Connect with us

Uncategorized

ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

Published

on

ಹಾಸನ- ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಂಬಾರಿ ಆನೆ ಅರ್ಜುನ ಹುತಾತ್ಮ ಪ್ರಕರಣ

ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ದಂಪತಿ ಸಮೇತರಾಗಿ ಅರ್ಜನನ ಸಮಾದಿ ದರ್ಶನ ಪಡೆದು ಪೂಜೆ ಸಲ್ಲಿಕೆ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿರೋ ಸಮಾದಿ ಬಳಿ‌ ತೆರಳಿ ಪೂಜೆ

ಡಿಸೆಂಬರ್ 4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಲಗದ ಜೊತೆ ಕಾದಾಟದಲ್ಲಿ ವೀರಮರಣ ಹೊಂದಿದ್ದ ಅರ್ಜುನ

ಡಿಸೆಂಬರ್ 5 ರಂದು ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ಅಂತ್ಯಕ್ರಿಯೆ ನೆರವೇರಿತ್ತು

ಮೈಸೂರು ಅರಮನೆಯ ಪುರೋಹಿತರ ನೇತೃತ್ವದಲ್ಲಿ ನೆರವೇರಿದ್ದ ಅಂತ್ಯಕ್ರಿಯೆ

ಅಂತ್ಯಕ್ರಿಯೆ ವೇಳೆಯೇ ಅರಮನೆಯಿಂದ ಪೂಜಾ ಸಾಮಗ್ರಿ, ಹಾರ, ಶಾಲು ಕೊಟ್ಟು ಕಳಿಸಿದ್ದ ಯಧುವೀರ್

ಅಂದು ಅಂತ್ಯಕ್ರಿಯೆ ಯಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ಇಂದು ಪತ್ನಿ ತ್ರಿಷಿಕಾ ಕುಮಾರಿ ಜೊತೆ ಆಗಮಿಸಿ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದ ಯದುವೀರ್

ಅರಣ್ಯ ಇಲಾಖೆ ಅದಿಕಾರಿಗಳ ಜೊತೆ ತೆರಳಿ ತಮ್ಮ ನೆಚ್ಚಿನ ಅರ್ಜುನನಿಗೆ ಅಂತಿಮ ನಮನ ಸಲ್ಲಿಸಿದ ಯದುವೀರ್

Continue Reading
Click to comment

Leave a Reply

Your email address will not be published. Required fields are marked *

Mysore

ಮೈಸೂರಿನಲ್ಲಿ ಬೀಕರ ಅಪಘಾತ

Published

on

ಮೈಸೂರು: ಮೈಸೂರಿನ ಇನ್ಫೋಸಿಸ್ ಬಳಿಯ ರಸ್ತೆಯಲ್ಲಿ ದ್ವಿಚಕ್ರವಾಹನ ಹಾಗೂ ಗ್ಯಾಸ್ ಸಿಲಿಂಡರ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದು ಬೀಕರ ಅಪಘಾತವಾಗಿದೆ.

ದ್ವಿಚಕ್ರವಾಹನದಲ್ಲಿದ್ದ ಕೂರ್ಗಳ್ಳಿಯ ನಿವಾಸಿಗಳಾದ ಚಂದ್ರ ಹಾಗೂ ಪ್ರೇಮ ಎಂಬ ದಂಪತಿಗಳ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದು, ನಗರದ ಒಂಟಿಕೊಪ್ಪಲ್ ವೃತ್ತದ ಬಳಿ ಇರುವ ಡಿ.ಆರ್.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ಸ್ಥಳದಲ್ಲಿ ಸಿಕ್ಕ ಆಧಾರ್ ಕಾರ್ಡ್ ನಿಂದಾಗಿ ಕೂರ್ಗಳ್ಳಿಯ ನಿವಾಸಿಗಳು ಎಂಬ ಮಾಹಿತಿ ತಿಳಿದು ಬಂದಿದೆ.

