Mysore
ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ಬೆಂಬಲ
ಮೈಸೂರು: ಕಳೆದ ನಲವತೈದು ದಿನಗಳಿಂದ ಕರ್ನಾಟಕ ರಾಜ್ಯ ದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಮುಷ್ಕರಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರು ಹಾಗೂ 2024 ಜೂನ್ ನಲ್ಲಿ ಬರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿ.ಜೆ.ಪಿ ಅಕಾಂಕ್ಷಿತ ಅಭ್ಯರ್ಥಿ ಡಾ.ಈ. ಸಿ. ನಿಂಗರಾ ಜ್ ಗೌಡರವರು ಬೆಂಬಲ ಸೂಚಿಸಿದ್ದಾರೆ.

ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರ ಹೋರಾಟದ ಫಲವಾಗಿ ಕಳೆದ ಬಿ ಜೆ ಪಿ ಸರ್ಕಾರ ವಾಸ್ತವಿಕ ಸಮಸ್ಯೆಯನ್ನು ಅರಿತು ಅವರ ಪ್ರಮುಖ ಬೇಡಿಕೆಯಾದ ಮಾಸಿಕ ವೇತನವನ್ನು ಮೂರು ಪಟ್ಟು ಹೆಚ್ಚಿಸಿ, ಮೂವತ್ತೆರಡು ಸಾವಿರಕ್ಕೆ ಹೆಚ್ಚಳ ಮಾಡಿ ಸಮಾಜದಲ್ಲಿ ಗೌರವ ದಿಂದ ಬದುಕಲು ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಿ ನುಡಿದಂತೆ ನಡೆದಿತ್ತು. ಆದರೆ ಈ ಕಾಂಗ್ರೇಸ್ ಸರ್ಕಾರ ಕೇವಲ ಐದು ಸಾವಿರ ವೇತನವನ್ನು ಹೆಚ್ಚಿಸಿ ಪ್ರಸ್ತುತ ಬೇಡಿಕೆಯಾದ ಸೇವವಿಲೀನಾತಿಗೆ ನೆರವಾಗಿಲ್ಲ.
ಆದರೆ ಈ ಸರ್ಕಾರ ಅತಿಥಿ ಉಪನ್ಯಾಸಕರ ಮುಷ್ಕರಕ್ಕೆ ಗೌರವ ನೀಡಿ ಅತಿ ಪ್ರಮುಖವಾದ ಸೇವಾ ಖಾಯಮಾತಿ ಮಾಡಿ ಅವರನ್ನ ಗೌರವಿಸಬೇಕು ಎಂದು ಈ ಮೂಲಕ ಸರ್ಕಾರವನ್ನು ಒತ್ತಾಯಸುತ್ತಿದ್ದೇನೆ.

ಇಂದಿನ ವಿದ್ಯಾರ್ಥಿ ಮುಂದಿನ ಪ್ರಜೆ. ಆದ್ದರಿಂದ ಪ್ರಜ್ಞಾವಂತ ಮತ್ತು ಮೌಲ್ಯಧಾರಿತ ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.. ನಮ್ಮ ರಾಜ್ಯದಲ್ಲಿ ಕಳೆದ ಅನೇಕ ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತೀರುವ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನೂ ಈಡೇರಿಸುವಂತೆ ರಾಜ್ಯ ಸರ್ಕಾರವನ್ನೂ ಆಗ್ರಹಿಸಿ ಪ್ರತಿಭಟನೆ, ಪಾದಯಾತ್ರೆ, ಧರಣಿ ನಡೆಸುತ್ತೀದ್ದಾರೆ. ಆದರೆ ರಾಜ್ಯ ಸರ್ಕಾರವೂ ಅತಿಥಿ ಉಪನ್ಯಾಸಕರನ್ನೂ ಗೌರವಯುತವಾಗಿ ನಡೆಸಿಕೊಳ್ಳದೇ ಇರುವುದನ್ನೂ ನಾನೂ ಖಂಡಿಸುತ್ತೇನೆ.

