Connect with us

Kodagu

ಇಂದಿನಿಂದ ಕುಂಜಿಲ ಪೈನರಿ ಮಖಾಂ ಉರೂಸ್ ಆರಂಭ- ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಿರ್ಧಾರ.

Published

on

ನಾಪೋಕ್ಲು :ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕುಂಜಿಲ ಪೈನರಿ ಮಖಾಂ ಉರೂಸ್ ಸಮಾರಂಭವು ತಾ.23ರಿಂದ 27ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಅಲಿ ತಿಳಿಸಿದ್ದಾರೆ.

ಕುಂಜಿಲ ಪೈನರಿ ಜಮಾಅತ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದು ಜಾತಿ ಧರ್ಮ ಭೇದ ಮರೆತು ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಜಮಾಅತ್ ಕಾರ್ಯದರ್ಶಿ ಸಹೀದ್ ಪಯ್ಯಡತ್ ಮಾತನಾಡಿ ಫೆ.23 ಶುಕ್ರವಾರ ಜುಮಾ ನಮಾಜ್ ಬಳಿಕ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ.ಸೌಕತ್ ಅಲಿ ದ್ವಜಾರೋಹಣ ನೆರವೇರಿಸುವುದರ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
ಅಂದು ರಾತ್ರಿ ಕಾಂತಪುರಂ ಅಬ್ದುಲ್ ಲತೀಫ್ ಸಖಾಫಿ ಅವರ ನೇತೃತ್ವದಲ್ಲಿ ಆತ್ಮೀಯ ಮದನಿಯಂ ಮಜ್ಲಿಸ್ ನಡೆಯಲಿದೆ.

ಫೆ.24 ರಂದು ರಾತ್ರಿ ಸ್ವಲಾತ್ ವಾರ್ಷಿಕ ಮತ್ತು ದುಆ ಮಜ್ಲಿಸ್ ಗೆ ರಈಸುಲ್ ಉಲಮಾ ಶೈಖುನಾ ಸುಲೈಮಾನ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ.
ಫೆ.25 ರಂದು ರಾತ್ರಿ ಮುಳ್ಳೂರ್ ಕರ ಮಹಮ್ಮದಲಿ ಸಖಾಫಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ.

ಫೆ.26ರಂದು ಮದ್ಯಾಹ್ನ 1.30ಗಂಟೆಗೆ ಸೌಹಾರ್ದ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು ಡಾ.ಅಬ್ದುಲ್ ರಶೀದ್ ಝೖನಿ ಕಾಮಿಲ್ ಸಖಾಫಿ ಕಕ್ಕಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ.ಮೌಲಾನ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್ ಸೇರಿದಂತೆ ವಿವಿಧ ಧಾರ್ಮಿಕ ಸಾಮಾಜಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಅಂದು ಸಂಜೆ 4ಗಂಟೆಗೆ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ಅಂದು ರಾತ್ರಿ ಅನ್ವರಲಿ ಹುದವಿ ಅವರ ನೇತೃತ್ವದಲ್ಲಿ ಇಸ್ಕ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.
ಫೆ.27 ರಂದು ರಾತ್ರಿ ವಲಿಯುದ್ದಿನ್ ಫೈಝಿ ವಝಕ್ಕಾಡ್ ಅವರ ನೇತೃತ್ವದಲ್ಲಿ ನೂರೇ ಅಜ್ಮಿರ್ ಆತ್ಮೀಯ ಮಜ್ಲಿಸ್ ಜರುಗಲಿದೆ.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ,ಸಯ್ಯದ್ ಶರಫುದ್ದಿನ್ ಸಅದಿ ಅಲ್ ಮುಖೈಬಿಲಿ ಮುಳವೂರ್ ತಂಙಳ್, ಸಯ್ಯದ್ ಶಿಯಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರ್ ತಂಙಳ್, ನಿಝಾರ್ ಅಹ್ಸನಿ ಕಕ್ಕಡಿಪುರಂ, ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ ಭಾಗವಹಿಸಲಿದ್ದಾರೆ.


ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉರೂಸ್ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಸಹೀದ್ ಕೋರಿದರು.

ಸುದ್ದಿಗೊಷ್ಟಿಯಲ್ಲಿ ಜಮಾಅತ್ ಉಪಾಧ್ಯಕ್ಷ ಇಬ್ರಾಹಿಂ(ಇಬ್ಬು )ಸಲಹಾ ಸಮಿತಿ ಸದಸ್ಯರಾದ ಮೂಸಾ ಪತ್ತಂಗೋಡ್, ಹಮೀದ್ ಪಯ್ಯಡತ್,ದರ್ಸ್ ಸಮಿತಿ ಉಪಾಧ್ಯಕ್ಷ ಉಸ್ಮಾನ್ ವಯಕೋಲ್ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಕೂರ್ಗ್ ಪ್ಲಾಂಟಸ್೯ ಅಸೋಸಿಯೇಷನ್ 145 ನೇ ವಾಷಿ೯ಕ ಮಹಾಸಭೆ

Published

on

ಮಡಿಕೇರಿ : ಹೋಬಳಿ ಮಟ್ಟದಲ್ಲಿ ಸಮುದಾಯ ಕೖಷಿಕ ಗುಂಪುಗಳನ್ನು ಪ್ರಾರಂಭಿಸುವ ಮೂಲಕ ಆಯಾ ವಲಯಗಳಲ್ಲಿರುವ ಕಾಫಿ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದು ಗುಣಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ವಿನೂತನ ಯೋಜನೆ ಭಾರತೀಯ ಕಾಫಿ ಮಂಡಳಿ ಮುಂದಿದೆ ಎಂದು ಮಂಡಳಿಯ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಮತ್ತು ಕಾಯ೯ದಶಿ೯ ಡಾ. ಕೆ ಜಿ ಜಗದೀಶ್ ಹೇಳಿದರು.
ನಗರದ ಕ್ರಿಸ್ಟಲ್ ಕೋಟ್೯ ಸಭಾಂಗಣದಲ್ಲಿ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ನ 145 ನೇ ವಾಷಿ೯ಕ ಮಹಾಸಭೆಗೆ ಉದ್ಘಾಟಿಸಿ ಮಾತನಾಡಿದ ಜಗದೀಶ್, ಕಾಫಿ ಬೆಳೆಯ ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಭಾರತೀಯ ಕಾಫಿ ಬೆಳೆಗೆ ಎಂದಿಗೂ ಹಿನ್ನಡೆಯಾಗಲಾರದು. ಈ ನಿಟ್ಟಿನಲ್ಲಿ ಕಾಫಿ ಬೆಳೆಯ ಗುಣಮಟ್ಟ ಕಾಪಾಡುವ ದೖಷ್ಟಿಯಿಂದ ಪ್ರತೀ ಹೋಬಳಿಯಲ್ಲಿಯೂ 100 ಕೖಷಿಕರನ್ನೊಳಗೊಂಡ ಸಮುದಾಯ ಗುಂಪನ್ನು ಪ್ರಾರಂಭಿಸಿ, ಅವರು ಬೆಳೆದ ಕಾಫಿಯನ್ನು ಸಂಗ್ರಹಿಸಿ ಅದರ ಗುಣಮಟ್ಟದ ಬಗ್ಗೆ (ಕಾಫಿ ಕಪ್ಪಿಂಗ್ ಸ್ಕೋರ್ ) ಪ್ರಯೋಗಾಲಯದಿಂದ ಮಾಹಿತಿ ಪಡೆಯಲಾಗುತ್ತದೆ. ಗುಣಮಟ್ಟ ಹೆಚ್ಚಳವಾಗಬೇಕೆಂದಾದಲ್ಲಿ ಯಾವ ರೀತಿ ಗುಣಮಟ್ಟ ಹೆಚ್ಚಳ ಮಾಡಬಹುದು ಎಂಬ ಬಗ್ಗೆಯೂ ಕಾಫಿ ಮಂಡಳಿಯಿಂದ ಸೂಕ್ತ ಮಾಹಿತಿಯನ್ನು ತಜ್ಞರು ಕೖಷಿಕರಿಗೆ ನೀಡಲಿದ್ದಾರೆ. ಈ ಯೋಜನೆಯಿಂದ ಪ್ರತೀ ಗ್ರಾಮದ ಕಾಫಿ ಕೖಷಿಕರಿಗೆ ಕಾಫಿಯ ಗುಣಮಟ್ಟ ಹೆಚ್ಚಳ ಕಾಪಾಡಿಕೊಳ್ಳಲು ಸಾಧ್ಯವಾಗಿ ಉತ್ತಮ ಬೆಲೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಭಾರತೀಯ ಕಾಫಿ ಮಂಡಳಿಯಿಂದ ಶೀಘ್ರದಲ್ಲಿಯೇ 2 ವಷ೯ಗಳ ಡಿಪ್ಲೋಮ ಪದವಿಯನ್ನು ನೀಡಲಾಗುತ್ತದೆ. ಇದರಿಂದಾಗಿ ಯುವಪೀಳಿಗೆಯು ಕಾಫಿ ಕೖಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದ ಡಾ ಜಗದೀಶ್, ತೋಟ ನಿವ೯ಹಣೆಗೆ ಸೂಕ್ತ ತರಬೇತಿ ಹೊಂದಿದವರ ಕೊರತೆಯನ್ನು ಗಮನಿಸಿ ಕಾಫಿ ಮಂಡಳಿಯು ತೋಟಗಳ ಸೂಪರ್ ವೈಸರ್ ಗಳು ಮತ್ತು ವ್ಯವಸ್ಥಾಪಕರಾಗಿ ತರಬೇತಿ ನೀಡುವ ಯೋಜನೆ ಪ್ರಾರಂಭಿಸಲಿದೆ. 10 ನೇ ತರಗತಿ ಉತ್ತೀಣ೯ರಾದವರು ಈ ತರಬೇತಿಯನ್ನು ಪಡೆಯುವ ಮೂಲಕ ಕಾಫಿ ತೋಟಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಅಂತೆಯೇ ಹೆಚ್ಚುತ್ತಿರುವ ಕಾಫಿ ಕೆಫೆಗಳಿಗೆ ಸೂಕ್ತ ಸಿಬ್ಬಂದಿ ಅಗತ್ಯತೆಯನ್ನು ಮನಗಂಡು ಮಹಿಳೆಯರು, ಮಕ್ಕಳೂ ಸೇರಿದಂತೆ ಆಸಕ್ತಿಯುಳ್ಳವರಿಗೆ ಕೆಫೆ ಬರಿಸ್ಟಾ (ಕೆಫೆ ನಿವಾ೯ಹಕರು) ತರಬೇತಿಯನ್ನು ನೀಡುವ ಯೋಜನೆ ಮಂಡಳಿಯ ಮುಂದಿದೆ. ಈ ಮೂಲಕ ಕಾಫಿ ತೋಟಗಳಿಗೆ ಬರುವ ಸಂದಶ೯ಕರು, ಪ್ರವಾಸಿಗರಿಗೂ ಉತ್ತಮ ಗುಣಮಟ್ಟದ ಸ್ವಾದಿಷ್ಟ ಕಾಫಿಯನ್ನು ತಯಾರಿಸಿ ನೀಡಬಹುದಾಗಿದೆ ಎಂದೂ ಡಾ ಜಗದೀಶ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಭವಿಷ್ಯದಲ್ಲಿ ಕಾಮಿ೯ಕರ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಹಿನ್ನಲೆಯಲ್ಲಿ ಶೇ 60 ರಷ್ಟು ತೋಟವನ್ನಾದರೂ ಯಾಂತ್ರೀಕರಣಕ್ಕೆ ಒಳಪಡಿಸುವ ಅನಿವಾಯ೯ತೆ ಕಾಫಿ ಕೖಷಿಕರಿಗೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸದೇ ಕಾಮಿ೯ಕರನ್ನೇ ನಂಬಿಕೊಂಡರೆ ಸಮಸ್ಯೆ ಖಂಡಿತಾ ಎಂದು ಎಚ್ಚರಿಸಿದ ಜಗದೀಶ್, ಪ್ರಸ್ತುತ ಶೇ 5 ರಷ್ಟಿರುವ ಸ್ಲೆಷಾಲಿಟಿ ಕಾಫಿ ಶೇ, 40 ರಷ್ಟು ಮಾರುಕಟ್ಟೆ ಪ್ರಮಾಣ ಹೊಂದುವ ಸಾಧ್ಯತೆ ಇದೆ, ಹೀಗಾಗಿ ಸ್ಪೆಷಾಲಿಟಿ ಕಾಫಿಯತ್ತ ಹೆಚ್ಚಿನ ಗಮನ ನೀಡುವುದು ಸೂಕ್ತ ಎಂದೂ ಅವರು ಹೇಳಿದರು.