 

Continue Reading

Uncategorized

ಚಲಿಸುತ್ತಿದ್ದ ಕಾರಿನ ಮೇಲೆ ಕುಸಿದ ಗುಡ್ಡ

Published

on

 

HASSAN-BREAKING

ಹಾಸನ: ಚಲಿಸುತ್ತಿದ್ದ ಕಾರಿನ ಮೇಲೆ ಕುಸಿದ ಗುಡ್ಡ

ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಎತ್ತಿನಹಳ್ಳ ಬಳಿ ಘಟನೆ

ಭೂಕುಸಿತದಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತ

ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಸಿದ ಮಣ್ಣು

ಮಣ್ಣಿನಡಿ ಸಿಲುಕಿರುವ KA-17 M 5003 ನಂಬರ್‌ನ ಓಮ್ನಿ ಕಾರು

ಕೆಲಕಾಲ ವಾಹನ ಸಂಚಾರ ಸ್ಥಗಿತ

ಮಣ್ಣು ತೆರವುಗೊಳಿಸುತ್ತಿರುವ ಕಂದಾಯ ಇಲಾಖೆ ಸಿಬ್ಬಂದಿ

Continue Reading

Uncategorized

ಸರ್ವಪಕ್ಷಗಳ ಸಭೆಗೆ ಹೆಚ್ಡಿಕೆ ಗೈರು : ಚಲುವರಾಯಸ್ವಾಮಿ ಕಿಡಿ – ರಾಜಕೀಯ ನಿವೃತ್ತಿ ಘೋಷಣೆಯ ಪಂಥಾಹ್ವಾನ*

Published

on

 

ನಾಗಮಂಗಲ: ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಅವಧಿಯ ಐದು ವರ್ಷದಲ್ಲಿ ಕಾವೇರಿ ನೀರಿನ ವಿವಾದವನ್ನು ಬಗೆಹರಿಸಿ ಕಾವೇರಿ ನೀರನ್ನ ಸಂಪೂರ್ಣವಾಗಿ ರಾಜ್ಯವೇ ನಿರ್ವಹಿಸುವಂತೆ ಕೇಂದ್ರ ಸರ್ಕಾರದಿಂದ ಆದೇಶ ಮಾಡಿಸಿದ್ದೇ ಆದ್ರೆ ನಾನು ರಾಜಕೀಯ ನಿವೃತ್ತಿ ತಗೊತ್ತಿನಿ. ರಾಜಕೀಯದಿಂದ ದೂರ ಉಳಿದು ಅವರ ಸೇವಕನಾಗಿ ಇರ್ತಿನಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಪಂಥಾಹ್ವಾನ ನೀಡಿದ್ದಾರೆ.

ನಾಗಮಂಗಲದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭಿವೃದ್ದಿ ಹಾಗೂ ಕಾವೇರಿ ನೀರಿನ‌ ವಿಷಯವಾಗಿ ಕರೆಯಲಾಗಿದ್ದ ಸರ್ವಪಕ್ಷಗಳ‌ ಸಭೆಗೆ ಗೈರಾಗುವ ಮೂಲಕ‌ ಜಿಲ್ಲೆಯ‌ ಜನತೆಗೆ‌‌‌ ದ್ರೋಹವೆಸಗಿದ್ದಾರೆ ಎಂದು‌ ಕಿಡಿಕಾರಿದರು.

ಕೇಂದ್ರ ಸಚಿವರಾಗಿ‌‌ ಅವರು‌ ಸಭೆಗೆ ಬರುವುದು ಬೇಡ. ಮಂಡ್ಯ‌ ಜಿಲ್ಲೆಯ‌ ಸಂಸದರಾಗಿ ಬರಬೇಕಲ್ಲವಾ. ಸಭೆಗೆ‌ ಬರದಿದ್ದಲ್ಲಿ‌ ಜಿಲ್ಲೆಯ‌ ಸಮಸ್ಯೆಗಳಿಗೆ ಸಲಹೆಗಳನ್ನು ಹೇಗೆ ನೀಡಲಿದ್ದಾರೆ ಎಂದು ಪ್ರಶ್ನಿಸಿದರು.