ಯುಜಿಸಿಯ 537ನೇ ಸಭೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತೀರುವ ಅತಿಥಿ ಉಪನ್ಯಾಸಕರಿಗೆ 7ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಪ್ರತಿ ಅವಧಿಗೆ 1500 ಅಥವಾ ತಿಂಗಳಿಗೆ ಕನಿಷ್ಠ 50000 ರೂಪಾಯಿ ಗೌರವಧನವನ್ನೂ ನಿಗದಿಪಡಿಸುವಂತೆ ಆದೇಶಿಸಿದೆ. ಸರ್ಕಾರವು ಯುಜಿಸಿಯ ಸುತ್ತೋಲೆಯನ್ನು ಪಾಲನೆ ಮಾಡುವುದರ ಮೂಲಕ ಎಲ್ಲಾ ಅತಿಥಿ ಉಪನ್ಯಾಸಕರನ್ನೂ ಖಾಯಂಗೊಳಿಸಬೇಕು ಮತ್ತು ಈ ಕೂಡಲೇ ಸೇವಾ ಭದ್ರತೆಯನ್ನು ಒದಗಿಸುವಂತೆ ಕಾನೂನಿನಲ್ಲಿ ಬದಲಾವಣೆ ತರಬೇಕು ಹಾಗೂ ಅತಿಥಿ ಉಪನ್ಯಾಸಕರ ಎಲ್ಲಾ ಬೇಡಿಕೆಗಳನ್ನೂ ಕೂಡಲೇ ಈಡೇರಿಸಬೇಕೇಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡರವರು ಸರ್ಕಾರವನ್ನೂ ಆಗ್ರಹಿಸಿದ್ದಾರೆ.
Mysore
ಸಿಮ್ ದುರ್ಬಳಕೆ ನೆಪದಲ್ಲಿ 82 ಲಕ್ಷ ರೂ. ದೋಖಾ: ಸೈಬರ್ ಠಾಣೆಗೆ ದೂರು ನೀಡಿದ ವೈದ್ಯ
ಮೈಸೂರು: ನಿಮ್ಮ ಹೆಸರಿನಲ್ಲಿ ಮೊಬೈಲ್ ಫೋನ್ ಸಿಮ್ ದುರ್ಬಳಕೆ ಆಗಿದೆ ಎಂದು ಬೆದರಿಸಿ ವೈದ್ಯರೊಬ್ಬರಿಂದ ಬರೋಬ್ಬರಿ 82 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಮೈಸೂರಿನ ವಿಜಯನಗರ 1ನೇ ಹಂತದ ನಿವಾಸಿ, ವೈದ್ಯ ಡಾ.ರಾಜೀವ್ ಹಣ ಕಳೆದುಕೊಂಡವರು.
ಆಗಿದ್ದೇನು?
ರಾಜೀವ್ ಅವರ ಮೊಬೈಲ್ ಫೋನ್‌ಗೆ ನವೆಂಬರ್. 1ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, ತನ್ನನ್ನು ಟೆಲಿಕಾಮ್ ರೆಗ್ಯುಲೇಟರಿ ಆಫ್ ಇಂಡಿಯಾದ ನೋಟಿಫೀಕೇಷನ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಶ್ಯಾಮ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.

ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಫೋನ್ ಸಿಮ್ ಕಾರ್ಡ್ವೊಂದು ಅಪರಾಧ ಕೃತ್ಯಗಳಿಗೆ ಬಳಕೆಯಾಗಿದೆ. ಈ ಬಗ್ಗೆ ಮಹಾರಾಷ್ಟçದ ಮುಂಬೈನಲ್ಲಿರುವ ಬಾಂದ್ರಾ ಪೊಲೀಸ್ ಠಾಣೆಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾನೆ. ಆತನ ಮಾತು ನಂಬಿ ಡಾ.ರಾಜೀವ್ ವಿಡಿಯೋ ಕರೆ ಮಾಡಿದ್ದು, ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವ್ಯಕ್ತಿ ಮಾತನಾಡಿದ್ದಾನೆ.
ನಿಮ್ಮ ಮೊಬೈಲ್ ಸಂಖ್ಯೆಯಿಂದ ಅಶ್ಲೀಲ ವಿಡಿಯೋ, ಕಾನೂನುಬಾಹಿರ ಜಾಹೀರಾತು ಹಾಗೂ ಬೆದರಿಕೆ ಕರೆಗಳನ್ನು ಮಾಡಿ ಮುಂಬೈ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ. ನಿಮ್ಮ ಖಾತೆಯಿಂದ 2 ಕೋಟಿ ಹಣ ಚಲಾವಣೆ ಆಗಿದೆ. ಮನಿ ಲಾಂಡ್ರಿAಗ್ ಪ್ರಕರಣದಲ್ಲಿ ನಿಮ್ಮ ಹಾಗೂ ನಿಮ್ಮ ಪತ್ನಿಯನ್ನು ಅರೆಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ.

ಆಸ್ತಿ ವಿವರಗಳ ಪರಿಶೀಲನೆ ನೆಪದಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡು ಯೂನಿಯನ್ ಬ್ಯಾಂಕ್ ಖಾತೆಯಿಂದ 11.10 ಲಕ್ಷ ರೂ., ಆಕ್ಸಿಸ್ ಬ್ಯಾಂಕ್‌ನಿಂದ 33 ಲಕ್ಷ ರೂ., ಇಂಡಸ್‌ಇಂದ್ ಬ್ಯಾಂಕ್‌ನಿಂದ 38 ಲಕ್ಷ ರೂ. ಸೇರಿ ಹಂತ ಹಂತವಾಗಿ 82 ಲಕ್ಷ ರೂ. ಹಣ ಕಸಿದುಕೊಳ್ಳಲಾಗಿದೆ.
ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ.ರಾಜೀವ್ ಅವರು ದೂರು ನೀಡಿದ್ದು, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mysore
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗೆ ಚಾಲನೆ
ಮೈಸೂರು: ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್) ಎರಡು ದಿನಗಳ ಸಾಫ್ಟ್ವೇರ್ ಆವೃತ್ತಿಗೆ ಉದ್ಯಮಿ ರೋಹಿತ್ ಆರಾಧ್ಯ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೇವಲ ಜ್ಞಾನ ಇದ್ದರೆ ಪ್ರಯೋಜನ ಆಗಲಾರದು ಎನ್ನುವ ಹಂತದ ತಾಂತ್ರಿಕ ಪರಿವರ್ತನೆಯ ಅಂಚಿಗೆ ಜಗತ್ತು ಬಂದು ನಿಂತಿದೆ. ಈಗ ಯಾವುದೇ ಮಾಹಿತಿ ನಮ್ಮ ಬೆರಳ ತುದಿಯಲ್ಲಿ ಲಭ್ಯವಿದೆ. ನೀವು ಅದನ್ನು ಹೇಗೆ ಬಳಸುತ್ತೀರಿ, ನೀವು ಹೇಗೆ ಮೌಲ್ಯವನ್ನು ಸೇರಿಸುತ್ತೀರಿ, ನಿಮ್ಮ ಆಲೋಚನೆಗಳನ್ನು ಎಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುತ್ತೀರಿ ಎಂಬುದು ಮುಖ್ಯ ಎಂದರು.