ಭಾರತದಲ್ಲಿ ಕಾಫಿಯ ಬಗ್ಗೆ ಯುವಪೀಳಿಗೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದ ಡಾ ಜಗದೀಶ್, 2018 ರಲ್ಲಿ ಕಾಫಿ ಮಂಡಳಿಗೆ 180 ತೋಟಿ ರುಪಾಯಿ ಅನುದಾನ ನೀಡಲಾಗುತ್ತಿತ್ತು, ಈ ವಷ೯ 307 ಕೋಟಿ ರುಪಾಯಿಗಳ ಅನುದಾನ ದೊರಕಿದ್ದು ಸಾಕಷ್ಟು ಯೋಜನೆಗಳನ್ನು ಈ ಅನುದಾನದ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಡಾ ಜಗದೀಶ್, ಮುಂದಿನ 1 ವಷ೯ದಲ್ಲಿಯೇ ಭಾರತಾದ್ಯಂತ 3 ಸಾವಿರ ಕಾಫಿ ಕೆಫೆಗಳು ಪ್ರಾರಂಭವಾಗುತ್ತಿರುವುದು ಕೂಡ ಕಾಫಿ ಕ್ಷೇತ್ರದ ಭವಿಷ್ಯದ ಬಗ್ಗೆ ಆಶಾಭಾವನೆ ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಳೆದ ವಷ೯ 2 92 ಮೆಟ್ರಿಕ್ ಟನ್ ಉತ್ಪಾದನೆಯಿದ್ದ ಭಾರತೀಯ ಕಾಫಿ ಈ ವಷ೯ 3 60 ಮೆಟ್ರಿಕ್ ಟನ್ ಗಳ ಮೂಲಕ 80 ಸಾವಿರ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಳ ಕಂಡಿರುವುದು ಕೂಡ ಹಷ೯ದಾಯಕ ಬೆಳವಣಿಗೆಯಾಗಿದ್ದರೂ ಅಕಾಲಿಕ ಮಳೆಯಿಂದಾಗಿ ಕಾಫಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾದ ಸಾಧ್ಯತೆ ಚಿಂತೆಗೀಡು ಮಾಡಿದೆ ಎಂದೂ ಹೇಳಿದರು.
ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿದೇ೯ಶಕ ಪಿ ಎ ಮಂದಣ್ಣ, ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಎ ನಂದ ಬೆಳ್ಯಪ್ಪ ಮಾತನಾಡಿದರು.
ಡಾ ರಾಜಾ ವಿಜಯ್ ಕುಮಾರ್, ಯುನೆಟೈಡ್ ಕಿಂಗ್ ಡಮ್ ನ ಕೖಷಿ ಪರಿಣಿತ ಮಾಕ್೯ ತ್ರಿಸ್ನಿ, ಕೆ ಸುದೀಂದ್ರ ಅವರು ಕಾಫಿ ಕೖಷಿ ಸಂಬಂಧಿತ ವಿವಿಧ ವಿಚಾರಗಳ ಬಗ್ಗೆ ಪ್ರಾತಕ್ಷಿಕೆ ಮೂಲಕ ಉಪಯುಕ್ತ ಮಾಹಿತಿಗಳನ್ನು ಬೆಳೆಗಾರರಿಗೆ ನೀಡಿದರು.

ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಕಾಯ೯ದಶಿ೯ ಸಿ ಕೆ ಬೆಳ್ಳಿಯಪ್ಪ, ಉಪಾಧ್ಯಕ್ಷ ಎ ಚಂಗಪ್ಪ ವೇದಿಕೆಯಲ್ಲಿದ್ದರು.

ಕಾಯ೯ಕ್ರಮದಲ್ಲಿ ಕನಾ೯ಟಕ ಕಾಫಿ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಕೆ ರಾಜೀವ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷರಾದ ನಡಿಕೇರಿಯಂಡ ಬೋಸ್ ಮಂದಣ್ಣ, ಬಿ ಡಿ ಮಂಜುನಾಥ್, ಮೋಹನ್ ದಾಸ್, ಕೆ ಪಿ ಉತ್ತಪ್ಪ ಸೇರಿದಂತೆ ಕಾಫಿ ಉದ್ಯಮದ ಅನೇಕರು ಹಾಜರಿದ್ದರು ವಿವಿಧ ಕೖಷಿ ಯಂತ್ರೋಪಕರಣಗಳ ಪ್ರದಶ೯ನ ಮತ್ತು ಮಾರಾಟ ಆಯೋಜಿಸಲ್ಪಟ್ಟಿತ್ತು.