ಅಭಿನಂದನಾ ಸಭೆಯಲ್ಲಿ ಭಾಗವಹಿಸಿದ್ದ ಅವರು ಸರ್ವಪಕ್ಷಗಳ ಸಭೆಗೆ ಗೈರಾಗಿ‌ ಅವರು‌ ಕೊಡುವ ಗೋಡಂಬಿ ಬಾದಾಮಿ ತಿನ್ನಲು ಬರಬೇಕಿತ್ತ‌ ಎಂಬ ಕುಮಾರಸ್ವಾಮಿ ಅವರ ಸ್ಪಷ್ಟನೆಯನ್ನು ಜಿಲ್ಲೆಯ ಜನತೆ ಒಪ್ಪತಕ್ಕಧ್ದಲ್ಲಿ. ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನ ಕೊಡುವುದು ಜವಾಬ್ದಾರಿಯುತ ಸಂಸದರ ಕರ್ತವ್ಯ ಎಂದರು.

ಇದೀಗ ವಿಶ್ವೇರಸ್ವರಯ್ಯ ನಾಲೆ(ವಿಸಿ) ಆಧುನೀಕರಣವಾಗುತ್ತಿದ್ದು, ನಾಗೇಗೌಡರ ಕಾಲದಲ್ಲಿ
ಅದಾದ ನಂತರ ಪೂರ್ತಿ ನಾಲೆ ಆಧುನೀಕರಣವಾಗಿದ್ದು ನಮ್ಮ‌ಕಾಲದಲ್ಲಿ. ಆದ್ರೆ ನಾಲೆ ಆಧುನೀಕರಣದ ಕೆಲಸವನ್ನ ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳಲಿಲ್ಲ. ಆಗ ನಾವು ನೀರು ಬಿಟ್ಟಿದ್ದರೂ ನೀರು ಕೊನೆ ಭಾಗಕ್ಕೆ ತಲುಪಿತ್ತಿರಲಿಲ್ಲ. ಮತ್ತೊಂದು ಕಡೆ ನಾಲೆ ಆಧುನೀಕರಣದ ಕೆಲಸವೂ ಆಗ್ತಿರಲಿಲ್ಲ. ಆದ್ರೆ ಈಗ ನಾಲೆಗೆ ನೀರು ಬಿಟ್ಟ 24 ಗಂಟೆಯಲ್ಲೇ ಮಳವಳ್ಳಿಯ ಕೊನೆ ಭಾಗಕ್ಕೆ ನೀರು ಹೋಗಿದೆ ಎಂದರು.

ನಮಗೆ ಪ್ರತೀ ವರ್ಷ ನೀರು ಇರಲಿ ಇಲ್ಲದಿರಲಿ, ಜುಲೈ ಕೊನೆ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಾಲೆಗೆ ನೀರು ಬಿಡಲಾಗ್ತಿತ್ತು.
ಆದ್ರೆ ನೀವು ಮಾಧ್ಯದವರೂ ನಮ್ಮ ವಿರುದ್ದ ಬರೆದ್ರಿ. ನೀರು ಬಿಡಿ ಎಂದ್ರಿ.
ಸುಳ್ಳು ಬರೆಯಲು ಹಿತ ಎನ್ನಿಸುತ್ತೆ.
ಈಗ ಸರ್ಕಾರ ತೀರ್ಮಾನ ತೆಗೆದುಕೊಂಡು ಇದೇ 10 ರಿಂದ ನಾಲೆಗೆ ನೀರು ಬಿಡಲಾಗಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ಪ್ರತೀನಿತ್ಯ 1 ಟಿಎಂಸಿ ನೀರು ಬಿಡಲು ಸೂಚನೆ ಕೊಟ್ಟಿತ್ತು. ಈ ಸಂಬಂಧ ಚರ್ಚಿಸಲು ನಾವು ಕಳದ ಭಾನುವಾರ ಸರ್ವಪಕ್ಷ ಸಭೆ ಕರೆದೆವು. ಆ ಸಭೆಯಲ್ಲಿ ಸಮಿತಿಯ ಸೂಚನೆ ವಿರುದ್ದ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಯ್ತು. ಈ ತಿಂಗಳ ಕೊನೆವರೆಗೆ ನಾವು ನೀರು ಬಿಡೊ ಬಗೆಗೆ ಏನೂ ಹೇಳಲಾಗಲ್ಲ ಎಂದು ತಿಳಿಸಿದ್ದೇವೆ. ಇಷ್ಟಾದರೂ ವಿರೋಧ ಪಕ್ಷದವರು ಮಾತಾಡ್ತಾರೆ.