ಯಶಸ್ಸು ಗಳಿಸಬೇಕಾದರೆ ಶೇ.5ರಷ್ಟು ಮಾತ್ರ ಕಲ್ಪನೆ ಮಾಡಿಕೊಳ್ಳಬೇಕು, ಶೇ.95ರಷ್ಟು ಕಲ್ಪನೆಯ ಕಾರ್ಯಗತಗೊಳಿಸುವಿಕೆಗೆ ಮೀಸಲು ಇಡಬೇಕು. ಆಗ ಮಾತ್ರ ಯಶಸ್ಸು ದೊರೆಯುತ್ತದೆ. ಭಾರತೀಯ ಮಾರುಕಟ್ಟೆ ವಿಶಿಷ್ಟ ಮತ್ತು ಭಾವನಾತ್ಮಕವಾಗಿದೆ. ಉತ್ಪನ್ನದ ಯಶಸ್ಸು ಸಂಕೀರ್ಣತೆಯ ಮೇಲೆ ಅವಲಂಬಿತವಾಗಿಲ್ಲ, ಬದಲಿಗೆ ಸರಳತೆ ಮತ್ತು ಪ್ರಸ್ತುತತೆಯ ಮೇಲೆ ಅವಲಂಬಿತವಾಗಿದೆ. ಅಜ್ಞಾತ ಸಮಸ್ಯೆಯನ್ನು ಗುರುತಿಸುವುದು ದೊಡ್ಡ ಸವಾಲು ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಎಐಸಿಟಿಇ ಪ್ರತಿನಿಧಿ ಅಖಿಲೇಶ್ ಕುಮಾರ್ ಸಿಂಗ್, ವಿವಿಸಿಇ ಉಪಪ್ರಾಂಶುಪಾಲರಾದ ಶೋಭಾ ಶಂಕರ್, ಆದಿತ್ಯ ಸಿ.ಆರ್., ನೋಡಲ್ ಸೆಂಟರ್ ಪ್ರಭಾರಿ ನಿತಿನ್ ಕುಮಾರ್ ಮುಂತಾದವರಿದ್ದರು.
Mysore
ಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ವಿತರಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾಪರಿನಿಬ್ಬಾಣ ದಿನವನ್ನು ಸೇವಾ ಕಾರ್ಯದೊಂದಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕ್ರೀಡಾಪಟು ಮಹದೇವ್, ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿ ನಿಬ್ಬಣ ದಿನವನ್ನು ಇಂದಿನ ಯುವಪೀಳಿಗೆ ಅವರ ಆದರ್ಶ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಅವರು ನೀಡಿರುವ ಸಂವಿಧಾನ ಅಡಿಯಲ್ಲಿ ಎಲ್ಲರೂ ಶಾಂತಿಯುತವಾಗಿ ಸಹ ಬಾಳ್ವೆಯೊಂದಿಗೆ ಬಾಳಬೇಕು. ಸ್ನೇಹ ಬಳಗವು ಸೇವಾ ಕಾರ್ಯದೊಂದಿಗೆ ಗೌರವ ನಮನ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದರು.

ನಂತರ ಮಾತನಾಡಿದ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಡಾ. ಬಿ. ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ಅಳವಡಿಸಿಕೊಂಡು ಬದುಕುತ್ತಿದ್ದೇವೆ.ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಮತದಾನದ ಹಕ್ಕನ್ನು ನೀಡಿರುವ ಈ ಆದರ್ಶ ಪುರುಷ ಭೌತಿಕವಾಗಿ ನಮ್ಮ ಜೊತೆ ಇಲ್ಲದೆ ಇರಬಹುದು. ಆದರೆ ಅವರ ನಡೆದು ಬಂದ ಹಾದಿ ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹದೇವ್, ಸಿಂಚನಗೌಡ (ಮಂಗಳಮುಖಿ), ವಿದ್ಯಾ, ಛಾಯಾ,ಗಾಯಕ ಯಶವಂತ್ ಕುಮಾರ್, ರಾಜೇಶ್ ಕುಮಾರ್ ಮಹೇಶ, ನಿರೀಕ್ಷಿತ್, ದತ್ತ ಇನ್ನಿತರರು ಇದ್ದರು.
-
Mysore19 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mandya3 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Mysore22 hours agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Special17 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
State24 hours agoನಾಳೆಯಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸುತ್ತ ಹೈ ಆಲರ್ಟ್ 6,000 ಪೊಲೀಸ್ ಭದ್ರತೆ
-
Chikmagalur22 hours agoಗ್ರಾ.ಪಂ.ಸದಸ್ಯ ಗಣೇಶ್ ಕೊಲೆ ಪ್ರಕರಣ: ಐವರ ಬಂಧನ, ಮೂವರಿಗಾಗಿ ತೀವ್ರ ಶೋಧ
-
Chikmagalur22 hours agoಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
-
Mysore4 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