Continue Reading

Kodagu

ರಾಷ್ಟ್ರೀಕೃತ ಬ್ಯಾಂಕ್ ಶಾಖೆಗೆ ಕನ್ನ: ಯತ್ನ ವಿಫಲ: ದೂರು ದಾಖಲು

Published

on

ಸಾಲು ಸಾಲು ರಜೆಯನ್ನು ಗಮನಿಸಿದ ಚೋರರ ಗುಂಪು ಒಂದು ರಾಷ್ಟೀಕೃತ ಬ್ಯಾಂಕ್ ಶಾಖೆಗೆ ಕನ್ನ ಹಾಕಿ ಯತ್ನ ವಿಫಲವಾದ ಘಟನೆ ವಿರಾಜಪೇಟೆ ಕಾಕೋಟುಪರಂಬು ನಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮದ ಬ್ಯಾಂಕ್ ಅಫ್ ಬರೋಡ ಶಾಖೆಗೆ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಖದೀಮರು ಬ್ಯಾಂಕ್ ನ ಗೋಡಗೆ ಕನ್ನ ತೊರೆದು ಒಳ ನುಗ್ಗುವ ಪ್ರಯತ್ನ ವಿಫಲವಾಗಿದೆ.ಬ್ಯಾಂಕ್ ಗಳಿಗೆ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಹಾಗೂ ಶನಿವಾರ ರವಿವಾರ ಎಂದು ಸಾಲು ಸಾಲು ರಜೆಯಾಗಿತ್ತು. ರಜೆಯಾದ ಕಾರಣ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಗೆ ಆಗಮಿಸುವುದಾಗಲಿ ನೋಡುವುದಾಗಲಿ ಪ್ರಯತ್ನ ಮಾಡುವುದಿಲ್ಲ ಎಂದು ಭಾವಿಸಿದ ಖದೀಮ ತಂಡ ರಾತ್ರಿಯ ವೇಳೆಯಲ್ಲಿ ತನ್ನ ಕೈಚಳಕದಿಂದ ಬ್ಯಾಂಕ್ ನ ಮುಂದೆ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮೆರಾವನ್ನು ನಾಶ ಪಡಿಸುತ್ತಾರೆ. ತದ ನಂತರ ವ್ಯವಸ್ಥಾಪಕರ ಕೋಣೆಯ ಗೋಡೆಯ ಮೇಲೆ ರಂದ್ರ ಕೊರೆಯುತ್ತಾರೆ.. ಯಾರಿಗೂ ಸಂದೇಹ ಬಾರದಂತೆ ಕೊರೆದಿರುವ ರಂದ್ರಕ್ಕೆ ಕಾಗದ ಚೂರುಗಳನ್ನು ಅಂಟಿಸಿ ತೆರಳುತ್ತಾರೆ.. ಅಂದರೆ ಮರುದಿನವು ಕಾರ್ಯಚರಣೆ ಮುಂದುವರೆಸಿ ಬ್ಯಾಂಕ್ ನಲ್ಲಿರುವ ಚಿನ್ನ ಆಭರಣ ಮತ್ತು ನಗದು,ದಾಖಲೆ ಪತ್ರಗಳನ್ನು ಕಳ್ಳತನ ಮಾಡುವ ಉದ್ದೇಶ ಇದ್ದಿರಬಹುದು. ದಿನಾಂಕ ೩೦-೧೦-೨೦೨೪ ರಿಂದ ೦೩-೧೧-೨೦೨೪ ರ ವರೆಗೆ ರಜೆ ಹಿನ್ನಲೆಯಾಗಿತ್ತು. ಬ್ಯಾಂಕ್ ವ್ಯವಸ್ಥಾಪಕರು ಬ್ಯಾಂಕ್ ಸಿಬ್ಬಂದಿಯೋರ್ವನಿಗೆ ಬ್ಯಾಂಕ್ ಬಳಿ ತೆರಳಿ ನೋಡಿಕೊಂಡು ಬರವಂತೆ ತಿಳಿಸಿದ್ದಾರೆ. ಸಹ ಸಿಬ್ಬಂದಿಯಾದ ಸುದೀಶ್ ಎಂಬುವವರು ದಿನಾಂಕ ೩೧-೧೦-೨೦೨೪ ರ ಸಂಜೆ ೦೪ ರ ವೇಳೆಯಲ್ಲಿ ತೆರಳಿದ್ದಾರೆ. ಬ್ಯಾಂಕ್ ನ ಸಿ.ಸಿ. ಕ್ಯಾಮರಾ ಸುಟ್ಟು ಕರುಕಲಾದ ಸ್ಥಿತಿಯಲ್ಲಿ ಗೋಚರಿಸಿದೆ.

ಸಂದೇಹದಿಂದ ಬ್ಯಾಂಕ್ ಹಿಂಬದಿಗೆ ತೆರಳಿದ್ದಾರೆ ಗೋಡೆಯ ಮೇಲೆ ಕಾಗದ ಪತ್ರಗಳನ್ನು ಅಂಟಿಸಿರುವಂತೆ ಗೋಚರಗೊಂಡಿದೆ. ಕಾಗದ ಪತ್ರಗಳನ್ನು ಅಲುಗಾಡಿಸಿದ ಸಂಧರ್ಭ ಗೋಡೆಯ ಮೇಲೆ ರಂದ್ರ ಮಾಡಿರುವುದು ಬೆಳಕಿಗೆ ಬಂದಿದೆ. ಸಿಬ್ಬಂದಿಯು ವ್ಯವಸ್ಥಾಪಕರೀಗೆ ದೂರವಾಣಿ ಕರೆ ಮಾಡಿ ಕಳ್ಳತನ ಮಾಡಲು ಯತ್ನ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಮಾಹಿತಿ ಪಡೆದ ವ್ಯವಸ್ಥಾಪಕರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬ್ಯಾಂಕ್ ನ ಉನ್ನತ ಅಧಿಕಾರಿಗಳೋಂದಿಗೆ ಘಟನೆ ಯ ಬಗ್ಗೆ ತಿಳಿಸಿದ್ದಾರೆ. ದಿನಾಂಕ ೦೧-೧೧-೨೦೨೪ ರಂದು ಬ್ಯಾಂಕ್ ಆಫ್ ಬರೋಡ ಕಾಕೋಟುಪರಂಬು ಶಾಖೆಯ ವ್ಯವಸ್ಥಾಪಕರಾದ ನವೀನ್ ಕುಮಾರ್ ಎಸ್ ಅವರು ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಭಾರತೀಯ‌ ನ್ಯಾಯ ಸಂಹಿತೆ 331(3),331(4),305(e) 62 ಕಾಯ್ದೆಯಂತೆ ಕಳ್ಳತನ ಕ್ಕೆ ಪ್ರಯತ್ನ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿರುವ ವಿರುದ್ದ ಪೊಲೀಸರಿಂದ ತೀವ್ರ ಸ್ವರೂಪದ ತನಿಖೆ ಆರಂಭಿಸಲಾಗಿದೆ..

