕುಟುಂಬಕಂ’ ಮತ್ತು ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯ ಎಂಬ ಚಿಂತನೆಯೊಂದಿಗೆ ಜನರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದೆ. ಇಂದು ಪ್ರಪಂಚದಾದ್ಯಂತ ಜನರು ತಮ್ಮ ಜೀವನದಲ್ಲಿ ಯೋಗವನ್ನು ಸೇರಿಸಿಕೊಂಡಿದ್ದಾರೆ ಮತ್ತು ಯೋಗದ ಕಾರಣದಿಂದಾಗಿ, ಜನರು ಸಂತೋಷದಿಂದ, ದೈಹಿಕವಾಗಿ ಸಾಮರ್ಥ್ಯ ಮತ್ತು ದೀರ್ಘಾಯುಷ್ಯವನ್ನು ಬದುಕುತ್ತಿದ್ದಾರೆ ಎಂದು ಹೇಳಿದರು.

 

ಯೋಗ ಮತ್ತು ಪ್ರಾಣಾಯಾಮದ ಧನಾತ್ಮಕ ಪರಿಣಾಮಗಳನ್ನು ಸ್ವಂತ ಅನುಭವಿಸಿದ್ದೇನೆ. ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಮತ್ತು ಅದರ ಮಹತ್ವವನ್ನು ವಿವರಿಸುವ ಮೂಲಕ ಯೋಗವನ್ನು ಮಾಡಲು ಜನರನ್ನು ಪ್ರೇರೇಪಿಸಬೇಕು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ದಿನೇಶ್ ಪ್ರಸಾದ್ ಸಕ್ಲಾನಿ, ನಿರ್ದೇಶಕರು, NCERT ನವದೆಹಲಿ, ಪ್ರೊ ವೈ ಶ್ರೀಕಾಂತ್, ಮೈಸೂರು ವಿವಿ ಕುಲಪತಿಗಳಾದ ಎನ್.ಕೆ.ಲೋಕನಾಥ್, ರಾಜ್ಯ ಮುಕ್ತ ವಿವಿಯ ಕುಲಪತಿಗಳಾದ ಪ್ರೊ. ಶರಣಪ್ಪ ಹಲ್ಸೆ ಹಾಗೂ ಗಣ್ಯರು ಉಪಸ್ಥಿತರಿದ್ದರು.

Continue Reading

Trending

error: Content is protected !!