ಸದ್ಯ ಕಬಿನಿಯಿಂದಲೇ 30 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿದು ಹೋಗ್ತಿದೆ. ಕೆ ಆರ್ ಎಸ್ ಡ್ಯಾಂ ಗೆ 35 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ನಾವು ಕೆಆರ್ ಎಸ್ ನಿಂದ ತಮಿಳುನಾಡಿಗೆ ಅಣೆಕಟ್ಟೆ ಭರ್ತಿಯಾಗುವವರೆಗೂ ನೀರು ಬಿಡಲ್ಲ. ಡ್ಯಾಂ ನ ನೀರಿನ ಮಟ್ಟ ಸಂಜೆ ನಾಲ್ಕು ಗಂಟೆಗೆ 111 ಅಡಿ ಮುಟ್ಟಿದೆ. ಪ್ರಸ್ತುತ ಮಳೆ ಏನಾದ್ರು ನಿಂತರೆ ಡ್ಯಾಂ ನ‌ ಮಟ್ಟ 115 ಅಡಿಗೆ ನಿಲ್ಲಬಹುದು ಎಂದರು.

ಜಿಲ್ಲೆಯ ರೈತರು ಮೊದಲ ಬೆಳೆಯಾಗಿ ಭತ್ತ ಅಥವಾ ಕಬ್ಬನ್ನ ನಾಟಿ ಮಾಡಬಹುದು. ಮೊದಲ ಬೆಳೆಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ. ಜಿಲ್ಲೆಯ ಜನರು ಒಂದು ಬೆಳೆ ಬೆಳೆಯಲು ಕಟ್ಟು ನಿಟ್ಟಿನ ರೀತಿಯಲ್ಲಿ ನೀರು ಬಿಡಲಾಗುವುದಿಲ್ಲ ಎಂದರು.

ಇದೇ ವೇಳೆ ಮಾಜಿ‌ ಸಚಿವರ ಪತ್ರಿಕಾ ಹೇಳಿಕೆ ಬಗ್ಗೆಯೂ ಕಿಡಿಕಾರಿದ ಸಚಿವ ಸಲುವರಾಯಸ್ವಾಮಿ,‌‌ ಅವರು ಎಷ್ಟು ಸಲ ಶಾಸಕರಾಗಿದ್ದರು, ಎಷ್ಟು‌ ಸಲ ಸಂಸದರಾಗಿದ್ದರು, ಎಷ್ಟು ಸಲ ಮಂತ್ರಿಯಾಗಿದ್ದರು ಎಂಬುದು‌ ನನಗೆ ಚೆನ್ನಾಗಿ ತಿಳಿದಿದೆ.

ಅವರು ಒಮ್ಮೆ ಅವರ ಬೆನ್ನನ್ನು ಸ್ವಲ್ಪ ತಿರುಗಿ ನೋಡಿಕೊಳ್ಳಲಿ. ಅವರು ವಿಧಾನಸಭೆ ಚುನಾವಣೆಗೂ‌ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ತ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಎಷ್ಟು ಬಾರಿ‌ ಭೇಟಿ ಮಾಡಿದ್ದರು. ಯಾಕೆ ಭೇಟಿ ಮಾಡಿದ್ದರು. ಯಾರ್ಯಾರನ್ನು ಕರೆತಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವ ಹಿಂಗಿತ ವ್ಯಕ್ತಪಡಿಸಿದ್ದರು ಎಂಬುದನ್ನು ನೆನೆದು ಮಾತನಾಡಲಿ. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಸ್ವಲ್ಪ ಎಚ್ಚರಿಕೆಯಿಂದ ಇರಲಿ. ನಾನೇನೂ ಮಾತನಾಡಲು ಹೋಗೊಲ್ಲ. ನಮ್ಮ ಶಾಸಕರು ಹಾಗೂ‌ ಕಾರ್ಯಕರ್ತರೇ ಉತ್ತರ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಚಿವರ ಆಪ್ತರು ಉಪಸ್ಥಿತರಿದ್ದರು.

ಕೂ

Continue Reading

Trending

error: Content is protected !!