Connect with us

Kodagu

ಆಪರೇಷನ್ ಕಮಲ ಮಾಡುವುದೇ ಬಿಜೆಪಿ ಕೆಲಸ ಅವರು ಜನಪರ ಕೆಲಸ ಮಾಡಲ್ಲ – ಸಚಿವ ಎನ್.ಎಸ್.ಭೋಸರಾಜು

Published

on

ಮಡಿಕೇರಿ : ಬಿಜೆಪಿ ಅವರು ಯಾವಾಗಲೂ ಜನಪರವಾಗಿ ಕೆಲಸ ಮಾಡುವವರಲ್ಲ. ಜನರಿಗೆ ಅವರು ನೀಡಿರುವ ಭರವಸೆಗಳನ್ನು ಈಡೇರಿಸಲ್ಲ. ಕೇವಲ ಆಪರೇಷನ್ ಕಮಲ ಮಾಡುವುದೇ ಅವರ ಕೆಲಸ, ಬಿಜೆಪಿ ಮತ್ತೆ ಆಪರೇಷನ್ ಕಮಲ ಆರಂಭಿಸಿರಬಹುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ, ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಭೋಸರಾಜು ಹೇಳಿದರು.


ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಯಾರು ಹೋಗ್ತಾರೋ ಯಾರು ಬಿಡ್ತಾರೋ ಗೊತ್ತಿಲ್ಲ. ಅದರಿಂದ ಕಾಂಗ್ರೆಸ್‌ಗೆ ಏನೂ ಆಗಲ್ಲ, ಕಾಂಗ್ರೆಸ್ ಒಂದು ದೊಡ್ಡ ಸಮುದ್ರವಿದ್ದಂತೆ ಎಂದರು.
ಶೆಟ್ಟರ್ ಅವರಿಗೆ ಅವಮರ್ಯಾದೆ ಆಗಿದೆ ಅಂತ ಕಾಂಗ್ರೆಸ್‌ಗೆ ಬಂದಿದ್ದರು. ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ಏನೆಲ್ಲಾ ಮಾತನಾಡಿದರು ಅಂತ ರಾಜ್ಯಕ್ಕೆ ಗೊತ್ತಿದೆ, ಯಡಿಯೂರಪ್ಪ, ಅಮಿತ್ ಷಾ ಬಗ್ಗೆ ಅವರು ಏನೆಲ್ಲಾ ಹೇಳಿದ್ರು ಎಲ್ಲರಿಗೂ ಗೊತ್ತು, ಪಕ್ಷಕ್ಕೆ ಬಂದ ಮೇಲೆ ಟಿಕೆಟ್ ಕೊಟ್ಟೆವು ಸೋತರು, ತಕ್ಷಣ ಎಂಎಲ್ಸಿ ಮಾಡಿದ್ವು ಮೊನ್ನೆ ಸಹ ದೆಹಲಿಗೆ ಹೋಗಿ ನಮ್ಮ ನಾಯಕರನ್ನು ಭೇಟಿಯಾಗಿ ಬಂದಿದ್ದರು, ಈಗ ಅವರಿಗೆ ಏನಾಗಿದೆಯೋ ಏನೋ ಗೊತ್ತಿಲ್ಲ, ಯಾವ ಅನುಕೂಲಕ್ಕಾಗಿ ಅವರು ಮತ್ತೆ ವಾಪಸ್ ಹೋಗುತ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದ್ದಾರೆ, ದೇಶದ ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ, ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಬಿಜೆಪಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸಾಕಷ್ಟು ನಾಯಕರು ಬರಲಿದ್ದಾರೆ. ಯಾರೆಲ್ಲಾ ಬರಲಿದ್ದಾರೆ, ಎಷ್ಟು ಜನ ಬರಲಿದ್ದಾರೆ ನೋಡಿ ಎಂದರು.


ವಿಜಯೇAದ್ರ ಅವರು ಅಧ್ಯಕ್ಷರಾದ ಮೇಲೆ ಏನೆಲ್ಲಾ ನಡೆದಿದೆ ಗೊತ್ತಿದೆ. ಯಾರೆಲ್ಲಾ ಏನೆಲ್ಲಾ ಮಾತನಾಡಿದ್ದಾರೆ ಗೊತ್ತಿದೆ. ಸಮಯ ಬಂದಾಗ ಎಲ್ಲಾ ಬದಲಾವಣೆಗಳು ಗೊತ್ತಾಗುತ್ತದೆ ಎಂದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಕಕ್ಕಬ್ಬೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ದಾನಿಗಳಿಂದ ಧನ ಸಹಾಯ

Published

on

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಕಕ್ಕಬ್ಬೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಗ್ರಾಮದ ದಾನಿಗಳು ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ

ಯುವಕಪಾಡಿ ಗ್ರಾಮದ ಕೊರಂಗಾಡುವಿನ ಮಚಾನಿ ಹಾಸ್ಪಿಟಲಿಟೀಸ್ ಎಲ್ಎಲ್ ಪಿಯ ಶಿವಾಚಾಳಿಯಂಡ ವಿಶ್ವನಾಥ್, ನೆರವಂಡ ಪೊನ್ನಣ್ಣ ಹಾಗೂ ಪ್ರೀತಿ ಮಚಾನಿಯವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ 20 ಸಾವಿರ ರೂಗಳನ್ನು ನೀಡಿದ್ದಾರೆ.

ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ ಪ್ರವಾಸ ಸುಖಕರವಾಗಲಿ ಎಂದು ದಾನಿಗಳು ಶುಭ ಹಾರೈಸಿದರು.
ಶಾಲೆಯ ಎಸ್‌ ಡಿಎಂಸಿ ಅಧ್ಯಕ್ಷ ಕೆ.ಎಂ.ಕಾರ್ಯಪ್ಪ ಶಾಲೆಯ ಮುಖ್ಯಶಿಕ್ಷಕಿ ಹಾಗೂ ಶಿಕ್ಷಕ ವೃಂದದವರು ದಾನಿಗಳ ಉದಾರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Continue Reading

Kodagu

ರಾಷ್ಟ್ರಪಿತನ ಕಡೆಗಣನೆ ಅಕ್ಷಮೀಯ: ಕೊಡಗು ಕಾಂಗ್ರೆಸ್ ಖಂಡನೆ

Published

on

ಮಡಿಕೇರಿ : ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕಡೆಗಣಿಸಲು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ನಡೆ ಖಂಡನೀಯ ಹಾಗೂ ಅಕ್ಷಮೀಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾಧ್ಯಮ ಪ್ರಕಟಣೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.

ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಶತಮಾನದ ಅತ್ಯಂತ ಯಶಸ್ವಿ ಯೋಜನೆಯಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸಲು ಮುಂದಾಗಿರುವ ಬಿಜೆಪಿಯ ನಡೆ ದೇಶದ ಸಮಗ್ರತೆಗೆ ಮಾರಕವಾಗಲಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದರ ಜೊತೆಗೆ ಜಗತ್ತಿಗೆ ಶಾಂತಿ ಸಂದೇಶ ನೀಡಿ ಇಡೀ ಮನುಕುಲಕ್ಕೆ ಮಾದರಿಯಾಗಿ ವಿಶ್ವದಲ್ಲೆಡೆ ಗೌರವಕ್ಕೆ ಭಾಜನರಾಗಿರುವ ಮಹಾತ್ಮ ಗಾಂಧಿ ಯವರ ಬಗ್ಗೆ ಬಿಜೆಪಿ ಯವರಿಗೆ ಇರುವ ಅಸಹನೆ, ತಾತ್ಸಾರಗಳು ದೇಶ ದ್ರೋಹಕ್ಕೆ ಸಮಾನವಾದದ್ದು ಎಂದು ತೆನ್ನಿರ ಮೈನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭವ್ಯ ಭಾರತದ ಇತಿಹಾಸದಲ್ಲಿ ಮಹಾತ್ಮ ಗಾಂಧಿಯವರ ಹೆಸರು ಪ್ರತಿಯೊಬ್ಬ ಭಾರತೀಯನ ಉಸಿರಿನಲ್ಲಿ ಹಸಿರಾಗಿ ಇದ್ದು ಇದನ್ನು ಮರೆಮಾಚಲು ಕುತಂತ್ರಿಗಳು ಪ್ರಯತ್ನಿಸುತ್ತಿದ್ದು ಅವರ ಕುತಂತ್ರ ಎಂದಿಗೂ ಫಲಿಸುವುದಿಲ್ಲಾ ಎಂದು ತೆನ್ನಿರ ಮೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Continue Reading

Kodagu

ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಅಯ್ಯಂಗೇರಿಯ ನಾಝಿಮ್ ಆಯ್ಕೆ

Published

on

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ದೆಹಲಿಯ ನೋಯ್ಡಾದಲ್ಲಿ ಡಿ.31ರಿಂದ ನಡೆಯಲಿರುವ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಯಂಗ್ ಸ್ಟಾರ್ ಕ್ರಿಕೆಟ್ ಲೀಗ್ ಕ್ಲಬ್ ತಂಡದ ಪರವಾಗಿ ಭಾಗವಹಿಸಲು ಅಯ್ಯಗೇರಿಯ ಕೆ.ನಾಝಿಮ್ ಆಯ್ಕೆಯಾಗಿದ್ದಾರೆ.
ವಿರಾಜಪೇಟೆ ಸೆಂಟ್ಆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿಯಾಗಿರುವ ನಾಝಿಮ್ ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಕೆ.ಇಸ್ಮಾಯಿಲ್ ಹಾಗೂ ರುಬೀನಾ ದಂಪತಿಗಳ ಪುತ್ರನಾಗಿದ್ದಾರೆ.

Continue Reading

Trending

error: Content is protected !!