ಕಿಶೋರ್ ಕುಮಾರ್ ಶೆಟ್ಟಿ

Continue Reading

Kodagu

ದೇವಾಲಯದ ಹುಂಡಿ ಕಳ್ಳತನ

Published

on

ಶನಿವಾರಸಂತೆ ವಿಜಯ ವಿನಾಯಕ ದೇವಾಲಯದಲ್ಲಿ ಕಳ್ಳತನ

ಭಾನುವಾರ ರಾತ್ರಿ ದೇವಾಲಯದ ಬಾಗಿಲು ಮುರಿದು ದೇವಾಲಯದ ಒಳಗಡೆ ಇದ್ದ ಹುಂಡಿ ಹೊತ್ತು ಪರಾರಿಯಾಗಿದ್ದಾರೆ.

ಸ್ಕೂಟಿಯಲ್ಲಿ ಬಂದು ಕಳ್ಳತನ ಮಾಡಿರುವ ಕಳ್ಳ.

ಸಿಸಿ ಕ್ಯಾಮರಾದಲ್ಲಿ ಕಳ್ಳತನದ ವಿಡಿಯೋ ಸೆರೆ.

ಮುಖಕ್ಕೆ ಮಾಸ್ಕ್ ಧರಿಸಿರುವ ಕಳ್ಳ.ಇದು ಎರಡನೇ ಬಾರಿ ಈ ದೇವಾಲಯ ಕಳ್ಳತನ ಮಾಡಿರುವ ಕಳ್ಳರು.

ಈ ಹಿಂದೆ ಕಳ್ಳತನವಾದಾಗ ಸರಿಯಾದ ರೀತಿಯಲ್ಲಿ ಪೊಲೀಸರು ಕ್ರಮ ಕೈಗೊಳ್ಳದೆ ಇರುವುದು ಕಳ್ಳತನ ಹೆಚ್ಚಾಗಲು ಕಾರಣ ಎಂದು ದೇವಾಲಯ ಸಮಿತಿಯವರು ಆರೋಪಿಸಿದರು.

ಶನಿವಾರಸಂತೆ ಪೊಲೀಸರು ಬಂದು ಪರಿಶೀಲಿಸಿದರು.

ಶನಿವಾರಸಂತೆಯ ಶ್ರೀ ರಾಮ ಮಂದಿರದಲ್ಲಿ ಹುಂಡಿ ಕಳ್ಳತನ ಎರೆಡು ದೇವಾಲಯದಲ್ಲಿ ಕಳ್ಳತನ.

ಶ್ರೀ ರಾಮ ಮಂದಿರದ ಹುಂಡಿಯ ಹಣ ಕದ್ದು ಹುಂಡಿ ಹೊರಗಡೆ ಬಿಸಾಡಿ ತೆರಳಿರುವ ಕಳ್ಳರು.

Continue Reading

Trending

error: Content is protected !!